- Home
- Life
- Relationship
- Bigg Bossನಲ್ಲಿ ಗೊಂಬೆ ಹಿಡಿದು, ಮಗು ಮಾಡಿಕೊಳ್ಳೋ ಮನಸ್ಸು ಮಾಡಿದ್ರಾ ಸಂಗೀತಾ ಭಟ್? ನಟಿ ಹೇಳಿದ್ದೇನು
Bigg Bossನಲ್ಲಿ ಗೊಂಬೆ ಹಿಡಿದು, ಮಗು ಮಾಡಿಕೊಳ್ಳೋ ಮನಸ್ಸು ಮಾಡಿದ್ರಾ ಸಂಗೀತಾ ಭಟ್? ನಟಿ ಹೇಳಿದ್ದೇನು
ಅನಾರೋಗ್ಯದ ಕಾರಣದಿಂದ ನಟಿ ಸಂಗೀತಾ ಭಟ್ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ. ಹತ್ತು ವರ್ಷಗಳ ದಾಂಪತ್ಯದ ನಂತರವೂ ತಾವು ಮಗು ಮಾಡಿಕೊಳ್ಳದ ಸಂಗೀತಾ ಮನಸ್ಸು ಬದಲಿಸಿ ಮಗುವಿನ ಯೋಚನೆ ಮಾಡಲಿ ಎಂದು ಬಿಗ್ಬಾಸ್ನಲ್ಲಿ ಗೊಂಬೆ ಕೊಟ್ಟರಾ? ಈ ಕುರಿತು ನಟಿ ಏನ್ ಹೇಳಿದ್ರು ನೋಡಿ.

ಅನಾರೋಗ್ಯ ಕಾರಣದಿಂದ ಹೊರಕ್ಕೆ
ಅನಾರೋಗ್ಯದ ಕಾರಣದಿಂದಾಗಿ ಬಿಗ್‌ಬಾಸ್ ಮನೆಯಿಂದ ಸಂಗೀತಾ ಭಟ್ (Bigg Boss Sangeetha Bhat) ಹೊರಕ್ಕೆ ಬಂದಿದ್ದಾರೆ. ಭಾಗ್ಯಲಕ್ಷ್ಮಿ ಸೀರಿಯಲ್ ತಾಂಡವ್ ಪಾತ್ರದ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿರೋ ನಟ ಸುದರ್ಶನ್ ರಂಗಪ್ರಸಾದ್ (Sudarshan Rangaprasad) ಅವರ ಪತ್ನಿ ಸಂಗೀತಾ ಭಟ್.
ನಟಿಯಾಗಿ ಪದಾರ್ಪಣೆ
ಇವರಿಬ್ಬರ ಮದುವೆಯಾಗಿ 10 ವರ್ಷಗಳಾಗಿವೆ. ನಟಿ ಸಂಗೀತಾ ಭಟ್ ಅವರು, ನಟಿಯಾಗಿ, ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ. ತಮಿಳು ಸಿನಿಮಾ ಮೂಲಕ ಸಂಗೀತ ಭಟ್ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ. ಕನ್ನಡದಲ್ಲಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದ ಸಂಗೀತಾ ಭಟ್ ಸ್ವಲ್ಪ ಕಾಲ ಸಿನಿ ಪಯಣದಿಂದ ದೂರವೇ ಉಳಿದು 2 ವರ್ಷಗಳ ನಂತರ ಮತ್ತೆ ಸಿನಿಮಾಗಳಲ್ಲಿ ನಟಿಸಿದ್ದರು.
ಮಕ್ಕಳೇಕೆ ಮಾಡಿಕೊಂಡಿಲ್ಲ?
ಆದರೆ ಈ ದಂಪತಿ ಹತ್ತು ವರ್ಷವಾದರೂ ಮಕ್ಕಳು ಮಾಡಿಕೊಳ್ಳಲಿಲ್ಲವೇಕೆ ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಕೆಲ ತಿಂಗಳ ಹಿಂಎ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಸಂಗೀತಾ ಅವರು ಈ ವಿಷಯದ ಬಗ್ಗೆ ಮೌನ ಮುರಿದಿದ್ದರು. ನಮಗೆ ಜವಾಬ್ದಾರಿ ಎಂದರೆ ಸ್ವಲ್ಪ ಕಷ್ಟವೇ. ಮಕ್ಕಳ ವಿಷಯದಲ್ಲಿ ಜವಾಬ್ದಾರಿ ಹೊರುವುದು ಕಷ್ಟ ಆಗಬಹುದು. ಇದನ್ನು ಕೇಳಿದ್ರೆ ತುಂಬಾ ಜನ ಬೈದುಕೊಳ್ಳುತ್ತಾರೆ ಎನ್ನುವುದು ಗೊತ್ತು. ಮಕ್ಕಳ ಜವಾಬ್ದಾರಿ ಬೇಡ್ವಾ ಎಂದೂ ಪ್ರಶ್ನಿಸುತ್ತಾರೆ. ಆದರೆ, ನಾವಿರುವ ಸನ್ನಿವೇಶದಲ್ಲಿ, ನಮ್ಮ ಜೀವನದಲ್ಲಿ ಆದ ಕೆಲವು ಘಟನೆಗಳಿಂದ ಇನ್ನೊಂದು ಜೀವಿಯನ್ನು ಈ ಭೂಮಿಯ ಮೇಲೆ ತರಲು ನಾವು ರೆಡಿ ಇಲ್ಲ. ಇದೇ ಕಾರಣಕ್ಕೆ ಮಕ್ಕಳು ಮಾಡಿಕೊಳ್ಳದೇ ಇರಲು ನಿರ್ಧರಿಸಿದ್ದೇವೆ ಎಂದಿದ್ದರು.
ಗೊಂಬೆ ಹೈಲೈಟ್
ಇದೀಗ ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳ ಜೊತೆ ಗೊಂಬೆ ಕೂಡ ಹೈಲೈಟ್ ಆಗುತ್ತಿದೆ. ಇದನ್ನು ಸಂಗೀತಾ ಭಟ್ ಅವರು ಹಲವು ಬಾರಿ ಸಮಾಧಾನ ಮಾಡುವಂತೆ ಮಾಡಿರುವ ವಿಡಿಯೋ ಕೂಡ ಪ್ರೊಮೋಗಳಲ್ಲಿ ಬಿಡುಗಡೆಯಾಗಿತ್ತು. ಮಗು ಎಂದರೆ ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ, ಅದೇ ಕಾರಣಕ್ಕೆ ಗೊಂಬೆಯನ್ನು ಮಡಿಲಿನಲ್ಲಿ ಇಟ್ಟುಕೊಂಡರೆ, ಮಗು ಮಾಡಿಕೊಳ್ಳುವ ಮನಸ್ಸು ಸಂಗೀತಾ ಭಟ್ ಮಾಡಬಹುದು ಎನ್ನುವ ಕಾರಣಕ್ಕೆ ಅವರಿಗೆ ಗೊಂಬೆ ಕೊಡಲಾಗಿದೆ ಎಂದು ಜಾಲತಾಣದಲ್ಲಿ ಚರ್ಚೆಯಾಗುತ್ತಿತ್ತು.
ಗೊಂಬೆ ನೋಡಿದ ತಕ್ಷಣ...
ಅದಕ್ಕೆ ಉತ್ತರಿಸಿರುವ ಸಂಗೀತಾ, ಇಲ್ಲ ಹಾಗೇನೂ ಇಲ್ಲ. ಗೊಂಬೆ ನೋಡಿದ ತಕ್ಷಣ ಮಗು ಮಾಡುವ ಆಲೋಚನೆ ಬರಲಿಲ್ಲ. ಮಗು ಬೇಡ ಎನ್ನುವುದು ನಮ್ಮಿಬ್ಬರ ಮ್ಯೂಚುವಲ್ ಅಂಡರ್ಸ್ಟ್ಯಾಂಡಿಂಗ್ ಮೇಲೆ ಹೋಗಿದೆ. ಅದು ಬದಲಾಗಲ್ಲ. ಒಂದು ಜೀವವನ್ನು ಭೂಮಿಯ ಮೇಲೆ ತರುವುದು ತುಂಬಾ ರಿಸ್ಕಿ. ಅದಕ್ಕೆ ನಾನು ರೆಡಿ ಇಲ್ಲ ಎಂದಿದ್ದಾರೆ.
ತಲೆ ಕೆಡಿಸಿಕೊಳ್ಳುವುದಿಲ್ಲ
ನಮ್ಮ ನಿರ್ಧಾರಕ್ಕೆ ಜನ ಬೈದುಕೊಳ್ಳಬಹುದು. ಆದರೆ ಅದಕ್ಕೆ ಕೆಡಿಸಿಕೊಳ್ಳುವುದಿಲ್ಲ. ಹೇಗೆ ಐದು ಬೆರಳುಗಳೂ ಸರಿಸಮಾನವಾಗಿ ಇರುವುದಿಲ್ಲವೋ ಹಾಗೆ ವ್ಯಕ್ತಿವ್ಯಕ್ತಿಗಳಲ್ಲಿಯೂ ಬೇರೆ ಬೇರೆ ರೀತಿಯ ಅಭಿಪ್ರಾಯಗಳು ಇರುತ್ತವೆ. ಇದು ನಾವು ಕಂಡುಕೊಂಡಿರುವ ದಾರಿ, ಇದು ನಮ್ಮ ಚಾಯ್ಸ್ ಅಷ್ಟೇ. ಮಗು ಬೇಡ ಎನ್ನುವುದು ನಮ್ಮ ನಿರ್ಧಾರ ಎಂದು ದಂಪತಿ ಈ ಹಿಂದೆ ಹೇಳಿದ್ದರು. ಇನ್ನೊಂದು ಜೀವವನ್ನು ಭೂಮಿಯ ಮೇಲೆ ತಂದು ಅದಕ್ಕಾಗಿ ನಮ್ಮ ಜೀವನವನ್ನು ತ್ಯಾಗ ಮಾಡಬೇಕು. ಈಗ ಎಲ್ಲವೂ ಸಿಕ್ಕಾಪಟ್ಟೆ ದುಬಾರಿ. ಈ ಪರಿಸ್ಥಿತಿಯಲ್ಲಿ ಮಗುವನ್ನು ನೋಡಿಕೊಂಡು ತ್ಯಾಗ ಮಾಡಿ ಅದನ್ನು ಮುಂದೆ ತರುವುದು ಕಷ್ಟವಾಗುತ್ತದೆ. ಆದ್ದರಿಂದ ಮಗು ಬೇಡ ಎಂದಿದ್ದರು ಸಂಗೀತಾ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

