History of Propose Day : ಪ್ರಪೋಸ್ ಮಾಡೋಕು ಒಂದು ದಿನ.. ಇದೆಲ್ಲಾ ಹೇಗೆ ಶುರುವಾಯ್ತು.?
ವ್ಯಾಲೆಂಟೈನ್ಸ್ ವೀಕ್ (valentines week) ಆರಂಭವಾಗಿದೆ. ಇನ್ನೊಂದು ವಾರ ಪ್ರೇಮಿಗಳಿಗೆ ಹಬ್ಬ. ರೋಸ್ ಡೇ ಆಯ್ತು, ಇನ್ನು ಪ್ರಪೋಸ್ ಡೇ. ಫೆಬ್ರವರಿ 8ರಂದು ಪ್ರೇಮ ನಿವೇದನೆ ದಿನ. ಈ ದಿನದ ಇತಿಹಾಸ ಕೆಲವೇ ಜನರಿಗೆ ತಿಳಿದಿದೆ. ಇದು ಶುರುವಾಗಿದ್ದು ಹೇಗೆ? ಹಾಗಿದ್ರೆ ಬನ್ನಿ ಅದರ ಇತಿಹಾಸ ತಿಳಿಯೋಣ.
ನಾವೆಲ್ಲರೂ ನಮ್ಮ ಜೀವನದ ಒಂದು ಹಂತದಲ್ಲಿ ಪ್ರೀತಿಯಲ್ಲಿ ಬೀಳುತ್ತೇವೆ. ಪ್ರೀತಿಯಲ್ಲಿ ಇರುವುದು ಮತ್ತು ಪ್ರೀತಿಯನ್ನು ವ್ಯಕ್ತಪಡಿಸುವುದು ಎರಡು ವಿಭಿನ್ನ ವಿಷಯಗಳು. ಪ್ರೇಮಿಗಳ ದಿನಾಚರಣೆಗೂ ಮೊದಲು ಬರುವು ಪ್ರಪೋಸ್ ಡೇ ಅಂದರೆ ಪ್ರೇಮ ನಿವೇದನೆ ದಿನಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ. ತಮ್ಮ ಹೃದಯದಲ್ಲಿ ಬಚ್ಚಿಟ್ಟ ಪ್ರೀತಿಯನ್ನು ವ್ಯಕ್ತಪಡಿಸಲು ಇರುವ ದಿನ. ಆದರೆ ಈ ದಿನ ಹೇಗೆ ಪ್ರಾರಂಭವಾಯಿತು (history of propose day) ಅನ್ನೋದು ತಿಳಿದಿದೆಯೇ? ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಪ್ರಪೋಸ್ ಡೇ ಇತಿಹಾಸ (History of Propose Day)
ಪ್ರಪೋಸ್ ಡೇ ಪ್ರಾರಂಭದ ಹಿಂದೆ ಹಲವು ಕಾರಣಗಳಿವೆ. 1477 ರಲ್ಲಿ, ಆಸ್ಟ್ರಿಯಾದ ಆರ್ಚ್ ಡ್ಯೂಕ್ ಮ್ಯಾಕ್ಸಿಮಿಲಿಯನ್ , ತನ್ನ ಪ್ರೀತಿಯ ಬರ್ಗಂಡಿಯ ಮೇರಿಗೆ ವಜ್ರದ ಉಂಗುರವನ್ನು ನೀಡಿ ಪ್ರಪೋಸ್ ಮಾಡಿದರು ಎಂದು ಹೇಳಲಾಗುತ್ತದೆ. 1816 ರಲ್ಲಿ, ರಾಜಕುಮಾರಿ ಷಾರ್ಲೆಟ್ ತನ್ನ ಭಾವಿ ಪತಿಗೆ ಪ್ರಪೋಸ್ ಮಾಡಿರುವ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ಅಂದಿನಿಂದ, ವ್ಯಾಲೆಂಟೈನ್ಸ್ ವೀಕ್ ನ ಎರಡನೇ ದಿನವನ್ನು ಪ್ರಪೋಸ್ ಡೇ ಎಂದು ಆಚರಿಸಲಾಗುತ್ತದೆ.
ಪ್ರಪೋಸ್ ಡೇ ಅರ್ಥ (Meaning of propose day)
ಪ್ರಪೋಸ್ ಡೇ ಆಚರಿಸುವ ಹಿಂದಿನ ಉದ್ದೇಶವೆಂದರೆ ನಿಮ್ಮ ಪ್ರೀತಿಯನ್ನು ಯಾರ ಮುಂದೆಯಾದರೂ ವ್ಯಕ್ತಪಡಿಸುವುದು. ಯಾವುದೇ ಹೊಸ ಸಂಬಂಧವನ್ನು ಪ್ರಾರಂಭಿಸಲು ಈ ದಿನವನ್ನು ಬಹಳ ವಿಶೇಷವೆಂದು ಪರಿಗಣಿಸಲು ಇದು ಕಾರಣವಾಗಿದೆ. ಅದೇ ಸಮಯದಲ್ಲಿ, ಸಂಬಂಧವನ್ನು ಬಲಪಡಿಸಲು ಮತ್ತು ಸಂಗಾತಿಗೆ ವಿಶೇಷವಾದದ್ದನ್ನು ಮಾಡಲು ಈ ದಿನ ತುಂಬಾ ಮಹತ್ವದ್ದಾಗಿದೆ.
ಪ್ರಪೋಸ್ ಡೇ ಆಚರಿಸುವುದು ಹೇಗೆ? (How to celebrate propose day)
ಪ್ರಪೋಸ್ ಡೇ ಆಚರಿಸಲು ಅನೇಕ ಮಾರ್ಗಗಳಿವೆ. ನೀವು ಎಲ್ಲಿಗಾದರೂ ಹೋಗಬಹುದು, ಡೇಟಿಂಗ್ ಯೋಜಿಸಬಹುದು, ಉಡುಗೊರೆಯನ್ನು ನೀಡಬಹುದು ಮತ್ತು ನಿಮ್ಮ ಸಂಗಾತಿಯೊಂದಿಗೆ ಕುಳಿತು ಅವರಿಗೆ ಸ್ಪೆಷಲ್ ಫೀಲ್ ಆಗುವ ಹಾಗೆ ಏನನ್ನಾದರೂ ಮಾಡಿ.
ವಿಶಿಷ್ಟವಾದ ಏನನ್ನಾದರೂ ಮಾಡಿ
ಪ್ರಪೋಸ್ ಡೇ ದಿನ ನಿಮ್ಮ ಸಂಗಾತಿಯನ್ನು ಸಂತೋಷಪಡಿಸಲು ನೀವು ದುಬಾರಿ ವಸ್ತುಗಳನ್ನು ಖರೀದಿಸಬೇಕಾಗಿಲ್ಲ. ಬದಲಾಗಿ ಅವರಿಗೆ ಇಷ್ಟ ಇರೋದನ್ನು ಮಾಡಿ. ಅಥವಾ ಅವರ ಮೇಲೆ ನಿಮಗೆ ಎಷ್ಟು ಕಾಳಜಿ ಇದೆ ಅನ್ನೋದನ್ನು ತೋರಿಸಿ. ಇದರಿಂದ ಅವರಿಗೆ ತುಂಬಾ ಖುಷಿಯಾಗುತ್ತೆ.
ನಿಮ್ಮ ಸಂಗಾತಿಗೆ ಈ ರೀತಿ ಪ್ರಪೋಸ್ ಮಾಡಿ
ಬೀಚ್ ನಲ್ಲಿ ಪ್ರಪೋಸ್ ಮಾಡಿ (proposing in beach)
ನೀವು ಮುಕ್ತ ಮನಸ್ಸಿನವರಾಗಿದ್ದರೆ, ಪ್ರಪೋಸ್ ಡೇ ದಿನದಂದು ನಿಮ್ಮ ಸಂಗಾತಿಯನ್ನು ಬೀಚ್ ಗೆ ಕರೆದೊಯ್ಯಿರಿ. ಇಲ್ಲಿ ಸೂರ್ಯಾಸ್ತದ (sunset) ಸಮಯದಲ್ಲಿ ನಿಮ್ಮ ಮೊಣಕಾಲುಗಳ ಮೇಲೆ ಕುಳಿತು ಸಂಗಾತಿಗೆ ಪ್ರಪೋಸ್ ಮಾಡಿ, ಅದಕ್ಕಿಂತ ರೋಮ್ಯಾಂಟಿಕ್ ಬೇರೆ ಯಾವುದೂ ಇರಲಾರದು.
ಕ್ಯಾಂಡಲ್ ಲೈಟ್ ಡಿನ್ನರ್ ನಲ್ಲಿ ಪ್ರಪೋಸ್ ಮಾಡಿ (proposing at candle light dinner)
ನಿಮ್ಮ ಸಂಗಾತಿಗೆ ನೀವು ತುಂಬಾ ರೋಮ್ಯಾಂಟಿಕ್ ರೀತಿಯಲ್ಲಿ ಪ್ರಪೋಸ್ ಮಾಡಲು ಬಯಸಿದರೆ, ಇದಕ್ಕಾಗಿ ಅವರನ್ನು ಕ್ಯಾಂಡಲ್ ಲೈಟ್ ಡಿನ್ನರ್ ಗೆ ಕರೆದೊಯ್ಯಿರಿ. ಅಲ್ಲಿ ಅವರಿಗೆ ಪ್ರಪೋಸ್ ಮಾಡಿ. ಈ ವಿಶೇಷ ಸಂದರ್ಭವನ್ನು ಅವರು ಖಂಡಿತವಾಗಿಯೂ ಮರೆಯೋದಿಲ್ಲ.
ನೀವು ಯಾರಿಗಾದರೂ ವಿಭಿನ್ನ ಶೈಲಿಯಲ್ಲಿ ಮದುವೆಗಾಗಿ ಪ್ರಪೋಸ್ ಮಾಡಲು ಬಯಸಿದರೆ, ನೀವು ನಿಮ್ಮ ಫ್ಯಾಮಿಲಿ ಮತ್ತು ಅವರ ಫ್ಯಾಮಿಲಿಯನ್ನು ಒಪ್ಪಿಸಿ, ಎಲ್ಲರ ಮುಂದೆ ಪ್ರಪೋಸ್ ಮಾಡಬಹುದು. ಇದು ಒಂದು ರೀತಿಯಲ್ಲಿ ಥ್ರಿಲ್ಲಿಂಗ್ ಆಗಿರುತ್ತೆ. ಸಂಗಾತಿ ಖಂಡಿತವಾಗಿಯೂ ಇದನ್ನು ಇಷ್ಟ ಪಡ್ತಾರೆ.