MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಸಿಎಂ ಮೊಮ್ಮಗನಿಗೂ ಬಿಡದ ಜಾತಿ ನಿಂದನೆ: ಲವರ್​ ಜೊತೆಯಲ್ಲಿ ಇರುವಾಗ್ಲೇ ಅಸಭ್ಯ ಕಮೆಂಟ್​

ಸಿಎಂ ಮೊಮ್ಮಗನಿಗೂ ಬಿಡದ ಜಾತಿ ನಿಂದನೆ: ಲವರ್​ ಜೊತೆಯಲ್ಲಿ ಇರುವಾಗ್ಲೇ ಅಸಭ್ಯ ಕಮೆಂಟ್​

ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅವರ ಬಾಯ್‌ಫ್ರೆಂಡ್ ಎನ್ನಲಾದ, ಮಹಾರಾಷ್ಟ್ರದ ಮಾಜಿ ಸಿಎಂ ಮೊಮ್ಮಗ ಶಿಖರ್ ಪಹರಿಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಜಾತಿ ನಿಂದನೆ ಎದುರಾಗಿದೆ. 'ದಲಿತ' ಎಂದು ಕಮೆಂಟ್ ಮಾಡಿದ ನೆಟ್ಟಿಗನಿಗೆ ಶಿಖರ್ ನೀಡಿದ ಖಡಕ್ ಉತ್ತರವು ಇದೀಗ ವೈರಲ್ ಆಗಿದೆ.

2 Min read
Author : Suchethana D
Published : Jun 03 2026, 10:11 PM IST
Share this Photo Gallery
  • FB
  • TW
  • Linkdin
  • Whatsapp
16
ವಿಕೃತ ಖುಷಿ
Image Credit : social media

ವಿಕೃತ ಖುಷಿ

ಜಾತಿ ಜಾತಿ ಎಂದು ಹಿಂದೂಗಳು ಬಡಿದಾಡಿಕೊಳ್ಳುವುದು ನಿಲ್ಲುವುದೇ ಇಲ್ಲವೇನೋ ಎನ್ನಿಸುತ್ತದೆ. ಜಾತಿ ನಿಂದನೆ ಎನ್ನುವುದು ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ. ಜಾತಿಯ ಬಗ್ಗೆ ಮಾತನಾಡುತ್ತಾ ವಿಕೃತ ಸಂತೋಷ ಅನುಭವಿಸುವ ಮನಸ್ಥಿತಿಗಳು ಒಂದೆಡೆ ಇದ್ದರೆ, ಜಾತಿಯ ಹೆಸರಿನಲ್ಲಿಯೇ ರಾಜಕಾರಣ ಮಾಡುವ ರಾಜಕಾರಣಿಗಳಿಗೂ ಇದೇ ಬೇಕು. ಎಂದಿಗೂ ಹಿಂದೂ ಸಮುದಾಯ ಒಂದಾಗಲು ಅವರು ಬಿಡುವುದೇ ಇಲ್ಲ. ಬಿಟ್ಟರೆ ಅವರ ಬೇಳೆ ಬೇಯುವುದಿಲ್ಲ. ಇದೇ ಕಾರಣಕ್ಕೆ ಹಿಂದೂಗಳು ಹಿಂದೆಯೇ ಉಳಿದಿರುವುದು!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಸಿಎಂ ಮೊಮ್ಮಗನಿಗೂ ಜಾತಿ ನಿಂದನೆ
Image Credit : instagram

ಸಿಎಂ ಮೊಮ್ಮಗನಿಗೂ ಜಾತಿ ನಿಂದನೆ

ಇದೀಗ, ಮುಖ್ಯಮಂತ್ರಿ ಮೊಮ್ಮಗನಿಗೂ ಜಾತಿ ನಿಂದನೆ ಆಗಿರುವ ಶಾಕಿಂಗ್​ ಘಟನೆ ನಡೆದಿದೆ. ಇದು ಕೆಲ ತಿಂಗಳ ಹಿಂದೆ ಆಗಿರುವ ಘಟನೆಯಾಗಿದ್ದು, ಇದೀಗ ಅದು ವೈರಲ್​ ಆಗಿದೆ. ಅಷ್ಟಕ್ಕೂ ಇವರು ಮಾಜಿ ಸಿಎಂ ಅಂದರೆ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ ಶಿಖರ್​ ಪಹರಿಯಾ ಕುರಿತ ಜಾತಿ ನಿಂದನೆಯಾಗಿದೆ.

Related Articles

Related image1
Bigg Boss 13 ಯಾವಾಗ ಶುರು: ಈ ವರ್ಷ ಬೇಗ ಆರಂಭ- ಬಿಗ್​ ಅಪ್​ಡೇಟ್​ ಕೊಟ್ಟ ವಾಹಿನಿ
Related image2
ನೇರಪ್ರಸಾರದಲ್ಲಿ ಬಂದು ನಟ ದರ್ಶನ್​ ಹೇಳಿದ್ದೇನು? ಅಭಿಮಾನಿಗಳ ಕಣ್ಣೀರು- ವಿಡಿಯೋ ಪುನಃ ವೈರಲ್
36
ಡೇಟಿಂಗ್​ ವದಂತಿ
Image Credit : instagram

ಡೇಟಿಂಗ್​ ವದಂತಿ

ಅಂದಹಾಗೆ, ಶಿಖರ್​ ಪಹರಿಯಾ ಅವರು ಕೆಲವು ವರ್ಷಗಳಿಂದ ಸಕತ್​ ಸದ್ದು ಮಾಡುತ್ತಿರುವುದಕ್ಕೆ ಕಾರಣ, ಬಾಲಿವುಡ್​ ಸುಂದರಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್.​ ಇವರಿಬ್ಬರೂ ಸಂಬಂಧದಲ್ಲಿ ಇದ್ದಾರೆ ಎನ್ನುವುದಕ್ಕೆ ಬಹಳ ಸಾಕ್ಷಿ ಸಿಕ್ಕಿವೆ.ಇವರಿಬ್ಬರೂ ಆಗಾಗ್ಗೆ ತಿರುಪತಿಗೆ ಹೋಗಿ ಬರುತ್ತಾರೆ, ಪೂಜೆ ಮಾಡಿಸುತ್ತಾರೆ. ಕೆಲ ತಿಂಗಳ ಹಿಂದೆ ಜಾಹ್ನವಿ ಅವರ ಬೆರಳಿನಲ್ಲಿ ವಜ್ರದ ಉಂಗುರ ಎಲ್ಲರ ಕಣ್ಣು ಕುಕ್ಕಿಸಿತ್ತು. ಶಿಖರ್​ ಪಹರಿಯಾ ಜೊತೆ ಗುಟ್ಟಾಗಿ ಎಂಗೇಜ್​ಮೆಂಟ್​ ಆಯ್ತಾ ಎಂದು ಕಮೆಂಟ್​ಗಳ ಸುರಿಮಳೆಯಾಗಿತ್ತು.

46
ಜಾಹ್ನವಿ ಮತ್ತು ಶಿಖರ್​ ಸಂಬಂಧ
Image Credit : our own

ಜಾಹ್ನವಿ ಮತ್ತು ಶಿಖರ್​ ಸಂಬಂಧ

ಅಂದಹಾಗೆ, ಸುಮಾರು ಏಳೆಂಟು ವರ್ಷಗಳ ಹಿಂದೆ, ಜಾಹ್ನವಿ ಮತ್ತು ಶಿಖರ್​ ಸಂಬಂಧದ ವಿಷಯವು ಮುನ್ನೆಲೆಗೆ ಬಂದಿತ್ತು. ಅವರ ಫೋಟೋ ಕೂಡ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ನಟಿಯನ್ನು ಚುಂಬಿಸುತ್ತಿರುವುದು ಕಂಡುಬಂದಿತ್ತು. ಇವರಿಬ್ಬರ ನಡುವೆ ನಂತರದಲ್ಲಿ ಏನೋ ಬ್ರೇಕಪ್​ ಆಗಿ ಪುನಃ ಈಗ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಇವರು ಉದ್ಯಮಿಯಾಗಿದ್ದಾರೆ. ಇಂತಿಪ್ಪ ಶಿಖರ್​ ಅವರಿಗೆ ಜಾತಿ ನಿಂದನೆ ಮಾತು ಕೇಳಿಬಂದಿದೆ.

56
ಜಾತಿ ನಿಂದನೆ
Image Credit : social media

ಜಾತಿ ನಿಂದನೆ

ಜಾಹ್ನವಿ ಜೊತೆ ಶಿಖರ್​ ಅವರು ಫೋಟೋ ಒಂದನ್ನು ಶೇರ್​ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಶಿಖರ್​ ಅವರಿಗೆ, ಅದೇನೇ ಇರಲಿ, ನೀನೊಬ್ಬ ದಲಿತ ಎಂದು ಹಾಸ್ಯದ ಎಮೋಜಿ ಹಾಕಿ ನೆಟ್ಟಿಗನೊಬ್ಬ ಕಮೆಂಟ್​ ಮಾಡಿದ್ದಾರೆ. ಕ್ಯಾಂಡಿಬಾಬೇ ಎನ್ನುವ ಇನ್ಸ್ಟಾಗ್ರಾಮ್​ನಿಂದ ಈ ಮೆಸೇಜ್​ ಬಂದಿದೆ. ಆದರೆ, ಇದಕ್ಕೆ ಶಿಖರ್​ ಅವರು ತಿರುಗೇಟು ನೀಡುವ ಮೂಲಕ, ದಲಿತ ಎಂದಿರುವವರ ಕೆನ್ನೆಗೆ ಬಾರಿಸಿದ್ದಾರೆ.

66
ಶಿಖರ್​ ತಿರುಗೇಟು
Image Credit : SM

ಶಿಖರ್​ ತಿರುಗೇಟು

'ಇಂದಿಗೂ ನಿಮ್ಮಂತಹ ಜನರು ಸಂಕುಚಿತ ಮತ್ತು ಹಿಂದುಳಿದ ಮನಸ್ಥಿತಿಯನ್ನು ಹೊಂದಿರುವುದು ನಿಜಕ್ಕೂ ನಿರಾಶಾದಾಯಕವಾಗಿದೆ. ದೀಪಾವಳಿಯು ಬೆಳಕು ಮತ್ತು ಏಕತೆಯ ಹಬ್ಬವಾಗಿದ್ದು, ಇದು ನಿಮ್ಮ ಕಲ್ಪನೆಗೂ ಮೀರಿದ್ದು. ಭಾರತದ ಶಕ್ತಿ ಯಾವಾಗಲೂ ಅದರ ವೈವಿಧ್ಯತೆಯಲ್ಲಿದೆ. ನೀವು ಇದನ್ನು ಅರ್ಥಮಾಡಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದೀರಿ. ಬಹುಶಃ ಅಜ್ಞಾನವನ್ನು ಹರಡುವ ಬದಲು ನೀವು ನಿಮ್ಮನ್ನು ಶಿಕ್ಷಣದ ಮಾರ್ಗದಲ್ಲಿ ಕೊಂಡೊಯ್ಯಬೇಕು. ನೀವು ಅತ್ತ ಗಮನಹರಿಸಬೇಕಿದೆ. ಏಕೆಂದರೆ ಈಗ ಅಸ್ಪೃಶ್ಯ ಎಂದರೆ ಅದು ನಿಮ್ಮ ಆಲೋಚನಾ ಮಟ್ಟ' ಎಂದು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಜಾನ್ವಿ ಕಪೂರ್
ಮನರಂಜನಾ ಸುದ್ದಿ
ಸಂಬಂಧಗಳು
ಪ್ರೀತಿ
ಮದುವೆ
Latest Videos
Recommended Stories
Recommended image1
Amruthadhaare ಯಾರೂ ಊಹಿಸದ ಟ್ವಿಸ್ಟ್​: ಮಿಂಚು ಹುಡುಕಿ ಬಂದ ​ಅಪ್ಪ-ಅಮ್ಮ; ಹಾಗಿದ್ರೆ ಯಾರ ಮಗಳೀಕೆ
Recommended image2
Exclusive: ಬೆಂಗಳೂರು ಮೂಲದ ಗೌರಿಯನ್ನು ಜು.5ರಂದು ವರಿಸಲಿದ್ದಾರೆ ಬಾಲಿವುಡ್‌ ಮಿ.ಪರ್ಫೆಕ್ಷನಿಸ್ಟ್‌ ಆಮೀರ್‌ ಖಾನ್‌!
Recommended image3
Now Playing
DK Shivakumar: ಜ್ಯೋತಿಷಿ ಹೇಳಿದ್ದ ಭವಿಷ್ಯ; ಮನಮೆಚ್ಚಿದ ಮಡದಿಯಾಗಿ DKS ಬಾಳಿಗೆ ಬಂದಿದ್ದು ಹೇಗೆ ಉಷಾ?
Related Stories
Recommended image1
Bigg Boss 13 ಯಾವಾಗ ಶುರು: ಈ ವರ್ಷ ಬೇಗ ಆರಂಭ- ಬಿಗ್​ ಅಪ್​ಡೇಟ್​ ಕೊಟ್ಟ ವಾಹಿನಿ
Recommended image2
ನೇರಪ್ರಸಾರದಲ್ಲಿ ಬಂದು ನಟ ದರ್ಶನ್​ ಹೇಳಿದ್ದೇನು? ಅಭಿಮಾನಿಗಳ ಕಣ್ಣೀರು- ವಿಡಿಯೋ ಪುನಃ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved