MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • 2022 Love Prediction: ಈ 5 ರಾಶಿಯವರ ಪ್ರೀತಿಯ ಜೀವನಕ್ಕೆ ಹೊಸ ವರ್ಷ ಅದ್ಭುತವಾಗಿರಲಿದೆ

2022 Love Prediction: ಈ 5 ರಾಶಿಯವರ ಪ್ರೀತಿಯ ಜೀವನಕ್ಕೆ ಹೊಸ ವರ್ಷ ಅದ್ಭುತವಾಗಿರಲಿದೆ

ಜೀವನದಲ್ಲಿ ಪ್ರೀತಿ (Love Life)ಬಹಳ ಮುಖ್ಯ. ಉತ್ತಮ ಸಂಗಾತಿಯನ್ನು ಪಡೆಯುವ ಜನರು ಸಂತೋಷದ ಜೀವನವನ್ನು ಹೊಂದಿರುತ್ತಾರೆ. ಕೆಲವರು ಸಂಗಾತಿಯನ್ನು ಪಡೆಯಲು ವರ್ಷಗಟ್ಟಲೆ ಕಾಯುತ್ತಾ ಕುಳಿತುಕೊಳ್ಳುತ್ತಾರೆ. ಸಮಸ್ಯೆಗಳು ಒಂದೊಂದಾಗಿ ಬಂದು ಮದುವೆ ತಡವಾಗುತ್ತದೆ, ಜೊತೆಗೆ ಪ್ರೀತಿ ಹುಡುಕುವುದು ಕಷ್ಟವಾಗುತ್ತದೆ. 

2 Min read
Suvarna News | Asianet News
Published : Nov 26 2021, 06:42 AM IST
Share this Photo Gallery
  • FB
  • TW
  • Linkdin
  • Whatsapp
17

2022ರಲ್ಲಿ ಕೆಲವು ರಾಶಿಯವರಿಗೆ ಪ್ರೀತಿ ಸಿಗಲಿದೆ. ಜ್ಯೋತಿಷ್ಯ ಪ್ರಕಾರ, ಈ 5 ರಾಶಿಯವರ ಪ್ರೀತಿಯ ಜೀವನಕ್ಕೆ ಹೊಸ ವರ್ಷವು ಉತ್ತಮವಾಗಿರುತ್ತದೆ. ಈ ರಾಶಿಯವರು 2022 ರಲ್ಲಿ ಸಂಗಾತಿಗಳನ್ನು(partner)  ಸಹ ಪಡೆಯುತ್ತಾರೆ ಮತ್ತು ಮದುವೆಯಾಗಬಹುದು. ಹಾಗಾದರೆ ಆ ರಾಶಿಗಳು ಯಾವುವು ನೋಡೋಣ... 

27

ಮೇಷ (Aries) : ಇನ್ನೂ ಅವಿವಾಹಿತರಾಗಿರುವ ಮೇಷ ರಾಶಿಯವರ ಜೀವನವು 2022 ರಲ್ಲಿ ಪ್ರೀತಿಯ ಸಂಗಾತಿಯನ್ನು ಭೇಟಿಯಾಗಲಿದ್ದಾರೆ. ಈಗಾಗಲೇ ಪ್ರೀತಿಸುತ್ತಿರುವವರು ಈ ವರ್ಷ ಮದುವೆಯಾಗಬಹುದು. 2020 ವರ್ಷವು ಮದುವೆಯಾದ ದಂಪತಿಗೆ (married couples)ಉತ್ತಮ ವರ್ಷವೂ ಆಗಿರುತ್ತದೆ. ಅವರ ಸಂಬಂಧವು ಹಿಂದೆಂದಿಗಿಂತಲೂ ಬಲವಾಗಿರುತ್ತದೆ, ಮತ್ತು ಹಳೆಯ ಸಮಸ್ಯೆಗಳು ಕೊನೆಗೊಳ್ಳುತ್ತವೆ. 

37

ವೃಷಭ (Taurus):  ವೃಷಭ ರಾಶಿಯವರು ಸಹ ತಮ್ಮ ಸಂಗಾತಿಗಾಗಿ ಕಾಯಬೇಕಾಗುತ್ತದೆ. ಪ್ರೀತಿ ಅತ್ಯಂತ ಅನಿರೀಕ್ಷಿತ ರೀತಿಯಲ್ಲಿ ಅವರ ಜೀವನಕ್ಕೆ ಪ್ರವೇಶವನ್ನು ತೆಗೆದುಕೊಳ್ಳುತ್ತದೆ. ಹೀಗೂ ಜೀವನದಲ್ಲಿ ಪ್ರೀತಿ ಸಿಗುತ್ತದೆಯೇ ಎಂಬ ಅಚ್ಚರಿ ಮೂಡೋದಂತೂ ಖಂಡಿತ. ವಿವಾಹವಾಗಲಿರುವ ವೃಷಭ ರಾಶಿಯವರಿಗೆ ಈ ವರ್ಷ ಉತ್ತಮವಾಗಿದೆ. 

47

ಧನು(Sagittarius) : ಧನು ರಾಶಿಯವರ ಪ್ರೀತಿಯ ಜೀವನಕ್ಕೆ 2022ನೇ ವರ್ಷ ತುಂಬಾ ಉತ್ತಮವಾಗಿರಲಿದೆ. ಪ್ರೀತಿ ಮುಂದುವರಿಯುವುದು ಮತ್ತು ಪ್ರೀತಿ ಹೆಚ್ಚುತ್ತಲೇ ಇರುತ್ತದೆ. ಮದುವೆಗೆ ಅಡ್ಡಿಯಾಗುತ್ತಿದ್ದ ದಂಪತಿಗಳಲ್ಲಿ ಈಗ ಎಲ್ಲವೂ ಸರಿ ಆಗಬಹುದು. ವಿವಾಹಿತ ದಂಪತಿಗಳು ಉತ್ತಮ ವರ್ಷವನ್ನು ಸಹ ಹೊಂದಿರುತ್ತಾರೆ. ನೀವು ಮೆಮೊರೇಬಲ್ (memorable) ಪ್ರವಾಸಕ್ಕೆ ಹೋಗಬಹುದು. 

57

ಮಕರ (Capricorn): ಈ ವರ್ಷ ಮಕರ ರಾಶಿಯವರ ಜೀವನದಲ್ಲಿಯೂ ಪ್ರೇಮಿ ಬರಬಹುದು. ಅದೇ ಸಮಯದಲ್ಲಿ, ಮದುವೆಗಾಗಿ ಕಾಯುತ್ತಿರುವ ಜನರ ಮನೆಯಲ್ಲೂ ಸಹ ಮಂಗಳ ವಾದ್ಯ ಕೇಳಬಹುದು. ಮೇ 2022 ಮತ್ತು ಜುಲೈ 2022 ರ ನಡುವೆ ಪ್ರೇಮ ಸಂಗಾತಿಗಳು ಮದುವೆಯಾಗುವುದು ಅತ್ಯಂತ ಶುಭಕರವಾಗಿರುತ್ತದೆ. ತಮ್ಮ ವೈವಾಹಿಕ ಜೀವನದಲ್ಲಿ ಅಡೆತಡೆಗಳನ್ನು ಎದುರಿಸುತ್ತಿದ್ದವರ ಜೀವನದಿಂದ  ಅಡೆತಡೆಗಳು ದೂರವಾಗುವುದು. 

67

ಕುಂಭ (Aquarius): ಈಗಾಗಲೇ ಪ್ರೀತಿಯಲ್ಲಿ ಇರುವವರ ಸಂಬಂಧ ಈ ವರ್ಷ ತುಂಬಾ ಪ್ರಬಲವಾಗಿರುತ್ತದೆ ಮತ್ತು ಅವರು ಮದುವೆಯಾಗಲು ಯೋಜಿಸುತ್ತಾರೆ. 2022 ರ ವರ್ಷವು ವಿವಾಹಿತರಿಗೆ ಸಂಬಂಧ ಬಲಪಡಿಸುವ ವರ್ಷವಾಗಿರುತ್ತದೆ. ಆದಾಗ್ಯೂ, ಅವಿವಾಹಿತರು (unmarried) ತಮ್ಮ ಪ್ರೀತಿಯ ಸಂಗಾತಿಗಾಗಿ ವರ್ಷದ ಎರಡನೇ ಭಾಗಕ್ಕಾಗಿ ಕಾಯಬೇಕಾಗಬಹುದು.

77

ಒಂದೊಂದು ರಾಶಿಯ ನಕ್ಷತ್ರಗಳು ಬದಲಾಗುವ ಹಿನ್ನೆಲೆಯಲ್ಲಿ ಎಲ್ಲಾ ರಾಶಿಗಳಿಗೆ ಇದು ಅನ್ವಯವಾಗೋದಿಲ್ಲ. ಕೆಲವು ರಾಶಿಯವರಿಗೆ ಬೇಗನೆ ಮದುವೆಯಾದರೆ ಅಥವಾ ಪ್ರೀತಿಯಾದರೆ ಮತ್ತೆ ಕೆಲವರಿಗೆ ತಡವಾಗಿ ಆಗುವ ಸಾಧ್ಯತೆ ಇದೆ. ಇದೆಲ್ಲವೂ ರಾಶಿ, ಭವಿಷ್ಯದ ಮೇಲೆ ಅವಲಂಬಿತವಾಗಿದೆ. 

About the Author

SN
Suvarna News
ಸಂಬಂಧಗಳು
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved