- Home
- Life
- Relationship
- ಗಂಡ, ಆತನ ಮನೆಯವರಿಗೆ ಅಡ್ಜಸ್ಟ್ ಮಾಡ್ಕೊಂಡು, ಸಂಪ್ರದಾಯಗಳನ್ನ ಪಾಲಿಸುವವಳೇ ‘ಪರ್ಫೆಕ್ಟ್ ಹೆಂಡತೀ’ನಾ?
ಗಂಡ, ಆತನ ಮನೆಯವರಿಗೆ ಅಡ್ಜಸ್ಟ್ ಮಾಡ್ಕೊಂಡು, ಸಂಪ್ರದಾಯಗಳನ್ನ ಪಾಲಿಸುವವಳೇ ‘ಪರ್ಫೆಕ್ಟ್ ಹೆಂಡತೀ’ನಾ?
ನಿಜವಾಗ್ಲೂ ಗಂಡಸರು ಹೆಂಗರಸನ್ನ ತಮ್ಮ ಜೀವನದಲ್ಲಿ ಪಡೆಯಲು ಅರ್ಹರೇ? ಇಲ್ಲಿರುವ ಕಾರಣಗಳನ್ನು ನೋಡಿದ್ರೆ, ಖಂಡಿತವಾಗಿಯೂ ಇಂತಹ ಗಂಡಸರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕಿಂತ ಸಿಂಗಲ್ ಆಗಿರೋದೆ ಬೆಸ್ಟ್ ಎನ್ನುತ್ತಿದ್ದಾರೆ.

"ಸಂಪ್ರದಾಯಬದ್ಧ ಪತ್ನಿ" ಎಂಬ ಕಲ್ಪನೆಯು ಮೌಲ್ಯಗಳ ಬಗ್ಗೆ ಮಾತಾಡೋದು ಕಡಿಮೆ, ಆದರೆ ಈ ಮಾತಿನಲ್ಲಿ ನಿಯಂತ್ರಣದ ಬಗ್ಗೆ ಹೆಚ್ಚು ಮಾಹಿತಿ ಇದೆ. ಮದುವೆಯಾದ ಬಳಿಕ ಮಹಿಳೆಯರು ಪುರುಷ ಹೇಳಿದಂತೆ ಕೇಳಬೇಕು, ಆತನಿಗೆ ತಕ್ಕಂತೆ ಬದುಕಬೇಕು ಅನ್ನೋದದಾರೆ, ಆ ಹೆಣ್ಣಿಗೂ ತನ್ನದೇ ಆದ ಆಸೆ ಆಕಾಂಕ್ಷೆಗಳಿಲ್ಲವೆ.. ಪುರುಷರಿಗೆ ಮಹಿಳೆಯರು ಅರ್ಹರು ಅಲ್ಲವೇ ಅಲ್ಲ ಅನ್ನೋದಕ್ಕೆ ಕಾರಣಗಳಿವು.
ಆಕೆ ನಿಮ್ಮ ಸೇವೆ ಮಾಡಲು ಹುಟ್ಟಿಲ್ಲ
ಗಂಡ ಮನೆಯಲ್ಲಿ ಸುಮ್ಮನೆ ಕುಳಿತು ಟಿವಿ, ಮೊಬೈಲ್ ನೋಡುವುದು, ಪತ್ನಿಯಾದವಳು ಮನೆ ಕೆಲಸ, ಅವನಿಗೆ ಮೂರು ಹೊತ್ತು ಊಟ ತಿಂಡಿ, ಆತನ ಸೇವೆಯನ್ನು ಮಾಡುವುದು ಇದಕ್ಕಾಗಿ ಆಕೆ ಹುಟ್ಟಿರುವುದೇ? ಖಂಡಿತಾ ಅಲ್ಲ. ಮದುವೆಯಾಗಿ ಬಂದ ಪತ್ನಿಯನ್ನು ಮನೆಕೆಲಸದವಳ ಹಾಗೇ ಟ್ರೀಟ್ ಮಾಡೋದನ್ನು ಬಿಟ್ಟು, ಆಕೆಯನ್ನು ಹೆಂಡತಿಯಂತೆ ನೋಡಿ. ಆಕೆಗೂ ನಿಮ್ಮಂತ ಆರಾಮದ ಅವಶ್ಯಕತೆ ಇದೆ.
ಅವಳ ಮೌನ ಶಾಂತಿಯ ಸಂಕೇತವಲ್ಲ
ಮನೆಯಲ್ಲಿ ಹೆಂಡತಿ ಸೈಲೆಂಟ್ ಆಗಿದ್ದಾಳೆ ಅಂದ್ರೆ ಅದು ಶಾಂತಿಯ ಸಂಕೇತ ಅಲ್ಲ. ಆಕೆಯ ಮಾತನ್ನು ಯಾರು ಕೇಳುವವರಿಲ್ಲ ಎಂದ ಮೇಲೆ ಆಕೆ ಮೌನ ತಾಳುತ್ತಾಳೆ. ಆಕೆಯ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಅರ್ಥಮಾಡ್ಕೊಳಿ, ಆಕೆಗೆ ಮೌನವನ್ನು ಅರ್ಥ ಮಾಡಲು ಕಲಿಯಿರಿ.
ಪ್ರೀತಿಯಂದ್ರೆ ನಿಮ್ಮ ಆದೇಶವನ್ನು ಪಾಲಿಸೋದು ಮಾತ್ರಾನ?
ಹುಡುಗಿಯರು ವಿಧೇಯರಾಗಿದ್ದರೆ, ಆಕೆ ಬೆಸ್ಟ್ ಹೆಂಡ್ತಿ, ಸೊಸೆ ಎನ್ನುವ ಪಟ್ಟ ಪಡೆಯುತ್ತಾಳೆ. ಆದರೆ ಪ್ರೀತಿಯಂದರೆ ನೀವು ಆದೇಶ ಮಾಡೋದನ್ನೆಲ್ಲಾ ಪಾಲಿಸುವುದು ಮಾತ್ರಾನ? ನಿಮ್ಮ ತಪ್ಪುಗಳನ್ನ ತಿದ್ದುವ, ನಿಮಗೆ ಚಾಲೆಂಜ್ ಮಾಡುವ ಹುಡುಗಿಯರು ನಿಮ್ಮನ್ನು ಪ್ರೀತಿಸುವವರೇ ಆಗಿರುತ್ತಾರೆ, ಅದನ್ನು ನೀವು ಅರ್ಥಮಾಡಿಕೊಳ್ಳಬೇಕು.
ಅವಳಗುರುತು ಖಾಲಿ ಹಾಳೆಯಲ್ಲ
ಅನೇಕ ಮಹಿಳೆಯರು ಹೆಂಡತಿಯರಾದ ನಂತರ ತಮ್ಮ ವ್ಯಕ್ತಿತ್ವವನ್ನು ಅಳಿಸಿಹಾಕುತ್ತಾರೆ - ಅವರ ಹೆಸರು, ವಾರ್ಡ್ರೋಬ್, ಮಹತ್ವಾಕಾಂಕ್ಷೆಗಳು, ಅವರ ಧ್ವನಿಯನ್ನು ಸಹ ಬದಲಾಯಿಸುತ್ತಾರೆ. ಆದರೆ ಒಬ್ಬ ಮಹಿಳೆ ನಿಮ್ಮ ಕುಟುಂಬದ ಗೌರವಕ್ಕೆ ಹೊಂದಿಕೊಳ್ಳಲು ಹುಟ್ಟಿಲ್ಲ. ಅವಳು ಮದುವೆಗೆ ಮೊದಲು ಪೂರ್ಣ ಜೀವನವನ್ನು ಹೊಂದಿದ್ದಳು - ಕನಸುಗಳು, ಸ್ನೇಹಿತರು, ಆಲೋಚನೆಗಳು ಎಲ್ಲವೂ ಬೇರೆಯಾಗಿತ್ತು. ಮದುವೆ ನಂತರ ಆಕೆ ವೃತ್ತಿ ಜೀವನ ಮುಂದುವರೆಸಲು, ಕನಸುಗಳನ್ನು ಬೆನ್ನಟ್ಟಲು ಬಯಸಿದರೆ ಆಕೆಗೆ ಬೆಂಬಲ ನೀಡಿ, ಅದರಿಂದ ನಿಮ್ಮ ಗೌರವ ಹಾಳಾಗೋದಿಲ್ಲ.
ನಿಮ್ಮ ಗೌರವ ಅವರ ಜವಾಬ್ದಾರಿಯಲ್ಲ.
ಹಲವಾರು ಕುಟುಂಬಗಳಲ್ಲಿ, ಮಹಿಳೆಯ ನಡವಳಿಕೆಯನ್ನು ಎಲ್ಲರ ಗೌರವದ ಅಳತೆಗೋಲಾಗಿ ಪರಿಗಣಿಸಲಾಗುತ್ತದೆ. ಅವಳ ಬಟ್ಟೆ, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು, ಧ್ವನಿ ಎತ್ತಿ ಮಾತನಾಡುವುದು ಇವೆಲ್ಲವನ್ನೂ ಗೌರವದ ಹೆಸರಿನಲ್ಲಿ ನಿಯಂತ್ರಿಸಲಾಗುತ್ತದೆ. ಆದರೆ ನಿಮ್ಮ ಕುಟುಂಬದ ಗೌರವದ ಭಾರ ಅವಳ ಹೆಗಲ ಮೇಲೆ ಬೀಳಬಾರದು.ಸಭೆಯಲ್ಲಿ ಜೋರಾಗಿ ನಗುವ ಮಹಿಳೆ ಅವಮಾನವನ್ನು ತರುವುದಿಲ್ಲ. ಕೆಲಸದಿಂದ ತಡವಾಗಿ ಮನೆಗೆ ಮರಳುವ ಮಹಿಳೆ ನಿಮ್ಮ ಪ್ರತಿಷ್ಠೆಗೆ ಹಾನಿ ಮಾಡುವುದಿಲ್ಲ. ಆಕೆಯಿಂದ ನಿಮ್ಮ ಗೌರವ ಹಾಳಾಗುತ್ತಿದೆ ಎಂದು ನೀವು ಅಂದುಕೊಂಡರೆ, ನಿಮ್ಮ ಅಹಂಕಾರವನ್ನು ಸ್ವಲ್ಪ ಕಡಿಮೆ ಮಾಡಿ.
ಅವಳ ದೇಹವು ಅವಳದು - ನಿಮ್ಮ ನೈತಿಕತೆಯ ಚಿಹ್ನೆಯಲ್ಲ
ಮಹಿಳೆಯ ಲೈಂಗಿಕ ಆಸಕ್ತಿ ಬಗ್ಗೆ ಈ ಪುರುಷ ಪ್ರಧಾನ ಸಮಾಜ ಒಪ್ಪಿಕೊಳ್ಳೋದೆ ಇಲ್ಲ. ಹುಡುಗಿ ಪ್ಯೂರ್ ಆಗಿರಬೇಕು, ಆದರೆ ಲೈಂಗಿಕವಾಗಿ ಎಂಜಾಯ್ ಮಾಡಬೇಕು., ಸಾಧಾರಣವಾಗಿದ್ದರು, ಆಕರ್ಷಕವಾಗಿರಬೇಕು ಎಂದು ಗಂಡಸರು ಬಯಸುತ್ತಾರೆ. ಆದರೆ ಮಹಿಳೆ ಲೈಂಗಿಕವಾಗಿ ತನ್ನ ಆಸೆಯನ್ನು ಹೇಳಿದರೆ, ಅದರ ಬಗ್ಗೆ ವಿರೋಧ ಎದ್ದೇಳುತ್ತೆ. ದಯವಿಟ್ಟು ತಿಳಿದುಕೊಳ್ಳಿ ಆಕೆಯ ದೇಹವು ನಿಮ್ಮ ಆಸ್ತಿಯಲ್ಲ. ಆಕೆಯ ಆಸೆಗಳನ್ನು ಅರ್ಥ ಮಾಡಿಕೊಳ್ಳೋದು ಸಹ ಮುಖ್ಯ. ಆಕೆ ನೋ ಎಂದರೆ ಅದರ ಅರ್ಥ ನೋ ಅಂತಾನೆ. ಆಕೆಗೆ ಏನು ಇಷ್ಟವಾಗುತ್ತೆ ಎನ್ನುವುದರ ಬಗೆಗ್ ಮಾತನಾಡಿದರೆ, ಅದರ ಬಗ್ಗೆ ನಾಚಿಗೆ ಪಡಬೇಕಾಗಿಲ್ಲ. ಆಕೆಯ ಭಾವನೆಗಳಿಗೆ ಗೌರವ ಕೊಡಬೇಕು.
ಅವಳ ಕೋಪ ಯುದ್ಧ ಅಲ್ಲ ಅದು ಪ್ರಾಮಾಣಿಕತೆ
"ಮದುವೆಗೆ ಮುಂಚೆ ಅವಳು ಹೀಗಿರಲಿಲ್ಲ" -ಅನ್ನೋದು ಗಂಡಂದಿರ ಸಾಮಾನ್ಯ ದೂರು. ಆದರೆ ಬಹುಶಃ ಆಕೆ ಮದುವೆಗೂ ಮೊದಲು ತನ್ನ ನಿಜ ಸ್ವರೂಪವನ್ನು ಹೊರ ಹಾಕಲು ನೀವು ಅವಕಾಶ ಕೊಟ್ಟಿರಲಿಲ್ಲ.. ಬಹುಶಃ ಈಗ, ಸುಮ್ಮನೆ ತೋರ್ಪಡಿಕೆ ಮಾಡುವ ಬದಲು, ಆಕೆ ನಿಜವಾಗಿಯೂ ತನ್ನ ನಿಜ ಸ್ವರೂಪವನ್ನು ತೋರಿಸುತ್ತಿದ್ದಾರೆ. ಸುಮ್ಮನೆ ಆಕೆಯನ್ನು ದೂರುವ ಬದಲು ಆಕೆಗೆ ಕೋಪ ಬರಲು ಕಾರಣವಾಗಿದ್ದೇನು ಅನ್ನೋದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ.
ಫೆಮಿನಿಸಂ ಫ್ಯಾಷನ್ ಅಲ್ಲ - ಅದು ಅವಳ ದಿಕ್ಸೂಚಿ
ಮದುವೆಗೆ ಮುಂಚೆ ಅವಳ ಆಂಬೀಶಿಯನ್, ಸ್ವಾತಂತ್ರ್ಯ ಮತ್ತು ಧೈರ್ಯವನ್ನು ನೀವು ಮೆಚ್ಚಿದ್ದರೆ, ಈಗ ಅವುಗಳ ಬಗ್ಗೆ ಅಸಮಾಧಾನಗೊಳ್ಳಬೇಡಿ. ಫೆಮಿಸಿಸಂ ಅಂದ್ರೆ ಫ್ಯಾಷನ್ ಅಲ್ಲ. ಇದು ಪುರುಷರನ್ನು ದ್ವೇಷಿಸುವ ಬಗ್ಗೆ ಅಲ್ಲ. ಫೆಮಿನಿಸಂ ಅಂದ್ರೆ ಒಬ್ಬ ಮಹಿಳೆ ಆಕೆಯ ಇಷ್ಟದಂತೆ, ಕನಸಿನಂತೆ ಜೀವಿಸುವೂದು ಕೂಡ ಆಗಿದೆ.
ಹೊಂದಾಣಿಕೆ ಅನ್ನೋದು ಹೊರೆಯಾಗಬಾರದು
"ಹೊಂದಿಕೊಳ್ಳುವ" ಮಹಿಳೆಯರ ಬಗ್ಗೆ ಗಂಡಸರು ಮೆಚ್ಚುಗೆ ಸೂಚಿಸುತ್ತಾರೆ. ಆದರೆ ಈ ಪ್ರಕ್ರಿಯೆಯಲ್ಲಿ ಆಕೆ ಏನೆಲ್ಲಾ ಕಳೆದುಳ್ಳುತ್ತಾರೆ ಅಲ್ವಾ? ಮದುವೆಯಾದ ಹುಡುಗನಿಗಾಗಿ . ನಗರಗಳನ್ನು ಬದಲಾಯಿಸುತ್ತಾರೆ, ಮನೆಗಳನ್ನು ಬದಲಾಯಿಸುತ್ತಾರೆ, ನಿಮ್ಮ ಕುಟುಂಬಕ್ಕೆ ಹೊಂದಿಕೊಳ್ಳುತ್ತಾರೆ, ನಿಮ್ಮ ಮನೆಯ ಆಚರಣೆಗಳು ಮತ್ತು ದಿನಚರಿ - ಎಲ್ಲವನ್ನೂ ಅವಳಿಂದ ನಿರೀಕ್ಷಿಸಲಾಗಿದೆ. ಆದರೆ ನೀವು ಏನು ತ್ಯಜಿಸಿದ್ದೀರಿ? ಆಕೆಗಾಗಿ ಸ್ವಲ್ಪವಾದರು ಅಡ್ಜಸ್ಟ್ ಮಾಡಿಕೊಂಡಿದ್ದೀರ? ಮದುವೆ ಅಂದ್ರೆ, ಹೆಣ್ಣಿನ ತ್ಯಾಗ ಅಲ್ಲ. ಇಬ್ಬರ ನಡುವಿನ ಅರ್ಥ ಮಾಡಿಕೊಂಡು ಮುಂದುವರೆಯುವ ಜೀವನ.
ಐಡಲ್ ವೈಫ್ ನಿಂದ ಸಮಾನತೆವರೆಗೆ
ಹೆಂಡ್ತಿಯಂದ್ರೆ ಹೀಗೆ ಇರಬೇಕು. ನನ್ನ ತಾಯಿ ನನಗಾಗಿ ಮಾಡಿದ್ದನ್ನೆಲ್ಲಾ ಮಾಡಬೇಕು ಎಂದು ಹೇಳುವುದು ತಪ್ಪು. ಮದುವೆಯಾಗಲು ಐಡಲ್ ಪತ್ನಿ ಹುಡುಕುವ ಬದಲು ಸಮಾನತೆಗೆ ಪ್ರಾಮುಖ್ಯತೆ ನೀಡಿ. ಹೆಣ್ಣುಮಕ್ಕಳಿಗೆ ಬೇಕಾಗುವ ಸಮಾನತೆಯೆ ಹೊರತು, ಉಸಿರುಕಟ್ಟಿಸುವಂತಹ ಸಂಸ್ಕಾರಿ ಸೊಸೆ ಪಟ್ಟ ಅಲ್ಲ