- Home
- Life
- Relationship
- ಸೀರಿಯಸ್ ರಿಲೇಶನ್‌ಶಿಪ್‌ಗೆ ಯಾರೂ ಸಿಗ್ತಿಲ್ವಾ? ಸುಲಭ ಪರಿಹಾರ ಕೊಟ್ಟ ಪ್ರೊಫೆಸರ್ BHDM ಐಡಿಯಾ!
ಸೀರಿಯಸ್ ರಿಲೇಶನ್‌ಶಿಪ್‌ಗೆ ಯಾರೂ ಸಿಗ್ತಿಲ್ವಾ? ಸುಲಭ ಪರಿಹಾರ ಕೊಟ್ಟ ಪ್ರೊಫೆಸರ್ BHDM ಐಡಿಯಾ!
What is a good bio to put on a dating app: ಡೇಟಿಂಗ್ ಆಪ್‌ಗಳಲ್ಲಿ ಎಷ್ಟೋ ಗಂಟೆ ಹುಡುಕಿದರೂ ಕೂಡ ನಮಗೆ ಸೂಕ್ತವಾದ ವ್ಯಕ್ತಿ ಸಿಗೋದಿಲ್ಲ. ಹೀಗಾಗಿ BHDM (Burned Haystack Dating Method) ಐಡಿಯಾವನ್ನು ಕಂಡುಹಿಡಿಯಲಾಗಿದೆ. ಇದರಿಂದ ಸುಲಭವಾಗಿ ನಮಗೆ ಬೇಕಾಗುವ ಸಂಗಾತಿ ಸಿಗುತ್ತಾರಂತೆ.

ಪ್ರೊಫೆಸರ್ ಕಂಡುಹಿಡಿದ ಐಡಿಯಾ!
2023ರಲ್ಲಿ ಪ್ರೊಫೆಸರ್ ಡಾ. ಜೆನ್ನಿ ಯಂಗ್ ಅವರು ಈ ವಿಧಾನ ಕಂಡುಹಿಡಿದರು. ಡೇಟಿಂಗ್ ಆಪ್‌ನಲ್ಲಿ ಸಿಕ್ಕಾಪಟ್ಟೆ ಜನರು ಇರುವಾಗ, ನಮಗೆ ಯಾವ ಥರದವರು ಬೇಡ ಎನ್ನೋದನ್ನು ಮೊದಲು ಕಂಡುಹಿಡಿಯೋದು ಇದರ ಪದ್ಧತಿ.

ಇದು ಹೇಗೆ ವರ್ಕ್ ಆಗುತ್ತೆ?
ನೀವು ಒಣಗಿದ ಹುಲ್ಲಿನ ರಾಶಿಯಲ್ಲಿರುವ ಸೂಜಿಯನ್ನು ಹುಡುಕಬೇಕು ಎಂದರೆ ಹುಲ್ಲನ್ನು ತಡಕಾಡುತ್ತಿರಬೇಡಿ, ಅದರ ಬರಲಿಗೆ ಹುಲ್ಲಿನ ರಾಶಿಗೆ ಬೆಂಕಿ ಹಾಕಿ ಎಂದು ಈ ಐಡಿಯಾ ಹೇಳುತ್ತದೆ.
BHDM ಏನು ಹೇಳುತ್ತೆ?
ಓರ್ವ ವ್ಯಕ್ತಿ ನನಗೆ ಯಾಕೆ ಬೇಡ ಎಂದು ಹೇಳಬೇಕು, ಆಗ ನಮಗೆ ಬೇಕಾದ ವ್ಯಕ್ತಿಯ ಪ್ರೊಫೈಲ್‌ಗಳು ಫಿಲ್ಟರ್ ಆಗುತ್ತವೆ. BHDM ಪ್ರಕಾರ, ಓರ್ವ ವ್ಯಕ್ತಿಯ ಪ್ರೊಫೈಲ್ ಬಯೋ (Bio) ನೋಡಿ ಅವರು ಒಳ್ಳೆಯವರೇ? ಎಂದು ಹೇಳಲು ಆಗೋದಿಲ್ಲ. ಆದರೆ ನಮಗೆ ನಮಗೆ ಸೂಕ್ತ ಅಲ್ಲ ಎಂದು ಹೇಳಬಹುದು.
'ಬ್ಲಾಕ್ ಟು ಬರ್ನ್' (Block to Burn) ತಂತ್ರ
BHDM ಪ್ರಕಾರ ಓರ್ವ ವ್ಯಕ್ತಿ ನಿಮ್ಮ ಲೈಫ್‌ಗೆ ಅಡ್ಜಸ್ಟ್ ಆಗೋದಿಲ್ಲ ಎಂದರೆ, ತಕ್ಷಣವೇ ಬ್ಲಾಕ್ ಮಾಡಿ.
ಏನೇನು ಮಾಡಬೇಕು?
ಡೇಟಿಂಗ್ ಆಪ್‌ಗಳಿಗಾಗಿ ಇಡೀ ದಿನ ಹಾಳು ಮಾಡಬೇಡಿ
ನೋಟಿಫಿಕೇಶನ್‌ಗಳನ್ನು ಆಫ್ ಮಾಡಿ.
ಯಾರ ಜೊತೆಯೂ ವಾದ ಬೇಡ
ನಿಮ್ಮ ವೈಯಕ್ತಿಕ ವಿಷಯಗಳನ್ನು ಮೊದಲೇ ಹೇಳಬೇಡಿ
ಒಳ್ಳೆಯ ಉದ್ದೇಶಕ್ಕೆ ಬಳಸಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

