ವ್ಯಾಲೆಂಟೈನ್ಸ್ ಡೇಯಂದು ಪ್ರೇಮಿಗೆ ಈ ಗಿಪ್ಟ್ ಕೊಡಬೇಡಿ, ಸಂಬಂಧದಲ್ಲಿ ಬಿರುಕು ಬಿಡುತ್ತೆ
ಲವ್ ವೀಕ್ ಇನ್ನೂ ನಡೆಯುತ್ತಿದೆ. ಫೆಬ್ರವರಿ 7 ರಿಂದ ಫೆಬ್ರವರಿ 14ರವರೆಗೆ ಪರಸ್ಪರ ಪ್ರೀತಿಸುತ್ತಿರುವವರು ವಿಶೇಷ ಅನುಭವ ಪಡೆಯಲು ಉಡುಗೊರೆ ನೀಡುತ್ತಾರೆ. ಆದರೆ ಸಂಗಾತಿಗೆ ಉಡುಗೊರೆ ನೀಡುವಾಗ ತುಂಬಾ ಯೋಚನೆ ಮಾಡಬೇಕು. ಇಲ್ಲದಿಂದರೆ ಜಗಳ ಆಗುತ್ತೆ ಅನ್ನೋದು ತಿಳಿದಿದೆಯೇ? ಹೌದು ಸಂಗಾತಿಗೆ ನೀಡುವಂತಹ ಕೆಲವೊಂದು ಉಡುಗೊರೆ ಅಪಾಯಕಾರಿ. ಅಂತಹ ಉಡುಗೊರೆ ನೀಡಿದರೆ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.
ಹೌದು ವಾಸ್ತು ಶಾಸ್ತ್ರದ ಪ್ರಕಾರ, ಸಂಗಾತಿಗೆ ಕೊಡುವ ಕೆಲವೊಂದು ಗಿಪ್ಟ್ ಮುಂದೆ ಒಬ್ಬರ ನಡುವೆ ಕಲಹಕ್ಕೆ ಕಾರಣವಾಗುತ್ತದೆ ಎನ್ನುತ್ತದೆ ವಾಸ್ತು. ಈ ಉಡುಗೊರೆಗಳು ಪ್ರೀತಿಯನ್ನು ಹೆಚ್ಚಿಸುವ ಬದಲು ಕಹಿಯನ್ನು ತರುತ್ತವೆ. ಇಂದು ವ್ಯಾಲೆಂಟೈನ್ಸ್ ಡೇಯಂದು ಏನನ್ನು ಉಡುಗೊರೆ ಮಾಡಬಾರದು ಎಂಬುದರ ಕುರಿತು ಮಾಹಿತಿ ಇಲ್ಲಿ. ಇದನ್ನು ಮರೆಯದೆ ನೆನಪಿಟ್ಟುಕೊಂಡಿರಿ.
ವ್ಯಾಲೆಂಟೈನ್ಸ್ ಡೇಯಂದು ಸಂಗಾತಿಗೆ ಉಡುಗೊರೆಯನ್ನು ಆಯ್ಕೆ ಮಾಡುವ ಮುನ್ನ ಎಚ್ಚರಿಕೆ ಅಗತ್ಯ. ವಾಸ್ತು ಶಾಸ್ತ್ರದ ಪ್ರಕಾರ, ಸಂಗಾತಿಗಳ ನಡುವೆ ಯುದ್ಧ ನಡೆಯುವಂತೆ ಮಾಡುವ ಕೆಲವು ವಸ್ತುಗಳು ಉಡುಗೊರೆಗಳನ್ನು ನೀಡುವುದ ತಪ್ಪಿಸಬೇಕು.
ಈ ಪಟ್ಟಿಯಲ್ಲಿ ಮೊದಲ ಹೆಸರು ಬರುವುದು ಕರ್ಚೀಫ್. ಹೌದು, ಸಂಗಾತಿಗೆ ಎಂದಿಗೂ ಕರ್ಚೀಫ್ ಉಡುಗೊರೆಯನ್ನು ನೀಡಬಾರದು. ಇದರಿಂದ ಜೋಡಿಗಳ ನಡುವೆ ಪ್ರಣಯ ಮಾಯವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಕರ್ಚೀಫ್ ತುಂಬಾ ಅಪಾಯಕಾರಿ. ಸಿನಿಮಾಗಳಲ್ಲಿ ನಾಯಕಿ ನಾಯಕನಿಗೆ ಈ ಗಿಫ್ಟ್ ನೀಡಿದರೂ, ನಿಜ ಜೀವನದಲ್ಲಿ ಅದನ್ನು ಮಾಡಬೇಡಿ. ಇದು ಇಬ್ಬರ ನಡುವಿನ ಜಗಳವನ್ನು ಹೆಚ್ಚಿಸುತ್ತದೆ.
ಕೆಲವೊಮ್ಮೆ ಜನರು ತಮ್ಮ ಸಂಗಾತಿಗೆ ಫುಟ್ ವೇರ್‌ಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಇದನ್ನು ತಪ್ಪಿಸಬೇಕು. ಉಡುಗೊರೆ ನೀಡುವ ಶೂಗಳು ದಂಪತಿ ನಡುವೆ ಅಂತರ ಹೆಚ್ಚಿಸಬಹುದು. ಈ ಉಡುಗೊರೆ ಬಂಧವನ್ನು ಗಟ್ಟಿಗೊಳಿಸುವ ಬದಲು ಹಾಳು ಮಾಡಬಹುದು. ಸಂಗಾತಿಗೆ ಎಂದಿಗೂ ಶೂಗಳನ್ನು ಉಡುಗೊರೆಯಾಗಿ ನೀಡಬೇಡಿ.
ಜೋಡಿಗಳು ತಮ್ಮ ಪ್ರೇಮಿಗೆ ನೆನಪಿನ ಕಾಣಿಕೆಯಾಗಿ ಸುಂದರ ಮೂರ್ತಿ ಅಥವಾ ವರ್ಣಚಿತ್ರಗಳನ್ನು ಉಡುಗೊರೆಯಾಗಿ ಕೊಡುತ್ತಾರೆ. ಈ ಅಂಶಗಳನ್ನು ನೋಡಿ ಸಂಗಾತಿ ಅವರನ್ನು ನೆನಪಿಸಿಕೊಳ್ಳಬಹುದೆಂದುಕೊಳ್ಳುತ್ತಾರೆ. ಆದರೆ, ಈ ಬಗ್ಗೆ ಎಚ್ಚರವಹಿಸುವುದು ಅಗತ್ಯ.
ಸಂಗಾತಿಗೆ ಮುಳುಗುವ ಹಡಗಿನ ಚಿತ್ರ ನೀಡಬೇಡಿ. ಇದು ಆರ್ಥಿಕ ನಷ್ಟ ಅಥವಾ ಪ್ರಗತಿಗೆ ಅಡ್ಡಿಯಾಗಬಹುದು. ಇದು ಸಂಬಂಧವನ್ನು ಹಾಳು ಮಾಡುತ್ತದೆ. ಪ್ರೀತಿ ಹೆಚ್ಚ ಬೇಕಾದರೆ ಪ್ರೀತಿಯ ಸಂಕೇತವಾದ ವಸ್ತುಗಳನ್ನು ಉಡುಗೊರೆಯನ್ನಾಗಿ ನೀಡಿ.
ಇನ್ನು ಜೋಡಿಗಳು ಪ್ರೀತಿಯನ್ನು ವ್ಯಕ್ತ ಪಡಿಸಲು ಸಂಗಾತಿಗೆ ಕೈ ಗಡಿಯಾರವನ್ನು ಉಡುಗೊರೆಯಾಗಿ ನೀಡುತ್ತಾರೆ. ಇದು ತುಂಬಾ ಸುಲಭ ಮತ್ತು ಒಳ್ಳೆಯ ಆಯ್ಕೆಎಂದು ತೋರುತ್ತದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಸಂಗಾತಿಗೆ ಕೈ ಗಡಿಯಾರದ ಉಡುಗೊರೆ ಮಾಡಬಾರದು.
ಕೈಗಡಿಯಾರವು ಜೀವನದ ಪ್ರಗತಿಯನ್ನು ನಿಲ್ಲಿಸುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ಸಂಗಾತಿಗೆ ಉಡುಗೊರೆಯಾಗಿ ನೀಡಿದರೆ ಇಬ್ಬರ ನಡುವಿನ ಪ್ರೀತಿಯ ಹಾಗೆ ಸ್ಥಬ್ದವಾಗುತ್ತದೆ. ಇಬ್ಬರ ನಡುವೆ ಜೊತೆ ಕಲಹ ಉಂಟಾಗುತ್ತದೆ.
ಇದರ ಜೊತೆಗೆ ಸಂಗಾತಿಗೆ ಕಪ್ಪು ಬಣ್ಣದ ಯಾವುದೇ ವಸ್ತುವನ್ನು ಎಂದಿಗೂ ಉಡುಗೊರೆಯಾಗಿ ನೀಡಬೇಡಿ. ಬಟ್ಟೆಯಾಗಲೀ, ಪರ್ಸ್ ಆಗಲಿ ನೀಡಬಾರದು. ಕಪ್ಪು ಬಣ್ಣವು ಉಡುಗೊರೆಯ ಭಾಗವಾಗ ಬಾರದು. ಹಿಂದೂ ಧರ್ಮದಲ್ಲಿ ಒಳ್ಳೆಯ ಕೆಲಸಗಳಲ್ಲಿ ಕಪ್ಪು ಬಣ್ಣವನ್ನು ನಿಷೇಧಿಸಲಾಗಿದೆ. ಆದುದರಿಂದ ಪ್ರೀತಿಯಲ್ಲೂ ಇದು ಅಪಾಯಕಾರಿಯಾಗಿದೆ.
ಇವಿಷ್ಟನ್ನು ನೆನಪಿನಲ್ಲಿಲ್ಲಿಡಿ.... ಇನ್ನೇನು ವ್ಯಾಲೆಂಟೈನ್ಸ್ ಡೇ ಬಂದೇ ಬಿಟ್ಟಿತು... ಆ ಖುಶಿಯಲ್ಲಿ ಈ ವಸ್ತುಗಳನ್ನು ಸಂಗಾತಿಗೆ ಗಿಫ್ಟ್ ಆಗಿ ನೀಡಿ ಪ್ರೀತಿಯನ್ನು ಕಳೆದುಕೊಳ್ಳಬೇಡಿ ಎಚ್ಚರ...