- Home
- Life
- Relationship
- Chanakya Niti: ಈ ಗುಣಗಳಿರೋರನ್ನ ಮದುವೆಯಾದ್ರೆ ಲೈಫ್ ಸೂಪರ್ ಆಗಿರುತ್ತೆ! ಮದುವೆಗೂ ಮುನ್ನ ಸಂಗಾತಿಯಲ್ಲಿ ಈ 6 ಗುಣಗಳಿವೆಯಾ ನೋಡಿ
Chanakya Niti: ಈ ಗುಣಗಳಿರೋರನ್ನ ಮದುವೆಯಾದ್ರೆ ಲೈಫ್ ಸೂಪರ್ ಆಗಿರುತ್ತೆ! ಮದುವೆಗೂ ಮುನ್ನ ಸಂಗಾತಿಯಲ್ಲಿ ಈ 6 ಗುಣಗಳಿವೆಯಾ ನೋಡಿ
ಮದುವೆ ಅನ್ನೋದು ಇಬ್ಬರು ಸೇರಿ ಜೀವನಪೂರ್ತಿ ಮಾಡೋ ಸುಂದರ ಪಯಣ. ಹಾಗಾಗಿ ಲೈಫ್ ಪಾರ್ಟ್ನರ್ ಆಯ್ಕೆ ಮಾಡಿಕೊಳ್ಳುವಾಗ ಸ್ವಲ್ಪ ಹುಷಾರಾಗಿರಬೇಕು. ಆಚಾರ್ಯ ಚಾಣಕ್ಯರ ಪ್ರಕಾರ, ಸಂಗಾತಿಯಲ್ಲಿ ಯಾವೆಲ್ಲಾ ಗುಣಗಳಿದ್ದರೆ ದಾಂಪತ್ಯ ಜೀವನ ಖುಷಿಯಾಗಿರುತ್ತೆ ಅಂತ ಇಲ್ಲಿ ನೋಡೋಣ.

ಸಂಗಾತಿಯಲ್ಲಿ ಇರಬೇಕಾದ ಗುಣಗಳು
ಮದುವೆ ಅನ್ನೋದು ನಮ್ಮ ಲೈಫ್‌ನ ಅತಿ ಮುಖ್ಯವಾದ ನಿರ್ಧಾರ. ಸಂಗಾತಿಯನ್ನ ಆಯ್ಕೆ ಮಾಡುವಾಗ ಕೇವಲ ಅಂದ, ಆಸ್ತಿ, ಕೆಲಸ, ಫ್ಯಾಮಿಲಿ ಬ್ಯಾಕ್‌ಗ್ರೌಂಡ್ ಮಾತ್ರ ನೋಡಿದ್ರೆ ಸಾಲದು. ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಮದುವೆ, ಫ್ಯಾಮಿಲಿ ಲೈಫ್ ಹಾಗೂ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಸಲಹೆಗಳನ್ನ ಕೊಟ್ಟಿದ್ದಾರೆ. ಅವರ ಪ್ರಕಾರ, ಲೈಫ್ ಪಾರ್ಟ್ನರ್‌ನಲ್ಲಿ ಇರಲೇಬೇಕಾದ ಮುಖ್ಯ ಗುಣಗಳೇನು ಅಂತ ಇಲ್ಲಿ ತಿಳಿಯೋಣ.
ಪ್ರಾಮಾಣಿಕತೆ ಮತ್ತು ನಂಬಿಕೆ
ಯಾವುದೇ ಸಂಬಂಧಕ್ಕಾದ್ರೂ ನಂಬಿಕೆನೇ ಅಡಿಪಾಯ. ಮಾತಲ್ಲಿ ಒಂದು, ಕೆಲಸದಲ್ಲಿ ಇನ್ನೊಂದು ಮಾಡೋ ವ್ಯಕ್ತಿ ಜೊತೆ ಲೈಫ್ ಲಾಂಗ್ ಇರೋದು ಕಷ್ಟ. ಇದರಿಂದ ಅನುಮಾನ, ತಪ್ಪು ತಿಳುವಳಿಕೆ ಶುರುವಾಗುತ್ತೆ. ಅದಕ್ಕೆ ಮದುವೆಗೂ ಮುನ್ನ ಆ ವ್ಯಕ್ತಿ ಎಷ್ಟು ಪ್ರಾಮಾಣಿಕ ಅಂತ ನೀವು ಗಮನಿಸಬೇಕು. ಸಣ್ಣ ಸಣ್ಣ ವಿಚಾರಗಳಿಗೂ ಸುಳ್ಳು ಹೇಳೋ ಅಭ್ಯಾಸ ಇದ್ಯಾ ಅನ್ನೋದನ್ನ ಚೆಕ್ ಮಾಡಿ.
ಒಳ್ಳೆಯ ಸ್ವಭಾವ
ಚಾಣಕ್ಯ ನೀತಿಯಲ್ಲಿ ಅಂದಕ್ಕಿಂತ ವ್ಯಕ್ತಿಯ ಗುಣ ಹಾಗೂ ನಡತೆಗೆ ಹೆಚ್ಚು ಬೆಲೆ ಇದೆ. ಮದುವೆ ಆದ್ಮೇಲೆ ಅಂದಕ್ಕಿಂತ ಅವರ ಸ್ವಭಾವ ನಮ್ಮ ಮೇಲೆ ಹೆಚ್ಚು ಪ್ರಭಾವ ಬೀರುತ್ತೆ. ಕಷ್ಟ ಬಂದಾಗ ಅವರು ಹೇಗೆ ರಿಯಾಕ್ಟ್ ಮಾಡ್ತಾರೆ? ಬೇರೆಯವರಿಗೆ ಹೇಗೆ ಗೌರವ ಕೊಡ್ತಾರೆ? ಕೋಪ ಬಂದಾಗ ಹೇಗೆ ಮಾತಾಡ್ತಾರೆ? ತಮ್ಮ ತಪ್ಪನ್ನ ಒಪ್ಪಿಕೊಳ್ತಾರಾ? ಈ ಎಲ್ಲವನ್ನೂ ನೀವು ಗಮನಿಸಬೇಕು. ಅಂದವಾದ ಮುಖ ಆಕರ್ಷಣೆ ಕೊಡಬಹುದು, ಆದ್ರೆ ಒಳ್ಳೆಯ ಸ್ವಭಾವ ಮಾತ್ರ ಸಂಬಂಧವನ್ನ ಗಟ್ಟಿಯಾಗಿ ಉಳಿಸುತ್ತೆ.
ಗೌರವದಿಂದ ಮಾತಾಡೋ ವ್ಯಕ್ತಿ
ಎಷ್ಟೇ ಪ್ರೀತಿ ಇದ್ರೂ ಮಾತಲ್ಲಿ ಗೌರವ ಇಲ್ಲ ಅಂದ್ರೆ ಆ ಸಂಬಂಧದಲ್ಲಿ ಬೇಸರ ಶುರುವಾಗುತ್ತೆ. ಲೈಫ್ ಪಾರ್ಟ್ನರ್ ನಿಮ್ಮ ಜೊತೆ ಮಾತ್ರವಲ್ಲ, ಫ್ಯಾಮಿಲಿ, ಫ್ರೆಂಡ್ಸ್ ಅಥವಾ ಬೇರೆಯವರ ಜೊತೆ ಹೇಗೆ ಮಾತಾಡ್ತಾರೆ ಅಂತ ಗಮನಿಸಿ. ತಮಗಿಂತ ಕೆಳಗಿನವರನ್ನ ಅವರು ಹೇಗೆ ಟ್ರೀಟ್ ಮಾಡ್ತಾರೆ ಅನ್ನೋದ್ರಿಂದ ಅವರ ಅಸಲಿ ಕ್ಯಾರೆಕ್ಟರ್ ಗೊತ್ತಾಗುತ್ತೆ. ಸಿಹಿಯಾಗಿ ಮಾತಾಡೋದು, ಬೇರೆಯವರ ಮಾತು ಕೇಳೋದು, ಜಗಳ ಆದ್ರೂ ಗೌರವ ಬಿಡದೆ ಮಾತಾಡೋದು ಒಳ್ಳೆ ಸಂಬಂಧಕ್ಕೆ ಬೇಕೇಬೇಕು. ಇಂಥಾ ಗುಣಗಳಿರೋ ವ್ಯಕ್ತಿ ಜೊತೆ ಲೈಫ್ ಯಾವಾಗ್ಲೂ ಹ್ಯಾಪಿಯಾಗಿರುತ್ತೆ ಅಂತ ಚಾಣಕ್ಯ ನೀತಿ ಹೇಳುತ್ತೆ.
ಕೋಪ ಕಂಟ್ರೋಲ್ ಮಾಡೋ ವ್ಯಕ್ತಿ
ಲೈಫ್‌ನಲ್ಲಿ ಪ್ರತಿಯೊಂದು ವಿಚಾರದಲ್ಲೂ ಇಬ್ಬರ ಅಭಿಪ್ರಾಯ ಒಂದೇ ಆಗಿರಲ್ಲ. ಗಂಡ-ಹೆಂಡತಿ ಮಧ್ಯೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬರೋದು ಕಾಮನ್. ಆದ್ರೆ ಸಮಸ್ಯೆ ಬಂದಾಗ ಅದನ್ನ ಹೇಗೆ ಸಾಲ್ವ್ ಮಾಡ್ತಾರೆ ಅನ್ನೋದು ಮುಖ್ಯ. ಕೋಪದಲ್ಲಿ ಬೈಯೋದು, ಕೂಗಾಡೋದು, ಬೆದರಿಸೋದು ಅಥವಾ ಕೀಳಾಗಿ ಮಾತಾಡೋದು ಸಂಬಂಧವನ್ನ ಹಾಳು ಮಾಡುತ್ತೆ. ಹಾಗಾಗಿ ಎಷ್ಟೇ ಟೆನ್ಷನ್ ಇದ್ರೂ ಕೂಲ್ ಆಗಿ ಮಾತಾಡೋ ವ್ಯಕ್ತಿತ್ವಕ್ಕೆ ತುಂಬಾನೇ ಬೆಲೆ ಇದೆ.
ಹೊಂದಾಣಿಕೆ ಮಾಡಿಕೊಳ್ಳುವ ಮನಸ್ಸು
ಯಾವಾಗ್ಲೂ ಬೇರೆಯವರ ಜೊತೆ ಕಂಪೇರ್ ಮಾಡೋದು, ಇರೋದ್ರಲ್ಲಿ ಖುಷಿ ಪಡದೆ ಇರೋದು ಫ್ಯಾಮಿಲಿ ಲೈಫ್‌ನಲ್ಲಿ ಟೆನ್ಷನ್ ತರುತ್ತೆ. ಪರಿಸ್ಥಿತಿ ಅರ್ಥ ಮಾಡಿಕೊಂಡು, ಬೇಕಾದಾಗ ಅಡ್ಜಸ್ಟ್ ಮಾಡಿಕೊಳ್ಳೋ ಗುಣ ಇದ್ರೆ ಎಂಥಾ ಸಮಸ್ಯೆನಾದ್ರೂ ಈಸಿಯಾಗಿ ಸಾಲ್ವ್ ಮಾಡಬಹುದು. ಪರಸ್ಪರ ಗೌರವದಿಂದ ಇಬ್ಬರೂ ತಮ್ಮ ಅಗತ್ಯಗಳು ಮತ್ತು ಅಭಿಪ್ರಾಯಗಳನ್ನ ಹಂಚಿಕೊಳ್ಳೋದು ಮುಖ್ಯ.
ಜವಾಬ್ದಾರಿ ಅರಿತಿರುವ ವ್ಯಕ್ತಿ
ಮದುವೆ ಆದ್ಮೇಲೆ ಲೈಫ್ ಬರೀ ಪ್ರೀತಿ, ರೊಮ್ಯಾನ್ಸ್ ಆಗಿರಲ್ಲ. ಫ್ಯಾಮಿಲಿ ಜವಾಬ್ದಾರಿ, ಹಣಕಾಸಿನ ನಿರ್ಧಾರ, ಆರೋಗ್ಯ, ಮಕ್ಕಳ ಪೋಷಣೆ, ಹಿರಿಯರ ಆರೈಕೆ ಹೀಗೆ ಸಾಕಷ್ಟು ಜವಾಬ್ದಾರಿಗಳು ಇರುತ್ತೆ. ಹಾಗಾಗಿ ಜವಾಬ್ದಾರಿಯಿಂದ ನುಣುಚಿಕೊಳ್ಳದೆ, ಪರಿಸ್ಥಿತಿ ಅರ್ಥ ಮಾಡಿಕೊಂಡು ನಿರ್ಧಾರ ತಗೊಳ್ಳೋ ವ್ಯಕ್ತಿ ಬೆಸ್ಟ್ ಪಾರ್ಟ್ನರ್ ಆಗ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

