ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ 'ಗಿಣಿರಾಮ' ಖ್ಯಾತಿಯ ನಟಿ ನಯನ ನಾಗರಾಜ್
ಗಿಣಿರಾಮ ಸೀರಿಯಲ್‌ನಲ್ಲಿ ನಟಿಸುತ್ತಿದ್ದ ಮಹತಿ ಖ್ಯಾತಿಯ ನಯನಾ ನಾಗರಾಜ್, ಸರಳವಾಗಿ ಮನೆಯಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮನೆಯಲ್ಲೇ ನಯನ ನಾಗರಾಜ್ - ಸುಹಾಸ್ ಶಿವಣ್ಣ ಎಂಗೇಜ್‌ಮೆಂಟ್ ನಡೆದಿದೆ. ಫೋಟೋಸ್ ಇಲ್ಲಿದೆ.

ಗಿಣಿರಾಮ ಸೀರಿಯಲ್‌ನಲ್ಲಿ ನಟಿಸುತ್ತಿದ್ದ ಮಹತಿ ಖ್ಯಾತಿಯ ನಯನಾ ನಾಗರಾಜ್, ಸರಳವಾಗಿ ಮನೆಯಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮನೆಯಲ್ಲೇ ನಯನ ನಾಗರಾಜ್ - ಸುಹಾಸ್ ಶಿವಣ್ಣ ಎಂಗೇಜ್‌ಮೆಂಟ್ ನಡೆದಿದೆ. ಫೋಟೋಸ್ ಇಲ್ಲಿದೆ.
ಗಿಣಿರಾಮ ಸೀರಿಯಲ್‌ನಲ್ಲಿ ಮಹತಿ ಪಾತ್ರದ ಮೂಲಕ ಫೇಮಸ್ ಆದ ನಟಿ ನಯನಾ ನಾಗರಾಜ್. , ಸರಳವಾಗಿ ಮನೆಯಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮನೆಯಲ್ಲೇ ನಯನ ನಾಗರಾಜ್ - ಸುಹಾಸ್ ಶಿವಣ್ಣ ಎಂಗೇಜ್‌ಮೆಂಟ್ ನಡೆದಿದೆ.
ಕುಟುಂಬಸ್ಥರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡ ನಯನ ನಾಗರಾಜ್ ಹಾಗೂ ಸುಹಾಸ್ ಹಾರ, ಉಂಗುರ ಬದಲಾಯಿಸಿಕೊಂಡರು. ಸೀರಿಯಲ್‌ನಲ್ಲಿ ಅಪ್ಪನ ಪಾಲಿನ ಹೆಮ್ಮೆಯ ಮಗಳಾಗಿ ಅನ್ಯಾಯದ ರಾಜಕೀಯದ ವಿರುದ್ಧ ಪ್ರತಿಭಟಿಸುವ ಪಾತ್ರದಲ್ಲಿ ಮಹತಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಪಾಪ ಪಾಂಡು ಧಾರಾವಾಹಿಯಲ್ಲಿಯೂ ನಯನ ನಾಗರಾಜ್ ನಟಿಸಿದ್ದರು. ರಿಯಲ್ ಲೈಫ್‌ನಲ್ಲಿ ನಯನಾ, ಉತ್ತಮ ಗಾಯಕಿಯೂ ಹೌದು. ಸದ್ಯ ದಾಂಪತ್ಯ ಬದುಕಿಗೆ ಕಾಲಿಡಲು ಸಜ್ಜಾಗಿದ್ದಾರೆ.
ಹತ್ತು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ನಯನ ನಾಗರಾಜ್ ಹಾಗೂ ಸುಹಾಸ್ ಶಿವಣ್ಣ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ. ಸಿಂಪಲ್ ಆಗಿ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆದಿದೆ. ಮನೆಯಲ್ಲೇ ಹೂ ಮುಡಿಸುವ ಶಾಸ್ತ್ರ ಹಾಗೂ ನಿಶ್ಚಿತಾರ್ಥ ನೆರವೇರಿಸಲಾಗಿದೆ.
'ಅಪ್‌ಗ್ರೇಡ್ ಬಟನ್ ಆಫ್ ಅವರ್ ರಿಲೇಶನ್ ಶಿಪ್' ಎಂದು ನಯನಾ ಶೀರ್ಷಿಕೆ ನೀಡಿ ತಮ್ಮ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಸುಹಾಸ್ ಶಿವಣ್ಣ ಸಹ ರಂಗಭೂಮಿ ಹಾಗೂ ಸಂಗೀತದಲ್ಲಿ ಆಸಕ್ತಿ ಹೊಂದಿದ್ದಾರೆ. ಇವರು ಡಿಜಿಟಲ್ ಮಾರ್ಕೆಟಿಂಗ್ ಮತ್ತು ಸೋಷಿಯಲ್ ಮೀಡಿಯಾ ಸ್ಪೆಷಲಿಸ್ಟ್ ಕೂಡ ಆಗಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.