ಈಗಷ್ಟೇ ಮದುವೆ ಆಗಿದ್ಯಾ? ಈ ಟಿಪ್ಸ್ ಮೂಲಕ ಮುಂಜಾನೆಯನ್ನು ರೊಮ್ಯಾಂಟಿಕ್ ಆಗಿಸಿಕೊಳ್ಳಿ
ವಿವಾಹವು ಒಂದು ಸುಂದರವಾದ ಬಂಧವಾಗಿದ್ದು, ಒಬ್ಬರನ್ನೊಬ್ಬರು ಪ್ರೀತಿಸುವ ಮೂಲಕ ಆ ಬಾಂಧವ್ಯವನ್ನು ಮತ್ತಷ್ಟು ಬಿಗಿಯಾಗಿಸಬಹುದು. ಏಕೆಂದರೆ ಸಂಬಂಧದಲ್ಲಿ ಬಂಧಿಸುವುದು ಸುಲಭ, ಆದರೆ ಅದನ್ನು ಕಾಪಾಡಿಕೊಳ್ಳುವುದು ಕಷ್ಟ. ನಮ್ಮಲ್ಲಿ ಹೆಚ್ಚಿನವರು ಸಂಜೆ ಮತ್ತು ರಾತ್ರಿಗಳನ್ನು ರೊಮ್ಯಾಂಟಿಕ್ ಆಗ ಕಳೆದರೆ, ಬೆಳಗ್ಗೆ ಕೆಲಸಗಳನ್ನು ಬೇಗ ಮಾಡಿ ಮುಗಿಸುವ ಧಾವಂತದಲ್ಲಿ ಇರುತ್ತಾರೆ. ಆದರೆ ವೈವಾಹಿಕ ಜೀವನವನ್ನು ಸಂತೋಷಪಡಿಸಲು ಮತ್ತು ಸಂಗಾತಿಯೊಂದಿಗೆ ಬಲವಾದ ಬಂಧವನ್ನು ಬೆಳೆಸಲು ಬೆಳಗ್ಗಿನ ರೊಮ್ಯಾನ್ಸ್ ಕೂಡ ಮುಖ್ಯ. ಇದರಿಂದ ಪೂರ್ತಿ ದಿನ ಸುಂದರವಾಗಿರುತ್ತದೆ.
ಗುಡ್ ಮಾರ್ನಿಂಗ್ ಹೇಳುವುದು ಮುಖ್ಯ
ಇವು ಹೇಳಲು ಕೇವಲ ಎರಡು ಪದಗಳು, ಆದರೆ ಬೆಳಗ್ಗೆ ಈ ಎರಡು ಪದಗಳಿಂದ ಸಂಗಾತಿಯನ್ನು ಪ್ರೀತಿಯ ನಗುವಿನೊಂದಿಗೆ ಸ್ವಾಗತಿಸಿದಾಗ, ಅದು ನಿಮ್ಮನ್ನು ಮತ್ತು ನಿಮ್ಮ ಸಂಗಾತಿಯ ಇಡೀ ದಿನವನ್ನು ಸಂತೋಷಗೊಳಿಸುವಲ್ಲಿ ದೊಡ್ಡ ಪಾತ್ರ ವಹಿಸಬಹುದು.
ಒಬ್ಬರಿಗೊಬ್ಬರು ಅಪ್ಪುಗೆಯೊಂದಿಗೆ ಗುಡ್ ಮಾರ್ನಿಂಗ್ ಹೇಳುವುದು ಅಥವಾ ಹಣೆಗೆ ಸಿಹಿ ಮುತ್ತು ನೀಡುತ್ತಾ ಮುಂಜಾನೆಯನ್ನು ಆಹ್ವಾನಿಸುವುದು ಕೇವಲ ಸಿನಿಮಾಗಳಿಗೆ ಮಾತ್ರ ಸೀಮಿತವಲ್ಲ, ಇದನ್ನು ನಿಜ ಜೀವನದಲ್ಲಿ ಅಳವಡಿಸಿದರೆ ಬದಲಾವಣೆಯನ್ನು ನೀವೇ ಕಾಣಬಹುದು.
ಒಟ್ಟಿಗೆ ವರ್ಕ್ ಔಟ್ ಮಾಡಿ
ಇದು ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳುವ ಸಮಯ. ಆದುದರಿಂದ ಸ್ವಲ್ಪ ಸಮಯ ಜೊತೆಯಾಗಿ ಕಲಿಯುವುದು ತುಂಬಾ ಮುಖ್ಯ. ಆದುದರಿಂದ ಒಟ್ಟಿಗೆ ತಾಲೀಮು ಮಾಡುವ ಯಾವುದೇ ರೀತಿಯಲ್ಲಿ ವರ್ಕ್ ಔಟ್ ಮಾಡಲು ಪ್ರಯತ್ನಿಸಿ.
ಪರಸ್ಪರರನ್ನು ಹುರಿದುಂಬಿಸುತ್ತಾ ವರ್ಕ್ ಔಟ್ ಮಾಡಿದಾಗ ಸಮಯ ಕಳೆದದ್ದೇ ಗೊತ್ತಾಗುವುದಿಲ್ಲ. ಸಂಗಾತಿಯೊಂದಿಗೆ ಸಮಯ ಕಳೆಯಲು ಇದು ಉತ್ತಮ ಮತ್ತು ಮೋಜಿನ ಸಮಯವಾಗಿರುತ್ತದೆ. ಇದಲ್ಲದೆ, ಈ ವಿಧಾನವು ನಿಮ್ಮಿಬ್ಬರನ್ನೂ ಪರಸ್ಪರ ಜಿಮ್ ಪಾರ್ಟ್ನರ್ ಆಗಿ ಸಹ ಮಾಡುತ್ತದೆ.
ಒಬ್ಬರನ್ನೊಬ್ಬರು ಸ್ಪರ್ಶಿಸುತ್ತಲೇ ಇರಿ
ಮುಂಜಾನೆಯನ್ನು ದೈನಂದಿನ ಕೆಲಸಗಳನ್ನು ಮಾಡಲು ಮತ್ತು ಕಚೇರಿಗೆ ಹೋಗುವ ಅವಸರದಲ್ಲಿ ಕಳೆಯಲಾಗುತ್ತದೆ. ಮತ್ತು ಮಕ್ಕಳನ್ನು ಹೊಂದಿದ್ದರೆ, ಕೆಲಸ ಇನ್ನಷ್ಟು ಹೆಚ್ಚಾಗುತ್ತದೆ. ಆದರೆ ಇದೆಲ್ಲದರ ನಡುವೆ, ಒಬ್ಬರನ್ನೊಬ್ಬರು ಮತ್ತೆ ಮತ್ತೆ ಸ್ಪರ್ಶಿಸಲು ಪ್ರಯತ್ನಿಸುತ್ತಲೇ ಇರಿ.
ಈ ಟಚ್ನಲ್ಲಿ ಸ್ವಲ್ಪ ರೋಮ್ಯಾನ್ಸ್ ತುಂಬಿದ್ದರೆ, ಅದು ಮತ್ತಷ್ಟು ಸಂತೋಷ ನೀಡುತ್ತದೆ. ಬೆಳಗ್ಗೆ ಉಪಾಹಾರ ಸೇವಿಸುವಾಗ ಕೈಗಳನ್ನು ಸ್ಪರ್ಶಿಸಬೇಕು, ಕೆಲಸ ಮಾಡುವಾಗ ಭುಜಗಳನ್ನು ತಟ್ಟಬೇಕು ಅಥವಾ ಕಚೇರಿಗೆ ಹೋಗುವಾಗ ಕಿಸ್ ಮಾಡುವುದು ಇವೆಲ್ಲವೂ ಜೀವನದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.
ಒಟ್ಟಿಗೆ ಸ್ನಾನ ಮಾಡಿ
ಇದು ಸಂಬಂಧವನ್ನು ಮತ್ತಷ್ಟು ಹತ್ತಿರ ತರುವ ಒಂದು ವಿಧಾನ. ಇದು ಲೈಂಗಿಕತೆಯನ್ನು ಆನಂದಿಸಲು ಅಲ್ಲ, ಆದರೆ ಒಟ್ಟಿಗೆ ಸ್ನಾನ ಮಾಡುವುದು ನೀವು ಜೊತೆಯಾಗಿ ಕಳೆಯಬಹುದಾದ ಮೋಜಿನ ಸಮಯವಾಗಬಹುದು.
ಜೊತೆಯಾಗಿ ಸ್ನಾನ ಮಾಡುವುದು ಎಂದರೆ ಇದೊಂದು ರೊಮ್ಯಾಂಟಿಕ್ ಅನುಭವ ಅಂತೂ ನಿಜ. ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ, ರೊಮ್ಯಾನ್ಸ್ ಮಾಡುತ್ತಾ ಸ್ನಾನ ಮಾಡಿದರೆ ಇಬ್ಬರ ದಿನವೂ ಮತ್ತಷ್ಟು ಆನಂದಮಯ ಆಗೋದ್ರಲ್ಲಿ ಸಂಶಯವೇ ಇಲ್ಲ.
ಜೊತೆಯಾಗಿ ಬ್ರೇಕ್ ಫಾಸ್ಟ್ ಮಾಡಿ
ಒಟ್ಟಿಗೆ ಉಪಾಹಾರ ವನ್ನು ಸೇವಿಸುವುದರಿಂದ ನೀವಿಬ್ಬರೂ ಮತ್ತಷ್ಟು ಸಮಯ ಜೊತೆಯಾಗಿ ಇರುತ್ತೀರಿ. ಈ ಸಮಯದಲ್ಲಿ ಜೋಕ್‌ಗಳನ್ನು ಹೇಳಿ ಅಥವಾ ಜೀವನ ಕಥೆಗಳನ್ನು ಹಂಚಿಕೊಳ್ಳಿ ಮತ್ತು ಅದು ನಿಮ್ಮ ದಿನವನ್ನು ಸಂತೋಷದ ಮೋಡ್ ನೊಂದಿಗೆ ಹೇಗೆ ಆರಂಭವಾಗುತ್ತದೆ ಅನ್ನೋದನ್ನು ನೀವೇ ನೋಡಬಹುದು.
ಮಾರ್ನಿಂಗ್ ಸೆಕ್ಸ್ :
ಹೌದು ಇದು ನಿಮ್ಮ ವೈವಾಹಿಕ ಜೀವನದ ಆರಂಭದ ದಿನಗಳನ್ನು ಮತ್ತಷ್ಟು ರೋಮಾಂಚನಗೊಳಿಸುತ್ತದೆ. ಇಬ್ಬರಿಗೂ ಕೆಲಸಕ್ಕೆ ಹೋಗಲು ಇರದೇ ಇದ್ದರೆ ಆ ಸಮಯದಲ್ಲಿ ಇಬ್ಬರು ಬೆಳಗ್ಗಿನ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಬಹುದು. ಇದರಿಂದ ಇಬ್ಬರ ದಿನವೂ ಅದ್ಭುತವಾಗಿರೋದಲ್ಲಿ ಸಂಶಯವಿಲ್ಲ.