ತಮಿಳುನಾಡನ್ನು ಗೆದ್ದ ತಕ್ಷಣ ಚಿನ್ನದ ಸುರಿಮಳೆ? 7 ಟನ್ ಬಂಗಾರ ಫ್ರೀ ಕೊಡ್ತಾರಾ ನಟ ದಳಪತಿ ವಿಜಯ್
ದಳಪತಿ ವಿಜಯ್ ನೇತೃತ್ವದ TVK ಪಕ್ಷವು ತಮಿಳುನಾಡು ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಈ ಗೆಲುವಿನ ಬೆನ್ನಲ್ಲೇ, ವಿಜಯ್ ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಮಹಿಳೆಯರಿಗೆ 7 ಟನ್ ಚಿನ್ನ ಸೇರಿದಂತೆ ಹಲವಾರು ಉಚಿತ ಕೊಡುಗೆಗಳನ್ನು ನೀಡಬೇಕಾದ ಸವಾಲಿನ ಬಗ್ಗೆ ಚರ್ಚೆ ಶುರುವಾಗಿದೆ

ದಳಪತಿ ಇತಿಹಾಸ ಸೃಷ್ಟಿ
ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಮ್ (TVK) ತಮಿಳುನಾಡು ಚುನಾವಣೆಯಲ್ಲಿ 108 ಸ್ಥಾನ ಗೆದ್ದು ಇತಿಹಾಸ ಸೃಷ್ಟಿಸಿದೆ. ಮೊದಲ ಚುನಾವಣೆಯಲ್ಲೇ ಈ ಸಾಧನೆ ಮಾಡಿರುವ ವಿಜಯ್, ರಾಜಕೀಯ ಪ್ರವೇಶಕ್ಕೆ ಭಾರಿ ಯಶಸ್ಸು ತಂದಿದೆ. ಮೊದಲ ಚುನಾವಣೆಯಲ್ಲೇ ಇಷ್ಟು ದೊಡ್ಡ ಗೆಲುವು ದಾಖಲಿಸಿದ್ದು ನಿಜಕ್ಕೂ ಸಾಧನೆಯೇ ಸರಿ.
ವಿಜಯ್ ಬಗ್ಗೆ ಬಿಸಿಬಿಸಿ ಚರ್ಚೆ
ಹೀಗೆ ಗೆಲುವು ಸಾಧಿಸುತ್ತಿದ್ದಂತೆಯೇ, ದಳಪತಿ ವಿಜಯ್ ಅವರ ಬಗ್ಗೆ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದೆ. ಅದೇನು ಎಂದರೆ ಮಹಿಳೆಯರಿಗೆ ವಿಜಯ್ ಅವರು ಈಗ ಸುಮಾರು ಏಳು ಟನ್ ಚಿನ್ನ ಫ್ರೀ ಕೊಡಬೇಕಿದೆ! ಅಷ್ಟೇ ಅಲ್ಲದೇ ಇನ್ನೂ ಲಕ್ಷಾಂತರ ಮೌಲ್ಯದ ಗಿಫ್ಟ್ ಕೂಡ ಕೊಡಬೇಕಿದೆ. ಅದನ್ನು ಕೊಡ್ತಾರಾ ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ.
ಹೀಗಿತ್ತು ಗ್ಯಾರೆಂಟಿ
ಅಷ್ಟಕ್ಕೂ ಆಗಿದ್ದೇನೆಂದರೆ, ತಮ್ಮ ಪ್ರಣಾಳಿಕೆಯಲ್ಲಿ ವಿಜಯ್ ಅವರು ಯಾರೂ ಮಾಡದ, ಹೇಳದ ಗ್ಯಾರೆಂಟಿ ಯೋಜನೆ ಘೋಷಿಸಿದ್ದರು. ಮದುವೆಯಾಗುವ ಮಹಿಳೆಗೆ 8 ಗ್ರಾಂ ಚಿನ್ನದ ಜೊತೆಗೆ ರೇಷ್ಮೆ ಸೀರೆ, ಜನಿಸುವ ಪ್ರತಿ ಹೆಣ್ಣು ಮಗುವಿಗೆ ಬಂಗಾರದ ಉಂಗುರ, ಯಜಮಾನಿಗೆ 2,500 ರೂಪಾಯಿ ನಗದು, ವರ್ಷಕ್ಕೆ 6 ಎಲ್‌ಪಿಜಿ ಸಿಲಿಂಡರ್ ಎಲ್ಲವೂ ಫ್ರೀ ಫ್ರೀ ಫ್ರೀ ಎಂದು ಹೇಳಿದ್ದರು.
ಹೆಂಗಸರೇ ರಾಜಕಾರಣಿಗಳ ಟಾರ್ಗೆಟ್
ಚುನಾವಣೆ ಎಂದರೆ ಸಾಕು, ಹೆಣ್ಣುಮಕ್ಕಳೇ ರಾಜಕಾರಣಿಗಳ ಟಾರ್ಗೆಟ್. ಏಕೆಂದರೆ ಅವರ ದೃಷ್ಟಿಯಲ್ಲಿ ಹೆಣ್ಣುಮಕ್ಕಳೇ ಉಚಿತಕ್ಕೆ ಹೆಚ್ಚು ಬೇಗನೇ ಮೋಡಿಗೆ ಒಳಗಾಗುವವರು. ಇದೇ ಕಾರಣಕ್ಕೆ ರಾಜ್ಯ ಯಾವುದೇ ಇರಲಿ, ಅಲ್ಲಿ ಘೋಷಣೆಯಾಗಿರುವ ಇಂಥ ಉಚಿತಗಳು ಹೆಣ್ಣುಮಕ್ಕಳ ಪರವಾಗಿಯೇ ಇರುತ್ತದೆ, ಅದನ್ನೇ ದಳಪತಿ ವಿಜಯ್ ಕೂಡ ಮಾಡಿದ್ದರು.
ಶುರುವಾಯ್ತು ಲೆಕ್ಕಾಚಾರ
ಇದೀಗ ಇದರ ಲೆಕ್ಕಾಚಾರ ಶುರುವಾಗಿದೆ. ಇದಕ್ಕೆ ಕಾರಣ, 2011ರ ಜನ ಗಣತಿಯ ಪ್ರಕಾರ, ತಮಿಳುನಾಡಿನಲ್ಲಿ 3,60,09,064 ಮಂದಿ ಮಹಿಳೆಯರು ಇದ್ದಾರೆ. ಅವರ ಪೈಕಿ 8 ಲಕ್ಷಕ್ಕೂ ಅಧಿಕ ಮಂದಿ ಅವಿವಾಹಿತೆಯರು. ಈ ಜಣಗಣತಿ ನಡೆದು ಇದಾಗಲೇ 15 ವರ್ಷಗಳಾಗಿವೆ. ಈಗ ಇನ್ನೂ ಅವಿವಾಹಿತೆಯರ ಸಂಖ್ಯೆ ಹೆಚ್ಚಿದೆ.
7 ಟನ್ಗೂ ಅಧಿಕ ಚಿನ್ನ
ನಾಲ್ಕು ಕೋಟಿ ಎನ್ನುವ ಲೆಕ್ಕಾಚಾರ ತೆಗೆದುಕೊಂಡರೆ, ಪ್ರತಿ ಮಹಿಳೆಗೆ 8 ಗ್ರಾಮ್ ಚಿನ್ನ ಎಂದರೆ, ಏನಿಲ್ಲವೆಂದರೂ ದಳಪತಿ ಮಹಿಳೆಯರಿಗೆ ಈಗ ಏಳು ಟನ್ ಚಿನ್ನ ನೀಡಬೇಕಿದೆ. ಅವಿವಾಹಿತೆಯರೆಲ್ಲಾ ಮದುವೆಯಾದರೆ, ಒಟ್ಟಾರೆ ಇಷ್ಟು ಚಿನ್ನ ದಳಪತಿ ನೀಡಬೇಕಿದೆ! ಹಾಗಿದ್ದರೆ, ಅವರು ಇದನ್ನು ಯಾವಾಗ ನೀಡ್ತಾರೆ ಎಂದು ಆಸೆಗಣ್ಣುಗಳಿಂದ ತಮಿಳುನಾಡಿನ ಮಹಿಳೆಯರು ಕಾದು ಕುಳಿತಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

