MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • ಹೆಚ್ಚು ಸಮಯ ಸೆಕ್ಸ್ ಎಂಜಾಯ್ ಮಾಡೋದು ಹೇಗೆಂದು ಗೂಗಲ್ ಮಾಡೋರಿಗೆ ನ್ಯಾಚುರಲ್ ಟಿಪ್ಸ್!

ಹೆಚ್ಚು ಸಮಯ ಸೆಕ್ಸ್ ಎಂಜಾಯ್ ಮಾಡೋದು ಹೇಗೆಂದು ಗೂಗಲ್ ಮಾಡೋರಿಗೆ ನ್ಯಾಚುರಲ್ ಟಿಪ್ಸ್!

ಲೈಂಗಿಕ ಸಮಯವನ್ನು ಹೆಚ್ಚಿಸಲು ಜನರು ಹೆಚ್ಚಾಗಿ ಔಷಧಿಗಳ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಆದರೆ, ಔಷಧಿಗಳಿಗಿಂತಲೂ ಆಹಾರದ ಬಗ್ಗೆ ಗಮನ ಹರಿಸುವುದು ಮುಖ್ಯ. ಆರೋಗ್ಯಕರ ಲೈಂಗಿಕ ಸೆಷನ್ ಗಳನ್ನು ಸಂಪೂರ್ಣವಾಗಿ ಆನಂದಿಸಬಹುದಾದ ಆಹಾರಗಳು ಯಾವುವು ಎಂದು ತಿಳಿಯಿರಿ. 

3 Min read
Pavna Das
Published : Jul 09 2024, 05:27 PM IST
Share this Photo Gallery
  • FB
  • TW
  • Linkdin
  • Whatsapp
110

ಲೈಂಗಿಕತೆಯನ್ನು ಎಂಜಾಯ್ ಮಾಡಲು ಅನೇಕ ಮಾರ್ಗಗಳಿವೆ, ಆದರೆ ಮಹಿಳೆಯರು ಸಂಗಾತಿಯ ಲೈಂಗಿಕ ಸಮಯವನ್ನು (sex time) ಹೆಚ್ಚಿಸುವ ಬಗ್ಗೆ ಯೋಚ್ನೆ ಮಾಡ್ತಾರೆ. ದೈನಂದಿನ ಆಯಾಸ ಮತ್ತು ಕೆಲಸದ ಅತಿಯಾದ ಹೊರೆ ಸೆಕ್ಸ್ ಸಮಯದಲ್ಲಿ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಸಂಗಾತಿಯ ಕಾರ್ಯಕ್ಷಮತೆಯನ್ನು ಸುಧಾರಿಸಲು ಮತ್ತು ಲೈಂಗಿಕ ಸಮಯವನ್ನು ಹೆಚ್ಚಿಸಲು ಜನರು ಹೆಚ್ಚಾಗಿ ಔಷಧಿಗಳ ಸಹಾಯ ತೆಗೆದುಕೊಳ್ಳುತ್ತಾರೆ. ಆದರೆ ಅಂತಹ ಪರಿಸ್ಥಿತಿಯಲ್ಲಿ, ಔಷಧಿಗಳ ಜೊತೆಗೆ ನಿಮ್ಮ ಆಹಾರದ ಬಗ್ಗೆ ಗಮನ ಹರಿಸುವುದು ಮುಖ್ಯ. ದೇಹದಲ್ಲಿ ಪೋಷಕಾಂಶಗಳ ಕೊರತೆಯ ಪರಿಣಾಮವು ಕಾಮಾಸಕ್ತಿಯ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ, ಇದರಿಂದಾಗಿ ಲೈಂಗಿಕ ಸೆಷನ್ ಆರೋಗ್ಯಕರವಾಗಿರೋದಿಲ್ಲ, ಹೆಚ್ಚು ಸಮಯ ಸೆಕ್ಸ್ ಮಾಡೊದಕ್ಕೆ ಸಾಧ್ಯ ಆಗೋದಿಲ್ಲ. ಆರೋಗ್ಯಕರ ಲೈಂಗಿಕ ಸೆಷನ್ಸ್ ಸಂಪೂರ್ಣವಾಗಿ ಎಂಜಾಯ್ ಮಾಡಲು ಕೆಲವೊಂದು ಆಹಾರಗಳನ್ನು ಸೇವಿಸೋದು ಉತ್ತಮ. 
 

210

ಜನರು ತಮ್ಮ ಲೈಂಗಿಕ ಸಮಯವನ್ನು ಹೆಚ್ಚಿಸೋದು ಏಕೆ?
ಲೈಂಗಿಕ ಸೆಷನ್ ಆನಂದಿಸಲು ಲೈಂಗಿಕ ಸಮಯ ಬಹಳ ಮುಖ್ಯ ಎಂದು ಲೈಂಗಿಕ ತಜ್ಞರು (sex expert) ಹೇಳುತ್ತಾರೆ. ಲೈಂಗಿಕ ಸಮಯವನ್ನು ಹೆಚ್ಚಿಸುವುದು ಲೈಂಗಿಕತೆಯನ್ನು ಆಹ್ಲಾದಕರವಾಗಿಸುತ್ತದೆ ಮತ್ತು ಪರಾಕಾಷ್ಠೆಯನ್ನು ತಲುಪಲು ಸಹಾಯ ಮಾಡುತ್ತದೆ. ಇದರೊಂದಿಗೆ, ಇಬ್ಬರೂ ಸಂಗಾತಿಗಳು ದೀರ್ಘಕಾಲದವರೆಗೆ ಲೈಂಗಿಕ ಸೆಶನ್ ಕೂಡ ಆನಂದಿಸಬಹುದು. ಸೆಕ್ಸ್ ಪೊಜಿಶನ್ (Sex Position), ಫೋರ್ ಪ್ಲೇ (Fore Play) ಮತ್ತು ಸ್ಟಾರ್ಟ್ ಸ್ಟಾಪ್ ತಂತ್ರಗಳ (Start Up Technics) ಜೊತೆಗೆ, ಲೈಂಗಿಕ ಚಟುವಟಿಕೆಯ ಸಮಯ ಮಿತಿಯನ್ನು ಹೆಚ್ಚಿಸಲು ಕೆಲವು ಆಹಾರಗಳ ಸಹಾಯದಿಂದ ಲೈಂಗಿಕ ಪ್ರಚೋದನೆಯನ್ನು ಹೆಚ್ಚಿಸಬಹುದು.

310

ಪೆನ್ ಸ್ಟೇಟ್ ಯೂನಿವರ್ಸಿಟಿಯ ಪ್ರಕಾರ, ಸಾಮಾನ್ಯ ಲೈಂಗಿಕ ಸಮಯ 7 ರಿಂದ 13 ನಿಮಿಷಗಳು ಎಂದು ಪರಿಗಣಿಸಲಾಗುತ್ತದೆ, ಮತ್ತು ಲೈಂಗಿಕ ಪ್ರಚೋದನೆಯಿಂದಾಗಿ, ಗರಿಷ್ಠ ಲೈಂಗಿಕ ಸೆಷನ್ (sex session) ಅನ್ನು 30 ನಿಮಿಷಗಳ ಕಾಲ ಎಂಜಾಯ್ ಮಾಡಬಹುದು. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಲೈಂಗಿಕ ಸೆಷನ್ಸ್ ಕನಿಷ್ಠ 3 ರಿಂದ 7 ನಿಮಿಷಗಳು, ಅದು 7 ರಿಂದ 13 ನಿಮಿಷಗಳಿಗೂ ಹೋಗಬಹುದು, ಮತ್ತು ದೀರ್ಘ ಲೈಂಗಿಕ ಸೆಷನ್ ಅಂದ್ರೆ 10 ರಿಂದ 30 ನಿಮಿಷಗಳವರೆಗೆ ಇರುತ್ತದೆ.
 

410

ಆಹಾರಗಳು ಲೈಂಗಿಕ ಸಮಯವನ್ನು ಹೆಚ್ಚಿಸಬಹುದೇ?  
ದೇಹದಲ್ಲಿ ಪೋಷಕಾಂಶಗಳ ಕೊರತೆ ಮತ್ತು ಹಾರ್ಮೋನುಗಳ ಅಸಮತೋಲನ ಕಾಮಾಸಕ್ತಿಯ (sexual desire) ಕೊರತೆಗೆ ಕಾರಣವಾಗುತ್ತದೆ. ಲೈಂಗಿಕ ಬಯಕೆಯನ್ನು ಹೆಚ್ಚಿಸಲು, ದೇಹಕ್ಕೆ ಒಮೆಗಾ 3 ಕೊಬ್ಬಿನಾಮ್ಲಗಳು, ಮೆಗ್ನೀಸಿಯಮ್ ಮತ್ತು ಜೀವಸತ್ವಗಳು ಮತ್ತು ಖನಿಜಗಳು ಬೇಕಾಗುತ್ತವೆ. ಆಹಾರದಲ್ಲಿನ ಅನಿಯಮಿತತೆಯು ದೇಹದಲ್ಲಿನ ಪೌಷ್ಠಿಕಾಂಶದ ಮಟ್ಟವನ್ನು ಕಡಿಮೆ ಮಾಡುತ್ತದೆ. ಕಾಮಾಸಕ್ತಿಯನ್ನು ಹೆಚ್ಚಿಸಲು, ಬೀಟ್ರೂಟ್, ಪಾಲಕ್ ಮತ್ತು ಕೆಲವು ಬೀಜಗಳನ್ನು ಸೇವಿಸಿ. ಇದರಿಂದ ಸೆಕ್ಸ್ ಟೈಮ್ ಹೆಚ್ಚೋದು ಗ್ಯಾರಂಟಿ. 

510

ಈ ಆಹಾರಗಳ ಸಹಾಯದಿಂದ ಸೆಕ್ಸ್ ಟೈಮ್ ಹೆಚ್ಚಿಸಿ  
ಬೀಟ್ರೂಟ್ (Beetroot)

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಬೀಟ್ರೂಟಿನಲ್ಲಿ ಆಂಟಿಆಕ್ಸಿಡೆಂಟ್ಸ್ ಇರುತ್ತದೆ. ಇದಲ್ಲದೆ, ಜೀವಸತ್ವ ಕೂಡಾ ಇದರಲ್ಲಿದೆ. ಬೀಟ್ರೂಟ್‌ನಲ್ಲಿರುವ  ನೈಟ್ರೇಟ್‌ಗಳು ಲೈಂಗಿಕ ಪ್ರಚೋದನೆಯನ್ನು (Sexual Provocation) ಹೆಚ್ಚಿಸುತ್ತವೆ. ಈ ನೈಟ್ರೇಟ್ ರಕ್ತನಾಳಗಳನ್ನು (Blood Vessels) ವಿಸ್ತರಿಸಲು ಸಹಾಯ ಮಾಡುತ್ತದೆ, ಇದನ್ನು ವಾಸೋಡೈಲೇಶನ್ ಎಂದು ಕರೆಯಲಾಗುತ್ತದೆ, ಇದು ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಸಹ ಬಿಟ್ರೂಟ್ ಸೇವಿಸೋ ಮೂಲಕ ಪರಿಹರಿಸಬಹುದು. 

610

ಬಾಳೆಹಣ್ಣು (Banana)
ಬಾಳೆಹಣ್ಣಿನಲ್ಲಿ ಟ್ರಿಪ್ಟೋಫಾನ್ ಎಂಬ ಅಮೈನೋ ಆಮ್ಲವಿದೆ, ಇದು ದೇಹದಲ್ಲಿ ಸಿರೊಟೋನಿನ್ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ.  ಬಾಳೆಹಣ್ಣಿನಲ್ಲಿ ಕಂಡುಬರುವ ಪೊಟ್ಯಾಷಿಯಮ್ ಪ್ರಮಾಣವು ಲೈಂಗಿಕ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ, ಇದು ಸೆಕ್ಸ್ ಡ್ರೈವ್ ಅನ್ನು ಹೆಚ್ಚಿಸುತ್ತದೆ ಮತ್ತು ಲೈಂಗಿಕ ಕಾರ್ಯಕ್ಷಮತೆಯನ್ನು (Sexual Efficiency) ಸುಧಾರಿಸುತ್ತದೆ. ಇದರಲ್ಲಿರುವ ಬ್ರೊಮೆಲೈನ್ ಕಿಣ್ವವು ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಲೈಂಗಿಕ ಅವಧಿಯನ್ನು ಹೆಚ್ಚಿಸುತ್ತದೆ.

710

ಕುಂಬಳಕಾಯಿ ಬೀಜಗಳು (Pumpkin seeds)
ಕುಂಬಳಕಾಯಿ ಬೀಜಗಳನ್ನು ತಿನ್ನೋದ್ರಿಂದ ದೇಹಕ್ಕೆ ಬೇಕಾದ ಸತು ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಸಿಗುತ್ತೆ. ಇದು ದೇಹದಲ್ಲಿ ಲೈಂಗಿಕ ಹಾರ್ಮೋನುಗಳನ್ನು ಹೆಚ್ಚಿಸುವ ಮೂಲಕ ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ. ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು, ಕುಂಬಳಕಾಯಿ ಬೀಜಗಳನ್ನು ಹುರಿದು ಅಥವಾ ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಕೂಡ ತಿನ್ನಬಹುದು.  
 

810

ಅಶ್ವಗಂಧ (Ashwagandha)
ಅಶ್ವಗಂಧವನ್ನು ಸೇವಿಸುವ ಮೂಲಕ ಹಾರ್ಮೋನುಗಳ ಅಸಮತೋಲನವನ್ನು ಸಮತೋಲನಗೊಳಿಸಬಹುದು. ಇದರ ಸೇವನೆಯು ದೇಹದಲ್ಲಿ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಕಾಮಾಸಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಶ್ವಗಂಧದ ಸೇವನೆಯು ಫರ್ಟಿಲಿಟಿ (Fertility) ಹೆಚ್ಚಿಸುತ್ತದೆ. ಇದನ್ನು ಸೇವಿಸೋದ್ರಿಂದ, ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚಾಗಲು ಪ್ರಾರಂಭಿಸುತ್ತದೆ ಮತ್ತು ಸೆಕ್ಸ್ ಟೈಮ್ ಕೂಡ ಹೆಚ್ಚುತ್ತೆ. 

910

ಪಾಲಕ್ ಸೊಪ್ಪು (Spinach)
ಮೆಗ್ನಿಷಿಯಮ್ ಸಮೃದ್ಧವಾಗಿರುವ ಪಾಲಕ್ ಸೊಪ್ಪನ್ನು ಅಡುಗೆ ಮಾಡಿ ಸೇವಿಸೋದ್ರಿಂದ ಲೈಂಗಿಕ ಬಯಕೆ ಹೆಚ್ಚುತ್ತೆ. ಇದರಲ್ಲಿರುವ ಕಬ್ಬಿಣ ಅಂಶ ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದರಲ್ಲಿರುವ ಖನಿಜಗಳು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತವೆ. ಇದು ಲೈಂಗಿಕ ಸಂಭೋಗದ (Sexual Intercourse) ಸಮಯದಲ್ಲಿ ಬಯಕೆ ಮತ್ತು ಪ್ರಚೋದನೆಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ಲೈಂಗಿಕ ಅವಧಿ ದೀರ್ಘಕಾಲ ಉಳಿಯುವಂತೆ ಮಾಡುತ್ತೆ.

1010

ಅವಕಾಡೊ (avacado)
ಕಾಮಾಸಕ್ತಿಯನ್ನು ಹೆಚ್ಚಿಸುವ ಆಹಾರಗಳಲ್ಲಿ ಆವಕಾಡೊ ಕೂಡಾ ಒಂದು. ಇದನ್ನು ಸೇವಿಸೋದ್ರಿಂದ, ದೇಹ ವಿಟಮಿನ್ ಬಿ 6 ಅನ್ನು ಪಡೆಯುತ್ತೆ, ಇದು ಮೂಡ್ ಚೆನ್ನಾಗಿರಲು ಸಹಾಯ ಮಾಡುತ್ತೆ. ಆವಕಾಡೊವನ್ನು ತಿನ್ನುವುದರಿಂದ ದೇಹವು ಫೋಲಿಕ್ ಆಮ್ಲವನ್ನು (Folic Acid) ಪಡೆಯುತ್ತದೆ, ಇದು ದೇಹದಲ್ಲಿನ ಶಕ್ತಿಯ ಮಟ್ಟವನ್ನು ಸುಧಾರಿಸುತ್ತದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸಂಬಂಧಗಳು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved