- Home
- Life
- Relationship
- ದರ್ಶನ್‌ಗೆ ಈ ಬಾರಿ ರಾಖಿ ಕಟ್ತಾರಾ ಸೋನಲ್ ಮೊಂಥೆರೋ? ಎರಡೆರಡು ಗುಡ್ನ್ಯೂಸ್ ಕೊಟ್ಟ ನಟಿ ಹೇಳಿದ್ದೇನು
ದರ್ಶನ್‌ಗೆ ಈ ಬಾರಿ ರಾಖಿ ಕಟ್ತಾರಾ ಸೋನಲ್ ಮೊಂಥೆರೋ? ಎರಡೆರಡು ಗುಡ್ನ್ಯೂಸ್ ಕೊಟ್ಟ ನಟಿ ಹೇಳಿದ್ದೇನು
ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ತಮ್ಮ ನಾಲ್ಕು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬದಂದು ಸೋನಲ್ ಹಂಚಿಕೊಂಡ ವಿಡಿಯೋ, ಅವರು ತಾಯಿಯಾಗುತ್ತಿರುವ ಬಗ್ಗೆ ಕುತೂಹಲ ಮೂಡಿಸಿದ್ದು, ಇದರೊಂದಿಗೆ ನಟ ದರ್ಶನ್‌ಗೆ ರಾಖಿ ಕಟ್ಟುವ ಇಂಗಿತ ವ್ಯಕ್ತಪಡಿಸಿದ್ದಾರೆ

ನಾಲ್ಕು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ
ನಿರ್ದೇಶಕ ತರುಣ್ ಸುಧೀರ್ (Tharun Sudhir) ಮತ್ತು ನಟಿ ಸೋನಲ್ ಮೊಂಥೆರೋ ವೈವಾಹಿಕ ಜೀವನವನ್ನು ಎಂಜಾಯ್ ಮಾಡುತ್ತಿದೆ. 2024 ಆಗಸ್ಟ್ 11ರಂದು ಮದುವೆಯಾಗಿದೆ. ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಈ ಜೋಡಿ ತಮ್ಮ ನಾಲ್ಕು ವರ್ಷದ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಿದ್ದಾರೆ ತಾರೆಯರು.
ಹುಟ್ಟುಹಬ್ಬದಂದು ಮದುವೆ
ಹಿಂದೂ ಸಂಪ್ರದಾಯದಂತೆ ಮೊದಲಿಗೆ ಮದುವೆ ನಡೆದಿತ್ತು. ಸೋನಲ್ ಅವರ ಹುಟ್ಟುಹಬ್ಬದಂದೇ ಮದುವೆಯಾಗಿದ್ದು ವಿಶೇಷವೇ. ಕೊನೆಗೆ ಜೋಡಿ ಮಂಗಳೂರಿನಲ್ಲಿ ಕ್ರೈಸ್ತ ಸಮುದಾಯದಂತೆ ಮದುವೆ ಮಾಡಿಕೊಂಡಿತು. ಇದಕ್ಕೆ ಕಾರಣ ಸೋನಲ್ (Sonal Monteiro) ಅವರು ಕ್ರೈಸ್ತ ಸಮುದಾಯಕ್ಕೆ ಸೇರಿದವರು. ಈ ದಂಪತಿ ತಮ್ಮ ವೈವಾಹಿಕ ಜೀವನವನ್ನು ಸಂತಸದಿಂದ ಕಳೆಯುತ್ತಿದ್ದಾರೆ.
ಸರ್ಪ್ರೈಸ್ ಇದೆ ಎಂದ ನಟಿ
ಮೊನ್ನೆ ವರಮಹಾಲಕ್ಷ್ಮಿ ಹಬ್ಬಕ್ಕೆ ನಟಿ, ಸೋನಲ್ ಮೊಂಥೆರೋ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡೀಯೋ ಒಂದನ್ನು ಶೇರ್ ಮಾಡಿ. Can’t wait for you all to see this! A little something special for Varamahalakshmi ಎಂದು ಕ್ಯಾಪ್ಶನ್ ಹಾಕಿದ್ದಾರೆ. ಜೊತೆಗೆ ಒಂದು ಸರ್ಪ್ರೈಸ್ ಇದೆ, ನನ್ನ ಸಪ್ರೈಸ್ ಆನ್ ವೇಯಲ್ಲಿದೆ ಎಂದಿದ್ದಾರೆ. ಇದರಿಂದ ಅವರು ಅಮ್ಮನಾಗ್ತಿರಬಹುದು ಎಂದೇ ಅಭಿಮಾನಿಗಳು ಊಹಿಸುತ್ತಿದ್ದಾರೆ.
ವಿಡಿಯೋ ಸೀಕ್ರೆಟ್
ಪೂರ್ತಿ ವಿಡಿಯೋ ವರಮಹಾಲಕ್ಷ್ಮೀ ಹಬ್ಬಕ್ಕೆ ರಿಲೀಸ್ ಆಗಲಿದೆ. ಆದರೆ ಈಗ ಹಂಚಿಕೊಂಡಿರುವ ಗ್ಲಿಂಪ್ಸ್ ನೋಡಿದ್ರೆ ಸೋನಲ್ ಮೊಂಥೆರೋ ತಾಯಿಯಾದಂತೆ ಕಾಣುತ್ತಿದೆ. ನಟಿ ಸೀರೆ ಉಟ್ಟಿರುವ ರೀತಿ, ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿರುವ ಆ ವಿಶೇಷ ವಿಡೀಯೋ ನೋಡಿದ್ರೆ ಗುಡ್ ನ್ಯೂಸ್ ಹಂಚಿಕೊಳ್ಳುವಂತಿದೆ.
ದರ್ಶನ್‌ಗೆ ರಾಖಿ- ನಟಿ ಏನಂದ್ರು?
ಇದರ ನಡುವೆಯೇ, ಇನ್ನೇನು ಕೆಲವೇ ದಿನಗಳಲ್ಲಿ ರಕ್ಷಾ ಬಂಧನ ಬರಲಿದೆ. ಪ್ರತಿ ವರ್ಷವೂ ಸೋನಲ್ ಅವರು ನಟ ದರ್ಶನ್‌ಗೆ ರಾಖಿ ಕಟ್ಟುತ್ತಾರೆ. ಆದರೆ ಜೈಲಿನಲ್ಲಿ ಇರುವ ಕಾರಣ, ಕಳೆದ ಬಾರಿ ಕಟ್ಟಲು ಆಗಿರಲಿಲ್ಲ. ಆದರೆ ಈ ಬಾರಿಯೂ ಕಟ್ಟುವುದು ಕಷ್ಟ ಎಂದೇ ನಟಿ ಹೇಳಿದ್ದರೂ, ನೋಡೋಣ, ಅಲ್ಲಿಯವರೆಗೆ ಏನು ಬೇಕಾದರೂ ಆಗಬಹುದು. ರಾತ್ರೋರಾತ್ರಿ ಎಲ್ಲವೂ ಬದಲಾಗಬಹುದು. ಈ ವರ್ಷವಾದರೂ ಕಟ್ಟಬೇಕು ಎಂದುಕೊಂಡಿದ್ದೇನೆ ಎಂದಿದ್ದಾರೆ.
ಶೀಘ್ರದಲ್ಲಿಯೇ ಗುಡ್ನ್ಯೂಸ್
ಇದೇ ವಿಡಿಯೋದಲ್ಲಿ ಮಗುವಿನ ಬಗ್ಗೆ ಪ್ರಶ್ನೆ ಕೇಳಿದಾಗ, ಸದ್ಯ ಇಲ್ಲ, ಶೀಘ್ರದಲ್ಲಿಯೇ ಹೇಳುತ್ತೇನೆ ಎಂದಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡದ್ದು ನೋಡಿದ್ರೆ ಅಮ್ಮ ಆಗ್ತಿರೋ ಹಾಗಿದೆ. ಈ ವಿಡಿಯೋದಲ್ಲಿ ಹೀಗೆ ಹೇಳಿದ್ದಾರೆ. ಒಟ್ಟಿನಲ್ಲಿ ದರ್ಶನ್‌ಗೆ ರಾಖಿ ಕಟ್ಟುವ ಜೊತೆಗೆ, ಅಮ್ಮನಾಗುವ ಡಬಲ್ ಸಂತೋಷ ನಿಮ್ಮದಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

