MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • Politics
  • ಕಾಕ್ರೋಚ್​ ಜನತಾ ಪಕ್ಷ: ಬೆಂಗಳೂರಿಗೆ ನೋ ಎಂಟ್ರಿ- ಗುಪ್ತಚರ ಇಲಾಖೆ ಶಾಕಿಂಗ್​ ವರದಿಯಲ್ಲಿ ಏನಿದೆ

ಕಾಕ್ರೋಚ್​ ಜನತಾ ಪಕ್ಷ: ಬೆಂಗಳೂರಿಗೆ ನೋ ಎಂಟ್ರಿ- ಗುಪ್ತಚರ ಇಲಾಖೆ ಶಾಕಿಂಗ್​ ವರದಿಯಲ್ಲಿ ಏನಿದೆ

ನಿರುದ್ಯೋಗದ ವಿಷಯದ ಮೇಲೆ ಸ್ಥಾಪನೆಯಾದ ಕಾಕ್ರೋಚ್ ಜನತಾ ಪಕ್ಷವು ಯುವಜನರಲ್ಲಿ ಭಾರೀ ಸದ್ದು ಮಾಡುತ್ತಿದೆ. ಆದರೆ, ಇದರ ಹಿಂದೆ ಇರುವ ಉದ್ದೇಶದ ಬಗ್ಗೆ  ಗುಪ್ತಚರ ಇಲಾಖೆ ಭಾರಿ ಎಚ್ಚರಿಕೆ ನೀಡಿದೆ. ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲಾಗಿದೆ, ಬೆಂಗಳೂರಿನ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗಿದೆ.

2 Min read
Author : Suchethana D
Published : May 23 2026, 05:14 PM IST
Share this Photo Gallery
  • FB
  • TW
  • Linkdin
  • Whatsapp
15
ಹವಾ ಸೃಷ್ಟಿಸ್ತಿರೋ ಕಾಕ್ರೋಚ್​ ಜನತಾ ಪಕ್ಷ
Image Credit : Social Media

ಹವಾ ಸೃಷ್ಟಿಸ್ತಿರೋ ಕಾಕ್ರೋಚ್​ ಜನತಾ ಪಕ್ಷ

ಕಾಕ್ರೋಚ್​ ಜನತಾ ಪಕ್ಷ (Cockroach Janata Party) ಆರಂಭವಾಗಿ ವಾರದಲ್ಲಿಯೇ ಹವಾ ಸೃಷ್ಟಿಸುತ್ತಿದೆ. ನಿರುದ್ಯೋಗಿಗಳ ಕುರಿತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ನೀಡಿರುವ ಹೇಳಿಕೆಯ ವಿರುದ್ಧ ಈ ಪಕ್ಷವನ್ನು ಕಟ್ಟಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ, ಇದು ಪ್ರೀ ಪ್ಲ್ಯಾನ್ಡ್​, ಇದರ ಹಿಂದೆ ದೊಡ್ಡ ಎಜೆಂಡಾ ಇದೆ. ಮುಖ್ಯ ನ್ಯಾಯಮೂರ್ತಿಗಳ ಮಾತು ಒಂದು ನೆಪ ಅಷ್ಟೇ ಎನ್ನುವ ಮಾತೂ ಕೇಳಿಬರುತ್ತಿದೆ. ಇಲ್ಲಿನ ಫಾಲೋವರ್ಸ್​ ಸಂಖ್ಯೆಯಲ್ಲಿ ಪಾಕಿಸ್ತಾನ, ಬಾಂಗ್ಲಾದೇಶಿಗರೇ ಹೆಚ್ಚಾಗಿರುವುದಾಗಿ ಕೆಲವರು ಹೇಳುತ್ತಿದ್ದರೆ, ಇದರ ಸಂಸ್ಥಾಪಕ ಅಭೀಜಿತ್​ ದೀಪ್ಕೆ ಇನ್ನೊಂದು ಅಂಕಿ ಅಂಶ ನೀಡಿ ಭಾರತೀಯರೇ ಹೆಚ್ಚು ಇರುವುದಾಗಿ ಹೇಳಿದ್ದಾರೆ. ಆದರೆ ಅದು ಮತ್ತು ಇದು ಎರಡೂ ಅಧಿಕೃತವಲ್ಲ ಎನ್ನುವುದು ಇದಾಗಲೇ ಸಾಬೀತಾಗಿದೆ.

Add Asianetnews Kannada as a Preferred SourcegooglePreferred
25
ನಮ್ಮ ಯೋಚನೆ ಅದಲ್ಲ ಎಂದ ಸಂಸ್ಥಾಪಕ
Image Credit : X

ನಮ್ಮ ಯೋಚನೆ ಅದಲ್ಲ ಎಂದ ಸಂಸ್ಥಾಪಕ

ಇದರ ನಡುವೆಯೇ ಕಾಕ್ರೋಚ್​ ಜನತಾ ಪಕ್ಷದ ಎಕ್ಸ್​ ಖಾತೆಯನ್ನು ಭಾರತದಲ್ಲಿ ಬ್ಯಾನ್​ ಮಾಡಲಾಗಿತ್ತು. ಮತ್ತೊಂದು ಖಾತೆಯನ್ನು ಪಾರ್ಟಿ ತೆಗೆದಿದೆ. ಅಮೆರಿಕದಲ್ಲಿ ಕುಳಿತು ಭಾರತದ ಬಗ್ಗೆ ಇಷ್ಟೊಂದು ಯೋಚನೆ ಮಾಡುತ್ತಿರುವ ಅಭಿಜೀತ್​ ಎನ್ನುವ ಯುವಕನಿಗೆ ಇಂದಿನ ಜೆನ್​ Zಗಳು ಭಾರಿ ಸಪೋರ್ಟ್​ ಕೊಡುತ್ತಿದ್ದಾರೆ. ಆದರೆ ಗುಪ್ತಚರ ಇಲಾಖೆ ಶಾಕಿಂಗ್​ ವರದಿ ನೀಡಿರುವ ಬೆನ್ನಲ್ಲೇ ಪಾರ್ಟಿಯ ಇನ್​ಸ್ಟಾಗ್ರಾಮ್​ ಮಾತ್ರವಲ್ಲದೇ ಅಭಿಜೀತ್​ ಅವರ ಸೋಷಿಯಲ್​ ಮೀಡಿಯಾ ಕೂಡ ಹ್ಯಾಕ್​ ಮಾಡಲಾಗಿದೆ ಎಂದು ಖುದ್ದು ಅವರೇ ಹೇಳಿಕೊಂಡಿದ್ದಾರೆ. ಭಾರತದ ಜನರಿಗೆ ನ್ಯಾಯ ಕೊಡುವುದು ನಮ್ಮ ಕೆಲಸವಾಗಿತ್ತು. ಆದರೆ ಜೆನ್​ Z ಗಳನ್ನು ಎತ್ತಿಕಟ್ಟಿ ನೇಪಾಳದಂಥ ದಂಗೆ ಮಾಡುವ ಉದ್ದೇಶ ಎನ್ನುತ್ತಿದ್ದಾರೆ. ಆದರೆ ಆ ರೀತಿಯ ಯಾವುದೇ ಉದ್ದೇಶ ನಮ್ಮದಲ್ಲ ಎಂದಿದ್ದಾರೆ ಅಭಿಜೀತ್​.

Related Articles

Related image1
Cockroach Janata Party: ಅಮೆರಿಕದ ವಾಸಿಗೆ ಭಾರತದ ಮೇಲೆ ಏಕಿಷ್ಟು ಮೋಹ, ಯಾರೀ ಅಭಿಜೀತ್​? ಡಿಟೇಲ್ಸ್​ ಇಲ್ಲಿದೆ
Related image2
ರಾಜ್ಯದ ಮುಂದಿನ ಸಿಎಂ ಕಾಕ್ರೋಚ್​ ಜನತಾ ಪಕ್ಷದ ಕ್ರಿಶ್​: ಪ್ರಮಾಣ ವಚನಕ್ಕೂ ಸಿದ್ಧತೆ- ವಿಡಿಯೋ ವೈರಲ್​
35
ಬೆಂಗಳೂರಿನಲ್ಲಿ ನಿರ್ಬಂಧ
Image Credit : Asianet News

ಬೆಂಗಳೂರಿನಲ್ಲಿ ನಿರ್ಬಂಧ

ಈ ನಡುವೆ, ಕಾಕ್ರೋಚ್ ಜನತಾ ಪಾರ್ಟಿಯ ಮೇ 24ರ, ಬೆಂಗಳೂರಿನ ಟೌನ್’ಹಾಲ್ ಬಳಿ ಕರೆದಿದ್ದ ಮಾನವ ಸರಪಳಿ ಕಾರ್ಯಕ್ರಮಕ್ಕೆ ಬೆಂಗಳೂರು ಪೊಲೀಸರು ಅನುಮತಿಯನ್ನು ನಿರಾಕರಿಸಿದ್ದಾರೆ. ಖುದ್ದು ಸಿದ್ದರಾಮಯ್ಯನವರೇ ಖುಷಿಯಿಂದ ಈ ಪಕ್ಷದ ಟೀ-ಷರ್ಟ್​ ಉದ್ಘಾಟನೆ ಮಾಡಿದ್ದರು. ಆದರೆ ಇದೀಗ ಅನುಮತಿ ನಿರಾಕರಿಸಿದ್ದು ಏಕೆ ಎನ್ನುವ ಚರ್ಚೆ ಸೋಷಿಯಲ್​ ಮೀಡಿಯಾದಲ್ಲಿ ಶುರುವಾಗಿದೆ. ಅಷ್ಟಕ್ಕೂ ಇದಕ್ಕೆ ಗುಪ್ತಚರ ಇಲಾಖೆ ನೀಡಿರುವ ವರದಿ ಕಾರಣವೇ ಎನ್ನುವ ಸಂದೇಹವೂ ಕೂಡ ಬಂದಿದೆ.

45
ಏನು ಹೇಳಿದೆ ಗುಪ್ತಚರ ಇಲಾಖೆ
Image Credit : Getty/Chatgpt

ಏನು ಹೇಳಿದೆ ಗುಪ್ತಚರ ಇಲಾಖೆ

ಕಾಕ್ರೋಚ್ ಜನತಾ ಪಾರ್ಟಿಯು, ದೇಶದ ಭದ್ರತಾ ಸಂಸ್ಥೆಗಳ ತೀವ್ರ ಕಳವಳಕ್ಕೆ ಕಾರಣವಾಗಿದೆ. ದೇಶದಲ್ಲಿ ಭಾರೀ ಜನಸಜ್ಜುಗೊಳಿಸುವಿಕೆ, ವಿದೇಶಿ ಹಸ್ತಕ್ಷೇಪ ಮತ್ತು ಸಂಘಟಿತ ಅಶಾಂತಿಗೆ ಕಾರಣವಾಗಲಿದೆ ಎಂದು ಗುಪ್ತಚರ ಸಂಸ್ಥೆಗಳು ಸರ್ಕಾರವನ್ನು ಎಚ್ಚರಿಸಿದೆ. ನಿರುದ್ಯೋಗ, ಹಣದುಬ್ಬರದಂತಹ ಸೂಕ್ಷ್ಮ ವಿಚಾರಗಳನ್ನು ಬಳಸಿಕೊಂಡು ಯುವಕರನ್ನು ಪ್ರಚೋದಿಸುವ ಸಾಧ್ಯತೆಯಿದೆ.

55
ವಿದೇಶಿ ಮೂಲದ ಟೆಲಿಗ್ರಾಂ
Image Credit : cockroach janata party

ವಿದೇಶಿ ಮೂಲದ ಟೆಲಿಗ್ರಾಂ

ವೇಗವಾಗಿ ಬೆಳೆಯುತ್ತಿರುವ ಇದರ ನೆಟ್ವರ್ಕ್ ಜಾಲದ ಹಿಂದೆ, ಪಾಕಿಸ್ತಾನ ಸೇರಿ ವಿದೇಶಿ ಮೂಲದ ಟೆಲಿಗ್ರಾಂ ಖಾತೆಗಳು ಸಕ್ರಿಯವಾಗಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. ಇದೇ ವೇಳೆ, ಸೋಷಿಯಲ್​ ಮೀಡಿಯಾ ಖಾತೆ ಓಪನ್​ ಮಾಡಿದ ತಕ್ಷಣ ಇಷ್ಟೊಂದು ಫಾಲೋವರ್ಸ್​ ಬಂದಿರುವ ಹಿಂದೆ ಇರುವುದೇನು ಎನ್ನುವುದು ಕೂಡ ತನಿಖೆಯಿಂದ ತಿಳಿಯಲಾಗುವುದು ಎಂದಿದ್ದಾರೆ. ಆರಂಭಿಕ ತನಿಖೆಯ ತನಿಖೆಯ ಪ್ರಕಾರ, 2021ರಲ್ಲಿ ಆಮ್ ಆದ್ಮಿ ಪಾರ್ಟಿ - ಗುಜರಾತ್ ಹೆಸರಿನಲ್ಲಿ ಆರಂಭವಾಗಿ, ನಂತರ ಹೆಸರನ್ನು ಕಾಕ್ರೋಚ್ ಜನತಾ ಪಾರ್ಟಿ ಎಂದು ಬದಲಾಯಿಸಿಕೊಳ್ಳಲಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ರಾಜಕೀಯ ಪಕ್ಷ
ರಾಜಕೀಯ ಸುದ್ದಿ
ಜಿರಳೆ
ಭಾರತ ಸುದ್ದಿ
ಕರ್ನಾಟಕ ಸರ್ಕಾರ

Latest Videos
Recommended Stories
Recommended image1
ಸಂಪುಟ ಪುನಾರಚನೆ ಕಸರತ್ತು: 'ಸಿಎಂ ಸ್ಥಾನ ಕೊಟ್ಟರೂ ನಿಭಾಯಿಸುವ ಸಾಮರ್ಥ್ಯ ನನಗಿದೆ'- ಡಾ. ಜಿ. ಪರಮೇಶ್ವರ್!
Recommended image2
ತಮಿಳುನಾಡು ಆಯ್ತು, ಈಗ ಬೆಂಗಳೂರಿನಲ್ಲೂ 'ದಳಪತಿ' ದರ್ಬಾರ್? ಜಿಬಿಎ ಚುನಾವಣೆಗೆ ವಿಜಯ್ ಸಾರಥ್ಯದ ಟಿವಿಕೆ ಪಕ್ಷ ಎಂಟ್ರಿ!
Recommended image3
Now Playing
ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
Related Stories
Recommended image1
Cockroach Janata Party: ಅಮೆರಿಕದ ವಾಸಿಗೆ ಭಾರತದ ಮೇಲೆ ಏಕಿಷ್ಟು ಮೋಹ, ಯಾರೀ ಅಭಿಜೀತ್​? ಡಿಟೇಲ್ಸ್​ ಇಲ್ಲಿದೆ
Recommended image2
ರಾಜ್ಯದ ಮುಂದಿನ ಸಿಎಂ ಕಾಕ್ರೋಚ್​ ಜನತಾ ಪಕ್ಷದ ಕ್ರಿಶ್​: ಪ್ರಮಾಣ ವಚನಕ್ಕೂ ಸಿದ್ಧತೆ- ವಿಡಿಯೋ ವೈರಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved