ಪುರುಷರ ಈ 4 ಅಭ್ಯಾಸಗಳಿಗೆ ಮಹಿಳೆಯರು ಬಿದ್ದು ಬಿಡ್ತಾರೆ !!
ಅನೇಕ ಬಾರಿ ನಾವು ತಿಳಿದೋ ತಿಳಿಯದೆಯೋ ಬೇರೆ ಬೇರೆ ಕೆಲಸಗಳನ್ನು ಮಾಡುತ್ತೇವೆ, ಅದನ್ನು ನಾವೇ ಗಮನಿಸದಿದ್ದರೂ, ಅವು ಇತರರನ್ನು ತುಂಬಾ ಆಕರ್ಷಿಸುತ್ತವೆ. ಅಂತೆಯೇ, ಪುರುಷರ ಕೆಲವು ಅಭ್ಯಾಸಗಳಿವೆ, ಅವು ಮಹಿಳೆಯರನ್ನು ಹೆಚ್ಚು ಆಕರ್ಷಿಸುತ್ತವೆ. ಆ ಅಭ್ಯಾಸಗಳು ಯಾವುವು ಅನ್ನೋದನ್ನು ನೀವು ತಿಳಿದುಕೊಳ್ಳಬೇಕೇ? ಹಾಗಿದ್ರೆ ಮುಂದೆ ಓದಿ…

ಮಹಿಳೆಯರ ಕೆಲವೊಂದು ನಡವಳಿಕೆಯು ಅವರನ್ನು ತುಂಬಾ ಆಕರ್ಷಕವಾಗಿಸುವ ಸಣ್ಣ ನಿಮಗೆ ತಿಳಿಯದೇ ಇರುವ ಕೆಲವೊಂದು ವಿಷ್ಯಗಳನ್ನು ಒಳಗೊಂಡಿರುತ್ತದೆ. ಇವು ನೋಡಲು ಚಿಕ್ಕದು, ಅದರಲ್ಲೇನಿದೆ ಎಂದು ಅನಿಸಬಹುದು, ಆದರೆ ಅವು ಮಹಿಳೆಯರು ಪುರುಷರತ್ತ ಆಕರ್ಷಿತರಾಗಲು(Attraction) ನೆರವಾಗುತ್ತೆ. ಮಹಿಳೆಯರಲ್ಲಿ ಪುರುಷರಲ್ಲಿ ಹೆಚ್ಚು ಇಷ್ಟಪಡೋ ವಿಷಯಗಳು ಹೀಗಿವೆ…
ತೀಕ್ಷ್ಣವಾದ ಕಣ್ಣುಗಳಿಂದ(Eyes) ನೋಡುವುದು
ಪುರುಷರು ತಮ್ಮ ಸಂಗಾತಿಯನ್ನು ತೀಕ್ಷ್ಣವಾಗಿ ನೋಡಿದಾಗ, ಅದರಲ್ಲಿ ಅವರ ಭಾವನೆಗಳು ಸ್ಪಷ್ಟವಾಗಿ ಗೋಚರಿಸುತ್ತೆ, ಅವರು ತುಂಬಾ ಆಕರ್ಷಕವಾಗಿ ಕಾಣುತ್ತಾರೆ. ಈ ನೋಟವು ಪ್ರೀತಿಯದ್ದಾಗಿರಬಹುದು, ಯಾರನ್ನಾದರೂ ಆಕರ್ಷಿಸಬಹುದು ಅಥವಾ ಕಾಮದಾಗಿರಬಹುದು.
ಈ ರೀತಿಯ ಇಂಟೆನ್ಸ್ ಐ ಕಾಂಟಾಕ್ಟ್(Eye Contact) ತುಂಬಾ ಆಕರ್ಷಕವಾಗಿರುತ್ತದೆ. ಎರಡು ಜನರ ಕಣ್ಣುಗಳ ಸೆಳೆತವು ಅವರ ನಡುವಿನ ಪ್ರೀತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ ಎಂದು ನಂಬಲಾಗಿದೆ. ಇದು ನಿಜಾ ಕೂಡ, ಮಹಿಳೆಯರು ಪುರುಷರ ಕಣ್ಣೋಟಕ್ಕೆ ಕರಗಿ ಹೋಗುತ್ತಾರೆ.
ಇಂಪ್ರೆಸ್ (Impress) ಮಾಡಲು ಪ್ರಯತ್ನಿಸಬೇಡಿ
ಅನೇಕ ಬಾರಿ ಪುರುಷರು ಮಹಿಳೆಯರನ್ನು ಆಕರ್ಷಿಸಲು ಯಾವುದೇ ಪ್ರಯತ್ನ ಮಾಡದಿದ್ದಾಗ, ಮಹಿಳೆಯರು ಅಂತಹ ಪುರುಷರತ್ತ ತುಂಬಾನೇ ಆಕರ್ಷಿತರಾಗುತ್ತಾರೆ. ಇದು ಕೇಳಲು ವಿಚಿತ್ರವೆನಿಸಬಹುದು, ಆದರೆ ಸಂಶೋಧನೆಯ ಪ್ರಕಾರ, ಜನರು ಅವರ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ, ಪುರುಷರು(Men) ಕಡಿಮೆ ಪ್ರಯತ್ನಿಸಿದಷ್ಟೂ, ಅವರು ಮಹಿಳೆಯರ ಗಮನವನ್ನು ಸೆಳೆಯಲು ಹೆಚ್ಚು ಯಶಸ್ವಿಯಾಗುತ್ತಾರೆ. ಯಾರಪ್ಪಾ ಇವರು ನನ್ನನ್ನೇ ನೋಡ್ತಾ ಇಲ್ಲ ಎಂದು ಮಹಿಳೆಗೆ ಒಮ್ಮೆ ಅನಿಸಿದರೆ ಅಂತಹ ಅಭ್ಯಾಸಗಳನ್ನು ಹೊಂದಿರುವ ಪುರುಷರ ಬಗ್ಗೆ ಮಹಿಳೆಯರು ಹೆಚ್ಚು ಆಕರ್ಷಿತರಾಗುತ್ತಾರೆ.
ಡ್ರೆಸ್ಸಿಂಗ್ ಸ್ಟೈಲ್ (Dressing style)
ಪುರುಷರಲ್ಲಿ ಮಹಿಳೆಯರು ಹೆಚ್ಚು ಗಮನಿಸುವ ಒಂದು ವಿಷಯವೆಂದರೆ ಅವರ ಡ್ರೆಸ್ಸಿಂಗ್ ಸ್ಟೈಲ್. ಒಬ್ಬ ವ್ಯಕ್ತಿಯು ಫಾರ್ಮಲ್ ಉಡುಪಿನಲ್ಲಿದ್ದರೆ, ಅದು ತಕ್ಷಣವೇ ಅವರ ಗಂಭೀರತೆ, ಶಕ್ತಿ ಮತ್ತು ಅಧಿಕಾರವನ್ನು ತೋರಿಸುತ್ತೆ. ಈ ಲುಕ್ ಮಹಿಳೆಯರಿಗೆ ಇಷ್ಟವಾಗುತ್ತೆ.
ತುಂಬಾ ಕ್ಯಾಶುಯಲ್ (Casual)ಬಟ್ಟೆಗಳನ್ನು ಧರಿಸಲು ಇಷ್ಟಪಡುವ ಪುರುಷರು, ಇದು ಅವರ ಜೀವನ ಶೈಲಿಯನ್ನು ತೋರಿಸುತ್ತದೆ. ಪುರುಷರ ಈ ರೀತಿಯ ಡ್ರೆಸ್ಸಿಂಗ್ ಸ್ಟೈಲ್ ಮಹಿಳೆಯರ ಮನಸ್ಸಿನ ಮೇಲೆ ವಿಭಿನ್ನ ರೀತಿಯ ಪ್ರಭಾವ ಬೀರುತ್ತೆ, ಇದು ಅವರನ್ನು ತುಂಬಾ ಇಂಪ್ರೆಸ್ ಮಾಡದೇ ಇರಲಾರದು.
ಹಾಸ್ಯ ಪ್ರಜ್ಞೆ
ಯೆಸ್ ಸೆನ್ಸ್ ಆಫ್ ಹ್ಯೂಮರ್(Humour) ಇರೋ ಪುರುಷರು ಮಹಿಳೆಯರಿಗೆ ತುಂಬಾನೆ ಇಷ್ಟ ಆಗ್ತಾರೆ. ಸ್ವಲ್ಪ ತಮಾಷೆಯ ಶೈಲಿಯನ್ನು ಹೊಂದಿರುವ ಮತ್ತು ಜೋಕ್ ಗಳನ್ನು ಹೇಳುತ್ತಲೇ ಇರುವ ಪುರುಷರು ಮಹಿಳೆಯರಿಗೆ ತುಂಬಾ ಇಷ್ಟವಾಗುತ್ತಾರೆ. ಅವನ ಈ ಕೂಲ್ ವರ್ತನೆಯು ಅವನು ತುಂಬಾ ಕೂಲ್ ವ್ಯಕ್ತಿ ಎಂದು ತೋರಿಸುತ್ತದೆ. ಅಂತಹ ಪುರುಷರ ಸುತ್ತಲೂ ಮಹಿಳೆಯರು ಬಿಂದಾಸ್ ಆಗಿ ಇರುತ್ತಾರೆ.
ತಮ್ಮನ್ನು ನಗಿಸುವ(Laugh) ಕಲೆಯನ್ನು ಹೊಂದಿರುವ ಜನರನ್ನು ಮಹಿಳೆಯರು ಹೆಚ್ಚಾಗಿ ಇಷ್ಟಪಡುತ್ತಾರೆ ಎಂದು ಸಂಶೋಧನೆ ಹೇಳುತ್ತದೆ. ಆದ್ದರಿಂದ ಈಗ ನೀವು ನಿಮ್ಮ ಅಭ್ಯಾಸಗಳಿಂದ ಹುಡುಗಿಯರನ್ನು ಮೊದಲು ಆಕರ್ಷಿಸುವವರು ಯಾರು ಎಂದು ಗೆಸ್ ಮಾಡಬಹುದು.