ಪತಿ-ಪತ್ನಿ ಮಧ್ಯೆ ರೊಮ್ಯಾನ್ಸ್ ಕಾಣೆಯಾಗಿದ್ಯಾ? ಮತ್ತೆ ಯೋಚ್ನೆ ಮಾಡಿ…
ವೈವಾಹಿಕ ಜೀವನದಲ್ಲಿ ಕೆಲವೊಮ್ಮೆ ಏನಾಗುತ್ತೆ ಅಂದ್ರೆ, ಕೆಲವು ಸಣ್ಣ ವಿಷಯಗಳು ಯಾವಾಗ ದೊಡ್ಡದಾಗುತ್ತವೆ ಅನ್ನೋದೆ ಗೊತ್ತಾಗೋದಿಲ್ಲ. ನಿಮ್ಮ ವೈವಾಹಿಕ ಜೀವನದಲ್ಲಿ ನೀವು ನಿರ್ಲಕ್ಷಿಸುತ್ತಿರುವ ಕೆಲವು ವಿಷಯಗಳು ಇದ್ದರೆ, ನೀವು ನಿಮ್ಮ ತಪ್ಪನ್ನು ಸರಿಪಡಿಸಿಕೊಳ್ಳಬೇಕು, ಇಲ್ಲದಿದ್ದರೆ ಎಲ್ಲಾ ಮುಗಿದು, ನೀವು ಅಳೋದಂತೂ ಖಂಡಿತಾ.

ಪ್ರತಿ ವೈವಾಹಿಕ ಜೀವನದಲ್ಲಿ (married life) ಏರಿಳಿತಗಳಿವೆ ಎಂಬುದರಲ್ಲಿ ಸಂದೇಹವಿಲ್ಲ. ನಿಮ್ಮ ಜೀವನದುದ್ದಕ್ಕೂ ನೀವು ಪರಸ್ಪರ ಬೆಂಬಲಿಸುವ ಭರವಸೆ ನೀಡಿದಾಗ, ನೀವು ಅನೇಕ ವಿಷಯಗಳನ್ನು ಸರಿ ಹೊಂದಿಸುವ ಅಥವಾ ನಿರ್ವಹಿಸುವ ಗುಣಗಳನ್ನು ಕಲಿಯಬೇಕು. ಕೆಲವೊಮ್ಮೆ ನಮಗೆ ಸಣ್ಣದೆಂದು ತೋರಿದ ವಿಷಯಗಳು ಸಹ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತೆ. ನಿಮ್ಮ ವೈವಾಹಿಕ ಜೀವನದ (Marital Life) ಸಣ್ಣ ವಿಷಯಗಳಿಂದಲೂ ಸುಖಮಯ ಜೀವನ ಹಾಳಾಗೋ ಸಾಧ್ಯತೆ ಇರುತ್ತೆ. ಅನೇಕ ಬಾರಿ ಕೆಲಸದ ಒತ್ತಡದಿಂದಾಗಿ, ಪ್ರೀತಿ ಇದ್ದರೂ ಸಹ, ನಿಮ್ಮ ಮತ್ತು ಸಂಗಾತಿಯ ನಡುವಿನ ಅಂತರವು ಹೆಚ್ಚಾಗುತ್ತೆ. ಇದರಿಂದಾ ಇಬ್ರೂ ಯಾಂತ್ರಿಕ ಜೀವನ ನಡೆಸಬೇಕಾಗುತ್ತೆ.
ನೀವು ನಿಮ್ಮ ಸಂಗಾತಿ ಜೊತೆ ರೊಮ್ಯಾಂಟಿಕ್ (romantic) ಆಗಿರೋ, ಸುಂದರವಾದ ವೈವಾಹಿಕ ಜೀವನ ನಡೆಸಲು ಇಷ್ಟ ಪಡ್ತೀರಾ? ಹಾಗಿದ್ರೆ ಖಂಡಿತವಾಗಿಯೂ ಈ ತಪ್ಪುಗಳನ್ನು ಮಾಡುವುದನ್ನು ತಪ್ಪಿಸಿ. ಈ ಸಣ್ಣ ತಪ್ಪುಗಳನ್ನು ಇಗ್ನೋರ್ ಮಾಡೊದನ್ನು ತಪ್ಪಿಸಿದ್ರೆ ಖಂಡಿತವಾಗಿಯೂ ಸುಖ ಸಂಸಾರ ನಿಮ್ಮದಾಗುತ್ತೆ.
ಭಾವನಾತ್ಮಕ ಕನೆಕ್ಟ್ ಆಗಿರದೇ ಇರೋದು
ವರ್ಷಗಳ ಕಾಲ ಒಟ್ಟಿಗೆ ಇರೋದ್ರಿಂದ ಗಂಡ ಮತ್ತು ಹೆಂಡತಿಯ ನಡುವೆ ಸಾಕಷ್ಟು ಭಾವನಾತ್ಮಕ ಸಂಬಂಧ (emotional relationship) ಬೆಳೆಯುತ್ತೆ. ನೀವು ಭಾವನಾತ್ಮಕವಾಗಿ ಪರಸ್ಪರ ಅವಲಂಬಿತರಾಗಲು ಪ್ರಾರಂಭಿಸುತ್ತೀರಿ. ಇದರಿಂದ ಇಬ್ಬರ ನಡುವೆ ಎಲ್ಲಾನೂ ಚೆನ್ನಾಗಿಯೇ ಇರುತ್ತೆ. ಆದರೆ ನಿಮ್ಮ ಸಂಗಾತಿಯಲ್ಲಿ ಹಠಾತ್ ಬದಲಾವಣೆ ಕಂಡು ಬಂದರೆ ಮತ್ತು ಕೆಲಸದ ಕಾರಣದಿಂದಾಗಿ ಅವರು ನಿಮ್ಮಿಂದ ದೂರವಿದ್ದರೆ, ಇಬ್ಬರ ನಡುವೆ ಅಂತರ ಉಂಟಾಗುತ್ತೆ.
ನಿಮಗೆ ಅಗತ್ಯವಿದ್ದಾಗ ಅವರು ನಿಮ್ಮ ಜೊತೆ ಇಲ್ಲದೇ ಇದ್ದಾಗ ನೀವು ಜಾಗರೂಕರಾಗಿರಬೇಕು. ಕೆಲವೊಮ್ಮೆ ಈ ರೀತಿಯಾದರೆ ಪರವಾಗಿಲ್ಲ, ಆದರೆ ಸಂಗಾತಿಯ ಈ ರೀತಿಯ ನಡವಳಿಕೆಯು ನಿರಂತರವಾಗಿ ನಿಮ್ಮಿಬ್ಬರ ನಡುವೆ ಅಂತರ (gap between couple) ಸೃಷ್ಟಿಸುತ್ತಿದ್ದರೆ. ಅದನ್ನು ನಿರ್ಲಕ್ಷಿಸುವ ಬದಲು, ನೀವು ತಕ್ಷಣ ನಿಮ್ಮ ಸಂಗಾತಿಯೊಂದಿಗೆ ಈ ಬಗ್ಗೆ ಮಾತನಾಡಬೇಕು.
ಯಾವುದೋ ಕೋಪವನ್ನು ಸಂಗಾತಿಯ ಮೇಲೆ ತೀರಿಸಬೇಡಿ
ಈ ದಿನಗಳಲ್ಲಿ ನಮ್ಮ ಲೈಫ್ ಸ್ಟೈಲ್ ಹೇಗಿರುತ್ತೆ ಅಂದ್ರೆ, ಅನೇಕ ಬಾರಿ ನೀವು ನಿಮ್ಮ ಕೆಲಸದ ಕೋಪವನ್ನು ಸಂಗಾತಿಯ (angry on partner) ಮೇಲೆ ತೀರಿಸಿಕೊಳ್ಳುತ್ತೀರಿ, ಅದು ನಿಮ್ಮ ಸಂಬಂಧದ ಮೇಲೂ ಪರಿಣಾಮ ಬೀರುತ್ತದೆ ಅನ್ನೋದ್ರ ಬಗ್ಗೆ ಯೋಚ್ನೆ ಮಾಡಿದ್ದೀರಾ?.
ನಿಮ್ಮ ಸಂಗಾತಿಯೂ ಆಗಾಗ್ಗೆ ನಿಮ್ಮೊಂದಿಗೆ ಕಿರಿಕಿರಿಗೊಂಡರೆ ಮತ್ತು ಏನನ್ನಾದರೂ ಕೇಳಿದಾಗ ಕೋಪಗೊಂಡರೆ, ನೀವು ಜಾಗರೂಕರಾಗಿರಬೇಕು. ಅದನ್ನು ಅವರ ಅಭ್ಯಾಸ ಅಥವಾ ಕೆಲಸದ ಒತ್ತಡ ಎಂದು ನಿರ್ಲಕ್ಷಿಸಬೇಡಿ. ಬದಲಾಗಿ, ಅವರೊಂದಿಗೆ ಮಾತನಾಡಿ ಮತ್ತು ಅದರ ಹಿಂದಿನ ಕಾರಣ ಕಂಡುಹಿಡಿಯಲು ಪ್ರಯತ್ನಿಸಿ. ಇದು ಯಾವುದೇ ಪರಿಹಾರಕ್ಕೆ ಕಾರಣವಾಗದಿದ್ದರೆ, ನೀವು ಅವರ ನಡವಳಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ನಿಮ್ಮ ಸಂಗಾತಿಗೆ ವಿವರಿಸಬೇಕು. ಇದರಿಂದ ಅವರ ಕೋಪ ನಿಯಂತ್ರಣಕ್ಕೆ (anger control) ಬಂದರೂ ಬರಬಹುದು.
ಕರಿಯರ್ ಲೈಫ್ ಒತ್ತಡ (career life stress)
ವೈವಾಹಿಕ ಜೀವನದಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸುವುದರ ಜೊತೆಗೆ, ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು ಸಹ ತುಂಬಾ ಮುಖ್ಯ. ಆದರೆ ಅನೇಕ ಬಾರಿ ನೀವು ಕೆಲಸದಲ್ಲಿ ಎಷ್ಟು ಸಿಕ್ಕಿಹಾಕಿಕೊಳ್ಳುತ್ತೀರಿ ಎಂದರೆ ಸಂಗಾತಿಯನ್ನೇ ನಿರ್ಲಕ್ಷಿಸುವಷ್ಟರ ಮಟ್ಟಿಗೆ ನೀವು ಅವರನ್ನು ದೂರ ಮಾಡುವಿರಿ.
ಇಬ್ಬರು ದೂರ ಇದ್ರೂ, ಅವರಿಗಾಗಿ ಸಮಯ ಕೊಡದೇ ಇದ್ರೂ ನಿಮ್ಮ ನಡುವಿನ ಪ್ರೀತಿಯು ಎಲ್ಲವನ್ನೂ ನೋಡಿಕೊಳ್ಳುತ್ತದೆ ಎಂಬ ಭ್ರಮೆ ನಿಮ್ಮಲ್ಲಿ ಹುಟ್ಟುತ್ತೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ, ನೀವು ನಿಮ್ಮ ಆದ್ಯತೆಗಳನ್ನು ನಿಗದಿಪಡಿಸಬೇಕು. ಕೆಲಸದ ಜೊತೆಗೆ ಸಂಗಾತಿಗಾಗಿ ನೀವು ಪ್ರತಿದಿನ ಸಮಯ ಮೀಸಲಿಡಬೇಕು.
ಇಂಟಿಮೆಸಿ ಇಲ್ಲದೇ ಇರೋದು
ವೈವಾಹಿಕ ಜೀವನದಲ್ಲಿ ಸ್ವಲ್ಪ ಸಮಯದ ನಂತರ, ಸಂಗಾತಿಗಳಲ್ಲಿ ಅನ್ಯೋನ್ಯತೆ ಕಡಿಮೆಯಾಗಲು (no intimacy) ಪ್ರಾರಂಭಿಸುತ್ತದೆ, ಇದು ಅವರ ನಡುವೆ ಅಂತರ ಉಂಟುಮಾಡುತ್ತದೆ. ವಿವಾಹಿತ ದಂಪತಿಗಳು ಕೆಲವೊಮ್ಮೆ ಕುಟುಂಬ ಮತ್ತು ಮಕ್ಕಳು ಎಂದು ತುಂಬಾ ಬ್ಯುಸಿಯಾಗ್ತಾರೆ, ಹಾಗಾಗಿ ಲೈಂಗಿಕ ಜೀವನವನ್ನು ನಿರ್ಲಕ್ಷಿಸಲು ಪ್ರಾರಂಭಿಸುತ್ತಾರೆ. ಇದು ತಪ್ಪು.
ಸೆಕ್ಸ್ ಲೈಫ್ (Sex life) ಚೆನ್ನಾಗಿಲ್ಲದೇ ಇರೋದರಿಂದ ನಿಮ್ಮ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನೀವು ಭಾವಿಸಬಹುದು, ಆದರೆ ನಿಮ್ಮ ನಡುವಿನ ತಾಜಾತನವು ಎಲ್ಲೋ ನಷ್ಟವಾಗಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಗಂಡ ಮತ್ತು ಹೆಂಡತಿ ಜೊತೆಯಾಗಿ ಟ್ರಾವೆಲ್ ಮಾಡೋದು, ಜೊತೆಯಾಗಿ ಟೈಮ್ ಸ್ಪೆಂಡ್ ಮಾಡೋದು, ಸಣ್ಣ ಹಗ್, ಕಿಸ್ ಇವೆಲ್ಲಾ ಇಬ್ಬರ ನಡುವೆ ಪ್ರೀತಿಯ ಕಿಡಿಯನ್ನು ಮತ್ತೆ ಹೆಚ್ಚಿಸುತ್ತೆ.