MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • ರಾಹುಲ್ ದ್ರಾವಿಡ್ ವಿಜೇತಾ ಪೆಂಡಾರ್ಕರ್ ಲವ್ ಸ್ಟೋರಿ ಶುರುವಾಗಿದ್ದೆಲ್ಲಿಂದ?

ರಾಹುಲ್ ದ್ರಾವಿಡ್ ವಿಜೇತಾ ಪೆಂಡಾರ್ಕರ್ ಲವ್ ಸ್ಟೋರಿ ಶುರುವಾಗಿದ್ದೆಲ್ಲಿಂದ?

ರಾಹುಲ್ ದ್ರಾವಿಡ್ ಭಾರತದ ಅತ್ಯಂತ ಪ್ರೀತಿಪಾತ್ರ ಮತ್ತು ಗೌರವಾನ್ವಿತ ಕ್ರಿಕೆಟಿಗರಲ್ಲಿ ಒಬ್ಬರು. ಅವರು ಡಾ ವಿಜೇತಾ ಪೆಂಧಾರ್ಕರ್ ಅವರೊಂದಿಗೆ ವಿವಾಹವಾಗಿದ್ದಾರೆ. ಅವರ ಪ್ರೇಮಕಥೆ ಇಲ್ಲಿದೆ.

2 Min read
Reshma Rao
Published : Jul 04 2024, 02:41 PM IST
Share this Photo Gallery
  • FB
  • TW
  • Linkdin
  • Whatsapp
111

ರಾಹುಲ್ ದ್ರಾವಿಡ್ ಅವರ ವೃತ್ತಿಪರ ಯಶಸ್ಸು ಯಾವಾಗಲೂ ಮುಖ್ಯಾಂಶಗಳಲ್ಲಿದ್ದರೂ ಅವರ ವೈಯಕ್ತಿಕ ಜೀವನ ಖಾಸಗಿಯಾಗಿಯೇ ಉಳಿದಿರುತ್ತದೆ. ಇಂದು ಅವರ ವೈಯಕ್ತಿಕ ಜೀವನವನ್ನು ನೋಡೋಣ. 

211

1976ರಲ್ಲಿ ಜನಸಿದ ರಾಹುಲ್ ದ್ರಾವಿಡ್ ಪತ್ನಿ ವಿಜೇತಾ ಪೆಂಧಾರ್ಕರ್ ಪತಿಗಿಂತ 3 ವರ್ಷ ಚಿಕ್ಕವರು. ಆಕೆಯ ತಂದೆ ನಿವೃತ್ತ ವಿಂಗ್ ಕಮಾಂಡರ್ ಆಗಿದ್ದರೆ, ತಾಯಿ ಡಯೆಟಿಷಿಯನ್.

311

ವಿಜೇತಾ ಅವರ ಕುಟುಂಬವು ಅವರ ತಂದೆಯ ಕೆಲಸದ ಕಾರಣದಿಂದಾಗಿ ಸಾಕಷ್ಟು ಸ್ಥಳಾಂತರಗೊಳ್ಳಬೇಕಾಯಿತು ಮತ್ತು ಅವರ ನಿವೃತ್ತಿಯ ನಂತರ, ಅವರು ನವೆಂಬರ್ 2002ರಲ್ಲಿ ವಿಜೇತಾ ತಮ್ಮ ವೈದ್ಯಕೀಯ ಶಸ್ತ್ರಚಿಕಿತ್ಸೆ (ಜನರಲ್) ಪದವಿಯನ್ನು ಪಡೆದು ನಾಗ್ಪುರದಲ್ಲಿ ನೆಲೆಸಿದರು.

411

ದ್ರಾವಿಡ್ ಮತ್ತು ಪೆಂಡಾರ್ಕರ್‌ ಕುಟುಂಬಗಳು 35 ವರ್ಷಗಳಿಂದ ಪರಸ್ಪರ ಪರಿಚಿತರು. ವಿಜೇತಾ ಅವರ ತಂದೆ ವಿಂಗ್ ಕಮಾಂಡರ್ ಆಗಿದ್ದರಿಂದ, ಪೆಂಡಾರ್ಕರ್ ಕುಟುಂಬವು 1968 ಮತ್ತು 1971 ರ ನಡುವೆ ಬೆಂಗಳೂರಿನಲ್ಲಿ ಉಳಿದುಕೊಂಡಿತ್ತು ಮತ್ತು ಆಗ ಎರಡು ಕುಟುಂಬಗಳ ನಡುವೆ ಸ್ನೇಹವು ಪ್ರಾರಂಭವಾಯಿತು. 

511

ನಂತರ, ರಾಹುಲ್ ತಂದೆ, ಶರದ್ ಸ್ವಲ್ಪ ಕಾಲ ನಾಗ್ಪುರದಲ್ಲಿ ಕೆಲಸ ಮಾಡಿದ್ದರು ಮತ್ತು ಆಗ ಯುವ ರಾಹುಲ್ ದ್ರಾವಿಡ್ ಮತ್ತು ವಿಜೇತಾ ಪೆಂಡಾರ್ಕರ್ ಉತ್ತಮ ಸ್ನೇಹಿತರಾಗಿದ್ದರು.

611

ಅವಕಾಶ ಸಿಕ್ಕಾಗಲೆಲ್ಲ ನಾಗ್ಪುರಕ್ಕೆ ರಾಹುಲ್ ಹೋಗಿ ಬರುವುದನ್ನು ನೋಡಿದ ಸ್ನೇಹಿತರು, ಕುಟುಂಬಸ್ಥರು ಆತನಿಗೆ  ವಿಜೇತಾ ಬಗ್ಗೆ ಒಲವು ಇದೆ  ಭಾವಿಸಿದ್ದರು. 

711

ಅವರ ಸ್ನೇಹವು ಅರಳಿರುವುದನ್ನು ನೋಡಿದ ಪೋಷಕರು ತಮ್ಮ ಮಕ್ಕಳ ಸ್ನೇಹವನ್ನು ಸಂಬಂಧವಾಗಿಸಲು ನಿರ್ಧರಿಸಿದರು. ಕೆಲವೇ ಸಮಯದಲ್ಲಿ, ಅವರ ಮದುವೆಯ ದಿನಾಂಕವನ್ನು ನಿಗದಿಪಡಿಸಲಾಯಿತು ಮತ್ತು ಅದು ರಾಹುಲ್ ಮತ್ತು ವಿಜೇತಾ ಅವರ ಲವ್ ರಮ್-ಅರೇಂಜ್ಡ್ ವಿವಾಹವಾಗಿತ್ತು.

811

ರಾಹುಲ್ ಮತ್ತು ವಿಜೇತಾ 2003ರ ವಿಶ್ವಕಪ್ ಮೊದಲು ನಿಶ್ಚಿತಾರ್ಥ ಮಾಡಿಕೊಂಡರು. ಅವರ ನಿಶ್ಚಿತಾರ್ಥವು ಸಾಂಪ್ರದಾಯಿಕ ಉಡುಗೆ ಮತ್ತು ಶಾಂತ, ನಿಕಟ ಸಮಾರಂಭದ ಮಿಶ್ರಣದಿಂದ ಗುರುತಿಸಲ್ಪಟ್ಟಿದೆ. ಮೇ 4, 2003ರಂದು, ಬೆಂಗಳೂರಿನ ಬಿಎಸ್ಎಫ್ ತರಬೇತಿ ಕೇಂದ್ರದಲ್ಲಿ ಮಹಾರಾಷ್ಟ್ರದ ಸಾಂಪ್ರದಾಯಿಕ ಸಮಾರಂಭದಲ್ಲಿ ರಾಹುಲ್ ಮತ್ತು ವಿಜೇತಾ ವಿವಾಹವಾದರು. ಕಾರ್ಯಕ್ರಮವು ಬಿಗಿಭದ್ರತೆಯ ಜೊತೆಗೆ ಖಾಸಗಿಯಾಗಿತ್ತು.
 

911

ಮದುವೆಯ ನಂತರ, ವಿಜೇತಾ ರಾಹುಲ್ ಅವರ ಕ್ರಿಕೆಟ್ ವೃತ್ತಿಜೀವನವನ್ನು ಬೆಂಬಲಿಸಿದರು, ಅವರ ಇಬ್ಬರು ಪುತ್ರರಾದ ಸಮಿತ್ ಮತ್ತು ಅನ್ವಯನ್ನು ಬೆಳೆಸಲು ತಮ್ಮ ವೈದ್ಯಕೀಯ ವೃತ್ತಿಯನ್ನು ತೊರೆದರು.

1011

ರಾಹುಲ್ ಮತ್ತು ವಿಜೇತಾ ಮಕ್ಕಳಾದ ಸಮಿತ್ ಮತ್ತು ಅನ್ವಯ್ ಅವರು ಕ್ರಿಕೆಟ್‌ನಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸಿದ್ದಾರೆ. ಸಮಿತ್ ಈಗಾಗಲೇ U-12 ಮಟ್ಟದಲ್ಲಿ ತನ್ನ ಪ್ರದರ್ಶನದ ಮೂಲಕ ಹೆಡ್‌ಲೈನ್ಸ್ ಮಾಡುತ್ತಿದ್ದಾರೆ.

1111

ಹಲವು ಬಾರಿ ವಿಜೇತಾ ಅವರು ಕ್ರಿಕೆಟ್‌ಗೆ ರಾಹುಲ್‌ರ ಸಮರ್ಪಣೆಯನ್ನು ಶ್ಲಾಘಿಸಿದ್ದು ಮತ್ತು ಒಟ್ಟಿಗೆ ಅವರ ಜೀವನದ ವೈಯಕ್ತಿಕ ಒಳನೋಟಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಖ್ಯಾತಿಯ ಹೊರತಾಗಿಯೂ, ರಾಹುಲ್ ಮತ್ತು ವಿಜೇತಾ ವಿನಮ್ರ ಜೀವನವನ್ನು ನಡೆಸುತ್ತಾರೆ. 

About the Author

RR
Reshma Rao
ರಾಹುಲ್ ದ್ರಾವಿಡ್
ಕ್ರಿಕೆಟ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved