ಡೇಟಿಂಗ್ ಮಾಡೋ ಮುನ್ನ ಯಾವ ರೀತಿಯ ಹುಡುಗರು ಇರ್ತಾರೆ ಅನ್ನೋದನ್ನು ತಿಳ್ಕೊಳಿ!
ಡೇಟಿಂಗ್ ಮಾಡುವ ಮೊದಲು, ನೀವು ಪುರುಷರ ಈ 7 ರೀತಿಯ ವ್ಯಕ್ತಿತ್ವಗಳ ಬಗ್ಗೆ ತಿಳಿದುಕೊಳ್ಳಬೇಕು, ಇದರಿಂದ ಸಂಗಾತಿಯನ್ನು ಆಯ್ಕೆ ಮಾಡೋವಾಗ ತಪ್ಪು ನಡೆಯೋದಿಲ್ಲ. ನಿಮ್ಮ ಲವ್ ಲೈಫ್ ಕೂಡ ಅದ್ಭುತವಾಗಿರುತ್ತೆ.
ನಾವು ನಮ್ಮ ಜೀವನದಲ್ಲಿ ಹಲವಾರು ರೀತಿಯ ವ್ಯಕ್ತಿಗಳನ್ನು ಭೇಟಿಯಾಗುತ್ತೇವೆ. ಮಹಿಳೆಯರು ಕೆಲವರೊಂದಿಗೆ ಸ್ನೇಹ ಬೆಳೆಸ್ತಾರೆ, ತುಂಬಾ ಕ್ಲೋಸ್ ಆಗ್ತಾರೆ, ಇನ್ನೂ ಕೆಲವರೊಂದಿಗೆ ರಿಲೇಶನ್ ಶಿಪ್ (relationship) ನಲ್ಲಿರಲೂ ಬಯಸುತ್ತಾರೆ. ಈ ರಿಲೇಶನ್ ಶಿಪ್ ಗೆ ಬರೋ ಮುನ್ನ ನೀವು ಪುರುಷರ ಬಗ್ಗೆ ತಿಳಿದುಕೊಳ್ಳೋದು ಮುಖ್ಯ. ಯಾಕೆಂದ್ರೆ ನೀವು ಪುರುಷರ ಬಗ್ಗೆ ತಿಳಿದಾಗ ಮಾತ್ರ ಅವರ ಜೊತೆ ಬಾಳ್ವೆ ಮಾಡೋದು ಸಾಧ್ಯಾನ ಇಲ್ವ ಅನ್ನೋದು ತಿಳಿಯುತ್ತೆ.
ನಿಮಗಾಗಿ ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡಿ: ಸಂಗಾತಿಯ ಆಯ್ಕೆಯು ನಿಮ್ಮ ಜೀವನವನ್ನು ರೂಪಿಸಬಹುದು ಅಥವಾ ಮುರಿಯಬಹುದು. ಅದು ಲವ್ ಮ್ಯಾರೇಜ್ (love marriage) ಇರಲಿ ಅಥವಾ ಅರೇಂಜ್ ಮ್ಯಾರೇಜ್ ಇರಲಿ, ಹುಡುಗಿಯರು ಸಾಮಾನ್ಯವಾಗಿ ಸಂಗಾತಿಯನ್ನು ಆಯ್ಕೆ ಮಾಡುವಾಗ ಬಾಹ್ಯ ವ್ಯಕ್ತಿತ್ವ ಮತ್ತು ಸಾಮಾಜಿಕ ಸ್ಥಾನಮಾನದ ಬಗ್ಗೆ ಗಮನ ಹರಿಸುತ್ತಾರೆ. ಆದರೆ ಜೊತೆಯಾಗಿ ಬಾಳಲು ಸಂಗಾತಿಯ ಆಂತರಿಕ ವ್ಯಕ್ತಿತ್ವ ಮತ್ತು ನಡವಳಿಕೆಯು ತುಂಬಾನೆ ಮುಖ್ಯ. ನೀವು ಸಹ ನಿಮಗಾಗಿ ಸಂಗಾತಿಯನ್ನು ಆಯ್ಕೆ ಮಾಡಲು ಬಯಸಿದರೆ, ಪುರುಷರ ವ್ಯಕ್ತಿತ್ವದ ಬಗ್ಗೆ ತಿಳಿಯಿರಿ.
ಆಲ್ಫಾ ಮೇಲ್ (Alpha Male): ಪುರುಷರ ಗುಂಪಿನಲ್ಲಿ, ಇಂತಹ ಹುಡುಗರನ್ನು ಹೆಚ್ಚಾಗಿ ಕೆಟ್ಟ ಹುಡುಗರು ಎಂದು ಕರೆಯುತ್ತಾರೆ. . ಯಾಕಂದ್ರೆ ಇವರು ತಮ್ಮ ಆಸೆಗಳ ಬಗ್ಗೆ ತುಂಬಾನೆ ಭಾವೋದ್ರಿಕ್ತರಾಗಿರುತ್ತಾರೆ. ಅಷ್ಟೇ ಅಲ್ಲ ಇವರು ಬಲಶಾಲಿ, ಆಕರ್ಷಕ ಮತ್ತು ನಾಯಕತ್ವದ ಗುಣವನ್ನು ಹೊಂದಿರುವವರು ಆಗಿರ್ತಾರೆ. ಆದರೆ ರಿಲೇಶನ್ ಶಿಪ್ ವಿಷ್ಯ ಬಂದ್ರೆ ಇವರು ಎಲ್ಲರನ್ನೂ ಕಂಟ್ರೋಲ್ ಮಾಡೊದನ್ನೇ ಬಯಸ್ತಾರೆ. ಇಂಥಹ ಪುರುಷರು ಯಾವತ್ತೂ ತಮ್ಮ ನಿರ್ಣಯಗಳಿಂದ ಹಿಂದೆ ಸರಿಯುವುದಿಲ್ಲ ಅಥವಾ ಬಿಟ್ಟುಕೊಡುವುದಿಲ್ಲ.
ಬೀಟಾ ಮೇಲ್ (Beta Male): ಈ ಹುಡುಗರು ಹೆಚ್ಚಾಗಿ ನಾಚಿಕೆ ಸ್ವಭಾವದವರು. ಬೀಟಾ ಮೇಲ್ ಸ್ವಭಾವತಃ ನಾಚಿಕೆಪಡುವ, ಹುಡುಗರಾಗಿರುತ್ತಾರೆ. ಇವರು ಯಾವತ್ತೂ ಶೋ ಆಫ್ ಮಾಡೋದೆ ಇಲ್ಲ, ಯಾವಾಗಲೂ ಡೌನ್ ಟು ಅರ್ಥ್ ಆಗಿರುತ್ತಾರೆ, ತುಂಬಾನೆ ಸೌಮ್ಯ ಸ್ವಭಾವದ ಜನರು ಇವರು. ಅವರು ತಮ್ಮ ಸ್ವಂತ ಸೌಕರ್ಯ ಜೊತೆಗೆ ಇತರರ ಸೌಕರ್ಯವನ್ನು ನೋಡಿಕೊಳ್ಳುತ್ತಾರೆ. ಇವರು ಉತ್ತಮ ಕೇಳುಗರಾಗಿದ್ದು, ನೀವು ಅವರ ಜೊತೆ ಉತ್ತಮ ಸಮಯ ಕಳೆಯಬಹುದು..
ಗಾಮಾ ಮೇಲ್ (Gamma Male): ಫ್ರೆಂಡ್ಸ್ ಮಾಡೋದರಲ್ಲಿ ಪರಿಣಿತರು ಈ ಮೂರನೇ ಕೆಟಗರಿಯ ಹುಡುಗರು. ಇವರನ್ನು ಪಾರ್ಟಿಯ ಲೈಫ್ ಅಥವಾ ಸೆಂಟರ್ ಆಫ್ ಅಟ್ರಕ್ಷನ್ ಎಂದೇ ಹೇಳಬಹುದು. ಯಾವಾಗಲೂ ಎನರ್ಜಿಟಿಕ್ ಆಗಿರುವ ಈ ವ್ಯಕ್ತಿಗಳು ಹೆಚ್ಚಾಗಿ ತಿರುಗಾಡಲು, ತಿನ್ನಲು, ಚಾಲೆಂಜಸ್ (challenges) ಸ್ವೀಕರಿಸೋದಕ್ಕೆ ಇಷ್ಟಪಡ್ತಾರೆ. ಯಾವಾಗಲೂ ಏನಾದರೊಂದಿಗೆ ಅಡ್ವೆಂಚರಸ್ ಆಗಿ ಪ್ಲ್ಯಾನ್ ಮಾಡೊ ಹುಡುಗರು ನಿಮ್ಮ ಗ್ರೂಪಲ್ಲೂ ಇದ್ದಾರ? ಆದರೆ ಜೀವನದಲ್ಲಿ ನಾವು ಒಂದು ಸಲವಾದರೂ ಸ್ಥಿರವಾಗಿರಲೇಬೇಕಾಗುತ್ತದೆ, ಅಂತಹ ಸಂದರ್ಭದಲ್ಲಿ ಇವರ ಜೊತೆ ಇರೋದಕ್ಕೆ ಸಾಧ್ಯ ಆಗೋದಿಲ್ಲ. ಅಥವಾ ಅವರಿಗೇ ತಮ್ಮ ಈ ಸ್ಥಿರ ಜೀವನದಿಂದ ಬೋರ್ ಆಗಿರುತ್ತೆ.
ಡೆಲ್ಟಾ ಮೇಲ್ (Delta Male): ನಿಮ್ಮ ತಂಡದಲ್ಲಿ ಅಥವಾ ಕುಟುಂಬದಲ್ಲಿ ಡೆಲ್ಟಾ ಪುರುಷ ಇದ್ದರೆ, ಜೀವನದಲ್ಲಿನ ಬದಲಾವಣೆಗಳ ಬಗ್ಗೆ ನೀವು ಭಯಪಡಬೇಕಾಗಿಲ್ಲ. ನೀವು ಅವರನ್ನು ತಂಡದ ನಾಯಕರಾಗಿ ನೋಡದೆ ತಂಡದ ಆಟಗಾರರಾಗಿ ನೋಡಬಹುದು. ಇದು ಇಡೀ ತಂಡಕ್ಕೆ ಪ್ರಯೋಜನ ನೀಡುತ್ತದೆ. ಅವರು ಹೊಸ ವಿಷಯಗಳನ್ನು ಕಲಿಯುವುದು, ಅವುಗಳನ್ನು ಸ್ವೀಕರಿಸುವುದು ಮತ್ತು ಮುಂದೆ ಸಾಗುವುದನ್ನು ನಂಬುತ್ತಾರೆ.
ಸಿಗ್ಮಾ ಮೇಲ್ (Sigma Male): ಆಲ್ಫಾ ಪುರುಷರ ಹೆಚ್ಚಿನ ಗುಣಗಳು ಸಿಗ್ಮಾ ಪುರುಷರಲ್ಲಿ ಇರುತ್ತವೆ. ಅವರು ತಮ್ಮದೇ ಆದ ಮಾರ್ಗಗಳನ್ನು ರೂಪಿಸೋದನ್ನು ನಂಬುತ್ತಾರೆ ಮತ್ತು ಇತರರನ್ನು ಮುಂದೆ ತಳ್ಳಲು ಇಷ್ಟಪಡುತ್ತಾರೆ. ಇವರೊಬ್ಬ ಮಾರ್ಗದರ್ಶಕರಂತೆ ನಿಮಗೆ ಕಾಣಿಸಬಹುದು. ಅವರು ತಮ್ಮ ಅನುಭವಗಳಿಂದ ಕಲಿಯುವುದನ್ನು ನಂಬುತ್ತಾರೆ, ಹಾಗಾಗಿ ಇವರು ತಾವು ಸೋಶಿಯಲ್ ಆಗಿ ಹೇಗಿರಬೇಕು ಎನ್ನುವ ಬಗ್ಗೆ ತಲೆ ಕೆಡಿಸೋದಿಲ್ಲ. ಅವರ ಈ ಗುಣಗಳೇ ಸಂಗಾತಿಗೆ ಅಥವಾ ಫ್ಯಾಮಿಲಿಗೆ ಇಷ್ಟವಾಗದೇ ಇರಬಹುದು.
ಝೀಟಾ ಮೇಲ್ (Zeta Male): ಹೆಚ್ಚಿನ ಕಲಾವಿದರು, ಬರಹಗಾರರು, ಸೃಜನಶೀಲ ಜನರು ಈ ವರ್ಗಕ್ಕೆ ಸೇರಿದವರಾಗಿರ್ತಾರೆ. ಏಕೆಂದರೆ ಅವರಿಗೆ ತನ್ನ ಬಗ್ಗೆ ಚೆನ್ನಾಗಿಯೇ ತಿಳಿದಿರುತ್ತೆ, ಇದಕ್ಕಾಗಿ ಅವರು ಯಾರನ್ನೂ ಅನುಸರಿಸೋದಿಲ್ಲ ಎಂದು ಅವರು ಅಂದುಕೊಳ್ಳುತ್ತಾರೆ.. ಇವರು ಸೋಶಿಯಲ್ ಆಗಿ ಯಾವುದನ್ನು ಬ್ಯಾನ್ ಮಾಡಿದ್ದಾರೆ ಎನ್ನುವ ಬಗ್ಗೆ ಯೋಚನೆ ಮಾಡೋದೆ ಇಲ್ಲ. ಬಿಂದಾಸ್ ಆಗಿ ಇರುತ್ತಾರೆ. ಆದರೆ ಕೆಲವೊಮ್ಮೆ ಅವರ ಅತಿಯಾದ ಸೃಜನಶೀಲತೆಯು ಅವರ ಸುತ್ತಲಿನ ಜನರಿಗೆ ಬೇಸರವಾಗುತ್ತದೆ, ಇವರಿಗೆ ಟ್ರೆಡಿಶನಲ್ ವಿಷ್ಯಗಳು ಇಷ್ಟವಾಗೋದು ತುಂಬಾ ಕಡಿಮೆ.
ಒಮೆಗಾ ಮೇಲ್ (Omega Male): ತನ್ನ ಸ್ವಂತ ಕಂಪನಿಯನ್ನು ತುಂಬಾ ಎಂಜಾಯ್ ಮಾಡುವವರು ಒಮೆಗಾ ಮೇಲ್ ಕೆಟಗರಿಯ ಹುಡುಗರು, ಬೀಟಾ ಮೇಲ್ ಗಿಂತ ಹೆಚ್ಚು ನಾಚಿಕೆ ಸ್ವಭಾವದವರು ಇವರು. ಅವರು ಸಾಮಾಜಿಕವಾಗಿ ಬೆರೆಯುವುದಕ್ಕಿಂತ ಹೆಚ್ಚಾಗಿ ತಮ್ಮೊಂದಿಗೆ ಸಮಯ ಕಳೆಯುವುದನ್ನು ಇಷ್ಟಪಡ್ತಾರೆ. ಇಡೀ ವಾರಾಂತ್ಯವನ್ನು ನಿದ್ರೆ ಮಾಡೋದ್ರಲ್ಲೇ ಕಳೆಯೋ ಜನರ ಕೆಟಗರಿಗೆ ಇವರನ್ನು ಸೇರಿಸಬಹುದು. ಸಹಜವಾಗಿ, ಅವರು ಸೃಜನಶೀಲ ಜನರು ಮತ್ತು ಹೆಚ್ಚು ಪಾರ್ಟಿ ಮಾಡುವ ಬದಲು ತಮ್ಮ ಜೀವನದ ಮೇಲೆ ಫೋಕಸ್ ಮಾಡೋದು ಅವರಿಗೆ ಇಷ್ಟ.