MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • Politics
  • 'ನಾನು ಹೀಗೆ ಹೇಳಿದ್ರೆ ಹಾಕ್ತೀರಾ, ಹಾಗಿದ್ರೆ ಮಾತ್ರ ಹೇಳ್ತೀನಿ' ಎಂದ ನಟ ಕಿಶೋರ್​ ಮೋದಿ ಬಗ್ಗೆ ಏನಂದ್ರು ಕೇಳಿ!

'ನಾನು ಹೀಗೆ ಹೇಳಿದ್ರೆ ಹಾಕ್ತೀರಾ, ಹಾಗಿದ್ರೆ ಮಾತ್ರ ಹೇಳ್ತೀನಿ' ಎಂದ ನಟ ಕಿಶೋರ್​ ಮೋದಿ ಬಗ್ಗೆ ಏನಂದ್ರು ಕೇಳಿ!

ತಮ್ಮ 'ಮೆಲ್ಲಿಸೈ' ಚಿತ್ರದ ಪ್ರಚಾರದ ವೇಳೆ ಮಾತನಾಡಿದ ನಟ ಕಿಶೋರ್, ಜೀವನದಲ್ಲಿ ರಿವರ್ಸ್ ಹೋಗುವ ಅವಕಾಶ ಸಿಕ್ಕರೆ 2014ಕ್ಕೆ ಹೋಗುತ್ತಿದ್ದೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ  ಮೋದಿ ಬಗ್ಗೆ ಏನು ಹೇಳಿದ್ರು ಕೇಳಿ. 

2 Min read
Author : Suchethana D
Published : Feb 06 2026, 08:29 PM IST
Share this Photo Gallery
  • FB
  • TW
  • Linkdin
  • Whatsapp
16
ಖಳನಾಯಕನಾಗಿ ಮಿಂಚಿಂಗ್​
Image Credit : Social Media

ಖಳನಾಯಕನಾಗಿ ಮಿಂಚಿಂಗ್​

ಕನ್ನಡ, ತಮಿಳು ತೆಲುಗು, ಮಲಯಾಳ ಭಾಷೆಗಳ ಸಿನಿಮಾಗಳಲ್ಲಿ ಹೆಚ್ಚಾಗಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟ ಕಿಶೋರ್​, ಸದಾ ಸುದ್ದಿಯಲ್ಲಿ ಇರುವ ನಟ. ಸೋಷಿಯಲ್​ ಮೀಡಿಯಾದಿಂದ ಹಿಡಿದು ಭಾಷಣಗಳಲ್ಲಿ ಅವರು ಆಡುವ ಮಾತುಗಳು ಕಾಂಟ್ರವರ್ಸಿಯಾಗುವುದೇ ಹೆಚ್ಚು. ರಾಜಕೀಯದಿಂದ ಹಿಡಿದು ಸಿನಿಮಾ ರಂಗದವರೆಗೂ ಅವರು, ತಮ್ಮದೇ ಆದ ಅಭಿಪ್ರಾಯವನ್ನು ಹಂಚಿಕೊಂಡು ಪ್ರಚಾರದಲ್ಲಿ ಇರುವುದನ್ನೇ ಬಯಸುವವರು. ಅದರಲ್ಲಿಯೂ ಬಿಜೆಪಿ, ಆರ್​ಎಸ್​ಎಸ್​, ಪ್ರಧಾನಿ ಮೋದಿ ಅವರ ಬಗ್ಗೆಯಂತೂ ನೆಗೆಟಿವ್​ ಮಾತನಾಡಿರುವ ಮೂಲಕ ಚಾಲ್ತಿಯಲ್ಲಿ ಇರುವ ನಟ ಕಿಶೋರ್​.

26
ರಿವರ್ಸ್​ ಅವಕಾಶ
Image Credit : Social Media

ರಿವರ್ಸ್​ ಅವಕಾಶ

ಇದೀಗ ಅವರು ತಮಿಳಿನ .'ಮೆಲ್ಲಿಸೈ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಇದರ ಪ್ರಮೋಷನ್​ ಸಮಯದಲ್ಲಿ capt.matsat ಎಂಬ ಸೋಷಿಯಲ್​ ಮೀಡಿಯಾಗೆ ಸಂದರ್ಶನ ನೀಡುವ ಸಮಯದಲ್ಲಿ, ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿದ್ದಾರೆ. ನಿಮಗೆ ಜೀವನದಲ್ಲಿ ರಿವರ್ಸ್​ ಹೋಗುವ ಅವಕಾಶ ಸಿಕ್ಕರೆ ಏನು ಮಾಡುತ್ತೀರಿ ಎನ್ನುವ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆ ಎದುರಾಗಲು ಕಾರಣವೂ ಇದೆ. ಅದೇನೆಂದರೆ ಮೆಲ್ಲಿಸೈ ಚಿತ್ರದಲ್ಲಿ ಕಿಶೋರ್​ ಅವರು ಶಾಲೆಯೊಂದರ PT ಮಾಸ್ಟರ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಟ್ರೈಲರ್‌ನಲ್ಲಿ ನಮ್ಮ ಜೀವನದಲ್ಲಿ ರಿವರ್ಸ್ ಹೋಗುವ ಅವಕಾಶ ಇದ್ದರೆ ಎಷ್ಟು ಚೆನ್ನಾಗಿರುತ್ತದೆ ಅಲ್ವಾ ಎನ್ನುವ ಡೈಲಾಗ್ ಇದೆ. ಅದಕ್ಕಾಗಿ ಅವರಿಗೆ ಈ ಪ್ರಶ್ನೆಯನ್ನು ಕೇಳಲಾಗಿದೆ.

Related Articles

Related image1
Bhagyalakshmi: ಲೈವ್​ಗೆ ಬಂದ ತಾಂಡವ್​ ಫುಲ್​ ಸ್ಟೋರಿ ಹೇಳೇಬಿಟ್ರು! ಸಿಕ್ರೆ ಸಾಯಿಸಿಬಿಡ್ತೇನೆ ಎಂದ ಫ್ಯಾನ್​
Related image2
ಸ್ಟೇಟ್​ ಬ್ಯಾಂಕ್​ನಲ್ಲಿದ್ದ 2 ಕೋಟಿ ಮೌಲ್ಯದ ಚಿನ್ನ- ಬೆಳ್ಳಿ ಗಾಯಬ್​: ಸಿಬ್ಬಂದಿ ಕೈವಾಡ? ಹೌಹಾರಿದ ಗ್ರಾಹಕರು
36
ಏನ್​ ಹೇಳಿದ್ರು ನಟ?
Image Credit : Social Media

ಏನ್​ ಹೇಳಿದ್ರು ನಟ?

ಅದಕ್ಕೆ ಕಿಶೋರ್​ ಅವರು ಹೇಳಿದ್ದೇನು ಗೊತ್ತಾ? ನಾನು ಹೀಗೆ ಹೇಳಿದ್ರೆ ಹಾಕ್ತೀರಾ, ಹಾಗಿದ್ರೆ ಮಾತ್ರ ಹೇಳ್ತೀನಿ, ಈ ವಿಡಿಯೋ ಹಾಕೋಕೆ ಸಾಧ್ಯನಾ' ಎಂದು ಪೀಠಿಕೆ ಇಡುತ್ತಲೇ, ಹಾಗೊಂದು ವೇಳೆ ಹಿಂದಕ್ಕೆ ಹೋಗಿ ಏನಾದರೂ ಬದಲಿಸುವ ಅವಕಾಶ ಸಿಕ್ಕರೆ 2014ಕ್ಕೆ ಹೋಗಿ ಪ್ರಧಾನಿಯನ್ನು ಬದಲಿಸಿಬಿಡುತ್ತೇನೆ ಎಂದಿದ್ದಾರೆ.

46
ದೇಶ ಬದಲಾಗ್ತಿತ್ತು
Image Credit : Social Media

ದೇಶ ಬದಲಾಗ್ತಿತ್ತು

ನಾನು ಹೇಳ್ತಿರೋದು ನಿಜ. ಪ್ರಧಾನಿ ಒಂದು ವೇಳೆ ಬದಲಾಗಿದ್ದರೆ ಭಾರತ ದೇಶವೇ ಬದಲಾಗಿರುತ್ತಿತ್ತು. ಈಗ ಎಷ್ಟು ದ್ವೇಷ ಇದೆ. ಅದು ನಿಜಕ್ಕೂ ಭಯಾನಕವಾಗಿದೆ. ಇದನ್ನು ಬದಲಿಸಲು ದಶಕಗಳೇ ಬೇಕು, ಬಹಳ ಭಯಾನಕ ಜನ. ಪ್ರೀತಿ ಇಲ್ಲದಿದ್ದರೆ ಜನ ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂದಿದ್ದಾರೆ..

56
ದ್ವೇಷವೇ ಬಂಡವಾಳ
Image Credit : Social Media

ದ್ವೇಷವೇ ಬಂಡವಾಳ

ಒಬ್ಬರನ್ನೊಬ್ಬರು ದ್ವೇಷಿಸಿದರೆ ಹೇಗೆ ಒಟ್ಟಿಗೆ ಬಾಳಲು ಸಾಧ್ಯ ಹೇಳಿ ಎಂದು ಪ್ರಶ್ನಿಸಿರುವ ನಟ, ಆ ದ್ವೇಷವನ್ನು ಬಂಡವಾಳವಾಗಿ ಮಾಡಿಕೊಂಡು ಒಬ್ಬರು ಅಧಿಕಾರಕ್ಕೆ ಬರ್ತಾರೆ ಅಂದ್ರೆ ಬಹಳ ಭಯಾನಕ ಜನ ಅವರು. ಅಂಥವರು ಈಗ ಅಧಿಕಾರದಲ್ಲಿದ್ದಾರೆ. ಅಲ್ಲಿ ಟ್ರಂಪ್ ನೋಡಿ, ಇಲ್ಲಿ ಇವರನ್ನು ನೋಡಿ. ಎಲ್ಲರೂ ಅದೇ ರೀತಿ ಇದ್ದಾರೆ ಎಂದಿದ್ದಾರೆ.

66
ಅಧಿಕಾರ ದುರ್ಬಳಕೆ
Image Credit : Social Media

ಅಧಿಕಾರ ದುರ್ಬಳಕೆ

ರಾಜಕೀಯ ಎನ್ನುವುದು ಈಗ ಅಧಿಕಾರ ಎನ್ನುವಂಥ ಸ್ಥಿತಿ ಇದೆ. ಆದರೆ ನಿಜಕ್ಕೂ ರಾಜಕೀಯ ಎಂದರೆ ಅಧಿಕಾರ ಅಲ್ಲ, ಕೆಲಸ ಮಾಡುವುದಕ್ಕೆ ರಾಜಕೀಯ ಎನ್ನಬೇಕು. ಜನರಿಗೆ ಸಹಾಯ ಮಾಡುವ ಮನಸ್ಥಿತಿ ರಾಜಕಾರಣಿಗಳಲ್ಲಿ ಇರಬೇಕು. ಮೋದಿ ಅವರು ಪ್ರಜಾಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ನರೇಂದ್ರ ಮೋದಿ
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ
ರಾಜಕೀಯ ಸುದ್ದಿ
ಸಾಮಾಜಿಕ ಮಾಧ್ಯಮ

Latest Videos
Recommended Stories
Recommended image1
ಕಚ್ಚಾತೈಲ ಖರೀದಿಗೆ ಭಾರತದ ಬಳಿ ಇದೆ ಹಲವು ಆಯ್ಕೆ: ಯಾವುದೇ ದೇಶದಿಂದಲೂ ತೈಲ ಖರೀದಿಸಲು ಭಾರತ ಸ್ವತಂತ್ರವಾಗಿದೆ: ರಷ್ಯಾ
Recommended image2
5 ವರ್ಷವೂ ನಮ್ಮ ತಂದೆಯವರೇ ಸಿಎಂ: ಮೈಸೂರಿನಲ್ಲಿ ಯತೀಂದ್ರ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ!
Recommended image3
Rahul Gandhi: 'ಇದೆಲ್ಲಾ ಮಕ್ಕಳಾಟಿಕೆ' - ರಾಹುಲ್ ಗಾಂಧಿ ಸಭಾತ್ಯಾಗಕ್ಕೆ ಬಿಜೆಪಿ ನಾಯಕ ಟಾಂಗ್!
Related Stories
Recommended image1
Bhagyalakshmi: ಲೈವ್​ಗೆ ಬಂದ ತಾಂಡವ್​ ಫುಲ್​ ಸ್ಟೋರಿ ಹೇಳೇಬಿಟ್ರು! ಸಿಕ್ರೆ ಸಾಯಿಸಿಬಿಡ್ತೇನೆ ಎಂದ ಫ್ಯಾನ್​
Recommended image2
ಸ್ಟೇಟ್​ ಬ್ಯಾಂಕ್​ನಲ್ಲಿದ್ದ 2 ಕೋಟಿ ಮೌಲ್ಯದ ಚಿನ್ನ- ಬೆಳ್ಳಿ ಗಾಯಬ್​: ಸಿಬ್ಬಂದಿ ಕೈವಾಡ? ಹೌಹಾರಿದ ಗ್ರಾಹಕರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved