Love and Relation: ಪ್ರೀತಿಯಲ್ಲಿರೋ ಪುರುಷ ಹೀಗೆಲ್ಲ ಆಡ್ಬೋದು, ಗಾಬರಿ ಆಗ್ಬೇಡಿ
ಪ್ರೀತಿ ಅಮಲು ಎನ್ನಲಾಗುತ್ತದೆ. ಅಮಲೂ ಇರಬಹುದು, ವಿಚಿತ್ರವೂ ಆಗಿರಬಹುದು. ಏಕೆಂದರೆ, ಹಲವು ಪುರುಷರು ಪ್ರೀತಿ-ಆಕರ್ಷಣೆಗೆ ಬಿದ್ದ ಸಮಯದಲ್ಲಿ ಹಲವು ವಿಚಿತ್ರ ವರ್ತನೆಗಳನ್ನು ತೋರುತ್ತಾರೆ. ಅಂತಹ ವಿಚಿತ್ರ ನಡತೆಗಳು ಯಾವುವು ನೋಡಿ.
ಪ್ರೀತಿಸುವುದೊಂದು ಅನುಭೂತಿ, ಪ್ರೀತಿಯಲ್ಲಿರುವಾಗ ಸುತ್ತಮುತ್ತಲ ಪ್ರಪಂಚದ ಅರಿವು ಇರುವುದಿಲ್ಲ. ಪ್ರೀತಿಯಲ್ಲಿರುವವರು ಟಾಪ್ ಆಫ್ ದ ವರ್ಲ್ಡ್ ನಲ್ಲಿ ಇದ್ದೇವೆ ಎನ್ನುವ ಭಾವನೆಯಲ್ಲಿ ತೇಲುತ್ತಾರೆ. ಅದೊಂಥರ ಅಮಲು, ಅದೊಂಥರ ಮೈಮರೆವು. ಪ್ರೀತಿಸುವಾಗ ಇರುವಷ್ಟು ಸುರಕ್ಷಿತ ಭಾವನೆ ಬೇರ್ಯಾವುದರಲ್ಲೂ ಇರುವುದಿಲ್ಲ. ಹೀಗಾಗಿಯೇ, ಜಗತ್ತಿನಲ್ಲಿ ಪ್ರೀತಿಗಾಗಿ ಏನೆಲ್ಲ ನಡೆದಿದೆ, ನಡೆಯುತ್ತಿದೆ. ಪ್ರೀತಿಯಲ್ಲಿರುವ ಸಮಯದಲ್ಲಿ ಜಗತ್ತೆಲ್ಲ ಸುಂದರವಾಗಿ ತೋರುತ್ತದೆ. ಇಡೀ ವಿಶ್ವ ಮಧುರವಾಗಿ ಕಾಣುತ್ತದೆ. ಪ್ರೀತಿಯಲ್ಲೂ ಹಲವು ಹಂತಗಳಿವೆ, ಬಾಲ್ಯದ ಪ್ರೀತಿ, ಹರೆಯದ ಪ್ರೀತಿ, ವಯಸ್ಕ ಪ್ರೀತಿ, ಮಧ್ಯವಯಸ್ಸಿನ ಪ್ರೀತಿ…ಹೀಗೆ ಹಲವು ರೀತಿಗಳನ್ನು ಕಾಣಬಹುದು. ಸಾಮಾನ್ಯವಾಗಿ ಹರೆಯದ ನಂತರದ ಪ್ರೀತಿಗಳಲ್ಲಿ ಲೈಂಗಿಕ ಬಯಕೆಯೂ ಸೇರಿಕೊಂಡಿರುತ್ತದೆ ಎಂದರೆ ತಪ್ಪಿಲ್ಲ. ಅದರ ಹೊರತಾದ ಭಾವನೆಗಳೂ ಇರಬಹುದು, ಆದರೆ, ಪ್ರೀತಿಪಾತ್ರರ ಕುರಿತಾಗಿ ಲೈಂಗಿಕ ಆಸಕ್ತಿಯೂ ಹೆಚ್ಚುವುದು ಬಹುತೇಕರ ಅರಿವಿಗೆ ಬರುವ ಸಂಗತಿ. ಮದನನ ಕಾಮದ ಬಾಣ ಸೋಕಿದಾಗ ವ್ಯಕ್ತಿ ಮೈಮರೆಯುತ್ತಾನೆ. ಪುರುಷ-ಮಹಿಳೆ ಎನ್ನುವ ಭೇದವಿಲ್ಲದೆ ಈ ಸ್ಥಿತಿ ನಿರ್ಮಾಣವಾಗುತ್ತದೆ. ಆದರೆ, ಪುರುಷರು ಈ ವಿಚಾರದಲ್ಲಿ ಒಂದು ಕೈ ಮೇಲೆ. ಪ್ರೀತಿ-ಆಕರ್ಷಣೆಯ ಆರಂಭದ ದಿನಗಳಲ್ಲಿ ವಿಚಿತ್ರ ನಡವಳಿಕೆಗಳನ್ನು ತೋರಬಲ್ಲರು. ಸಾಮಾನ್ಯವಾಗಿ ಪ್ರೀತಿಯಲ್ಲಿರುವ ಪುರುಷರು ಮಾಡುವ ಕೆಲವು ವಿಚಿತ್ರ ನಡತೆಗಳೇನು ಗೊತ್ತಾ?
• ನಿಮ್ಮ ಮಾತಿನ (Talk) ಮೇಲೆ ಭಾರೀ ಗಮನ (Analyze)
ಅದುವರೆಗೆ ಬೇರೆ ಬೇರೆ ವಿಚಾರಗಳಲ್ಲಿ ಆಸಕ್ತನಾದ ಪುರುಷರು ಪ್ರೀತಿಗೆ (Love) ಬಿದ್ದಾಗ ತನ್ನ ಆದ್ಯತೆಯನ್ನೇ (Priority) ಬದಲಿಸುತ್ತಾರೆ. ಲವರ್ (Lover) ಬಗ್ಗೆ ಅತಿಯಾದ ಕಾಳಜಿ (Care) ವಹಿಸಲು ಆರಂಭಿಸುತ್ತಾರೆ. ಇದೇ ಅವರ ಜೀವನದ ಪ್ರಮುಖ ಆದ್ಯತೆಯಾಗಿ ಬದಲಾಗಬಹುದು. ತಮ್ಮ ಸಂಬಂಧವನ್ನು ಎಂದೆಂದಿಗೂ ಉಳಿಸಿಕೊಳ್ಳುವ ಆತುರಕ್ಕೆ ಬೀಳುತ್ತಾರೆ. ಹೀಗಾಗಿ, ಲವರ್ ಆಡುವ ಪ್ರತಿಯೊಂದು ಮಾತನ್ನು ಗಮನವಿಟ್ಟು ಕೇಳುತ್ತಾರೆ. ಅವರಾಡುವ ಮಾತಿನ ಸಾಧ್ಯತೆಗಳ ಬಗ್ಗೆ ವಿಮರ್ಶೆ ಮಾಡುತ್ತಾರೆ. ಅವರ ಮಾತುಗಳ ಕುರಿತಾಗಿಯೇ ಯೋಚಿಸುತ್ತಾರೆ. ಆಗ ಬೇರೊಬ್ಬರ ಎದುರು ತಾವಾಡುವ ಮಾತಿನ ಮೇಲೆ ಗಮನ ತಪ್ಪಬಹುದು. ಪದೇ ಪದೆ ಸಾರಿ ಕೇಳುವ ಪರಿಸ್ಥಿತಿ ನಿರ್ಮಿಸಿಕೊಳ್ಳಬಹುದು.
ಇದನ್ನೂ ಓದಿ: ಒಂದಿನ ಬೇರೆಯವರ ಜೊತೆ ಮಲಗಬೇಕು, ಹೆಂಡತಿ ಡಿಮ್ಯಾಂಡಿಗೆ ಗಂಡ ಸುಸ್ತು!
• ಮೊಬೈಲ್ (Mobile) ಬಳಕೆ ಮಾಡುವಾಗ ಪದೇ ಪದೆ ನಗುವುದು (Smile)
ಪ್ರೀತಿ ಮನುಷ್ಯರನ್ನು ವಿಚಿತ್ರ ವರ್ತನೆ ಮಾಡುವಂತೆ ಪ್ರೇರೇಪಿಸುತ್ತದೆ. ಈ ಸಮಯದಲ್ಲಿ ಪುರುಷರು (Male) ತಮ್ಮ ಸಂಗಾತಿಯೊಂದಿಗೆ (Partner) ಭಾರೀ ಮುಕ್ತವಾಗಿ (Open) ಮಾತನಾಡಬಲ್ಲರು. ನಿಜವಾಗಿಯೂ ಆಳವಾಗಿ ಪ್ರೀತಿಸುತ್ತಿದ್ದರೆ ಅವರು ಅತ್ಯಂತ ಸುರಕ್ಷಿತ (Secure) ಭಾವನೆಯಲ್ಲೂ ಇರುತ್ತಾರೆ. ಹೀಗಾಗಿ, ಸಂಗಾತಿಯೊಂದಿಗೆ ಮೆಸೇಜ್ ಮಾಡುತ್ತಿರುವ ಸಮಯದಲ್ಲಿ ಪದೇ ಪದೆ ನಗುತ್ತಾರೆ. ಬೇರೆಯವರಿಗೆ ಅವರು ಎಡವಟ್ಟಿನ ವರ್ತನೆ ಮಾಡುವಂತೆ ಕಾಣಬಹುದು. ನಿಜಕ್ಕೂ ಈ ವರ್ತನೆ (Behave) ವಿಚಿತ್ರವೆನಿಸಬಹುದು. ಆದರೆ, ಅವರಲ್ಲಿ ಮೂಡುವ ನಗು ಸ್ಪಷ್ಟವಾಗಿ ತೋರುತ್ತದೆ.
ಇದನ್ನೂ ಓದಿ: Real Story: ಈ ಕಾರಣಕ್ಕೆ ಪತಿಗೆ ಮೋಸ ಮಾಡಿದ್ದಾರೆ ಮಹಿಳೆಯರು
• ಸಂಗಾತಿಯ ಧೋರಣೆ (Opinion) ಅನುಸರಿಸುವ ಪುರುಷರು!
ಪ್ರೀತಿಯಲ್ಲಿರುವ ಬಹಳಷ್ಟು ಪುರುಷರು ತಮ್ಮ ಸಂಗಾತಿಯನ್ನು ಗೊಂದಲಕ್ಕೀಡು ಮಾಡಿಬಿಡುತ್ತಾರೆ! ಏಕೆಂದರೆ, ಹಲವು ವಿಚಾರಗಳಲ್ಲಿ ಅವರು ತಮ್ಮ ಸಂಗಾತಿಯ ಧೋರಣೆಯನ್ನೇ ಪ್ರದರ್ಶಿಸಲು ಆರಂಭಿಸಿಬಿಡುತ್ತಾರೆ. ಪುರುಷರು ತಮ್ಮ ಸಂಗಾತಿಯನ್ನು ಅದೆಷ್ಟು ಅಧ್ಯಯನ ಮಾಡುತ್ತಾರೆ ಎಂದರೆ, ಅವರ ಇಷ್ಟಾನಿಷ್ಟ, ಅವರ ವರ್ತನೆ, ಅವರ ಸಕಲ ಗುಣವನ್ನೂ ಅರಿತುಕೊಳ್ಳಲು ಯತ್ನಿಸುತ್ತಾರೆ. ಇಂತಹ ಸಮಯದಲ್ಲಿ ಹೀಗೆ ವರ್ತನೆ ಮಾಡಿದರೆ ಅವರಿಗೆ ಇಷ್ಟವಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುತ್ತಾರೆ. ಹಾಗೂ ಸಂಗಾತಿಯ ವರ್ತನೆ ಹೀಗಿರುತ್ತದೆ ಎನ್ನುವುದನ್ನು ಅಂದಾಜಿಸುತ್ತಾರೆ. ಅದರಂತೆ ತಾವೂ ವರ್ತನೆ ಮಾಡಲು ಶುರು ಮಾಡುತ್ತಾರೆ! ತಮ್ಮ ಪ್ರೀತಿಪಾತ್ರರಂತೆ ಯೋಚಿಸಲು ಆರಂಭಿಸುತ್ತಾರೆ. ಬಹಳಷ್ಟು ಪುರುಷರು ಹೀಗೆ ಮಾಡುತ್ತಾರೆ ಎನ್ನುವುದ ಅಧ್ಯಯನದಿಂದ ಸಾಬೀತಾಗಿರುವ ಸಂಗತಿ.