ಆತ್ಮಗಳು ಸುತ್ತಾಡುವ ಕೇರಳದ ಭಯಾನಕ ಬಂಗಲೆ, ಇನ್ನೂ ಕೇಳಿಸುತ್ತಂತೆ ಮಗುವಿನ ಕಿರುಚಾಟ
Story of keralam bonacauds bungalow ರಾತ್ರಿ ಆದ್ಮೇಲೆ ಈ ಬಂಗಲೆಯಲ್ಲಿ ಮಗುವಿನ ಕಿರುಚಾಟ ಕೇಳಿಸುತ್ತಂತೆ… ಕಿಟಕಿಯ ಬಳಿ ರಹಸ್ಯ ಹುಡುಗಿ ಕಾಣಿಸಿಕೊಂಡು ಕ್ಷಣದಲ್ಲೇ ಮಾಯವಾಗ್ತಾಳಂತೆ!

ಬೊನಕಾಡ್ ಬಂಗಲೆ
ಕೇರಳದ ತಿರುವನಂತಪುರಂ ಸಮೀಪದ ಹಸಿರು ಪರ್ವತಗಳ ಮಧ್ಯೆ ಇರುವ ಬೊನಕಾಡ್ ಬಂಗಲೆ ಇಂದು ಭಾರತದ ಅತ್ಯಂತ ಭಯಾನಕ ಪ್ರೇತ ತಾಣಗಳಲ್ಲಿ ಒಂದಾಗಿ ಪ್ರಸಿದ್ಧಿಯಾಗಿದೆ. 1951ರಲ್ಲಿ ಬ್ರಿಟಿಷರು ನಿರ್ಮಿಸಿದ್ದ ಈ ಬಂಗಲೆ, ಒಮ್ಮೆ ಚಹಾ ತೋಟದ ವ್ಯವಸ್ಥಾಪಕರ ನಿವಾಸವಾಗಿತ್ತು. ಆದರೆ ಕುಟುಂಬದ ಪುಟ್ಟ ಮಗು ನಿಗೂಢವಾಗಿ ಸಾವನ್ನಪ್ಪಿದ ಬಳಿಕ, ಅವರು ಲಂಡನ್‌ಗೆ ಮರಳಿದರು. ಅಲ್ಲಿಂದಲೇ ಈ ಬಂಗಲೆಯ ಭಯಾನಕ ಕಥೆಗಳು ಆರಂಭವಾದವು ಎಂದು ಸ್ಥಳೀಯರು ನಂಬುತ್ತಾರೆ.

ರಾತ್ರಿ ವೇಳೆ ಮಗುವಿನ ಕಿರುಚಾಟ
ಆ ಬಳಿಕ ಇಲ್ಲಿ ವಿಚಿತ್ರ ಘಟನೆಗಳು ನಡೆಯತೊಡಗಿದವು. ರಾತ್ರಿ ವೇಳೆ ಮಗುವಿನ ಕಿರುಚಾಟ, ಗಾಜು ಒಡೆಯುವ ಶಬ್ದ, ಕಿಟಕಿಯ ಬಳಿ ಕಾಣಿಸಿಕೊಳ್ಳುವ ರಹಸ್ಯ ಯುವತಿ—ಇವೆಲ್ಲವೂ ಈ ಬಂಗಲೆಯನ್ನು ಇನ್ನಷ್ಟು ಭೀತಿದಾಯಕವಾಗಿಸಿವೆ. ಸ್ಥಳೀಯ ಕಥೆಗಳ ಪ್ರಕಾರ, ಉರುವಲು ತರಲು ಹೋದ ಯುವತಿಯೊಬ್ಬಳು ಹಿಂತಿರುಗಿದ ನಂತರ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದಳು. ಇಂಗ್ಲಿಷ್ ಮಾತನಾಡಲಾರದ ಆಕೆ, ಆ ಬಳಿಕ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಲು ಆರಂಭಿಸಿದ್ದಳು ಎನ್ನಲಾಗುತ್ತದೆ. ಇದನ್ನು ನೋಡಿ ಹಲವರು ಆಕೆಗೆ ಆತ್ಮ ಆವರಿಸಿದೆ ಎಂದು ನಂಬಿದರು.
ಮುರಿದ ಬಾಗಿಲುಗಳು, ಒಡೆದ ಕಿಟಕಿ
ಇಂದು ಬೊನಕಾಡ್ ಬಂಗಲೆ ಸಂಪೂರ್ಣ ನಿರ್ಜನವಾಗಿದೆ. ಮುರಿದ ಬಾಗಿಲುಗಳು, ಒಡೆದ ಕಿಟಕಿಗಳು ಮತ್ತು ಮರದ ಫಲಕಗಳಿಂದ ಮುಚ್ಚಿದ ಪ್ರವೇಶ ದ್ವಾರಗಳು ಈ ಜಾಗದ ಭಯಾನಕತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ರಾತ್ರಿಯಾದ್ಮೇಲೆ ಇಲ್ಲಿ ಒಂದು ರಹಸ್ಯ ಹುಡುಗಿ ಕಾಣಿಸುತ್ತಾಳೆ ಎಂಬ ಮಾತುಗಳೂ ಇವೆ. ಸಾಹಸಪ್ರಿಯರು ಮತ್ತು ಪ್ಯಾರಾನಾರ್ಮಲ್ ಕಥೆಗಳಿಗೆ ಆಸಕ್ತಿ ಇರುವವರು ಇಂದು ಕೂಡ ಈ ಬಂಗಲೆಯ ರಹಸ್ಯ ಹುಡುಕಲು ಭೇಟಿ ನೀಡುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.