- Home
- Life
- Relationship
- ಸೋನು ಗೌಡ ಹುಟ್ಟುಹಬ್ಬ: ನಟಿಗೆ ವಯಸ್ಸೆಷ್ಟು? ಗೆಳೆಯನ ನೆನೆದು ಬಿಕ್ಕಿ ಬಿಕ್ಕಿ ಅತ್ತ ಸೋನು ಹೇಳಿದ್ದೇನು
ಸೋನು ಗೌಡ ಹುಟ್ಟುಹಬ್ಬ: ನಟಿಗೆ ವಯಸ್ಸೆಷ್ಟು? ಗೆಳೆಯನ ನೆನೆದು ಬಿಕ್ಕಿ ಬಿಕ್ಕಿ ಅತ್ತ ಸೋನು ಹೇಳಿದ್ದೇನು
ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ ಗೌಡ ತಮ್ಮ ಹುಟ್ಟುಹಬ್ಬದ ಸಂಭ್ರಮದ ನಡುವೆಯೇ, ಅಗಲಿದ ತಮ್ಮ ಮಾಜಿ ಗೆಳೆಯನನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಪ್ರತಿ ವರ್ಷ ಮೊದಲು ಶುಭಕೋರುತ್ತಿದ್ದ ಆತ ಈಗ ಇಲ್ಲದಿರುವುದು ಹಾಗೂ ಆತ ಕಳುಹಿಸಿದ್ದ ಕೊನೆಯ ಇ-ಮೇಲ್ ಅನ್ನು ನೆನೆದು ಸೋನು ಭಾವುಕರಾಗಿದ್ದಾರೆ.

ಜಾಲತಾಣದಿಂದ ಸಂಪಾದನೆ
ಸೋನು ಶ್ರೀನಿವಾಸ ಗೌಡ ಎಂದರೆ ಸಾಕು, ನೆಟ್ಟಿಗರು ಅದರಲ್ಲಿಯೂ ಪಡ್ಡೆ ಹುಡುಗರ ಕಣ್ಣುಗಳು ಅರಳುತ್ತವೆ. ತಮ್ಮ ಬೋಲ್ಡ್ ದೃಶ್ಯಗಳಿಂದಲೇ, ಅರೆಬರೆ ಡ್ರೆಸ್ಗಳಿಂದಲೇ ಫೇಮಸ್ ಆಗಿರುವವರು ಸೋನು ಶ್ರೀನಿವಾಸ ಗೌಡ (Sonu Shreenivasa Gowda). ಸೋಷಿಯಲ್ ಮೀಡಿಯಾ ಸ್ಟಾರ್ ಆಗಿರುವ ಇವರು, ನೆಗೆಟಿವ್ ಕಮೆಂಟ್ಸ್ ಮೂಲಕವೇ ಫೇಮಸ್ ಆಗಿದ್ರೂ, ಈ ನೆಗೆಟಿವ್ ಕಮೆಂಟ್ಸ್ ಮೂಲಕವೇ ಜಾಲತಾಣಗಳಿಂದ ಸಾಕಷ್ಟು ಸಂಪಾದನೆ ಮಾಡುತ್ತಿದ್ದಾರೆ.
ಅಸಭ್ಯ ಕಮೆಂಟ್ಸ್
ಸೋನು ಗೌಡ ಅವರು ಹಿಡಿದಿರುವ ದಾರಿಗೆ ಟೀಕೆಗಳೇ ಹೆಚ್ಚು, ಅಸಭ್ಯ ಮಾತುಗಳು, ಕಮೆಂಟ್ಸ್ಗಳೇ ಹೆಚ್ಚು. ಇಂಥ ಟ್ರೋಲ್ಗಳನ್ನು, ಅಸಭ್ಯ, ಅಶ್ಲೀಲ ಕಮೆಂಟ್ಸ್ಗಳನ್ನು ಎಂಜಾಯ್ ಮಾಡುತ್ತಲೇ ಮೇಲಕ್ಕೆ ಬಂದವರು ಸೋನು ಗೌಡ.
ನಟಿಗೆ ವಯಸ್ಸೆಷ್ಟು
ಇಂತಿಪ್ಪ ನಟಿಗೆ ಇಂದು ಅರ್ಥಾತ್ ಜೂನ್ 30 ಹುಟ್ಟುಹಬ್ಬದ ಸಂಭ್ರಮ. ಗೂಗಲ್ ದಾಖಲೆಯ ಪ್ರಕಾರ ಸೋನು ಗೌಡ ಅವರು ಹುಟ್ಟಿರುವುದು 1994ರ ಜೂನ್ 30. ಇದನ್ನು ಗಣನೆಗೆ ತೆಗೆದುಕೊಂಡರೆ ಈಗ ಅವರಿಗೆ 32 ವರ್ಷ ತುಂಬಿದ್ದು 33ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇಂದು ಅವರ ಅಭಿಮಾನಿಗಳು ಭರ್ಜರಿಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಆದರೆ ಅಗಲಿದ ಗೆಳೆಯನ ನೆನೆದು ಕಣ್ಣೀರಾಗಿದ್ದಾರೆ ಸೋನು ಗೌಡ.
ಅವನೇ ಮೊದಲು ವಿಷ್
ಇವತ್ತು ಅವನು ಇರುತ್ತಿದ್ದರೆ ವಿಷಯವೇ ಬೇರೆ ಇರುತ್ತಿತ್ತು. ಪ್ರತಿ ವರ್ಷ ನನ್ನ ಹುಟ್ಟುಹಬ್ಬಕ್ಕೆ ಅವನೇ ಮೊದಲು ಮೆಸೇಜ್ ಮಾಡ್ತಿದ್ದ. ಒಳ್ಳೊಳ್ಳೆ ಕೇಕ್ ತರಿಸಿ ಕಟ್ ಮಾಡಿಸುತ್ತಿದ್ದ. ಆದರೆ ತುಂಬಾ ಬೇಜಾರು ಆಗುತ್ತಿದೆ. ಎಲ್ಲದಕ್ಕೂ ಒಂದು ಕಾರಣ ಇರುತ್ತದೆ, ನನ್ನ ಲೈಫ್ನಲ್ಲಿಯೂ ಹೀಗೆಯೇ ಆಗಿದೆ ಎಂದು ಕಣ್ಣೀರಾಗಿದ್ದಾರೆ ನಟಿ.
ನಂಗೆ ಆಗ ಮಾತಾಡೋಕೆ ಆಗಿಲ್ಲ
ಈ ಹಿಂದೆ ತಮ್ಮ ಸಂಬಂಧದ ಬಗ್ಗೆ ನಟಿ ಮಾತನಾಡಿದ್ದರು. ನಾಲ್ಕು ವರ್ಷಗಳ ಹಿಂದೆ ನಾವು ರಿಲೇಶನ್‌ಶಿಪ್‌ನಲ್ಲಿದ್ದೆವು, ಅದೇನೋ ಆಗಿ ಬ್ರೇಕಪ್ ಆಯ್ತು. ಅದನ್ನು ಮರೆಯಬೇಕು ಎಂದುಕೊಂಡರೂ ಕೂಡ ಆಗುತ್ತಿಲ್ಲ, ಪರವಾಗಿಲ್ಲ. ನನ್ನನ್ನು ಕಾಂಟ್ಯಾಕ್ಟ್ ಮಾಡೋಕೆ ಅವರು ತುಂಬ ಟ್ರೈ ಮಾಡಿದ್ದಾರೆ. ಆದರೆ ನನಗೆ ಸಿಗೋಕೆ, ಮಾತನಾಡೋಕೆ ಆಗಿಲ್ಲ ಎಂದು ಪಶ್ಚಾತ್ತಾಪ ಆಗ್ತಿದೆ. ಅನಾರೋಗ್ಯದಿಂದ ಅತ ತೀರಿಕೊಂಡು ಬಿಟ್ಟ ಎಂದು ಸೋನು ಗೌಡ ಹೇಳಿದ್ದರು.
ತುಂಬಾ ಬೇಜಾರಾಗ್ತಿದೆ
ನನಗೆ ಆ ವ್ಯಕ್ತಿ ಮೇಲ್ ಮಾಡಿದ್ದ. ಆದರೆ ನಾನು ಮೇಲ್ ಒಪನ್ ಮಾಡೋದು ಕಡಿಮೆ. ಹೀಗಾಗಿ ನನಗೆ ತುಂಬ ಬೇಸರ ಆಗ್ತಿದೆ. ಇದು ನಾಟಕ ಅಲ್ಲ, ನಿಜವಾಗಿಯೂ ನನಗೆ ಫೀಲ್ ಆಗ್ತಿದೆ. ನೀವೆಲ್ಲ ನೆಗೆಟಿವ್ ಮಾತನಾಡಿದರೂ ಕೂಡ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದು ಸೋನು ಗೌಡ ಹೇಳಿದ್ದರು. ನಾಳೆ ಇರ್ತೀನೋ ಇಲ್ವೋ ನನಗೆ ಗೊತ್ತಿಲ್ಲ, ನಿನಗೆ ಮೆಸೇಜ್, ಕಾಲ್ ಮಾಡಿ ಮಾತಾಡಬೇಕು ಎಂದರೂ ಕೂಡ ಆಗಲ್ಲ ಅನಿಸುತ್ತೆ. ನನಗೆ ಏನಾದರೂ ಆದರೆ ನೋಡೋಕೆ ಬರಬೇಡ, ಫೀಲ್ ಕೂಡ ಆಗಬೇಡ, ಮುಂದೆ ಜನ್ಮ ಅಂತಿದ್ರೆ ನನಗೆ ಸಿಗು, ಮಿಸ್ ಯು ಮುದ್ದು ಎಂದು ಅವರು ಮಾರ್ಚ್ 24 ನೇ ತಾರೀಖಿಗೆ ಮೇಲ್ ಮಾಡಿದ್ದ. ಸಾವಿರ ಮೇಲ್ ಕಳಿಸಿದ್ರೂ ಕೂಡ, ಈ ಮೇಲ್ ನನಗೆ ಕಾಡ್ತಿದೆ ಎಂದು ಸೋನು ಗೌಡ ಹೇಳಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

