80 ವರ್ಷದ ಅಜ್ಜನಿಗೂ 23 ವರ್ಷದ ಸುಂದರಿಗೂ ಲವ್; ಯಾರಿಗೂ ಕ್ಯಾರೆನ್ನದೆ ವಿವಾಹವಾದ ಜೋಡಿ
ಈ ಅಜ್ಜ ಎಂಥ ಘಾಟಿ ಎಂದರೆ, ತಾವಿದ್ದ ವೃದ್ಧಾಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಗೇ ಕಾಳು ಹಾಕಿ ಗೆದ್ದಿದ್ದಾರೆ. ಇಷ್ಟಕ್ಕೂ ಹುಣಸೆ ಮುಪ್ಪಾದರೆ ಹುಳಿ ಮುಪ್ಪೇ?
ಪ್ರೀತಿ ಕುರುಡು, ಅದಕ್ಕೆ ವಯಸ್ಸು, ಜಾತಿ, ರೂಪ ಅಂತಸ್ತು ಯಾವೊಂದೂ ಅಡ್ಡಿಯಾಗುವುದಿಲ್ಲ ಎಂಬ ಮಾತು ಕ್ಲೀಶೆಯಂತೆ ಕೇಳಬಹುದು. ಆದರೆ, ಇದನ್ನು ಸಾಬೀತುಪಡಿಸುವಂಥ ಲವ್ ಸ್ಟೋರಿಗಳು ನಮ್ಮ ನಡುವೆಯೇ ಸಾಕಷ್ಟು ಸಿಗುತ್ತವೆ.
ಇಲ್ನೋಡಿ, ಈ ಫೋಟೋದಲ್ಲಿರೋರು ಅಜ್ಜ ಮೊಮ್ಮಗಳಂತೆ ಇದ್ದಾರೆ. ಆದರೆ, ಇವರಿಬ್ಬರೂ ಈಗ ಗಂಡ ಹೆಂಡತಿ! ಹೌದು, ಲೀ ಎಂಬ ಈ ಹಣ್ಣು ಹಣ್ಣು ಮುದುಕ ಕ್ಸಿಯಾಫಂಗ್ ಎಂಬ 23 ವರ್ಷದ ಚೆಲುವೆಯನ್ನು ವಿವಾಹವಾಗಿದ್ದಾರೆ.
ಈ ಅಜ್ಜ ಎಂಥ ಘಾಟಿ ಎಂದರೆ, ತಾವಿದ್ದ ವೃದ್ಧಾಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಗೇ ಕಾಳು ಹಾಕಿ ಗೆದ್ದಿದ್ದಾರೆ. ಇಷ್ಟಕ್ಕೂ ಹುಣಸೆ ಮುಪ್ಪಾದರೆ ಹುಳಿ ಮುಪ್ಪೇ?
ಈ ಜೋಡಿಯ ಅಸಾಮಾನ್ಯ ಪ್ರೇಮಕತೆಯು ಸಾಕಷ್ಟು ವಿರೋಧದ ಹೊರತಾಗಿಯೂ ವಿವಾಹದ ದಡ ದಾಟಿತು.
ಮೊದಲಿಗೆ ಈ ಲೀ ತಾತ, Xiaofangಳ ಪ್ರೌಢತೆ, ಸ್ಥಿರತೆ ಮತ್ತು ಬುದ್ಧಿವಂತಿಕೆಯನ್ನು ಹೊಗಳಿದರಂತೆ. ಹೊಗಳಿಕೆಗೆ ಬೀಳದ ಹುಡುಗಿಯರ್ಯಾರು? ಅಂತೆಯೇ ಇವರಿಬ್ಬರ ನಡುವೆ ಸ್ನೇಹ ಅರಳಿತು. ನಂತರ ಕ್ಸಿಯಾಫಂಗ್‌ಳ ಯೌವನದ ಚೈತನ್ಯ ಮತ್ತು ದಯೆಗೆ ಲಿ ಸೆಳೆಯಲ್ಪಟ್ಟರು.
ವಿಷಯ ತಿಳಿಯುತ್ತಿದ್ದಂತೆ ಕ್ಸಿಯಾಫಂಗ್‌ಳ ಕುಟುಂಬದಿಂದ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಯಿತು. ಲಿಯೊಂದಿಗೆ ಮದುವೆಯಾಗಬೇಕೋ ಕುಟುಂಬ ಬೇಕೋ ಕೇಳಿದಾಗ ಕ್ಸಿಯಾಫಂಗ್ ತಾತನನ್ನೇ ಆಯ್ಕೆ ಮಾಡಿಕೊಂಡಳು!
ಸ್ಥಳೀಯ ಚೀನೀ ವೆಬ್‌ಸೈಟ್ ವರದಿ ಮಾಡಿದಂತೆ, ದಂಪತಿ ಸಾಧಾರಣ ಸಮಾರಂಭದಲ್ಲಿ ಪ್ರತಿಜ್ಞೆ ವಿನಿಮಯ ಮಾಡಿಕೊಂಡರು, ಇದಕ್ಕೆ ಎರಡೂ ಕಡೆಯಿಂದ ಕುಟುಂಬ ಸದಸ್ಯರು ಗೈರು ಹಾಜರಾಗಿದ್ದರು. ಅವರ ಪ್ರೀತಿಯನ್ನು ಪ್ರದರ್ಶಿಸುವ ಅವರ ಮದುವೆಯ ಫೋಟೋಗಳು, ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ಅಲೆಗಳನ್ನು ಸೃಷ್ಟಿ ಮಾಡಿದವು.
ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಪ್ರಣಯ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಕೆಲವು ನೆಟಿಜನ್‌ಗಳು ಕ್ಸಿಯಾಫಂಗ್ ಹಣಕಾಸಿನ ಕಾರಣಗಳಿಗಾಗಿ ಲಿಯನ್ನು ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ ಇತರರು ಅವಳ ಧೈರ್ಯ ಮತ್ತು ಲಿಗಾಗಿ ನಿಜವಾದ ಪ್ರೀತಿಯನ್ನು ಶ್ಲಾಘಿಸಿದ್ದಾರೆ. ವಿವಾದದ ಹೊರತಾಗಿಯೂ,ಕ್ಸಿಯಾಫಂಗ್ ಈಗ ಇವರಿಬ್ಬರಲ್ಲಿ ದುಡಿದು ತರುವವಳಾಗಿದ್ದಾಳೆ. ಲಿ ಅವರ ವಯಸ್ಸು ಮತ್ತು ಆರೋಗ್ಯ ಸಮಸ್ಯೆಗಳ ಕಾರಣದಿಂದಾಗಿ ಅವರ ಹಣ ಪಿಂಚಣಿಯಷ್ಟೇ ಆಗಿದೆ. ಲಿ ಪಕ್ಕದಲ್ಲಿದಲ್ಲಿದ್ದರೆ ಏನು ಬೇಕಾದರೂ ಮಾಡಬಲ್ಲೆ ಎಂದು ಕ್ಸಿಯಾಫಾಂಗ್ ತನ್ನ ನಂಬಿಕೆಯನ್ನು ವ್ಯಕ್ತಪಡಿಸಿದ್ದಾಳೆ.