ಖುಷಿಯಾಗಿರುವುದು ಈ ರಾಶಿಗಳಿಗೆ ಸುಲಭ

ಸಂತೋಷವಾಗಿರಬೇಕೆಂದು ಬಯಸುವವರು ಹಲವರು. ಆದರೆ, ಅದು ಎಲ್ಲರಿಂದಲೂ ಸಾಧ್ಯವಿಲ್ಲ. ಕೆಲವರು ಮಾತ್ರ ಬದುಕು ಹೇಗೇ ಇರಲಿ, ಸಂತೋಷವಾಗಿರಬಲ್ಲರು. ಏಕೆಂದರೆ ಅದು ಅವರ ಸ್ವಭಾವ. ಹೀಗೆ ಸಂತೋಷವಾಗಿರುವವರು ಯಾವ ರಾಶಿಗೆ ಸೇರಿರುತ್ತಾರೆ ಗೊತ್ತಾ?

5 zodiac signs who find it easy to be happy skr

ಸಂತೋಷ(happiness)ಕ್ಕಾಗಿ ಎಲ್ಲರೂ ಹಂಬಲಿಸುತ್ತಾರೆ. ಕೆಲವರು ಅದನ್ನು ಹಣದಲ್ಲಿದೆ ಎಂದುಕೊಳ್ಳುತ್ತಾರೆ, ಮತ್ತೆ ಕೆಲವರು ಸಂತೋಷವು ಹೊಸ ಬಟ್ಟೆಗಳಲ್ಲಿದೆ ಎಂದು ಭಾವಿಸುತ್ತಾರೆ. ಇನ್ನೂ ಕೆಲವರಿಗೆ ಹೆಸರು, ಪ್ರತಿಷ್ಠೆಯಿಂದ ಸಂತೋಷ ಸಿಗುತ್ತದೆ ಎಂಬ ನಂಬಿಕೆ ಇರುತ್ತದೆ.. ಮತ್ತೆ ಬಹುತೇಕರಿಗೆ ತಮ್ಮ ಕನಸುಗಳೆಲ್ಲ ನನಸಾದರೆ ತಾವು ಸಂತೋಷವಾಗಿರಬಹುದು ಎಂಬ ಭ್ರಮೆ ಇರುತ್ತದೆ. ಆದರೆ, ನಿಜವಾಗಿ ಸಂತೋಷ ಇರುವುದು ನಮ್ಮೊಳಗೆಯೇ ಎಂಬುದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಇಲ್ಲದಿದ್ದರೆ ನೋಡಿ, ಭಿಕ್ಷುಕನೊಬ್ಬ ಬಹಳ ಸಂತೋಷವಾಗಿ ಹಾಡಿಕೊಂಡಿರಬಲ್ಲ. ಅಂತೆಯೇ ಐಶಾರಾಮಿ ಬಂಗೆಲೆಯಲ್ಲಿ ಜೀವಿಸುವ ಸೆಲೆಬ್ರಿಟಿಯು ಖಿನ್ನತೆಯಲ್ಲೂ ಇರಬಲ್ಲ. ಇದೇಕೆ ಎಂದರೆ ಸಂತೋಷವನ್ನು ಬೇರೆಲ್ಲೋ ಅರಸುವುದೇ ಸಮಸ್ಯೆ. ಜೀವನ ಹೇಗೇ ಇರಲಿ, ಏನೇ ಬರಲಿ, ನಮ್ಮ ಮನಸ್ಥಿತಿಯ ಮೇಲೆ ಸಂತೋಷ ಎಂಬುದು ನಿರ್ಧಾರವಾಗುತ್ತದೆ. ಈ ಮನಸ್ಥಿತಿಯು ನಮ್ಮ ರಾಶಿಚಕ್ರಗಳ ಮೇಲೆ ನಿರ್ಧಾರವಾಗುತ್ತದೆ. ಹೌದು, ಕೆಲ ರಾಶಿ(zodiac sign)ಯವರು ಸದಾ ಕಾಲ ಸಂತೋಷದಿಂದಿರುತ್ತಾರೆ. ಅವರಿಗೆ ಸಂತೋಷವಾಗಿರುವುದು ಕಷ್ಟದ ಕೆಲಸವಲ್ಲ. ಅಂಥ ಐದು ರಾಶಿಗಳು ಯಾವುವು ನೋಡೋಣ.

ಮೇಷ(Aries)
ಈ ರಾಶಿಯವರು ಜೀವನದೆಡೆಗೆ ಜಾಲಿ ಆ್ಯಟಿಟ್ಯೂಡ್ ಹೊಂದಿರುತ್ತಾರೆ. ಯಾವ ಸಮಯದಲ್ಲಿ ಬೇಕಾದರೂ ತಮಾಷೆ ಮಾಡುವ ಅಭ್ಯಾಸ ಇವರಿಗಿರುತ್ತದೆ. ಹಾಗಾಗಿ, ಇವರ ಸುತ್ತ ಜನರಿರಲು ಬಯಸುತ್ತಾರೆ. ಕೆಟ್ಟ ಮೂಡ್‌ನಿಂದ ಬೇಗ ಹೊರ ಬರುವ ಇವರು ಇನ್ನೊಬ್ಬರ ಮೂಡನ್ನು ಕೂಡಾ ಸರಿ ಮಾಡಬಲ್ಲರು. ಇರುವುದೊಂದು ಜೀವನ, ಸಂತೋಷವಾಗಿ ಕಳೆಯಬೇಕು ಎಂಬುದು ಇವರ ಮನಸ್ಥಿತಿಯಾಗಿದೆ. 

ಸಿಂಹ(Leo)
ಸದಾ ಕಾಲ ಪಾಸಿಟಿವಿಟಿಗಾಗಿ ಹಂಬಲಿಸುವವರು ಸಿಂಹ ರಾಶಿಯವರು. ಎಂಥದೇ ಪರಿಸ್ಥಿತಿ ಇರಲಿ- ಆಗುವುದೆಲ್ಲ ಒಳ್ಳೆಯದಕ್ಕೇ ಎಂದೋ, ಮುಂದೆ ಒಳ್ಳೆಯ ದಿನಗಳಿವೆ ಎಂದೋ ಭಾವಿಸುವ ಸ್ವಭಾವ ಇವರದು. ಪ್ರತಿ ಸಂದರ್ಭದಲ್ಲಿ ಸಕಾರಾತ್ಮಕ ವಿಷಯವನ್ನು ಹೆಕ್ಕಬಲ್ಲವರು ಇವರು. ಜೀವನದಿಂದ ಮ್ಯಾಜಿಕ್ ಮಾಡಿ ದುಃಖ ತೆಗೆಯಲಾಗುವುದಿಲ್ಲ ಎಂಬುದು ಗೊತ್ತಿದ್ದರೂ, ಸಂತೋಷವಾಗಿ ಇರಬಲ್ಲವರು ಸಿಂಹ ರಾಶಿಯವರು. 

ರಾಶಿಗನುಗುಣವಾಗಿ Akshaya Tritiyaದಂದು ಈ ಲೋಹ ಖರೀದಿಸಿ ಅದೃಷ್ಟ ಹೆಚ್ಚಿಸಿಕೊಳ್ಳಿ..

ತುಲಾ(Libra)
ತುಲಾ ರಾಶಿಯವರು ಸದ್ಗುಣ ಸಂಪನ್ನರು. ಯಾರಿಗೂ ನೋವು ಬಯಸದವರು. ಜೀವನ ಹೇಗೆ ಬರುತ್ತದೆಯೋ ಹಾಗೆ ಒಪ್ಪಿಕೊಂಡು ಮುನ್ನಡೆಯುವವರು. ವಿವಾದಗಳೆಂದರೆ ಇವರಿಗೆ ಇಷ್ಟವಿಲ್ಲ. ವಿವಾದಗಳು, ವಾದ, ವಾಗ್ವಾದಗಳಿಂದ ಸದಾ ದೂರ ಉಳಿಯಲು ಬಯಸುವ ಇವರು ಎಲ್ಲರೊಂದಿಗೆ ಸಾಧುವಾಗಿ ಇರುತ್ತಾರೆ. ಎಲ್ಲರೊಂದಿಗೆ ಗೆಳೆಯಾರಾಗಿ ಇರುವ ಇವರು ಇಂಥ ಸರಳ ಜೀವನದಲ್ಲೇ ಸಂತೋಷ ಕಾಣುತ್ತಾರೆ. ಸಂತೋಷವಾಗಿರಲು ಕಾರಣಗಳು ಬೇಕಿಲ್ಲ. 

ಧನು(Sagittarius)
ಎಲ್ಲ ರಾಶಿಗಳಲ್ಲೇ ಅತಿ ಹೆಚ್ಚು ಸಂತೋಷವಾಗಿರುವ ರಾಶಿಯೆಂದರೆ ಧನು ರಾಶಿ. ಇದಕ್ಕೆ ಕಾರಣ ಇವರು ಹುಟ್ಟಾ ಸ್ವಾತಂತ್ರ್ಯ ಹಾಗೂ ಸಾಹಸ ಪ್ರಿಯರು. ಅವರು ಸ್ವತಂತ್ರವಾಗಿರುವುದರಲ್ಲಿ, ಸಾಹಸಗಳಲ್ಲಿ, ಸ್ವಾವಲಂಬಿಯಾಗುವುದರಲ್ಲಿ ಸಂತೋಷ ಕಾಣುತ್ತಾರೆ. ಯಾವುದಾದರೂ ದುಃಖದ ವಿಷಯ ಎದುರಾಗಲೂ ಇವರ ತಿರುಗಾಟದ ಚಟ, ಸ್ವತಂತ್ರ ಪ್ರಿಯತೆಯೇ ಸಂತೋಷವನ್ನು ಹುಡುಕಿಕೊಡುತ್ತದೆ. ಜಗತ್ತಿನಲ್ಲಿ ಏನೇ ಆದರೂ ಸಾಮಾನ್ಯವಾಗಿ ಸಂತೋಷವಾಗಿಯೇ ಇರುವವರು ಇವರು. 

ಈ ನಾಲ್ಕು ರಾಶಿಗಳ ಜನ ತಮ್ಮ ಆರೋಗ್ಯ ಲೆಕ್ಕಿಸದೆ ಇತರರನ್ನು ಕಾಳಜಿ ಮಾಡ್ತಾರೆ!

ಮೀನ(Pisces)
ಈ ರಾಶಿಯವರು ಅತಿ ಭಾವುಕರು. ಇವರು ಅಳುವುದು ಹೆಚ್ಚು. ಏನೇ ದುಃಖವಾದರೂ ಅತ್ತು ಮನಸ್ಸನ್ನು ಹಗುರಾಗಿಸಿಕೊಂಡು ಬಿಡುತ್ತಾರೆ. ಇದರಿಂದ ಬೇಗ ದುಃಖ ಮರೆತು ಸಂತೋಷವಾಗಿರಬಲ್ಲರು. ಆ ರೀತಿಯಲ್ಲಿ ಇವರು ಉಳಿದ ರಾಶಿಗಳಿಗಿಂತ ವಿಭಿನ್ನವಾಗಿದ್ದಾರೆ. ತಮ್ಮ ಭಾವನೆಗಳನ್ನು ಹತ್ತಿಕ್ಕದೆ ಹೊರ ಬಿಡುವುದು ಇವರಿಗೆ ಗೊತ್ತು. ಅಳುವುದರಿಂದ, ಹೇಳಿಕೊಳ್ಳುವುದರಿಂದ ಬೇಗ ಸಮಾಧಾನ ಹೊಂದಿ ಸಂತೋಷವಾಗಿರುತ್ತಾರೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios