ಲೈಂಗಿಕ ಜೀವನ ಸುಖವಾಗಿರಲು ಬೆಳ್ಳುಳ್ಳಿ, ಈರುಳ್ಳಿ... ಇತ್ಯಾದಿ
ಪ್ರತಿಯೊಬ್ಬರೂ ತಮ್ಮ ಸೆಕ್ಸ್ ಲೈಫ್ ಚೆನ್ನಾಗಿರಬೇಕು ಎಂದು ಬಯಸುತ್ತಾರೆ. ಸೆಕ್ಸ್ ಲೈಫ್ ಚೆನ್ನಾಗಿದ್ದರೆ ಇಬ್ಬರ ಸಂಬಂಧ ಕೂಡ ಚೆನ್ನಾಗಿರುತ್ತದೆ, ಅಲ್ಲದೆ ಹಲವಾರು ಕೆಲಸಗಳನ್ನು ಸಹ ಸುಲಭವಾಗಿ- ಎಫೆಕ್ಟಿವ್ ಆಗಿ ಮಾಡಲು ಸಾಧ್ಯವಾಗುತ್ತದೆ. ಆದರೆ ನಮ್ಮ ಇಂದಿನ ಬ್ಯುಸಿ ಲೈಫ್‌ನಲ್ಲಿ ನಾವು ಎಷ್ಟೊಂದು ನೊಂದಿದ್ದೇವೆ ಎಂದರೆ ಲೈಂಗಿಕ ಜೀವನದ ಬಗ್ಗೆ ಹೆಚ್ಚಾಗಿ ಗಮನ ಹರಿಸಿದರೂ, ಅದರಲ್ಲಿ ತೃಪ್ತಿ ಸಿಗಲು ಸಾಧ್ಯವಾಗುವುದಿಲ್ಲ.
ಈ ಸಮಸ್ಯೆಯನ್ನು ನಿವಾರಿಸಲು ಹಾಗೂ ನಿಮ್ಮ ಸೆಕ್ಸ್ ಲೈಫ್ ಚೆನ್ನಾಗಿರಬೇಕೆಂದರೆ ಈ ಆಹಾರಗಳನ್ನು ತಪ್ಪದೆ ಸೇವಿಸಿ...
ಈರುಳ್ಳಿ : ಈರುಳ್ಳಿ ಕೇವಲ ಆಹಾರ - ಪದಾರ್ಥಗಳನ್ನು ಸ್ವಾಧಿಷ್ಟವಾಗಿಸುವುದು ಮಾತ್ರವಲ್ಲ ಇದು ಲೈಂಗಿಕ ಆರೋಗ್ಯಕ್ಕೂ ಉತ್ತಮವಾಗಿದೆ. ಇದನ್ನು ಉಪಯೋಗಿಸಿ ಸೆಕ್ಸ್ ಲೈಫ್ ಉತ್ತಮವಾಗಿರುವಂತೆ ಮಾಡಿ. ಇದು ನಿಮ್ಮ ಶಾರೀರಿಕ ಸಮಸ್ಯೆಯನ್ನು ದೂರ ಮಾಡುತ್ತದೆ.ಜೊತೆಗೆ ಪಿರಿಯಡ್ಸ್‌ನಲ್ಲಿನ ಅನಿಯಮಿತ ರಕ್ತಸ್ರಾವವನ್ನು ನಿವಾರಣೆ ಮಾಡುತ್ತದೆ.
ಸೋರೆಕಾಯಿ ಮೊರಬ್ಬ : ಇದು ಕೂಡ ಸೆಕ್ಸ್ ಲೈಫ್ ಎಂಜಾಯ್ ಮಾಡಲು ಸಹಾಯ ಮಾಡುತ್ತದೆ. ಇದು ತುಂಬಾ ಸಮಯದವರೆಗೂ ಕಾಮ ಇಚ್ಛೆ ಉಳಿಯಲು ಇದು ಸಹಾಯ ಮಾಡುತ್ತದೆ.
ಬೆಳ್ಳುಳ್ಳಿ : 200 ಗ್ರಾಂ ಬೆಳ್ಳುಳ್ಳಿಯಲ್ಲಿ 60 ಗ್ರಾಂ ಜೇನು ಮಿಕ್ಸ್ ಮಾಡಿ ಅದನ್ನು ಒಂದು ಬಾಟಲ್‌ನಲ್ಲಿ ಹಾಕಿಡಿ. ಇದನ್ನು 40 ದಿನಗಳವರೆಗೆ ನಿರಂತರವಾಗಿ ಸೇವನೆ ಮಾಡುತ್ತಿರಿ. ಇದನ್ನು ಸೇವನೆ ಮಾಡಿದರೆ ಲೈಂಗಿಕ ಆಸಕ್ತಿ ಹೆಚ್ಚಿಸುತ್ತದೆ.
ಜಾಯಿಕಾಯಿ : ಜಾಯಿಕಾಯಿಯ ಪುಡಿಯನ್ನ ಬೆಳಗ್ಗೆ ನೀರಿನ ಜೊತೆಗೆ ಮಿಕ್ಸ್ ಮಾಡಿ ಸೇವನೆ ಮಾಡಿದರೆ ಲೈಂಗಿಕ ಅಸಮರ್ಥತೆ ನಿವಾರಣೆಯಾಗುತ್ತದೆ.
ವಾಟರ್ ಚೆಸ್ಟ್‌ನಟ್ : ಇದು ನೀರಿನ ಅಡಿಯಲ್ಲಿ ಬೆಳೆಯುವ ಗಿಡದಲ್ಲಿ ಬೆಳೆಯುತ್ತದೆ. ಇದನ್ನು ಸೇವನೆ ಮಾಡುವುದರಿಂದ ಸೆಕ್ಸ್ ಲೈಫ್‌ನ ಆನಂದ ಹೆಚ್ಚುತ್ತದೆ. 5 ರಿಂದ 10 ಗ್ರಾಂನಷ್ಟು ವಾಟರ್ ಚೆಸ್ಟ್ ನಟ್ ಪುಡಿಯನ್ನು ಹಾಲಿನಲ್ಲಿ ಹಾಕಿ ಕುದಿಸಿ ಬೆಳಗ್ಗೆ ಮತ್ತು ರಾತ್ರಿ ಬಳಕೆ ಮಾಡಿ. ಇದರಿಂದ ನಿಮ್ಮ ಸೆಕ್ಸ್ ಲೈಫ್ ಮತ್ತಷ್ಟು ಸ್ಟ್ರಾಂಗ್ ಆಗುತ್ತದೆ.
ದಾಳಿಂಬೆ : ದಾಳಿಂಬೆ ನಿರಂತರವಾಗಿ ಸೇವನೆ ಮಾಡುತ್ತಿದ್ದರೆ ಅದರಿಂದ ಸೆಕ್ಸ್ ಲೈಫ್ ಉತ್ತಮವಾಗುತ್ತದೆ.
ಆವಕಾಡೊ : ಆರೋಗ್ಯಕರ ಸೆಕ್ಸ್ ಡ್ರೈವ್‌ಗೆ ಫೋಲಿಕ್ ಆಸಿಡ್ ಮತ್ತು ವಿಟಮಿನ್ ಬಿ 6 ಅಗತ್ಯ. ಫೋಲಿಕ್ ಆಮ್ಲವು ದೇಹವನ್ನು ಶಕ್ತಿಯಿಂದ ಪಂಪ್ ಮಾಡುತ್ತದೆ, ಆದರೆ ವಿಟಮಿನ್ ಬಿ 6 ಹಾರ್ಮೋನುಗಳನ್ನು ಸ್ಥಿರಗೊಳಿಸುತ್ತದೆ. ಅವಾಕಾಡಾದಲ್ಲಿ ಈ ಅಂಶಗಳಿದ್ದು, ಇದು ಆರೋಗ್ಯಕ್ಕೆ ಉತ್ತಮವಾಗಿದೆ.
ಕಲ್ಲಂಗಡಿ : ಕಲ್ಲಂಗಡಿ ನಿಮಿರುವಿಕೆಯನ್ನು ಸುಧಾರಿಸುತ್ತದೆ ಮತ್ತು ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ. ಅವು ದೇಹದಲ್ಲಿ ಅಮೈನೋ ಆಮ್ಲಗಳು ಮತ್ತು ಅರ್ಜಿನೈನ್ ಅನ್ನು ಬಿಡುಗಡೆ ಮಾಡುವ ಸಿಟ್ರುಲ್ಲಿನ್ ಅನ್ನು ಸಹ ಒಳಗೊಂಡಿರುತ್ತವೆ.ಇದು ರೋಮ್ಯಾನ್ಸ್ ಹೆಚ್ಚಿಸಲು ಸಹಾಯ ಮಾಡುತ್ತದೆ.
ಬಾದಾಮಿ : ಬಾದಾಮಿ ಅರ್ಜಿನೈನ್ ಅನ್ನು ಹೊಂದಿರುತ್ತದೆ ಅದು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ. ಬಾದಾಮಿಗಳಲ್ಲಿ ಕಂಡುಬರುವ ಈ ಅಮೈನೊ ಆಮ್ಲವು ನಿಮಿರುವಿಕೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಚಾಕೊಲೇಟ್ : ಡಾರ್ಕ್ ಚಾಕೊಲೇಟ್ ಸಿರೊಟೋನಿನ್ ಮತ್ತು ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ ಅದು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಇದು ಕಾಮಾಸಕ್ತಿಯನ್ನು ಸುಧಾರಿಸುವುದಿಲ್ಲ ಆದರೆ ನೀವು ತೊಂದರೆಗೊಳಗಾಗುವುದಿಲ್ಲ.