- Home
- Life
- Relationship
- ಹನಿಮೂನ್ ಟ್ರಿಪ್ ಬಳಿಕ ಪತ್ನಿಯಿಂದ ಡಿವೋರ್ಸ್‌ಗೆ ಅರ್ಜಿ, ತಪ್ಪು ಯಾರದ್ದು ಗೊಂದಲಕ್ಕೀಡಾದ ಕೌನ್ಸಿಲರ್
ಹನಿಮೂನ್ ಟ್ರಿಪ್ ಬಳಿಕ ಪತ್ನಿಯಿಂದ ಡಿವೋರ್ಸ್‌ಗೆ ಅರ್ಜಿ, ತಪ್ಪು ಯಾರದ್ದು ಗೊಂದಲಕ್ಕೀಡಾದ ಕೌನ್ಸಿಲರ್
ಮದುವೆಯಾದ ಬೆನ್ನಲ್ಲೇ ಗಂಡ, ನವ ವಧುವಿನ ಕೇಳಿ ಹನಿಮೂನ್ ಟ್ರಿಪ್ ಬುಕ್ ಮಾಡಿದ್ದಾನೆ. ಹನಿಮೂನ್ ಟ್ರಿಪ್ ಹೋಗಿ ಬಂದ ಬೆನ್ನಲ್ಲೇ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡು ಡಿವೋರ್ಸ್ ಮಟ್ಟಕ್ಕೆ ಹೋಗಿದೆ. ಕೌನ್ಸಿಲಿಂಗ್ ವೇಳೆ ಇಬ್ಬರ ಕಾರಣ ಕೇಳಿ ಇದೀಗ ತಪ್ಪು ಯಾರದ್ದು ಪತ್ತೆ ಹಚ್ಚೋದೆ ಕಷ್ಟವಾಗಿದೆ.

ತಪ್ಪು ಯಾರದ್ದು? ಗಂಡನೋ, ಪತ್ನಿಯೋ
ಡಿವೋರ್ಸ್ ಅರ್ಜಿದಾರರನ್ನು ಕರೆಯಿಸಿ ಕೌನ್ಸಿಲಿಂಗ್ ಮಾಡಲಾಗುತ್ತದೆ. ಕೌನ್ಸಿಲಿಂಗ್ ಮೂಲಕ ಹಲವು ಪ್ರಕರಣಗಳು ಸುಖಾಂತ್ಯ ಕಂಡ ಸಂಸಾರ ಒಂದಾದ ಉದಾಹರಣೆ ಇದೆ. ಹಲವು ಬಾರಿ ಕೌನ್ಸಲರ್ಸ್ ಇಲ್ಲಿ ತಪ್ಪಾಗಿದೆ, ಸರಿಪಡಿಸಿಕೊಳ್ಳಬೇಕು ಎಂದು ನೇರವಾಗಿ ಹೇಳುತ್ತಾರೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಗಂಡನೋ, ಅಥವಾ ಪತ್ನಿಯೋ ಯಾರದ್ದು ತಪ್ಪು ಎಂದು ನೇರವಾಗಿ ಹೇಳಲು ಆಗದೆ ಗೊಂದಲಕ್ಕೀಡಾದ ಘಟನೆ ನಡೆದಿದೆ.
ಹನಿಮೂನ್ ಹೋಗಿ ಬಂದ ಬಳಿಕ ಡಿವೋರ್ಸ್‌ಗೆ ಅರ್ಜಿ
ಮದುವೆಯಾದ ಬೆನ್ನಲ್ಲೇ ಹನಿಮೂನ್ ಟ್ರಿಪ್ ಪ್ಲಾನ್ ಮಾಡಲಾಗಿದೆ. ಸುಂದರ ತಾಣ ಐಷಾರಾಮಿ ಹೊಟೆಲ್,ಪ್ರಯಾಣ ಎಲ್ಲವೂ ಬುಕ್ ಆಗಿದೆ. ಆದರೆ ಹನಿಮೂನ್ ಹೋಗಿ ಬಂದ ಬೆನ್ನಲ್ಲೇ ಮನೆಯಲ್ಲಿ ನವ ಜೋಡಿಗಳ ನಡುವೆ ಜಗಳ ತಾರಕಕ್ಕೇರಿದೆ. ಪತ್ನಿ ಡಿವೋರ್ಸ್‌ಗೆ ಅರ್ಜಿ ಹಾಕಿದ್ದಾಳೆ. ಅತ್ಯಲ್ಪ ಸಮಯದಲ್ಲಿ ಡಿವೋರ್ಸ್ ಅರ್ಜಿ ಕಾರಣ ಕೌನ್ಸಿಲಿಂಗ್ ಮೂಲಕ ಸಮಸ್ಯೆ ಬಗೆ ಹರಿಸುವ ಪ್ರಯತ್ನಗಳು ನಡೆದಿದೆ.
ಪತ್ನಿ ಡಿವೋರ್ಸ್ ಅರ್ಜಿ ಹಾಕಲು ಕಾರಣವೇನು?
ಹನಿಮೂನ್ ತೆರಳಿದಾಗ ನವ ಜೋಡಿಗಳು ಮಾತ್ರ ಇರಲಿಲ್ಲ. ಗಂಡ ಹನಿಮೂನ್ ಪ್ಯಾಕೇಜ್ ಬುಕ್ ಮಾಡುವಾಗ ತಂದೆ ತಾಯಿ, ಇತರ ಆಪ್ತ ಸಂಬಂಧಿಗಳ ಮಕ್ಕಳು ಸೇರಿಸಿ ಎಲ್ಲರಿಗೂ ಟಿಕೆಟ್ ಬುಕ್ ಮಾಡಿದ್ದಾರೆ. ಹೊಟೆಲ್ ರೂಂ ಮಾಡಿದ್ದಾರೆ. ಎಲ್ಲಾ ವೆಚ್ಚವನ್ನು ಗಂಡ ಭರಿಸಿದ್ದಾನೆ. ಹನಿಮೂನ್ ವಿಶೇಷವಾಗಿ ನವ ಜೋಡಿಗಳು ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿ, ಒಬ್ಬರನ್ನೊಬ್ಬರು ಅರಿತುಕೊಳ್ಳಲಿ ಎಂದು ಹೋಗುತ್ತಾರೆ. ಗಂಡನ ಜೊತೆ ಖಾಸಗಿಯಾಗಿ ಕಳೆಯಲು ನನಗೆ ಸಮಯವೇ ಸಿಗಲಿಲ್ಲ. ಇದು ಫ್ಯಾಮಿಲಿ ಟ್ರಿಪ್ ರೀತಿ ಇತ್ತು ಎಂದು ಅಸಮಾಧಾನಗೊಂಡು ಡಿವೋರ್ಸ್‌ಗೆ ಅರ್ಜಿ ಹಾಕಿದ್ದಾಳೆ.
ಗಂಡನ ವರ್ಶನ್ ಏನು?
ನಾವಿಬ್ಬರೆ ಹನಿಮೂನ್ ಹೋಗಿ ಖುಷಿ ಪಡೋಡುವ ಜೊತೆಗೆ ತಂದೆ ತಾಯಿ, ಮಕ್ಕಳು ಎಲ್ಲರು ಖುಷಿಯಾಗಿರಲಿ. ಪೋಷಕರು, ಆಪ್ತ ಸಂಬಂಧಿಕರು ಮದುವೆಗಾಗಿ ತುಂಬಾ ಕೆಲಸ ಮಾಡಿದ್ದಾರೆ. ಅವರು ಖುಷಿಯಾಗಿರಲಿ ಎಂದು ಎಲ್ಲರಿಗೂ ಬುಕ್ ಮಾಡಿದೆ. ಆದರೆ ಇಷ್ಟೊಂದು ಪರಿಣಾಮ ಬೀರುತ್ತೆ ಅನ್ನೋದು ಗೊತ್ತಿರಲಿಲ್ಲ. ಆ ರೀತಿ ಯೋಚನೆ ಮಾಡಿರಲಿಲ್ಲ ಎಂದು ಗಂಡ ಹೇಳಿದ್ದಾನೆ.
ವಯಸ್ಸಿನ ಅಂತರವೇ ಕಾರಣವೇ?
ಗಂಡನ ಆಲೋಚನೆ ಬೇರೆ, ಪತ್ನಿಯ ಚಿಂತನೆಗಳು ಬಯಕೆಗಳು, ಜೀವನದ ಕನಸುಗಳೇ ಬೇರೆ. ಈ ಪ್ರಕರಣದಲ್ಲಿ ಗಂಡ ಹಾಗೂ ಹೆಂಡತಿ ನಡುವೆ ವಯಸ್ಸಿನ ಅಂತರವೂ ಕಾರಣವಾಗಿದೆ. ಗಂಡ ಪ್ರಭುದ್ಧವಾಗಿ ಚಿಂತಿಸಿದರೆ, ನವ ವಧು ಜೀವನದ ಪ್ರಮುಖ ಕ್ಷಣವನ್ನು ಆನಂದಿಸಲು ಬಯಸಿದ್ದಳು. ಇಬ್ಬರದ್ದು ಸರಿ, ಆದರೆ ಇಬ್ಬರದ್ದು ತಪ್ಪಿದೆ ಎಂದು ಕೌನ್ಸಿಲಿಂಗ್ ಅಧಿಕಾರಿಗಳು ಹೇಳಿದ್ದಾರೆ.
ಎಲ್ಲರನ್ನು ಖುಷಪಡಿಸಲು ಹೋಗಿ ಎಡವಟ್ಟು
ಮದುವೆ ಮಾಡಿ ಮನೆಗೆ ಬರುವ ನವ ವಧುವಿನ ಕುರಿತು ಆಲೋಚಿಸಬೇಕು. ಆಕೆಯ ಕನಸುಗಳಿಗೆ ಬೆಲೆ ಕೊಡಬೇಕು. ಹನಿಮೂನ್ ಪ್ಲಾನ್ ಮಾಡಿದ್ದರೆ ಖಾಸಗಿಯಾಗಿ ಹೋಗಬೇಕಿತ್ತು. ಪ್ಲಾನ್ ಕುರಿತು ಪತ್ನಿ ಜೊತೆ ಚರ್ಚಿಸಬೇಕಿತ್ತು. ಈ ರೀತಿಯ ಹಲವು ಸಲಹೆಗಳು ಬಂದಿದೆ. ಇಲ್ಲಿ ಗಂಡನ ವಿಪರೀತ ಆಲೋಚಿಸಿ ಎಲ್ಲರನ್ನುಖುಷಿಪಡಿಸಲು ಹೋಗಿ ಪತ್ನಿ ಮುನಿಸಿಗೆ ಕಾರಣಾಗಿದ್ದಾರೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ.
ಗಂಡನ ಜೊತೆ ಜಗಳವಾಡುವುದಕ್ಕಿಂತ ಗಂಡನಿಗೆ ಮನವರಿಕೆ ಮಾಡಿಕೊಡಬೇಕಿತ್ತು. ಆತನ ತನ್ನದೇ ನಿರ್ಧಾರ ಸರಿ ಎಂದಿದ್ದರೆ ಜಗಳ ಮಾಡುವುದು, ಡಿವೋರ್ಸ್‌ಗೆ ಅರ್ಜಿ ಹಾಕುವುದರಲ್ಲಿ ಅರ್ಥವಿತ್ತು. ಮುಕ್ತವಾಗಿ ಮಾತನಾಡಿ ಸಮಸ್ಯೆ ತೀವ್ರವಾಗುವ ಮೊದಲೇ ಪರಿಹಾರ ಕಾಣಬಹುದಿತ್ತು ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

