ಗೆಸ್ಟ್ ಬರೋ ಮುನ್ನ ಮಿಡಲ್ ಕ್ಲಾಸ್ ಫ್ಯಾಮಿಲಿ ಮಾಡುತ್ತೆ ಈ ಕೆಲ್ಸ, ನೀವೂ ಮಾಡ್ತೀರಿ ಅಲ್ವಾ?
House Cleaning Before Guests ; ಅತಿಥಿ ದೇವೋ ಭವ ಎನ್ನುವ ಸಂಸ್ಕೃತಿ ನಮ್ಮದು. ಅತಿಥಿಗಳು ಮನೆಗೆ ಬಂದಾಗ ಅವರು ಆರಾಮವಾಗಿ ಇರಬೇಕು ಎಂಬ ಉದ್ದೇಶದಿಂದ ಮಿಡಲ್ ಕ್ಲಾಸ್ ಕುಟುಂಬಗಳು ಸಣ್ಣ ಸಣ್ಣ ಸಿದ್ಧತೆಗಳನ್ನು ಮಾಡುತ್ತವೆ. ಇವು ಮನೆಯ ಸ್ವಚ್ಛತೆಯನ್ನು ಮಾತ್ರವಲ್ಲ, ಮನೆಯವರ ಆತಿಥ್ಯವನ್ನೂ ತೋರಿಸುತ್ತವೆ.

ಖಾಲಿಯಾಗುತ್ತೆ ಕಸದ ಬುಟ್ಟಿ
ಮನೆಯ ಕಸದ ಬುಟ್ಟಿಯನ್ನು ಕುಟುಂಬಸ್ಥರು ಚೆಕ್ ಮಾಡ್ತಾರೆ. ಸಾಮಾನ್ಯವಾಗಿ ಕಸ ತುಂಬಿದ್ರೆ ಮನೆ ತುಂಬಾ ವಾಸನೆ ಬರ್ತಿರುತ್ತೆ. ಇದು ಮುಜುಗರ ತರಿಸ್ಬಾರದು ಅಂತ ಗೆಸ್ಟ್ ಬರೋ ಮುನ್ನ ಕಸದ ಬುಟ್ಟಿಯನ್ನು ಖಾಲಿ ಮಾಡ್ತಾರೆ.
ಕ್ಲೀನ್ ಸಿಂಕ್
ಬಹುತೇಕ ಮಿಡಲ್ ಕ್ಲಾಸ್ ಫ್ಯಾಮಿಲಿ ಜನರು ಗೆಸ್ಟ್ ಬರೋ ಟೈಂನಲ್ಲಿ ಸಿಂಕ್ ತುಂಬಾ ಪಾತ್ರೆ ಇಡೋಕೆ ಇಷ್ಟಪಡೋದಿಲ್ಲ. ಅಡುಗೆಮನೆಯ ಸಿಂಕ್ ತುಂಬಾ ಪಾತ್ರೆಗಳಿಂದ ತುಂಬಿದ್ರೆ ಅಡುಗೆ ಮನೆ ಚೆನ್ನಾಗಿ ಕಾಣೋದಿಲ್ಲ ಎನ್ನುವ ಭಾವನೆ ಇದೆ. ಹಾಗಾಗಿ ಅವರು ಬರ್ತಾರೆ ಅನ್ನೋ ಸುಳಿವು ಸಿಗ್ತಿದ್ದಂತೆ ಸಿಂಕ್ ಖಾಲಿ ಆಗಿರುತ್ತೆ.
ಮನೆ ಕ್ಲೀನಿಂಗ್
ಅಲ್ಲಿ ಇಲ್ಲಿ ಅಸ್ತವ್ಯಸ್ಥವಾಗಿ ಬಿದಿದ್ದ ಮನೆಯ ವಸ್ತುಗಳನ್ನು ಮೊದಲು ಕ್ಲೀನ್ ಮಾಡುವ ಕೆಲಸ ಮನೆಯವರದ್ದು. ವಸ್ತುಗಳನ್ನು ಸರಿಯಾಗಿ ಜೋಡಿಸಿ, ಮನೆ ಕ್ಲೀನ್ ಮಾಡೋಕೆ ಪೊರಕೆ ಹಿಡಿದಿರ್ತಾರೆ.
ಹೊಳೆಯುವ ಬಾತ್ರೂಮ್
ಬಾತ್ ರೂಮ್ ನೋಡಿದ್ರೆ ಸಾಕು, ಇಡೀ ಮನೆ ಹೇಗಿದೆ ಹೇಳ್ಬಹುದು ಎನ್ನುವ ಒಂದು ಮಾತಿದೆ. ಬಾತ್ ರೂಮ್ ಕೊಳಕಾಗಿದ್ರೆ ಕಳಂಕ ಬರುತ್ತೆ. ಹಾಗಾಗಿ ಅದೆಷ್ಟೇ ಕಷ್ಟ ಆದ್ರೂ ಗೆಸ್ಟ್ ಬಳಸುವ ಬಾತ್ರೂಮ್ ಕ್ಲೀನ್ ಮಾಡ್ತಾರೆ ಮನೆಯವರು. ಟಾಯ್ಲೆಟ್, ವಾಶ್ಬೇಸಿನ್ ಮತ್ತು ಫ್ಲೋರ್ ಚೆನ್ನಾಗಿ ತೊಳೆದು, ಅಗತ್ಯ ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸುತ್ತಾರೆ.
ಸೋಫಾಗೆ ಹೊಸ ಲುಕ್
ಸೋಫಾದ ಧೂಳು ತೆಗೆಯುವುದು, ಕುಶನ್ಗಳನ್ನು ಸರಿಪಡಿಸುವುದು, ಅಗತ್ಯವಿದ್ದರೆ ಹೊಸ ಕವರ್ ಹಾಕುವುದು ಇದು ಬಹುತೇಕ ಎಲ್ಲ ಮನೆಗಳಲ್ಲೂ ನಡೆಯುವ ಕೆಲಸ.
ಕುರ್ಚಿ ವ್ಯವಸ್ಥೆ
ಅತಿಥಿಗಳು ಆರಾಮವಾಗಿ ಕುಳಿತು ಮಾತನಾಡುವಂತೆ ಕುರ್ಚಿ, ಟೇಬಲ್ ಮತ್ತು ಇತರ ಪೀಠೋಪಕರಣಗಳನ್ನು ಸರಿಯಾಗಿ ಜೋಡಿಸಲಾಗುತ್ತದೆ. ಕೊಳೆಯಾಗಿದ್ರೆ ಅದನ್ನು ಕ್ಲೀನ್ ಮಾಡುವ ಕೆಲಸ ನಡೆಯುತ್ತದೆ.
ಕರ್ಟನ್ ಬದಲಾವಣೆ
ಕೊಳಕಾದ ಕರ್ಟನ್ ಮನೆಯ ಅಂದವನ್ನು ಕಡಿಮೆ ಮಾಡುತ್ತವೆ. ಆದ್ದರಿಂದ ಸ್ವಚ್ಛವಾದ ಅಥವಾ ಹೊಸ ಕರ್ಟನ್ ಹಾಕಿ ಮನೆಗೆ ಹೊಸ ಮೆರುಗು ನೀಡುತ್ತಾರೆ.
ಅಡುಗೆ ಮನೆ ಕ್ಲೀನಿಂಗ್
ಅಡುಗೆ ಮನೆ ಕ್ಲೀನಿಂಗ್ ಕೂಡ ಒಂದ್ಕಡೆ ನಡೆಯುತ್ತದೆ. ಅಡುಗೆ ಮನೆ ಸ್ವಚ್ಛವಾಗಿದ್ರೆ ನೋಡೋಕೆ ಚೆಂದ. ಗೆಸ್ಟ್ ಖುಷಿಯಿಂದ ಊಟ ಮಾಡಿ ಹೋಗ್ತಾರೆ. ಅಡುಗೆ ಮನೆ ಕೊಳಕಿದ್ರೆ ತಿನ್ನೋ ಮನಸ್ಸಾಗೋದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
