ಬಾಬು, ಮುದ್ದು ಎಂದು ವಯ್ಯಾರ ಮಾಡೋ ಗರ್ಲ್ ಫ್ರೆಂಡ್, ಪರಿಹಾರ ಕೊಡಿ ಪ್ಲೀಸ್ ಎಂದು ಗೋಗರೆದ ಹುಡುಗ
ಪ್ರೀತಿಯಲ್ಲಿರುವ ಜೋಡಿಗಳು ತುಂಬಾ ಪ್ರೀತಿ ಹೆಚ್ಚಾದಾಗ ಪರಸ್ಪರ ಬಾಬು-ಸೋನಾ ಎನ್ನುತ್ತಾ ಮಕ್ಕಳಂತೆ ಡ್ರಾಮಾ ಮಾಡಲು ಆರಂಭಿಸ್ತಾರೆ ಅಲ್ವಾ? ತಾವು ಹೀಗೆ ಪೆದ್ದು ಪೆದ್ದಾಗಿ ಆಡೋದು ತಮ್ಮ ಸಂಗಾತಿ ಇಷ್ಟಪಡುತ್ತಾರೋ ಇಲ್ಲವೋ ಅನ್ನೋದು ಗೊತ್ತಿರೋದಿಲ್ಲ. ಅಂತಹ ಒಬ್ಬ ಪ್ರೇಮಿಯ ಗೋಳಿನ ಕಥೆ ಇಲ್ಲಿದೆ.
ಈಗಷ್ಟೆ ಪ್ರೀತಿ ಚಿಗುರಿದಾಗ ಕಪಲ್ಸ್ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ವಿಭಿನ್ನ ಮಾರ್ಗಗಳನ್ನು ಅಳವಡಿಸಿಕೊಳ್ಳುತ್ತಾರೆ. ಪ್ರೇಮಿಗಳು ಒಟ್ಟಿಗೆ ಹೆಚ್ಚು ಹೆಚ್ಚು ಸಮಯ ಕಳೆಯಲು ಬಯಸುತ್ತಾರೆ ಮತ್ತು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಸಾಕಷ್ಟು ಮಾತನಾಡುತ್ತಾರೆ. ಹೀಗೆ ಅತಿರೇಕದ ಪ್ರೀತಿಯಿಂದ ಮಾತನಾಡುವಾಗ, ಎದುರಿಗಿರುವ ಪ್ರೇಮಿಗೆ ನಿಮ್ಮ ಮಾತು ಇಷ್ಟ ಆಗದೇ ಇದ್ದಾಗ ಏನಾಗಬಹುದು ಹೇಳಿ… ಒಬ್ಬ ವ್ಯಕ್ತಿಗೂ ಇದೇ ರೀತಿಯ ಘಟನೆ ನಡೆಯಿತು, ಆ ಹುಡುಗನ ಗರ್ಲ್ ಫ್ರೆಂಡ್ ಆತನ ಬಳಿ, ಬಾಬೂ, ತಿಂದಿ ತಿಂದ್ಯಾ ನನ್ನ ಮುದ್ದು ಬಂಗಾರಿ ಎನ್ನುತ್ತಾ ಮಕ್ಕಳಂತೆ ಆಡಲು ವರ್ತಿಸಿದ್ದಾಳೆ ಅವನ ಸ್ಥಿತಿ ಹೇಗಾಗಿರಬೇಡ ಹೇಳಿ…
ಪ್ರೀತಿಯಲ್ಲಿ ಬಿದ್ದ ಕಪಲ್ಸ್ (lovers) ಪರಸ್ಪರ ಮಾತನಾಡುವಾಗ ಬಾಬು-ಸೋನಾ, ಮುದ್ದು, ಬಂಗಾರಿ ಎನ್ನುತ್ತಾ ಮಕ್ಕಳಂತೆ ಆಡೊದನ್ನು ನಾವು ನೀವು ನೋಡಿರಬಹುದು. ಆದಾಗ್ಯೂ, ತಮ್ಮ ಸಂಗಾತಿಯು ಅದನ್ನು ಇಷ್ಟಪಡುತ್ತಾರೋ ಇಲ್ಲವೋ ಎಂದು ಅವರಿಗೆ ತಿಳಿದಿರೋದಿಲ್ಲ. ಇದಕ್ಕೆ ಸಂಬಂಧಿಸಿದ ಒಂದು ಆಸಕ್ತಿದಾಯಕ ಕಥೆಯನ್ನು ಹೇಳ್ತೀವಿ ಕೇಳಿ…
30 ವರ್ಷದ ವ್ಯಕ್ತಿಯೊಬ್ಬರು ಆನ್ಲೈನ್ ಪ್ಲಾಟ್ಫಾರ್ಮ್ (online platform) ರೆಡ್ಡಿಟ್ ನಲ್ಲಿ ತಾನು ವಿಭಿನ್ನ ಸಮಸ್ಯೆಯನ್ನು ಎದುರಿಸುತ್ತಿರೋದಾಗಿ ತಿಳಿಸಿ ತನ್ನ ಗೆಳತಿ ಮಕ್ಕಳಂತೆ ಬಾಬೂ, ಸೋನಾ, ಎಂದು ಮಾತನಾಡುತ್ತಾಳೆ, ಇದರಿಂದ ಅವಳ ಜೊತೆ ಇರೋದೆ ಕಷ್ಟವಾಗಿದೆ, ಇದಕ್ಕೆ ಪರಿಹಾರ ಏನು ಎಂದು ಕೇಳಿದ್ದಾರೆ.
ಹುಡುಗ ಈ ರೀತಿಯಾಗಿ ಬರೆದಿದ್ದಾನೆ
ತಾನು ಕೇವಲ 2 ತಿಂಗಳಿಂದ ಹುಡುಗಿಯೊಬ್ಬಳೊಂದಿಗೆ ಡೇಟಿಂಗ್ (dating) ಮಾಡುತ್ತಿದ್ದೇನೆ ಎಂದು ಆ ವ್ಯಕ್ತಿ ಹೇಳಿದ್ದಾನೆ. ಇನ್ನು ಆತನ ಸಮಸ್ಯೆಯೆಂದರೆ ಗೆಳತಿ ಅವನೊಂದಿಗೆ ಸರಿಯಾದ ಧ್ವನಿಯಲ್ಲಿ ಮಾತನಾಡುವುದಿಲ್ಲ ಮತ್ತು ಯಾವಾಗಲೂ ಮಗುವಿನ ಧ್ವನಿಯಲ್ಲಿ ಮಾತನಾಡುತ್ತಾಳೆ. ಇಬ್ಬರೂ ಚಿಕ್ಕವರಲ್ಲ, ಆಕೆಗೆ ಈಗಾಗಲೇ ಮದುವೆಯಾಗಿ, ಮದುವೆ ಮುರಿದು ಬಿದ್ದಿದೆ ಮತ್ತು ಅವರು ಪ್ರಬುದ್ಧರಾಗಿದ್ದಾರೆ.
ಪ್ರಬುದ್ಧತೆ ಇದ್ದರೂ ಗೆಳತಿಯು ಮಕ್ಕಳಂತೆ ವರ್ತಿಸೋದು ಈ ಗೆಳೆಯನನ್ನು ಕಿರಿಕಿರಿಗೊಳಿಸುತ್ತಿದೆ ಮತ್ತು ಈ ಕಾರಣದಿಂದಾಗಿ ಸಂಬಂಧವನ್ನು ಸಹಿಸಲು ಅವನಿಗೆ ಸಾಧ್ಯವಾಗುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಗರ್ಲ್ ಫ್ರೆಂಡ್ (girlfriend) ಹಾಗೆ ಮಕ್ಕಳಂತೆ ಮಾತನಾಡಿದರೆ ಏನು ಮಾಡಬೇಕೆಂದು ಅವರು ಅಂತರ್ಜಾಲದಲ್ಲಿ ಜನರನ್ನು ಕೇಳಿದ್ದಾರೆ.
ಈಗಲೇ ಬಿಟ್ಟುಬಿಡಿ ಅಂತಹ ಗರ್ಲ್ ಫ್ರೆಂಡ್ ಬೇಡ್ವೇ ಬೇಡ ಎಂದ ಜನ
ಮಿರರ್ ವರದಿ ಪ್ರಕಾರ, ಜನರು ಈ ಪೋಸ್ಟ್ಗೆ ಸಾಕಷ್ಟು ಪ್ರತಿಕ್ರಿಯಿಸಿದ್ದಾರೆ ಮತ್ತು ವ್ಯಕ್ತಿಗೆ ವಿವಿಧ ರೀತಿಯ ಸಲಹೆಗಳನ್ನು ನೀಡಿದ್ದಾರೆ. ಒಬ್ಬ ಬಳಕೆದಾರರು ಸ್ಪಷ್ಟವಾಗಿ, ನೀವು ಅವಳ ಮಗುವಿನ ಧ್ವನಿಯ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಆ ಸಂಬಂಧವನ್ನು ಈಗಲೇ ಬಿಡಿ ಏಕೆಂದರೆ ಅದು ಮತ್ತಷ್ಟು ಬೆಳೆಯಲಿದೆ ಎಂದಿದ್ದಾರೆ.
ಇನ್ನೊಬ್ಬ ಬಳಕೆದಾರರು ಸಹ ಮಕ್ಕಳಂತೆ ಮಾತನಾಡುವುದು ತುಂಬಾ ಕಿರಿಕಿರಿ ಎನಿಸುತ್ತದೆ, ನೀವು ಇಲ್ಲಿಯವರೆಗೆ ಹೇಗೆ ಅವರನ್ನು ಸಹಿಸಿಕೊಂಡು ಬಂದಿದ್ದೀರಿ ಎಂದು ಕೇಳಿದ್ದಾರೆ. ಮಗುವಿನಂತೆ ಮಾತನಾಡೋದು ತುಂಬಾ ಕ್ಯೂಟ್ ಎಂದು ಹಲವಾರು ಜನರು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಗರ್ಲ್ ಫ್ರೆಂಡ್ ಅಥವಾ ಬಾಯ್ ನಿಮ್ಮ ಜೊತೆ ಹಾಗೆ ಮಾತನಾಡಿದ್ರೆ ನೀವೇನು ಮಾಡ್ತೀರಾ?