MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಅವರು ಎಂದಿಗೂ ಮಕ್ಕಳಿಗೆ ಒಳ್ಳೆ ತಂದೆಯಾಗಿರಲಿಲ್ಲ: ಕೊನೆ ದಿನಗಳಲ್ಲಿ ತುಂಬಾ ಬದಲಾದರು: ನೀತು ಕಪೂರ್‌

ಅವರು ಎಂದಿಗೂ ಮಕ್ಕಳಿಗೆ ಒಳ್ಳೆ ತಂದೆಯಾಗಿರಲಿಲ್ಲ: ಕೊನೆ ದಿನಗಳಲ್ಲಿ ತುಂಬಾ ಬದಲಾದರು: ನೀತು ಕಪೂರ್‌

ಕಾಫಿ ವಿತ್ ಕರಣ್ ಸೀಸನ್ 8 ಪ್ರಸ್ತುತ ನಡೆಯುತ್ತಿದ್ದು, ಈ ಬಾರಿ ಶೋಗೆ ಅತಿಥಿಯಾಗಿ ಬಂದ ನೀತು ಕಪೂರ್ ತಮ್ಮ ಪತಿಯೊಂದಿಗಿನ ಒಡನಾಟ ಸೇರಿದಂತೆ ಹಲವು ವಿಚಾರಗಳನ್ನು ಈ ಶೋದಲ್ಲಿ ಹಂಚಿಕೊಂಡಿದ್ದಾರೆ.

2 Min read
Author : Anusha Kb
Published : Jan 11 2024, 11:30 AM IST
Share this Photo Gallery
  • FB
  • TW
  • Linkdin
  • Whatsapp
111

ಕಾಫಿ ವಿತ್ ಕರಣ್ ಟಾಕ್‌ ಶೋದ 12ನೇ ಎಪಿಸೋಡ್ ಪ್ರಸಾರವಾಗಿದ್ದು, ಈ ಶೋಗೆ ಬಾಲಿವುಡ್‌ನ ಹಿರಿಯ ನಟಿಯರಾದ ನೀತು ಕಪೂರ್ ಹಾಗೂ ಜೀನತ್ ಅಮನ್ ಅವರು ಈ ಬಾರಿ ಅತಿಥಿಯಾಗಿ ಆಗಮಿಸಿದ್ದರು. 

211

ಈ  ಶೋದಲ್ಲಿ ನೀತು ಹಾಗೂ ಜೀನತ್ ಇಬ್ಬರು ತಮ್ಮ ವೈಯಕ್ತಿಕ ಜೀವನದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದರ ಜೊತೆಗೆ ನೀತು ತಮ್ಮ ಪತಿ ರಿಷಿ ಕಪೂರ್ ಬಗೆಗಿನ ಹಲವು ಶಾಕಿಂಗ್ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ನೀತು ಹಾಗೂ ರಿಷಿ ಕಪೂರ್, ನಟ ರಣ್‌ಬೀರ್ ಹಾಗೂ ರಿಧಿಮ ಕಪೂರ್ ಪೋಷಕರಾಗಿದ್ದಾರೆ. 
 

311

ಲ್ಯುಕೇಮಿಯಾ ಸಮಸ್ಯೆಯಿಂದ ಬಳಲುತ್ತಿದ್ದ  ರಿಷಿ ಕಪೂರ್ ಅವರು 2020ರಲ್ಲಿ ತೀರಿಕೊಂಡಿದ್ದರು ಈ ಟಾಕ್ ಶೋದಲ್ಲಿ ಪತಿ ಹಾಗೂ ಲೆಜೆಂಡರಿ ನಟ ರಿಷಿ ಬಗ್ಗೆ ಮಾತನಾಡಿದ ನೀತು ತಾವು ಇಬ್ಬರು ನ್ಯೂಯಾರ್ಕ್‌ನಲ್ಲಿ ಜೊತೆಯಾಗಿ ಕಳೆದ ಸಮಯವನ್ನು ನೆನಪಿಸಿಕೊಂಡರು. ಅಲ್ಲಿ ರಿಷಿಯವರು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಆ ಸಮಯ ಬಹಳ ಕಷ್ಟಕರವಾಗಿತ್ತು. ತಾನು ಕಷ್ಟದ ಜೀವನವನ್ನು ನೆನಪಿಸಿಕೊಳ್ಳಲು ಬಯಸುವುದಿಲ್ಲ ಎಂದ ನೀತು ಹೇಳಿದ್ದಾರೆ.

411

nನಾನು ಕಷ್ಟದ ದಿನಗಳನ್ನು ನೆನೆಯಲು ಜಾಸ್ತಿ ಇಷ್ಟಪಡಲ್ಲ, ನಾನು ನಮ್ಮ ಸಂಬಂಧದ ಉತ್ತಮ ದಿನಗಳನ್ನು ನೆನಪಿಟ್ಟುಕೊಳ್ಳಲು ಇಷ್ಟಪಡುವೆ. ನ್ಯೂಯಾರ್ಕ್‌ನ ಆ ದಿನಗಳು ತುಂಬಾ ಕಷ್ಟದ ವಿಚಾರಗಳಾಗಿದ್ದವು. ಆದರೆ ಅದು ನಮ್ಮ ಸಂಬಂಧದ ವಿಷಯದಲ್ಲಿ ಬಹಳ ಒಳ್ಳೆಯ ದಿನಗಳಾಗಿದ್ದವು ಎಂದು ನೀತು ಹೇಳಿದ್ದಾರೆ. 

511

ಇದೇ ವೇಳೆ ಮಕ್ಕಳೊಂದಿಗ ಪತಿಯ ಒಡನಾಟ ಹೇಗಿತ್ತು ಎಂಬುದನ್ನು ನೆನಪಿಸಿಕೊಂಡ ನೀತು, ನಿಮಗೆ ತಿಳಿದಂತೆ ಚಿಂಟು ಜೀ(ರಿಷಿ ಕಪೂರ್) ತುಂಬಾ ಪ್ರೀತಿಯ ವ್ಯಕ್ತಿ. ಅವರಲ್ಲಿ ತುಂಬಾ ಪ್ರೀತಿ ಇತ್ತು. ಆದರೆ ಅದನ್ನು ಯಾವತ್ತೂ ಅವರು ಮಕ್ಕಳು ಹಾಗೂ ಸ್ನೇಹಿತರ ಮೇಲೆ ತೋರಿಸಲೇ ಇಲ್ಲ.

611

ವಿಶೇಷವಾಗಿ ನನ್ನೊಂದಿಗೆ ಹಾಗೂ ನನ್ನ ಮಕ್ಕಳೊಂದಿಗೆ ಅವವರು ಬಹಳ ದೊಡ್ಡ ವಿಚಾರದಂತೆ ಇದ್ದರು. ಅವರ್ಯಾವತ್ತೂ ಮಕ್ಕಳೊಂದಿಗೆ ಮನಬಿಚ್ಚಿ ಬೆರೆತಿರಲಿಲ್ಲ, ರಣ್‌ಬೀರ್ ಹಾಗೂ ರಿದ್ದಿಮಾಗೆ ಅವರು ಯಾವತ್ತೂ ಸ್ನೇಹಿತರಾಗಿರಲಿಲ್ಲ, ಆದರೆ ಕೊನೆ ದಿನಗಳಲ್ಲಿ ಅವರು ತುಂಬಾ ಬದಲಾಗಿದ್ದರು ಎಂದು ನೀತು ನೆನಪು ಮಾಡಿಕೊಂಡಿದ್ದಾರೆ

711

ನ್ಯೂಯಾರ್ಕ್‌ನಲ್ಲಿ ಪತಿ ರಿಷಿ ಕಿಮೋಥೆರಪಿ ಚಿಕಿತ್ಸೆಗೆ ಒಳಗಾಗುತ್ತಿದ್ದ ಸಮಯವನ್ನು ನೆನೆದ ನೀತು, ಆ ಸವಾಲಿನ ಕ್ಷಣಗಳ ಮಧ್ಯೆಯೂ ಅಲ್ಲಿ ಕೆಲ ಒಳ್ಳೆಯ ಕ್ಷಣಗಳಿದ್ದವು.

811

ಆ ವರ್ಷ ಅವರು ನಮ್ಮೊಂದಿಗೆ ತುಂಬಾ ಚೆನ್ನಾಗಿ ಬೆರೆಯುತ್ತಿದ್ದರು. ಮಕ್ಕಳೊಂದಿಗೆ ಖುಷಿಯಿಂದ ಮಾತನಾಡುತ್ತಿದ್ದರು. ನಾವು ಕಷ್ಟದ ಮಧ್ಯೆಯೂ ಒಳ್ಳೆಯ ಸಮಯವನ್ನು ಹೊಂದಿದ್ದೆವು ಎಂದು ಹೇಳಿಕೊಂಡಿದ್ದಾರೆ. 

911

ನಟ ರಣ್‌ಬೀರ್ ಕಪೂರ್ ಕೂಡ ಅಪ್ಪನೊಂದಿಗೆ ಅಂತ ಉತ್ತಮ ಒಡನಾಟ ಹೊಂದಿಲ್ಲದಿರುವ ಬಗ್ಗೆ ಈ ಹಿಂದೆ ಮಾತನಾಡಿದ್ದರು. ಇಬ್ಬರ ಮಧ್ಯೆ ಲೆಕ್ಕವಿಲ್ಲದಷ್ಟು ಕಿತ್ತಾಟಗಳಿದ್ದವು. ಇಬ್ಬರು ಆಗಾಗ ತಮ್ಮ ಮಧ್ಯೆ ಉತ್ತಮ ಒಡನಾಟವಿಲ್ಲವೆಂಬುದನ್ನು ತೋರಿಸಿಕೊಂಡಿದ್ದರು. 

1011

 ಸಿನಿಮಾವೊಂದರ ಪ್ರಚಾರ ಕಾರ್ಯಕ್ರಮದಲ್ಲೂ ನಟ ರಣಬೀರ್ ಈ ವಿಚಾರದ ಬಗ್ಗೆ ಮಾತನಾಡಿದ್ದರು. ಅವರು ಎಲ್ಲಾ ಕಡೆ ಪ್ರಯಾಣಿಸುತ್ತಿದ್ದರು. ಅವರ ಹಾಗೂ ನಮ್ಮ ಮಧ್ಯೆ ಆತ್ಮೀಯತೆ ಇರಲಿಲ್ಲ, ಅವರೊಂದಿಗೆ ಕುಳಿತು ಹರಟೆ ಹೊಡೆಯಲು ಸಾಧ್ಯವಾಗಲಿಲ್ಲ, ಮತ್ತು ಆ ವಿಚಾರಕ್ಕೆ ನಾನು ಇಂದಿಗೂ ವಿಷಾದ ಪಡುತ್ತೇನೆ. ಬಹುಶಃ ನಾನು ಅವರೊಂದಿಗೆ ಸ್ನೇಹಿತನಾಗಿ ಇರಬಹುದಿತ್ತೇನೋ ಎಂದು ನನಗೆ ಅನಿಸುತ್ತಿದೆ. 

1111

ಅವರೊಂದಿಗೆ ನಾನು ಹೆಚ್ಚೆಚ್ಚು ವಿಚಾರಗಳನ್ನು ಹಂಚಿಕೊಳ್ಳಬಹುದಿತ್ತೇನೋ ಎಂದು ಅನಿಸುತ್ತಿದೆ. ನಾನು ಅವರನ್ನು ಗೌರವಿಸುತ್ತೇನೆ ಆದರೆ ನಾವು ಯಾವತ್ತೂ ಸ್ನೇಹಿತರಾಗಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ ರಣ್‌ಬೀರ್

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಕಾಫಿ ವಿಥ್ ಕರಣ್
ರಣಬೀರ್ ಕಪೂರ್

Latest Videos
Recommended Stories
Recommended image1
ಅವನ ಮುಖ ಹೀಗಿತ್ತು, ಜಗತ್ತು ತಿರಸ್ಕರಿಸಿತು, ಅವಳು ಪ್ರೀತಿಸಿದಳು! ಹೀಗೊಂದು ಲವ್‌ ಸ್ಟೋರಿ
Recommended image2
27 ವರ್ಷಗಳ ದಾಂಪತ್ಯಕ್ಕೆ 250 ಕೋಟಿ ರೂ? ದಳಪತಿ-ಸಂಗೀತಾ ಡಿವೋರ್ಸ್​ಗೆ ಇದೇನಿದು ಟ್ವಿಸ್ಟ್​?
Recommended image3
ಒಂದು ಮದುವೆ ಮುರಿದುಬಿದ್ದರೂ ಮತ್ತೊಂದು ಕೈಹಿಡಿದಿದ್ದು ಹೇಗೆ? ಇದು ಯಾರಿಗೂ ಗೊತ್ತಿಲ್ಲದ ರಶ್ಮಿಕಾ ಮಂದಣ್ಣ ಗುಟ್ಟು..!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved