ಮದುವೆಗೂ ಮೊದಲು ಕಾಡುವ ಆತಂಕ ನಿವಾರಿಸಿಕೊಳ್ಳಲು ಇಲ್ಲಿವೆ ಸಲಹೆ
ಮದುವೆಗಿನ್ನು ತಿಂಗಳಿಲ್ಲ. ಶುರುವಾಗುತ್ತೆ ಭಯ, ಆತಂಕ ಏನೋ ಒಂದು ರೀತಿಯ ತಳಮಳ. ಆದರೆ ಮದುವೆಗೆ ಮುಂಚೆ ತುಂಬಾ ನರ್ವಸ್ ಆಗಿರುವುದು ಎಂದರೆ ಅದು ಸಾಮಾನ್ಯವಲ್ಲ. ಈ ವಿವಾಹಪೂರ್ವ ಆತಂಕದ ಸಂದರ್ಭಗಳನ್ನು ನಿಭಾಯಿಸಲು ಇಲ್ಲಿ ಕೆಲವೊಂದು ಪರಿಹಾರಗಳನ್ನು ನಿಡಲಾಗಿದೆ... ಅದನ್ನು ಒಪ್ಪಿಕೊಳ್ಳಿ
ಮದುವೆ ದಿನಾಂಕ ಹತ್ತಿರ ಬರುತ್ತಿರುವ ಸಮಯದಲ್ಲಿ ಆ ಭಾವನೆಗಳನ್ನು ಹತ್ತಿಕ್ಕಲು ಬಯಸುತ್ತೀರಿ, ಆದರೆ ಅದರ ಬದಲಿಗೆ, ಅವನ್ನು ಗುರುತಿಸಬೇಕು, ಇದರಿಂದ ಪರಿಸ್ಥಿತಿಯ ವಾಸ್ತವತೆಯನ್ನು ಒಪ್ಪಿಕೊಳ್ಳಬಹುದು. ಆದ್ದರಿಂದ, ಮನಸ್ಸನ್ನು ತೆರೆಯಿರಿ, ಪ್ರಾಮಾಣಿಕವಾಗಿರಿ ಮತ್ತು ಆ ಸಂದರ್ಭವನ್ನು ಯಾವ ರೀತಿಯಾಗಿ ಎದುರಿಸುವುದು ಎಂಬುದನ್ನು ಪ್ಲ್ಯಾನ್ ಮಾಡಿ.
ಒತ್ತಡದ ಸಮಯದಲ್ಲಿ ವಿಶ್ರಾಂತಿ ಪಡೆಯಲು ನೆರವಾಗುವಂತಹ ಉತ್ತಮ ಸೌಂದರ್ಯ ಅಥವಾ ಚರ್ಮದ ಆರೈಕೆ ಕಡೆಗೆ ಗಮನ ಹರಿಸಿ. ಇಂತಹ ಸ್ವಯಂ ಆರೈಕೆ ಅಭ್ಯಾಸಗಳು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.
ಮದುವೆ ಯೋಜನೆಯಿಂದ ಬಿಡುವು ಬೇಕಿದ್ದರೆ, ಒಂದು ದಿನ ರಜೆ ಹಾಕಿ, ನಿಮ್ಮ ಬಗ್ಗೆ ಕಾಳಜಿ ವಹಿಸಿ. ಯಾವುದಾದರೂ ಒಳ್ಳೆ ಸಿನಿಮಾ ಸರಣಿಗಳನ್ನು ವೀಕ್ಷಿಸಿ, ಕೆಲವು ರುಚಿಕರ ಆಹಾರವನ್ನು ಕುಕ್ ಮಾಡಿ ಅಥವಾ ತಾಜಾ ಭಾವನೆಯನ್ನು ಅನುಭವಿಸಲು ವ್ಯಾಯಾಮ ಮಾಡಿ.
ಯೋಗ, ಆಳವಾದ ಉಸಿರಾಟ, ವಿಶ್ರಾಂತಿ ಮುಂತಾದ ಧ್ಯಾನ ತಂತ್ರಗಳು ಒತ್ತಡವನ್ನು ಕಡಿಮೆ ಮಾಡಲು ಅತ್ಯುತ್ತಮ ಮಾರ್ಗಗಳಾಗಿವೆ. ಈ ರೀತಿಯಲ್ಲಿ, ಮನಸ್ಸು ಮತ್ತು ದೇಹವನ್ನು ಸಡಿಲಗೊಳಿಸಬಹುದು ಮತ್ತು ಮದುವೆ ಆತಂಕವನ್ನು ಸ್ವಲ್ಪ ಕಡಿಮೆ ಮಾಡಬಹುದು.
ಈ ಸಮಯದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಮಯ ಕಳೆಯಿರಿ. ಇದನ್ನು ಏಕಾಂಗಿಯಾಗಿ ಎದುರಿಸಲೇಬಾರದು. ಮದುವೆಯ ಆತಂಕವು ಗಂಭೀರ ಸಮಸ್ಯೆಯನ್ನು ಉಂಟು ಮಾಡುತ್ತಿದ್ದಲ್ಲಿ ನಿಮಗೆ ಸರಿಯಾದ ಸಲಹೆಗಳನ್ನು ಸ್ನೇಹಿತರು, ಕುಟುಂಬದ ಸದಸ್ಯರು ನೀಡಬಹುದು. ಬೇರೆಯವರ ಮಾರ್ಗದರ್ಶನ ಪಡೆದು ಅದರಂತೆ ನಡೆದುಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ಗ್ಲಾಮರಸ್, ವೆಡ್ಡಿಂಗ್ ವೈಬ್ಸ್ ಪೋಸ್ಟ್ಗಳು ಮತ್ತು ಕಥೆಗಳನ್ನು ನೋಡುತ್ತಿದ್ದರೆ, ಮತ್ತಷ್ಟು ಆತಂಕ ಹೆಚ್ಚಬಹುದು. ಆದುದರಿಂದ ಸ್ವಲ್ಪ ಸಮಯ ಸೋಷಿಯಲ್ ಮೀಡಿಯಾದಿಂದ ದೂರ ಉಳಿಯಿರಿ.
ಸದ್ಯಕ್ಕೆ ನಿಮ್ಮ ಮೇಲೆ ಗಮನ ಕೇಂದ್ರೀಕರಿಸುವುದು ಉತ್ತಮ. ಸಾಮಾಜಿಕ ಜಾಲತಾಣ ನಕಾರಾತ್ಮಕ ಆಲೋಚನೆಗಳನ್ನು ನೀಡುವುದರಿಂದ ಅದರಿಂದ ದೂರ ಉಳಿಯುವುದು ಮುಖ್ಯ.