- Home
- Life
- Relationship
- ವಯಸ್ಸು 41, ಅಮ್ಮನಾಗುವ ಆಸೆ ನನಗಿಲ್ಲ; ಅಂಥಾ ಹುಡುಗ್ರು ನನ್ನ ಜೀವನದಲ್ಲಿ ಬೇಡ ಎಂದ ಡ್ಯಾನ್ಸರ್
ವಯಸ್ಸು 41, ಅಮ್ಮನಾಗುವ ಆಸೆ ನನಗಿಲ್ಲ; ಅಂಥಾ ಹುಡುಗ್ರು ನನ್ನ ಜೀವನದಲ್ಲಿ ಬೇಡ ಎಂದ ಡ್ಯಾನ್ಸರ್
ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ವಿನ್ನರ್, 41ನೇ ವಯಸ್ಸಿನಲ್ಲೂ ಮದುವೆಯಾಗದಿರುವ ಬಗ್ಗೆ ಮಾತನಾಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಸಂತೋಷವಾಗಿದ್ದು, ಸದ್ಯಕ್ಕೆ ಸಂಗಾತಿಯ ಅಗತ್ಯವಿಲ್ಲ. ಜೊತೆಗೆ ತಮ್ಮ ಲವ್ ಬ್ರೇಕಪ್ ಹಾಗೂ ತಾಯ್ತನದ ಬಗ್ಗೆಗಿನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಶಕ್ತಿ ಮೋಹನ್
ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಸೀಸನ್ 2ರ ವಿನ್ನರ್ ಶಕ್ತಿ ಮೋಹನ್ ಸಂದರ್ಶನವೊಂದರಲ್ಲಿ ಮದುವೆ ಕುರಿತು ಮಾತನಾಡಿದ್ದಾರೆ. ನನಗೆ ವಯಸ್ಸು 41 ಆಗಿದ್ದು, ಎಲ್ಲರೂ ಮದುವೆ ಯಾವಾಗ ಎಂದು ಕೇಳುತ್ತಾರೆ. ನಿನ್ನೆಯಷ್ಟೇ ನನ್ನ ತಂದೆ ಮದುವೆಯಾಗಲು ಸರಿಯಾದ ಹುಡುಗ ಸಿಕ್ಕಿದ್ದಾನಾ ಎಂದು ಕೇಳಿದ್ದರು ಅಂತಾ ಹೇಳಿ ಶಕ್ತಿ ಮೋಹನ್ ನಕ್ಕರು.
ಮದುವೆ ಬಗ್ಗೆ ಶಕ್ತಿ ಅಭಿಪ್ರಾಯ
ಶಕ್ತಿ ಮೋಹನ್ ಬಾಲಿವುಡ್ ಅಂಗಳದಲ್ಲಿ ಗುರುತಿಸಿಕೊಂಡಿದ್ದು, ತಮ್ಮದೇ ಆದ ಡ್ಯಾನ್ಸಿಂಗ್ ಸ್ಟುಡಿಯೋ ಹೊಂದಿದ್ದಾರೆ. ಹಾಗೆಯೇ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ಶಕ್ತಿ ಮೋಹನ್, ಸಿನಿಮಾ ಹಾಡುಗಳಿಗೂ ಕೊರಿಯೊಗ್ರಾಫ್ ಮಾಡುತ್ತಾರೆ. ಪಾಡ್‌ಕಾಸ್ಟ್‌ನಲ್ಲಿ ವಯಸ್ಸು 40-4ರ ಆಸುಪಾಸು. ಮದುವೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಪ್ರಶ್ನೆ ಮಾಡಲಾಯ್ತು?
ಸಮಸ್ಯೆ ಏನು?
ನನಗೆ ನನ್ನ ಕೆಲಸ ಮತ್ತು ಸ್ಟುಡಿಯೋ ನಡೆಸಿಕೊಂಡು ಹೋಗುವದರಲ್ಲಿ ತುಂಬಾ ಸಂತೋಷವಿದೆ. ನನ್ನ ಜೀವನದಲ್ಲಿ ಯಾವುದೇ ಕೊರತೆ ಇಲ್ಲ ಅನ್ನೋದು ನನ್ನ ಅಭಿಪ್ರಾಯ. ಜೀವನದಲ್ಲಿ ಓರ್ವ ಸಂಗಾತಿ ಇರಬೇಕು ಅಂತಾ ಎಲ್ಲರೂ ಹೇಳುತ್ತಾರೆ. ಆದ್ರೆ ನೀವು ಈ ರೀತಿಯಾಗಿದ್ರೆ ಸಮಸ್ಯೆ ಏನು ಎಂದು ಶಕ್ತಿ ಮೋಹನ್ ಪ್ರಶ್ನೆ ಮಾಡುತ್ತಾರೆ.
ಯಾವ ಆಸೆಯೂ ನನ್ನಲಿಲ್ಲ
ಒಳ್ಳೆಯ ಸಂಗಾತಿ ಸಿಕ್ಕರೆ ಮದುವೆಯಾಗಲು ಹಿಂದೇಟು ಹಾಕಲ್ಲ. ಸಂಗಾತಿ ಇಲ್ಲದ ಕಾರಣ ಮದುವೆ ಬಗ್ಗೆ ಯೋಚಿಸಲ್ಲ ಎಂದು ತಾವಿನ್ನು ಸಿಂಗಲ್ ಎಂದು ಶಕ್ತಿ ಮೋಹನ್ ಹೇಳಿಕೊಂಡರು. ನನ್ನೊಳಗೆ ತಾಯಿಯಾಗಬೇಕು ಮತ್ತು ತಾಯ್ತನ ಅನುಭವಿಸುವ ಯಾವ ಆಸೆಯೂ ನನ್ನಲಿಲ್ಲ ಎಂದು ಶಕ್ತಿ ಮೋಹನ್ ಹೇಳಿಕೊಳ್ಳುತ್ತಾರೆ.
ಇದನ್ನೂ ಓದಿ: ನಟಿ ರಮ್ಯಾಗೆ ನಿಂದನೆ ಕೇಸ್: 49 ಮಂದಿ ಪೈಕಿ 14 ಮಂದಿ ಬಂಧನ, 35 ಕಿಡಿಗೇಡಿಗಳ ಪತ್ತೆಗೆ ಸಿಸಿಬಿ ಶೋಧ
ಎರಡು ಬಾರಿ ಲವ್ ಬ್ರೇಕಪ್
ಎರಡು ಬಾರಿ ಲವ್ ಬ್ರೇಕಪ್ ಆಗಿದೆ ಎಂದು ಹೇಳಿಕೊಂಡಿರುವ ಶಕ್ತಿ ಮೋಹನ್, ರಿಲೇಶನ್‌ಶಿಪ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ ಅನ್ನೋದು ಅರ್ಥವಾಗುತ್ತಿದ್ದಂತೆ ಆ ಸಂಬಂಧದಿಂದ ಹೊರ ಬಂದೆ. ಅದು ಮೂರು ವರ್ಷದ ರಿಲೇಶನ್‌ಶಿಪ್. ಆದ್ರೆ ನನ್ನಮ್ಮ ಆ ಹುಡುಗ ಒಳ್ಳೆಯವನು ಅಂತ ಹೇಳ್ತಿದರು. ಹುಡುಗರು ಹಾಗೆಯೇ ಇರುತ್ತಾರೆ, ಅವರನ್ನು ಒಪ್ಪಿಕೊಳ್ಳಬೇಕು ಅನ್ನೋದು ಅಮ್ಮನ ಅಭಿಪ್ರಾಯ. ಆದ್ರೆ ಹುಡುಗರು ಹಾಗಿದ್ರೆ ಅವರಿಗೆ ನನ್ನ ಜೀವನದಲ್ಲಿ ಸ್ಥಾನವಿಲ್ಲ ಎಂದು ಶಕ್ತಿ ಮೋಹನ್ ಹೇಳಿದ್ದಾರೆ.
ಇದನ್ನೂ ಓದಿ: ನನ್ನ ಥರ ಯೋಚನೆ ಮಾಡೋರು ಸಿಕ್ಕಿಲ್ಲ ಅಂದ್ರೆ ಮದುವೆ ಬೇಡ ಹೇಳಿದ್ದೆ: Puttakkana Makkalu Serial ಸಂಜನಾ ಬುರ್ಲಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

