MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಆರು ತಿಂಗಳ ಹಿಂದೆ ಸತ್ತಿದ್ದ ಅಜ್ಜಿ ಮತ್ತೆ ಕಾಣಿಸಿಕೊಂಡಳಾ? ಚಿಕ್ಕಮಗಳೂರಿನ ನಿಗೂಢ ಘಟನೆ

ಆರು ತಿಂಗಳ ಹಿಂದೆ ಸತ್ತಿದ್ದ ಅಜ್ಜಿ ಮತ್ತೆ ಕಾಣಿಸಿಕೊಂಡಳಾ? ಚಿಕ್ಕಮಗಳೂರಿನ ನಿಗೂಢ ಘಟನೆ

Chikkamagaluru Shocking News ಚಿಕ್ಕಮಗಳೂರಿನ ಸಕ್ಕರೆಪಟ್ಟಣ ಮತ್ತು ಜ್ಯೋತಿನಗರದಲ್ಲಿ ನಡೆದಿವೆ ಎನ್ನಲಾದ ಎರಡು ವಿಚಿತ್ರ ಘಟನೆಗಳು ಇಂದಿಗೂ ಹಲವರನ್ನು ಬೆಚ್ಚಿಬೀಳಿಸುತ್ತವೆ. ಈ ಅನುಭವಗಳನ್ನು ಪ್ರಮೋದ್ (ಪಮ್ಮಿ) ಎಂಬ ವ್ಯಕ್ತಿ ಹಂಚಿಕೊಂಡಿದ್ದಾರೆ.

2 Min read
Author : Sushma Hegde
Published : Jun 12 2026, 01:26 PM IST
Share this Photo Gallery
  • FB
  • TW
  • Linkdin
  • Whatsapp
13
ಸತ್ತ ಅಜ್ಜಿ ಬಾಗಿಲು ತೆರೆದು ಒಳಗೆ ಬಂದಳಾ?
Image Credit : Asianet News

ಸತ್ತ ಅಜ್ಜಿ ಬಾಗಿಲು ತೆರೆದು ಒಳಗೆ ಬಂದಳಾ?

ಸುಮಾರು 20 ವರ್ಷಗಳ ಹಿಂದೆ ನಡೆದ ಘಟನೆ ಇದು. ದೀಪಾವಳಿ ರಜೆಯಲ್ಲಿ ಪ್ರಮೋದ್ ಮತ್ತು ಅವರ ಅಣ್ಣ ಪ್ರವೀಣ್ ಅಜ್ಜಿ ಮನೆಯಾದ ಗುಬ್ಬಿಹಳ್ಳಿಗೆ ಬಂದಿದ್ದರು. ಆದರೆ ಅವರ ಅಜ್ಜಿ ಆರು ತಿಂಗಳ ಹಿಂದೆ ನಿಧನರಾಗಿದ್ದರು. ಒಂದು ದಿನ ಬೆಳಿಗ್ಗೆ ಇಬ್ಬರೂ ಓದುತ್ತಿದ್ದಾಗ ಮನೆಯವರು ಹೊರಗಿನಿಂದ ಬಾಗಿಲು ಲಾಕ್ ಮಾಡಿ ಹೋಗಿದ್ದರು. ಕೆಲ ಸಮಯದ ಬಳಿಕ ಏಕಾಏಕಿ ಬಾಗಿಲು ತೆರೆದ ಶಬ್ದ ಕೇಳಿಸಿತು. ಊಟಕ್ಕೆ ಕರೆಯಲು ಯಾರೋ ಬಂದಿರಬಹುದು ಎಂದುಕೊಂಡು ಇಬ್ಬರೂ ಕುಳಿತೇ ಇದ್ದರು.

ಆದರೆ ಕೆಲವೇ ಕ್ಷಣಗಳಲ್ಲಿ ಕೊಠಡಿಯೊಳಗೆ ಬಂದವರು ಅವರ ಮೃತ ಅಜ್ಜಿ!

"ಏನ್ರೋ, ಇನ್ನೂ ಪಟಾಕಿ ಹೊಡೀಲ್ವಾ?" ಎಂದು ಕೇಳಿದ ಅಜ್ಜಿ, "ಇನ್ನೂ ಊಟ ಮಾಡಿಲ್ವಾ?" ಎಂದೂ ಪ್ರಶ್ನಿಸಿದ್ದಾಳೆ ಎನ್ನಲಾಗಿದೆ. ಈ ದೃಶ್ಯ ನೋಡಿ ಇಬ್ಬರೂ ಗಾಬರಿಗೊಂಡರು. ಅಜ್ಜಿ ಹೊರಗೆ ಹೋದ ತಕ್ಷಣ ಪ್ರವೀಣ್ ಕಿರುಚುತ್ತಾ ಓಡಿಹೋದರೆ, ಪ್ರಮೋದ್ ಭಯದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕುಟುಂಬದವರು ಮೊದಲಿಗೆ ಈ ಮಾತನ್ನು ನಂಬಲಿಲ್ಲ. ಆದರೆ ಇಬ್ಬರೂ ಒಂದೇ ರೀತಿಯ ಘಟನೆ ವಿವರಿಸಿದಾಗ ಎಲ್ಲರೂ ಬೆಚ್ಚಿಬಿದ್ದಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
23
ಮೆಟ್ಟಿಲಿನ ಮೇಲೆ ಕುಳಿತಿದ್ದ ವ್ಯಕ್ತಿ ಯಾರು?
Image Credit : Asianet News

ಮೆಟ್ಟಿಲಿನ ಮೇಲೆ ಕುಳಿತಿದ್ದ ವ್ಯಕ್ತಿ ಯಾರು?

ಎರಡನೇ ಘಟನೆ ಚಿಕ್ಕಮಗಳೂರಿನ ಜ್ಯೋತಿನಗರದಲ್ಲಿರುವ ಸರ್ಕಾರಿ ಕ್ವಾರ್ಟರ್ಸ್‌ನಲ್ಲಿ ನಡೆದಿದೆ ಎನ್ನಲಾಗುತ್ತದೆ. ಹೊಸದಾಗಿ ಮನೆ ಬದಲಿಸಿಕೊಂಡಿದ್ದ ಪ್ರಮೋದ್, ಪ್ರತಿದಿನ ಮೊದಲ ಮಹಡಿಯ ಮೆಟ್ಟಿಲಿನ ಬಳಿ ಒಬ್ಬ ವ್ಯಕ್ತಿ ಕುಳಿತಿರುವುದನ್ನು ಗಮನಿಸುತ್ತಿದ್ದರು. ಹಲವು ದಿನಗಳ ಕಾಲ ಅದೇ ಜಾಗದಲ್ಲಿ ಅದೇ ವ್ಯಕ್ತಿ ಕಾಣಿಸುತ್ತಿದ್ದ. ಒಂದು ದಿನ ಧೈರ್ಯ ಮಾಡಿ ಮಾತನಾಡಲು ಹೋದರೂ ಆತ ಯಾವುದೇ ಉತ್ತರ ನೀಡಲಿಲ್ಲ. ಕೆಲ ದಿನಗಳ ಬಳಿಕ ಮೊದಲ ಮಹಡಿಯ ನಿವಾಸಿಯೊಂದಿಗೆ ಸ್ನೇಹ ಬೆಳೆದಾಗ, ಆ ವ್ಯಕ್ತಿಯ ಫೋಟೋವನ್ನು ಮನೆಯ ಗೋಡೆಯ ಮೇಲೆ ಕಂಡು ಪ್ರಮೋದ್ ಬೆಚ್ಚಿಬಿದ್ದರು. ಯಾಕೆಂದರೆ ಮೆಟ್ಟಿಲಿನ ಮೇಲೆ ಪ್ರತಿದಿನ ಕಾಣಿಸುತ್ತಿದ್ದ ವ್ಯಕ್ತಿಯೇ ಆ ಫೋಟೋದಲ್ಲಿದ್ದ ವ್ಯಕ್ತಿ! ಆದರೆ ಆ ವ್ಯಕ್ತಿ ನಾಲ್ಕು ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು ಎಂದು ಮನೆಯವರು ತಿಳಿಸಿದರು.

33
ಸ್ಮಶಾನದ ಮೇಲೆ ಕಟ್ಟಿದ ಕ್ವಾರ್ಟರ್ಸ್?
Image Credit : Asianet News

ಸ್ಮಶಾನದ ಮೇಲೆ ಕಟ್ಟಿದ ಕ್ವಾರ್ಟರ್ಸ್?

ಇದಾದ ಬಳಿಕ ಸ್ಥಳೀಯರು ಹೇಳಿದ ಮತ್ತೊಂದು ವಿಚಾರ ಇನ್ನಷ್ಟು ಆತಂಕ ಮೂಡಿಸಿತು. ಆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಹಲವಾರು ಕುಟುಂಬಗಳಲ್ಲಿ, ಮನೆಯ ಪುರುಷರು ಅನಾರೋಗ್ಯ, ಅಪಘಾತ ಅಥವಾ ಇತರ ಕಾರಣಗಳಿಂದ ಸಾವನ್ನಪ್ಪಿದ್ದರೆಂದು ಕೆಲವರು ಹೇಳುತ್ತಿದ್ದರು. ನಂತರ ಅವರ ಪತ್ನಿಯರೇ ಉದ್ಯೋಗ ಪಡೆದು ಕುಟುಂಬ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಇನ್ನಷ್ಟು ಪರಿಶೀಲನೆ ಮಾಡಿದಾಗ, ಆ ಕ್ವಾರ್ಟರ್ಸ್ ನಿರ್ಮಾಣಗೊಂಡ ಜಾಗ ಹಿಂದೆ ಸ್ಮಶಾನವಾಗಿತ್ತು ಎಂಬ ಮಾತು ಸ್ಥಳೀಯರ ನಡುವೆ ಹರಡಿತ್ತು. ಇದರಿಂದಲೇ ಅಲ್ಲಿ ಅತೀಂದ್ರಿಯ ಘಟನೆಗಳು ನಡೆಯುತ್ತಿವೆ ಎಂಬ ನಂಬಿಕೆ ಕೆಲವರಲ್ಲಿತ್ತು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ಸಂಬಂಧಗಳು
ಕರ್ನಾಟಕ ಸುದ್ದಿ
ಸುದ್ದಿ

Latest Videos
Recommended Stories
Recommended image1
ರಣವೀರ್ ಸಿಂಗ್ ಟಾರ್ಗೆಟ್ ಆಗಿರೋದಕ್ಕೆ 'ಅವರಲ್ಲಿರೋ' ಪಾಕಿಸ್ತಾನ ಪ್ರೇಮವೇ ಕಾರಣ; ಕಂಗನಾ ರಣಾವತ್
Recommended image2
Chanakya Niti: ಈ 4 ಸ್ಥಳಗಳಿಂದ ವಾಪಸ್ ಬರುವಾಗ ತಿರುಗಿ ನೋಡಲೇಬಾರದು! ನೋಡಿದರೆ ಬಡತನ, ಕಷ್ಟ ತಪ್ಪಿದ್ದಲ್ಲ
Recommended image3
ಐಶ್ವರ್ಯ ಸಿಂಧೋಗಿ ನನಗೆ ತಂಗಿ ಆಗ್ಬೇಕು ಎನ್ನೋದಾ ಶಿಶಿರ್​ ಶಾಸ್ತ್ರಿ? ಅಷ್ಟಕ್ಕೂ ಅಲ್ಲಿ ಆಗಿದ್ದೇನು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved