ಗಂಡನಿಂದ ದೂರವಾಗಿರುವ ಮೇರಿ ಕೋಮ್ ಮತ್ತೊಬ್ಬ ಬಾಕ್ಸರ್ ಪತಿ ಜೊತೆ ಡೇಟಿಂಗ್?
ಬಾಕ್ಸರ್ ಮೇರಿ ಕೋಮ್ ಹಾಗೂ ಪತಿ ಕೆ ಒನ್ಲರ್ ಬೇರೆ ಬೇರೆಯಾಗಿದ್ದಾರೆ. 20 ವರ್ಷಗಳ ದಾಂಪತ್ಯ ಜೀವನಕ್ಕೆ ಫುಲ್‌ಸ್ಟಾಪ್ ಇಟ್ಟಿರುವ ಮೇರಿ ಕೋಮ್ ಮತ್ತೊಬ್ಬ ಬಾಕ್ಸರ್ ಪಟುವಿನ ಪತಿ ಜೊತೆ ಡೇಟಿಂಗ್‌ನಲ್ಲಿದ್ದಾರೆ ಅನ್ನೋ ಸ್ಫೋಟಕ ಮಾಹಿತಿ ಬಯಲಾಗಿದೆ.

ಭಾರತದ ಹೆಮ್ಮೆಯ ಬಾಕ್ಸರ್ ಮೇರಿ ಕೋಮ್ ಪ್ರತಿ ಬಾರಿ ಚಿನ್ನ ಗೆದ್ದು ಸುದ್ದಿಯಾಗುತ್ತಿದ್ದರೆ, ಈ ಬಾರಿ ವೈವಾಹಿಕ ಜೀವನದಲ್ಲಿನ ಬಿರುಕು ಕಾರಣ ಸದ್ದು ಮಾಡಿದ್ದಾರೆ. ಮೇರಿ ಕೋಮ್ ಬರೋಬ್ಬರಿ 20 ವರ್ಷಗಳ ದಾಂಪತ್ಯ ಜೀವನ ಅಂತ್ಯಗೊಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಅಧಿಕೃತವಾಗಿ ಡಿವೋರ್ಸ್ ಅರ್ಜಿ ಹಾಕಿಲ್ಲ. ಆದರೆ ಮೇರಿ ಕೋಮ್ ಹಾಗೂ ಪತಿ ಕೆ ಒನ್ಲರ್ ಇಬ್ಬರು ಬೇರೆ ಬೇರೆಯಾಗಿದ್ದಾರೆ ಅನ್ನೋ ಮಾಹಿತಿ ಬಯಲಾಗಿದೆ.
ಮೇರಿ ಕೋಮ್ ಹಾಗೂ ಕೆ ಒನ್ಲರ್ ದಾಂಪತ್ಯ ಜೀವನ ಬಿರುಕು ಮೂಡಲು ಹಾಗೂ ಇದೀಗ ಬೇರೆ ಬೇರೆಯಾಗಲು ಕೆಲ ಕಾರಣಗಳು ಮುನ್ನಲೆಗೆ ಬಂದಿದೆ. ಈ ಪೈಕಿ ಒಂದು ಕಾರಣ ಪತಿ ಒನ್ಲರ್ ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಸೋಲು, ಅದರ ಜೊತೆಗೆ 2 ರಿಂದ 3 ಕೋಟಿ ರೂಪಾಯಿ ನಷ್ಟ. ಆದರೆ ಮತ್ತೊಂದು ಕಾರಣ ಡೇಟಿಂಗ್.
ಮೇರಿ ಕೋಮ್ ಹಾಗೂ ಪತಿ ಕೆ ಒನ್ಲರ್ ನಡುವಿನ ವೈವಾಹಿಕ ಜೀವನದಲ್ಲಿ ಮತ್ತೊಬ್ಬರ ಎಂಟ್ರಿಯಾಗಿದ್ದೇ ಈ ಬಿರುಕು ಹೆಚ್ಚಾಗಿ ಬೇರೆ ಬೇರೆಯಾಗಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ವರದಿಗಳ ಪ್ರಕಾರ ಮೇರಿ ಕೋಮ್ ಮತ್ತೊಬ್ಬ ಮಹಿಳಾ ಬಾಕ್ಸರ್ ಪತಿ ಜೊತೆ ಡೇಟಿಂಗ್‌ನಲ್ಲಿದ್ದಾರೆ ಅನ್ನೋ ಮಾಹಿತಿಗಳು ಬಯಲಾಗಿದೆ. ಮೇರಿ ಕೋಮ್ ಇತ್ತೀಚೆಗೆ ಮಾಡಿದ ಇನ್‌ಸ್ಟಾಗ್ರಾಂ ಪೋಸ್ಟ್ ಕೆಲ ಸೂಚನೆ ನೀಡಿತ್ತು.
ಮೇರಿ ಕೋಮ್ ಹಾಗೂ ಮಹಿಳಾ ಬಾಕ್ಸರ್ ಪಟುವಿನ ಪತಿ ಜೊತೆ ರಿಲೇಶನ್‌ಶಿಪ್‌ನಲ್ಲಿರುವುದೇ ದಾಂಪತ್ಯ ಜೀವನಕ್ಕೆ ಮುಳ್ಳಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಮೇರಿ ಕೋಮ್ ಕಳೆದ 2 ವರ್ಷಗಳಿಂದ ಬಾಕ್ಸರ್ ಪಟುವಿನ ಪತಿಯ ಜೊತಗೆ ಆತ್ಮೀಯಾಗಿದ್ದಾರೆ. ಇಷ್ಟೇ ಅಲ್ಲ ಕೆ ಒನ್ಲರ್‌ನಿಂದ ದೂರವಾಗಿರುವ ಮೇರಿ ಕೋಮ್ ಫರೀದಾಬಾದ್‌ನಲ್ಲಿ ನೆಲೆಸಿರುವುದು ಇದೇ ಕಾರಣಕ್ಕೆ ಅನ್ನೋ ಮಾತುಗಳು ಕೇಳಿಬಂದಿದೆ.
ಮೇರಿ ಕೋಮ್ ಹಾಗೂ ಒನ್ಲರ್ ದೂರವಾಗಲು ಕಾರಣಗಳು ಸ್ಪಷ್ಟವಾಗಿಲ್ಲ. ಆದರೆ 2022ರ ಬಳಿಕ ಇವರ ಸಂಬಂಧದಲ್ಲಿ ತಳಮಳ ಶುರುವಾಗಿತ್ತು ಅನ್ನೋದು ನಿಜ. ಕಳೆದೆರೆಡು ವರ್ಷದಿಂದ ಮೇರಿ ಕೋಮ್ ತಮ್ಮ ನಾಲ್ವರು ಮಕ್ಕಳ ಜೊತೆ ಫರೀದಾಬಾದ್‌ನಲ್ಲಿ ನೆಲೆಸಿದ್ದಾರೆ. ಇತ್ತ ಕೆ ಒನ್ಲರ್ ದೆಹಲಿಯಲ್ಲಿ ತಮ್ಮ ಕುಟುಂಬ ಸದಸ್ಯರ ಜೊತೆ ನೆಲೆಸಿದ್ದಾರೆ ಎಂದು ವರದಿಯಾಗಿದೆ.
ಮೇರಿ ಕೋಮ್ ಹಾಗೂ ಕೆ ಒನ್ಲರ್ ಪ್ರೀತಿಸಿ ಮದುವೆಯಾಗಿದ್ದರು. ಮೇರಿ ಕೋಮ್ ಸ್ಪರ್ಧೆಗೆ ತೆರಳುವಾಗ ತಮ್ಮ ಲಗೇಜ್ ಬ್ಯಾಗ್ ಕಳೆದುಕೊಂಡು ತೀವ್ರ ಸಂಕಷ್ಟ ಎದುರಿಸಿದ್ದರು. ಈ ವೇಳೆ ಮೇರಿ ಕೋಮ್‌ಗೆ ಅಂದು ದೆಹಲಿ ಕಾನೂನು ಕಾಲೇಜಿನ ವಿದ್ಯಾರ್ಥಿಯಾಗಿದ್ದ ಕೆ ಒನ್ಲರ್ ನೆರವು ನೀಡಿದ್ದರು. ಇಲ್ಲಿಂದ ಆರಂಭಗೊಂಡ ಪರಿಚಯ, ಸ್ನೇಹವಾಗಿ, ಪ್ರೀತಿಯಾಗಿ ಬಳಿಕ ಮದುವೆಯ ಅರ್ಥ ಪಡೆದಿದ್ದು. ಇರಿಬ್ಬರು 2005ರಲ್ಲಿ ಮದುವೆಯಾಗಿದ್ದರು.
20 ವರ್ಷಗಳ ಬಳಿಕ ಮೇರಿ ಕೋಮ್ ಹಾಗೂ ಕೆ ಒನ್ಲರ್ ದೂರ ದೂರವಾಗಿದ್ದಾರೆ.ಫುಟ್ಬಾಲರ್ ಆಗಬೇಕು ಎಂದುಕೊಂಡಿದ್ದ ಒನ್ಲರ್, ಮೇರಿ ಕೋಮ್ ಕರಿಯರ್‌ಗೆ ನೆರವು ನೀಡುವ ಸಲುವಾಗಿ ಎಲ್ಲವನ್ನು ತ್ಯಜಿಸಿದ್ದರು. ಮಕ್ಕಳನ್ನು ನೋಡಿಕೊಳ್ಳುತ್ತಾ ಕುಟುಂಬದ ಜವಾಬ್ಜಾರಿ ನಿರ್ವಹಿಸಿದ್ದರು. ಇಷ್ಟೇ ಅಲ್ಲ ಮೇರಿ ಕೋಮ್ ಬಾಕ್ಸಿಂಗ್ ಕರಿಯರ್‌ಗೆ ಸಂಪೂರ್ಣ ನೆರವು ಹಾಗೂ ಬೆಂಬಲ ನೀಡಿದ್ದರು.