- Home
- Life
- Relationship
- ಎಂಗೇಜ್ಮೆಂಟ್ ಬೆನ್ನಲ್ಲೇ ಭಾರ್ಗವಿ- ಜೈದೇವ್ ಹೋಟೆಲ್ ಸುತ್ತಾಟ: ರಾಧಾ-ರಾಣವ್ ಫೋಟೋ ವೈರಲ್
ಎಂಗೇಜ್ಮೆಂಟ್ ಬೆನ್ನಲ್ಲೇ ಭಾರ್ಗವಿ- ಜೈದೇವ್ ಹೋಟೆಲ್ ಸುತ್ತಾಟ: ರಾಧಾ-ರಾಣವ್ ಫೋಟೋ ವೈರಲ್
'ಅಮೃತಧಾರೆ' ಸೀರಿಯಲ್‌ನಲ್ಲಿ ಮಲ್ಲಿ ಮತ್ತು ಜೈದೇವ್ ಪಾತ್ರಧಾರಿಗಳಾಗಿದ್ದ ರಾಧಾ ಭಗವತಿ ಮತ್ತು ರಾಣವ್ ಗೌಡ ಇದೀಗ ನಿಜ ಜೀವನದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರಿಯಲ್ ಲೈಫ್‌ನಲ್ಲಿ ಒಂದಾಗಿದ್ದು, ಅವರ ನಿಶ್ಚಿತಾರ್ಥದ ನಂತರದ ಕ್ಷಣಗಳು ಮತ್ತು ವೃತ್ತಿಜೀವನದ ಬಗ್ಗೆ ಈ ಲೇಖನ ವಿವರಿಸುತ್ತದೆ.

ಜೈದೇವನಿಂದ ಗರ್ಭಿಣಿ
ಅಮೃತಧಾರೆ ಸೀರಿಯಲ್‌ನಲ್ಲಿ (Amruthadhaare Serial) ಅಕ್ಕಾವ್ರೇ ಅಕ್ಕಾವ್ರೇ ಎನ್ನುತ್ತಲೇ ಎಲ್ಲರನ್ನೂ ಮೋಡಿ ಮಾಡಿದಾಗ ಮಲ್ಲಿ. ಕೊನೆಗೆ ಮನೆ ಮಾಲೀಕನ ಮಗ ಜೈದೇವ್ನ ಮೋಸದ ಜಾಲಕ್ಕೆ ಬಿದ್ದು ಗರ್ಭಿಣಿಯಾಗಿದ್ದು ಸೀರಿಯಲ್ ಪ್ರಿಯರಿಗೆ ತಿಳಿದದ್ದೇ. ಆಗ ಮಲ್ಲಿಯಾಗಿದ್ದವರು ರಾಧಾ ಭಗವತಿ. ಅವರೀಗ ರಿಯಲ್ ಲೈಫ್‌ನಲ್ಲಿ ಅದೇ ಜೈದೇವ್ ಅರ್ಥಾತ್ ನಟ ರಾಣವ್ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.
ಭಾರ್ಗವಿಯಾಗಿ ಎಂಟ್ರಿ
ಮಲ್ಲಿಯ ರೋಲ್ ಸೈಡ್ ರೋಲ್ ಆಗಿದ್ದ ಹಿನ್ನೆಲೆಯಲ್ಲಿ, ಮಲ್ಲಿ ರೋಲ್ನ ಉಲ್ಟಾ ಕ್ಯಾರೆಕ್ಟರ್, ಸ್ಟ್ರಾಂಗ್ ಲೇಡಿ, ಲೇಡಿ ಡಾನ್ ಆಗಿ ನಾಯಕಿಯ ಪಾತ್ರದಲ್ಲಿ ಭಾರ್ಗವಿಯಾಗಿ ರಾಧಾ ಭಗವತಿ ಮಿಂಚುತ್ತಿದ್ದಾರೆ. ಅಮೃತಧಾರೆ ಸೀರಿಯಲ್‌ನಲ್ಲಿ ಈಗ ಮಲ್ಲಿ ಪಾತ್ರವನ್ನು ಅನ್ವಿತಾ ಸಾಗರ್ ಮಾಡುತ್ತಿದ್ದಾರೆ.
ರಾಧಾ ಭಗವತಿ ಮತ್ತು ರಾಣವ್ ಗೌಡ
ರಾಧಾ ಭಗವತಿ ಮತ್ತು ರಾಣವ್ ಗೌಡ (Radha Bhagavati and Raanav Gowda) ಅವರು ಇದೀಗ ಎಂಗೇಜ್ಮೆಂಟ್ ಬಳಿಕ ಹೋಟೆಲ್ ಒಂದಕ್ಕೆ ಹೋಗಿದ್ದು ಅದರ ಫೋಟೋಗಳು ವೈರಲ್ ಆಗಿವೆ. ಹೋಟೆಲ್ ಪ್ರಮೋಷನ್ಗಾಗಿ ಈ ಜೋಡಿಯನ್ನು ಊಟಕ್ಕೆ ಕರೆಯಲಾಗಿತ್ತು. ಈ ಹೋಟೆಲ್ ಅಡುಗೆ ತುಂಬಾ ಚೆನ್ನಾಗಿದೆ ಎಂದು ಈ ಜೋಡಿ ಹೇಳಿರುವುದಾಗಿ ಬರೆದುಕೊಂಡಿರುವ ಮಾಲೀಕರು ಫೋಟೋ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ನಟಿಯ ಕುರಿತು
ನಟಿ ರಾಧಾ ಭಗವತಿ ಕುರಿತು ಹೇಳುವುದಾದರೆ, ಅವರು ‘ಆ 90 ದಿನಗಳು’, ‘ವಸಂತ ಕಾಲದ ಹೂಗಳು’, ‘ಅಪಾಯವಿದೆ ಎಚ್ಚರಿಕೆ’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಇನ್ನು ‘ಬಾನಿಗೊಂದು ತಾರೆ’ ಮ್ಯೂಸಿಕ್ ವಿಡಿಯೋದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ನಾಯಕನ ತಂಗಿಯಾಗಿ ನಟಿಸುತ್ತಿದ್ದಾರೆ. ಸದ್ಯ ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ.
ಜೈದೇವ್ ಕುರಿತು
ಅಂದಹಾಗೆ ಜೈದೇವ್ JD ಪಾತ್ರದಲ್ಲಿ ನಟಿಸ್ತಿರೋ ನಟನ ಹೆಸರು ರಾಣವ್ ರಾವ್. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ, ತುಳಸಿ ಧಾರಾವಾಹಿಯಲ್ಲಿ, ಸುಧಾರಾಣಿಯವರ (Sudharani) ಜೊತೆ ಬಾಲನಟನಾಗಿ ನಟಿಸುವ ಮೂಲಕ ರಾಣವ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಆವಾಗ ರಾಣವ್ ಆರನೇ ತರಗತಿಯಲ್ಲಿ ಓದುತ್ತಿದ್ದರು. ಬಾಲ್ಯದಲ್ಲಿಯೇ ನಟನೆಯ ಕಡೆಗೆ ಒಲವು ಬೆಳೆಸಿಕೊಂಡಿದ್ದ ರಾಣವ್ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿವಹಿಸಿದ್ದೇ ಹೆಚ್ಚು. ಅದೇ ಕಾರಣದಿಂದ ಇವರು ಇಂಜಿನಿಯರಿಂಗ್ ಅರ್ಧದಲ್ಲೇ ಬಿಟ್ಟು, ಮತ್ತೆ ನಟನೆಯತ್ತ ಮುಖ ಮಾಡಿದರು.
ಕಿರುತೆರೆಯಲ್ಲಿ ಮಿಂಚಿಂಗ್
ಸದ್ಯ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಉದಯ ಟಿವಿಯಲ್ಲಿ (Udaya Tv) ಪ್ರಸಾರವಾಗುತ್ತಿದ್ದ ಅರಮನೆ ಧಾರಾವಾಹಿಯಲ್ಲಿ ನಾಯಕನ ಗೆಳೆಯನ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ರಾಣವ್ ಮತ್ತೆ ಹಿಂದಿರುಗಿ ನೋಡೇ ಇಲ್ಲ. ಒಂದಾದ ಮೇಲೆ ಒಂದರಂತೆ ಹಲವು ಧಾರಾವಾಹಿಗಳಲ್ಲಿ ಇವರು ನಟಿಸಿದರು. ಬಿ.ಸುರೇಶ್ ಅವರ 'ಜೀವನದಿ’, ಕಸ್ತೂರಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ರಾಜಕುಮಾರಿ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರುತ್ತಿದ್ದ ವರಲಕ್ಷ್ಮೀ ಸ್ಟೋರ್ಸ್ , ಮತ್ತೆ ವಸಂತ, ಝೀ ಕನ್ನಡದ ಕಮಲಿ ಧಾರಾವಾಹಿಯಲ್ಲೂ ನಟಿಸುವ ಮೂಲಕ ವೀಕ್ಷಕರ ಮನ ಗೆದ್ದಿದ್ದರು.
ಎಲ್ಲರಲ್ಲಿಯೂ ಸೈ
ಕಿರುತೆರೆಯಲ್ಲಿ ಮಾತ್ರವಲ್ಲ ಇವರು ಹಿರಿತೆರೆಯಲ್ಲೂ ನಟಿಸಿದ್ದಾರೆ. ಸ್ಯಾಂಡಲ್ ವುಡ್ ನ ಮತ್ತೆ ಬಾ ಉಪೇಂದ್ರ, ಶೀಕಂಠ, ವಿರಾಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಟ್ಟಲ್ಲಿ ನೆಗೆಟಿವ್ ಮತ್ತು ಪಾಸೀಟಿವ್ ಎರಡೂ ಪಾತ್ರಗಳಿಗೂ ರಾಣವ್ ಜೀವ ತುಂಬಿ ನಟಿಸುತ್ತಾರೆ ಅನ್ನೋದು ಸುಳ್ಳಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

