ಈ ತಪ್ಪು ಮಾಡದೇ ಇದ್ರೆ ವೈವಾಹಿಕ ಜೀವನ ಫುಲ್ ರೊಮ್ಯಾಂಟಿಕ್
ವೈವಾಹಿಕ ಜೀವನ ಮೊದ ಮೊದಲು ಸುಮಧುರವಾಗಿರುತ್ತದೆ. ಆದರೆ ದಿನ ಕಳೆದಂತೆ ಮಾಧುರ್ಯತೆ ಕಡಿಮೆಯಾಗುತ್ತದೆ. ನಗು, ಸಂತೋಷಗಳಿಂದ ಕೂಡಿದ ಆ ರೋಮ್ಯಾಂಟಿಕ್ ಕ್ಷಣಗಳು ಈಗ ಕಳೆದು ಹೋದ ಕನಸಾಗಿ ಉಳಿಯುತ್ತದೆ. ಆ ಸುಂದರ ಜೀವನ ಈಗ ಹಳೆಯ ನೆನಪು ಮಾತ್ರ. ನಿಮ್ಮ ಸಂಬಂಧ ಈಗ ಸಂಪೂರ್ಣ ಮುರಿದು ಬೀಳುವ ಹಂತಕ್ಕೆ ತಲುಪಿದ್ದು, ಈಗ ಮಧುರ ಕ್ಷಣಗಳು ಕೇವಲ ನೆನಪು ಮಾತ್ರ ಎಂದಾದರೆ, ತಪ್ಪು ಹೆಜ್ಜೆ ಇಟ್ಟದ್ದು ಎಲ್ಲಿ ಎಂಬುದನ್ನು ತಿಳಿಯಬೇಕು.
ಹೌದು, ವೈವಾಹಿಕ ಜೀವನದಲ್ಲಿ ಪತಿ - ಪತ್ನಿ ಇಬ್ಬರಲ್ಲಿ ಒಬ್ಬರು ತಪ್ಪಾಗಿ ಹೆಜ್ಜೆ ಇಟ್ಟರೆ, ಅಥವಾ ಏನಾದರೂ ತಪ್ಪು ಮಾಡಿದರೆ ಮಾತ್ರ ವೈಮನಸ್ಸು ಮೂಡುತ್ತದೆ. ಇದಕ್ಕಾಗಿ ಒಬ್ಬರನ್ನೊಬ್ಬರು ಧೂಷಿಸುವ ಬದಲು ಶೃಂಗಾರಮಯ ಜೀವನಕ್ಕೆ ಮಾರಕವಾದ ಅಂಶಗಳಾದರೂ ಯಾವುವು ಎಂಬ ಬಗ್ಗೆ ಯೋಚನೆ ಮಾಡಬೇಕು. ಅದರ ಕುರಿತ ಒಂದಿಷ್ಟು ವಿವರ ಇಲ್ಲಿದೆ.
ವಾದ : ಇನ್ನು ಶೃಂಗಾರ ಜೀವನವನ್ನು ಕೊಲ್ಲುವ ಅತಿ ದೊಡ್ಡ ಅಂಶವೆಂದರೆ ವಾದಕ್ಕಿಳಿಯುವುದು. ಇಬ್ಬರೂ ಒಬ್ಬರಿಗೊಬ್ಬರು ವಾದ ಮಾಡುತ್ತಲೇ ಇದ್ದರೆ ಖಚಿತವಾಗಿಯೂ ರಜಾ ದಿನದ ಖುಷಿಯನ್ನು ಕಳೆದುಕೊಳ್ಳುವುದು ಖಂಡಿತ.
ವಾದ ಮಾಡುವ ಬದಲು ಒಬ್ಬರನ್ನೊಬ್ಬರು ಅರ್ಥ ಮಾಡುವುದನ್ನು ಕಲಿಯಿರಿ. ಅವರಿಗೆ ಯಾಕೆ ಕೋಪ ಬಂದಿದೆ ಎಂಬುದನ್ನು ಅರ್ಥ ಮಾಡಿ. ಒಬ್ಬರನ್ನೊಬ್ಬರು ಹೀಗಳೆಯುವ ಬದಲು ಗುಣಮಟ್ಟದ ಸಮಯ ಕಳೆಯಲು ಪ್ರಯತ್ನ ಮಾಡಿ. ಆವಾಗ ಸಂಗಾತಿ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ.
ಸೋಮಾರಿತನ : ವಾರ ಪೂರ್ತಿ ಕೆಲಸ ಮಾಡಿದ ದಣಿದ ದೇಹಕ್ಕೆ ಭಾನುವಾರ ನಿರಾಳತೆಯ ದಿನ. ಹೀಗಾಗಿ ಆ ದಿನ ತುಂಬಾ ಹೊತ್ತು ನಿದ್ರೆ ಮಾಡಿ ಬಿಡೋಣ ಎನ್ನಿಸುವುದು ಸಹಜ. ಆದರೆ ಆ ದಿನ ಸಂಗಾತಿ ರೋಮ್ಯಾಂಟಿಕ್ ಸಿನಿಮಾವನ್ನು ಜೊತೆಯಾಗಿ ನೋಡುವುದನ್ನು ಕ್ಯಾನ್ಸಲ್ ಮಾಡಬೇಕೆಂದೇನಿಲ್ಲ.
ಪ್ರತಿ ಸಂಬಂಧವೂ ಒಂದಿಷ್ಟು ಗುಣಮಟ್ಟದ ಸಮಯವನ್ನು ಬಯಸುತ್ತದೆ. ಹೀಗಾಗಿ ಇಡೀ ದಿನ ಜೊತೆಯಾಗಿ ಬೆಡ್‌ನಲ್ಲಿ ಸಂಗಾತಿಯೂ ಬಿದ್ದಿರಬೇಕು ಎಂದು ಭಾವಿಸಬಾರದು. ಸೋಮಾರಿತನದ ಗುಣವನ್ನು ಬಿಟ್ಟು ಸಂಗಾತಿ ಜೊತೆ ಉತ್ತಮವಾಗಿ ಯಾವಾಗಲೂ ವರ್ತಿಸಬೇಕು. ಇಲ್ಲ ನಿದ್ರೆಯೇ ಮುಖ್ಯ ಎಂದು ಭಾವಿಸಿದರೆ ಸಂಬಂಧ ಹದಗೆಡುವುದರಲ್ಲಿ ಸಂದೇಹವಿಲ್ಲ.
ಡ್ರಾಮಾ : ಚಿಕ್ಕ ವಿಷಯವನ್ನು ದೊಡ್ಡದಾಗಿ ಮಾಡಿ ನಾಟಕೀಯ ಬೆಳವಣಿಗೆ ನಡೆಯುವಂತೆ ಮಾಡಿದರೆ, ಡ್ರಾಮಾ ಕ್ವೀನ್ ಎಂಬ ಹಣೆಪಟ್ಟಿ ಬರುವುದು ಖಚಿತ. ಸಾಮಾನ್ಯವಾಗಿ ಹುಡುಗರು ಇಂತಹ ವರ್ತನೆಯನ್ನು ಇಷ್ಟ ಪಡುವುದೇ ಇಲ್ಲ.
ಯಾವುದೇ ವಿಷಯವಿರಲಿ ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಜಗಳವಾಡಿ ದಿನವನ್ನು ಅಂತ್ಯಗೊಳಿಸಬಾರದು. ಯಾವಾಗಲೂ ಕೆಟ್ಟ ವಿಷಯಗಳನ್ನು ಮರೆತು ಸಂಗಾತಿಯ ಒಳ್ಳೆಯ ವಿಷಯಗಳ ಬಗ್ಗೆ ಯೋಚನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು.
ಮನೆಯಲ್ಲಿರುವ ಸಮಯ ಎಲೆಕ್ಟ್ರಾನಿಕ್ ಪ್ರೀತಿ : ಆಫೀಸ್‌ನಲ್ಲಿ ಹೇಗೂ ಕಂಪ್ಯೂಟರ್, ಮೊಬೈಲ್ ಎಂದು ಕಾಲ ಕಳೆಯುತ್ತೀರಿ. ಹಾಗಂತ ಮನೆಗೆ ಬಂದ ನಂತರವೂ ಮೊಬೈಲ್ ನೋಡಿಕೊಂಡು ಅಥವಾ ಟಿವಿ ನೋಡಿಕೊಂಡು ಕೂರಬೇಡಿ. ಸಂಗಾತಿಯ ಕಡೆಗೆ ಗಮನ ಹರಿಸಿ.
ಒಂದು ವೇಳೆ ಮನೆಯಲ್ಲಿ ಬಂದ ಬಳಿಕವೂ ಫೋನ್, ಲ್ಯಾಪ್ ಟಾಪ್ ಅಂತಿದ್ದರೆ, ಸಾಮರಸ್ಯದ ಕೊರತೆ ಎದ್ದು ಕಾಣುತ್ತದೆ. ಸಂಗಾತಿಗೆ ಸಮಯ ಕೊಡದೇ ಇದ್ದಾಗ ಸಂಬಂಧದಲ್ಲಿ ಬಿರುಕು ಬಿಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಫ್ರೆಂಡ್ಸ್‌ಗೆ ಹೆಚ್ಚು ಪ್ರಾಮುಖ್ಯತೆ : ಹೌದು ಇದು ಕೂಡ, ಮಧುರ ಬಾಂಧವ್ಯವನ್ನು ಹಾಳು ಮಾಡುತ್ತದೆ. ಮನೆಯಲ್ಲಿ ಪತ್ನಿಯ ಆಸೆಗಳನ್ನು ಈಡೇರಿಸುವುದನ್ನು ಮರೆತು ಫ್ರೆಂಡ್ಸ್ ಜೊತೆ ಟೈಮ್ ಸ್ಪೆಂಡ್ ಮಾಡಿದರೆ ಪತ್ನಿಗೆ ನಿರಾಸೆಯಾಗುವುದು ಖಂಡಿತಾ.
ಫ್ರೆಂಡ್ಸ್ ಗೆ ಸಮಯ ಕೊಡಬೇಕು ನಿಜ. ಹಾಗಂತ ಫ್ರೀ ಇರುವ ಸಮಯವನ್ನೆಲ್ಲಾ ಸ್ನೇಹಿತರಿಗೆ ಮೀಸಲಿಟ್ಟರೆ ಇದರಿಂದ ಸಂಗಾತಿಗೆ ಏಕಾಂಗಿ ತನ ಹೆಚ್ಚಾಗಿ ಕಾಡುತ್ತದೆ. ಇದರಿಂದ ದಾಂಪತ್ಯದಲ್ಲಿ ಬಿರುಕು ಸಾಧ್ಯತೆ ಇದೆ. ಈ ಎಲಾ ತಪ್ಪುಗಳನ್ನು ಅರ್ಥ ಮಾಡಿಕೊಂಡು ಸರಿಯಾಗಿ ಹೆಜ್ಜೆ ಇಟ್ಟರೆ ದಾಂಪತ್ಯ ಜೀವನ ರಸಮಯವಾಗುವುದರಲ್ಲಿ ಸಂಶಯವೇ ಇಲ್ಲ.