Second Marriage: 40 ರ ನಂತರದ 2 ನೇ ಮದುವೆಯಿಂದ ಏನನ್ನು ನಿರೀಕ್ಷಿಸಬಹುದು?
ಮೊದಲ ಮದುವೆ ಯಶಸ್ವಿಯಾಗದವರಿಗೆ ಎರಡನೇ ಮದುವೆಯ (second marriage) ಬಗ್ಗೆ ಎರಡನೇ ಆಲೋಚನೆಗಳನ್ನು ಹೊಂದಿರುತ್ತಾರೆ, ವಿಶೇಷವಾಗಿ 40 ವರ್ಷ ವಯಸ್ಸಿನ ನಂತರ. ಆದರೆ ಅದು ನಿಮ್ಮನ್ನು ಹೆದರಿಸಲು ಬಿಡಬೇಡಿ. ಎರಡನೇ ಮದುವೆಯಲ್ಲಿ ನಿಮ್ಮ ಸಂತೋಷ ಕಂಡುಕೊಳ್ಳುವುದು 40 ರ ಹರೆಯದಲ್ಲಿ ಸಂಪೂರ್ಣವಾಗಿ ಸಾಧ್ಯ ಮತ್ತು ಅದ್ಭುತವಾಗಿದೆ!

ಎರಡನೇ ಮದುವೆ ಎಂಬ ಹೊಸ ಪ್ರಯಾಣವನ್ನು ಉತ್ತಮವಾಗಿ ನ್ಯಾವಿಗೇಟ್ ಮಾಡಲು ಸಹಾಯ ಮಾಡಲು, 40 ರ ನಂತರ ಎರಡನೇ ಮದುವೆಯಿಂದ ನಿರೀಕ್ಷಿಸಬಹುದಾದ ಕೆಲವು ವಿಷಯಗಳನ್ನು ಪಟ್ಟಿ ಮಾಡಿದ್ದೇವೆ. ಅವುಗಳನ್ನು ನೀವು ಅರ್ಥ ಮಾಡಿಕೊಂಡರೆ ಎರಡನೇ ಮದುವೆಯ ಜೀವನ ಉತ್ತಮವಾಗಿರುತ್ತದೆ.
ಹೋಲಿಕೆಗಳು: ಹೊಸ ಸಂಗಾತಿಯನ್ನು (new partner) ಹಳೆಯ ಸಂಗಾತಿಗೆ ಹೋಲಿಸುವುದನ್ನು ನೀವು ಕಾಣಬಹುದು. ಆದಾಗ್ಯೂ, ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನವಾಗಿರುತ್ತಾರೆ ಎಂದು ತಿಳಿಯಿರಿ ಮತ್ತು ನಿಮ್ಮ ಹೊಸ ಸಂಗಾತಿಯು ಮೊದಲಿನವರಿಗಿಂತ ಸಂಪೂರ್ಣವಾಗಿ ಭಿನ್ನವಾಗಿರಬಹುದು, ಧನಾತ್ಮಕ ರೀತಿಯಲ್ಲಿ ಯೋಚನೆ ಮಾಡಿ.
ಜವಾಬ್ದಾರಿಗಳು : ನಿಮ್ಮ ಮದುವೆಯು ಇನ್ನು ಮುಂದೆ ಯುವ ಮತ್ತು ಸ್ವಾಭಾವಿಕವಾಗಿರುವುದಿಲ್ಲ. ನಿಮ್ಮ ಕ್ರಿಯೆಗಳ ಬಗ್ಗೆ ಅಜಾಗರೂಕರಾಗಿರಬಾರದು. ನೀವು ಯೋಚಿಸುವ ಮತ್ತು ಮಾಡುವದಕ್ಕೆ ನೀವು ಜವಾಬ್ದಾರಿಯನ್ನು (responsibility) ತೆಗೆದುಕೊಳ್ಳಬೇಕಾಗುತ್ತದೆ. ಈಗ ಯಶಸ್ವಿ ದಾಂಪತ್ಯವನ್ನು ಹೊಂದಲು ಅವಕಾಶವಿದೆ, ಅದನ್ನು ಸ್ವೀಕರಿಸಿ.
ಸಂಗಾತಿ ಜೊತೆ ಮಾತನಾಡಿ : ನಿಮ್ಮ 40 ರ ಪ್ರಾಯದಲ್ಲಿ, ಪ್ರಾಮಾಣಿಕತೆಯನ್ನು ಬಲವಾಗಿ ಪ್ರತಿಪಾದಿಸಬಹುದು ಆದರೆ ನಿಮ್ಮ ಸಂಗಾತಿಯ ಮುಂದೆ ನಿಮ್ಮ ಮಾತುಗಳನ್ನು ತುಂಬ ಸ್ಟ್ರೈಟ್ ಫಾರ್ವರ್ಡ್ (straight forward)ಆಗಿ ಹೇಳುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ದಾಂಪತ್ಯದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಸಂಗಾತಿಯೊಂದಿಗೆ ಶಾಂತವಾಗಿ ಮಾತನಾಡಿ.
ವ್ಯತ್ಯಾಸಗಳು: ಇಬ್ಬರ ಅಭಿಪ್ರಾಯಗಳು, ದೃಷ್ಟಿಕೋನಗಳು ಮತ್ತು ಆದ್ಯತೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಆದರೆ ಇದು ನಿಮ್ಮ ಬಂಧ ಮತ್ತು ದಾಂಪತ್ಯವನ್ನು ಗಟ್ಟಿಗೊಳಿಸುತ್ತದೆ. ಮತ್ತು ಆದ್ದರಿಂದ, ಈ ವ್ಯತ್ಯಾಸಗಳನ್ನು ಸೆಲೆಬ್ರೇಟ್ ಮಾಡುವ ಅಗತ್ಯವಿದೆ!
ರಾಜಿ ಮಾಡಿಕೊಳ್ಳುವುದು : ಮದುವೆಯಲ್ಲಿ ಒಂದು ಅಥವಾ ಎರಡು ರಾಜಿ ಮಾಡಿಕೊಳ್ಳಬೇಕಾದರೆ ಪರವಾಗಿಲ್ಲ. ನೀವು ಮತ್ತು ನಿಮ್ಮ ಸಂಗಾತಿಯು (partner) ಯಾವುದೇ ಸಮಸ್ಯೆಗಳ ಬಗ್ಗೆ ವಾದಿಸಿದರೆ ಮತ್ತು ಜಗಳವಾಡಿದರೆ, ಪರಸ್ಪರ ಕ್ಷಮಿಸುವ ಮೂಲಕ ಸಮಸ್ಯೆ ಬಗೆಹರಿಸಿ. ಇದರಿಂದ ದಾಂಪತ್ಯ ಉತ್ತಮವಾಗಿರುತ್ತದೆ.
ಲೈಂಗಿಕತೆಯ ಬಗ್ಗೆ ಮಾತನಾಡುವುದು : ನಲವತ್ತರ ಬಳಿಕ ಲೈಂಗಿಕ ಆಸಕ್ತಿಗಳು ಕೆಲವೊಮ್ಮೆ ಕಡಿಮೆಯಾಗಿಯೂ ಇರಬಹುದು. ಆದುದರಿಂದ ಈ ಬಗ್ಗೆ ಸಂಗಾತಿ ಜೊತೆಯಾಗಿ ಕುಳಿತು ಮಾತನಾಡಿಕೊಂಡರೆ, ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.