ನಿಮ್ಮ ಹೆಸರು ಈ ಅಕ್ಷರಗಳಿಂದ ಆರಂಭವಾಗುತ್ತಾ? ಹಾಗಿದ್ರೆ ಹೆಂಡ್ತಿ ಬಗ್ಗೆ ಹುಷಾರ್
ಕೋಪದಲ್ಲಿ, ಒಬ್ಬ ವ್ಯಕ್ತಿ ತನ್ನ ಆಲೋಚನೆಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುತ್ತಾನೆ. ಕೋಪಗೊಂಡ ವ್ಯಕ್ತಿಗೆ ತಾನು ಏನು ಮಾಡುತ್ತಿದ್ದೇನೆಂದು ತಿಳಿಯೋದಿಲ್ಲ. ಜನರಿಗೆ ತಮ್ಮ ಹೆಚ್ಚುತ್ತಿರುವ ಕೋಪ ನಿಯಂತ್ರಿಸಲು ಬರೋದಿಲ್ಲ ಮತ್ತು ಈ ಕಾರಣದಿಂದಾಗಿ ಅನೇಕರ ಲೈಫ್ ಹಾಳಾಗುತ್ತೆ. ಕೋಪದಿಂದಾಗಿ, ಅನೇಕ ಬಾರಿ ಗಂಡ ಮತ್ತು ಹೆಂಡತಿಯ ಸಂಬಂಧವು ಸಹ ದೂರವಾಗಲು ಪ್ರಾರಂಭಿಸುತ್ತೆ. ನಿಮ್ಮ ಹೆಂಡತಿಯ ಸ್ವಭಾವವು ಕೋಪದಿಂದ ಕೂಡಿದ್ದರೆ, ಪ್ರತಿಯೊಂದು ವಿಷಯವನ್ನು ನೀವು ಬಹಳ ಶಾಂತ ರೀತಿಯಲ್ಲಿ ನಿರ್ವಹಿಸಬೇಕಾಗುತ್ತೆ. ಅವರ ಕೋಪ ಹೆಚ್ಚಾದರೆ, ನೀವು ಕೋಪ ಮಾಡಿಕೊಳ್ಳೋದನ್ನು ತಪ್ಪಿಸಬೇಕು, ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಯಾವೆಲ್ಲಾ ಹುಡುಗಿಯರಿಗೆ ಕೋಪ ಜಾಸ್ತಿ ಅನ್ನೋದನ್ನು ನಿಮಗೆ ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು, ಆದರೆ ಶಾಸ್ತ್ರಗಳಲ್ಲಿ ಕೆಲವೊಂದು ವಿಷಯಗಳ ಬಗ್ಗೆ ತಿಳಿಸಲಾಗಿದೆ. ಅವುಗಳನ್ನು ನೀವು ಅರ್ಥ ಮಾಡಿಕೊಂಡರೆ ಉತ್ತಮ.

ಕೆಲವೊಂದು ಅಕ್ಷರಗಳಿಂದ ಹೆಸರು ಆರಂಭವಾಗುವ ಮಹಿಳೆಯರು ಕೋಪಿಷ್ಟರಾಗಿದ್ದರೆ, ಇನ್ನು ಕೆಲವು ಅಕ್ಷರಗಳಿಂದ ಹೆಸರು ಆರಂಭವಾಗುವ ಪುರುಷರ ಹೆಂಡ್ತಿಯರು ಕೋಪಿಷ್ಟರಾಗಿರುತ್ತಾರೆ. ಇಂದು, ಅಂತಹ ಹೆಸರು ಹೊಂದಿರುವ ಕೆಲವು ಹುಡುಗರ ಬಗ್ಗೆ ಹೇಳುತ್ತೇವೆ, ಅವರಿಗೆ ಕೋಪಗೊಳ್ಳುವ ಹೆಂಡತಿಯರು ಸಿಗುತ್ತಾರೆ.
ಯಾರ ಹೆಸರು K ಅಕ್ಷರದಿಂದ ಪ್ರಾರಂಭವಾಗುತ್ತೋ, ಈ ಹೆಸರಿನ ಗಂಡಂದಿರು ಕೋಪಗೊಂಡ ಮತ್ತು ಜಗಳವಾಡುವ ಹೆಂಡತಿಯನ್ನು ಪಡೆಯುತ್ತಾರೆ. ಇವರ ಹೆಂಡತಿ ಇತರರ ಕಡೆ ಕಿವಿಗೊಡೋದಿಲ್ಲ ಮತ್ತು ತನ್ನ ಬಗ್ಗೆ ಹೆಚ್ಚು ಮಾತನಾಡುತ್ತಾಳೆ. ಅವರು ತಮ್ಮ ಗಂಡಂದಿರು ತಾವು ಹೇಳಿದಂತೆಯೇ ಕೇಳಬೇಕೆಂದು ಬಯಸುತ್ತಾರೆ. ಇವರ ಹೆಂಡತಿಗೆ ತನ್ನ ಮಾತನಾಡುವ ಮತ್ತು ಕೋಪದ ಸ್ವಭಾವವನ್ನು ನಿಯಂತ್ರಿಸಲು ಸಾಧ್ಯವಾಗೋದಿಲ್ಲ ಮತ್ತು ಈ ಕಾರಣದಿಂದಾಗಿ, ಅವರ ಕುಟುಂಬದಲ್ಲಿ ಜಗಳವಾಗುತ್ತೆ.
ಯಾರ ಗಂಡನ ಹೆಸರು M ಅಕ್ಷರದಿಂದ ಪ್ರಾರಂಭವಾಗುತ್ತೋ ಅವರ ಹೆಂಡತಿ ಕೋಪದ ವಿಷಯದಲ್ಲಿ ಬಹಳ ಮುಂದಿರುತ್ತಾರೆ. ಅವರು ತಮ್ಮ ಕೋಪವನ್ನುಯಾವಾಗಲೂ ಮೂಗಿನ ಮೇಲೆ ಇಟ್ಟುಕೊಂಡಿರುತ್ತಾರೆ. ಅವರಿಗೆ ಒಂದು ಸಣ್ಣ ವಿಷಯ ಸಾಕು ಕೋಪಗೊಳ್ಳಲು. ಅವರನ್ನು ನೋಡಿದಾಗ, ಅವರು ಕೋಪಗೊಳ್ಳಲು ಒಂದು ನೆಪವನ್ನು ಹುಡುಕುತ್ತಲೇ ಇರುತ್ತಾರೆ ಎಂದು ತೋರುತ್ತೆ. ಅನೇಕ ಸಂದರ್ಭಗಳಲ್ಲಿ, ಅವರ ಕೋಪವು ಪತಿಯ ಮೇಲೆ ಹೊರಬರುತ್ತೆ, ಇದು ಅವರ ಸಂಬಂಧದಲ್ಲಿ ಬಿರುಕು ಉಂಟುಮಾಡುತ್ತೆ .
ಗಂಡನ ಹೆಸರು P ಯಿಂದ ಪ್ರಾರಂಭವಾಗುತ್ತೋ , ಅವರು ಹಠಮಾರಿ ಸ್ವಭಾವದ ಹೆಂಡತಿಯನ್ನು ಪಡೆಯುತ್ತಾರೆ. ಈ ಮಹಿಳೆಯರು ತಮಗೆ ಬೇಕಾದಾಗೆ ಎಲ್ಲವನ್ನೂ ಮಾಡಬೇಕೆಂದು ಬಯಸುತ್ತಾರೆ. ಅದು ಸಂಭವಿಸದಿದ್ದರೆ, ಅವರು ಕೋಪಗೊಳ್ಳಲು ದೊಡ್ಡ ಕಾರಣ ಕಂಡುಕೊಳ್ಳುತ್ತಾರೆ. ಕೋಪ ಹೆಚ್ಚಾದಾಗ ಅವರು ಯಾರ ಮಾತನ್ನೂ ಕೇಳೋದಿಲ್ಲ. ಇದು ವೈವಾಹಿಕ ಜೀವನದಲ್ಲಿ(Married life) ಒತ್ತಡವನ್ನು ಸೃಷ್ಟಿಸುತ್ತೆ.
ಯಾರ ಗಂಡನ ಹೆಸರು R ಅಕ್ಷರದಿಂದ ಪ್ರಾರಂಭವಾಗುತ್ತೋ, ಅವರು ಸ್ವಭಾವತಃ ಕೋಪಗೊಂಡ ಮತ್ತು ಬುದ್ಧಿವಂತ ಜೀವನ ಸಂಗಾತಿಯನ್ನು ಪಡೆಯುತ್ತಾರೆ. ಅನೇಕ ಬಾರಿ ಅವರು ತಮ್ಮನ್ನು ತಾವು ಮನವರಿಕೆ ಮಾಡಿಕೊಳ್ಳಲು ಸಹ ಕೋಪಗೊಳ್ಳುತ್ತಾರೆ. ಅವರು ತಮ್ಮ ಮುಂದೆ ಇರುವ ವ್ಯಕ್ತಿಯ ಮನಸ್ಸಿನಲ್ಲಿ ಭಯ ಸೃಷ್ಟಿಸಲು ಕೋಪವನ್ನು ಆಶ್ರಯಿಸುತ್ತಾರೆ.
ಸಾಮಾನ್ಯವಾಗಿ ಯಾರ ಗಂಡನ ಹೆಸರು Y ಯಿಂದ ಪ್ರಾರಂಭವಾಗುತ್ತೋ. ಈ ಹೆಸರಿನ ಪುರುಷನ ಹೆಂಡತಿಯ ಕೋಪವು ಹೆಚ್ಚು ಅಪಾಯಕಾರಿ. ಅವರು ತುಂಬಾ ಡ್ರಾಮೇಬಾಜ್ ಆಗಿರುತ್ತಾರೆ. ಅವರ ಕೋಪದ ಸುದ್ದಿ ಇಡೀ ಜನರಿಗೆ ಗೊತ್ತಾಗೋ ಹಾಗೆ ಆಗುತ್ತೆ. ಕೋಪದಿಂದಾಗಿ, ಇವರು ಇಡೀ ಮನೆ ತಲೆಕೆಳಗಾಗುವಂತೆ ಮಾಡ್ತಾರೆ.