- Home
- Entertainment
- TV Talk
- Bhagyalakshmi: ಲೈವ್ಗೆ ಬಂದ ತಾಂಡವ್ ಫುಲ್ ಸ್ಟೋರಿ ಹೇಳೇಬಿಟ್ರು! ಸಿಕ್ರೆ ಸಾಯಿಸಿಬಿಡ್ತೇನೆ ಎಂದ ಫ್ಯಾನ್
Bhagyalakshmi: ಲೈವ್ಗೆ ಬಂದ ತಾಂಡವ್ ಫುಲ್ ಸ್ಟೋರಿ ಹೇಳೇಬಿಟ್ರು! ಸಿಕ್ರೆ ಸಾಯಿಸಿಬಿಡ್ತೇನೆ ಎಂದ ಫ್ಯಾನ್
ಮುಕ್ತಾಯದ ಹಂತದಲ್ಲಿರುವ 'ಭಾಗ್ಯಲಕ್ಷ್ಮಿ' ಧಾರಾವಾಹಿಯ ತಾಂಡವ್ ಪಾತ್ರಧಾರಿ ಸುದರ್ಶನ್, ನೇರಪ್ರಸಾರದಲ್ಲಿ ಬಂದು ಕ್ಷಮೆ ಯಾಚಿಸಿದ್ದಾರೆ. ತನ್ನ ತಪ್ಪಿನ ಅರಿವಾಗಿದೆ, ಭಾಗ್ಯ ಕ್ಷಮಿಸಿದರೆ ಸಾಕು ಎಂದಿರುವ ತಾಂಡವ್ ಮಾತಿನಿಂದ, ಕಥೆಯ ಅಂತ್ಯದಲ್ಲಿ ಭಾಗ್ಯ ಮತ್ತು ಆದಿ ಒಂದಾಗಬಹುದು ಎಂಬ ಕುತೂಹಲ ಹೆಚ್ಚಾಗಿದೆ.

ಮುಗಿಯೋ ಹಂತದಲ್ಲಿ ಭಾಗ್ಯಲಕ್ಷ್ಮಿ
ಭಾಗ್ಯಲಕ್ಷ್ಮಿ ಸೀರಿಯಲ್ (Bhagyalakshmi Serial) ಸದ್ಯ ಮುಗಿಯುವ ಹಂತದಲ್ಲಿದೆ. ಭಾಗ್ಯ ಕೊನೆಗೆ ಆದಿಯನ್ನು ಒಪ್ಪಿಕೊಳ್ತಾಳಾ, ತಾಂಡವ್ನನ್ನೋ ಎನ್ನುವುದು ಮಾತ್ರ ಸದ್ಯಕ್ಕೆ ಇರುವ ಕುತೂಹಲ. ಹಲವರು ಆದಿ ಮತ್ತು ಭಾಗ್ಯ ಒಂದಾಗಲಿ ಅಂತಿದ್ದರೆ, ಕೆಲವರು ಮಾತ್ರ ಭಾಗ್ಯಳ ಅಮ್ಮನ ರೀತಿ ಗಂಡ ಎಷ್ಟೇ ಕ್ರೂರಿಯಾಗಿದ್ರೂ, ಅವನ ಜೊತೆಯೇ ಬಾಳಬೇಕು, ಹೇಗಿದ್ರೂ ಈಗ ಬದಲಾಗಿದ್ದಾನಲ್ಲಾ ಎನ್ನುವ ಮಾತು.
ನೇರಪ್ರಸಾರದಲ್ಲಿ ನಟ
ಇವುಗಳ ನಡುವೆಯೇ, ತಾಂಡವ್ ನೇರ ಪ್ರಸಾರದಲ್ಲಿ ಬಂದು ಅಭಿಮಾನಿಗಳನ್ನು ಮಾತನಾಡಿದ್ದಾರೆ. ಅಂದಹಾಗೆ ಲೈವ್ಗೆ ಬಂದಿರೋದು ತಾಂಡವ್ ಪಾತ್ರಧಾರಿಯಾಗಿರುವ ಸುದರ್ಶನ್ ರಂಗಪ್ರಸಾದ್ ಅವರು. ತಾಂಡವ್ ಈಗ ಬದಲಾಗಿದ್ದಾನೆ, ನಿಮ್ಮ ಅನಿಸಿಕೆ ಏನು ಎಂದು ಪ್ರಶ್ನಿಸಿದ್ದಾರೆ ಸುದರ್ಶನ್.
ಸಾಯಿಸಿ ಬಿಡ್ತೇನೆ
ಅದಕ್ಕೆ ಒಬ್ಬ ಸೀರಿಯಲ್ ಪ್ರೇಮಿ ಅಂತೂ ಫುಲ್ ಗರಂ ಆಗಿ, ತಾಂಡವ್ ಎದುರಿಗೆ ಸಿಕ್ಕರೆ ಸಾಯಿಸಿಯೇ ಬಿಡುತ್ತೇನೆ ಎಂದರೆ, ಮತ್ತೆ ಕೆಲವರು ನಿನ್ನಂಥ ಗಂಡ ಯಾರಿಗೂ ಸಿಗಬಾರದು, ಯಾವ ಹೆಣ್ಣಿಗೂ ಸಿಗಬಾರದು. ಈಗಾದರೂ ಬುದ್ಧಿ ಬಂತಲ್ಲ, ಭಾಗ್ಯ ಮತ್ತು ಆದಿಯನ್ನು ನೆಮ್ಮದಿಯಿಂದ ಇರಲು ಬಿಡು ಎಂದು ಕಮೆಂಟ್ನಲ್ಲಿ ಹೇಳಿದ್ದಾರೆ.
ತಾಂಡವ್ ಬದಲಾಗಿದ್ದಾನೆ
ಅದಕ್ಕೆ ಸುದರ್ಶನ್ ಅವರು, ತಾಂಡವ್ ಬದಲಾಗಿದ್ದಾನೆ. ನನಗೆ ಮಾಡಿರೋ ತಪ್ಪುಗಳೆಲ್ಲಾ ಈವಾಗ ಗೊತ್ತಾಗ್ತಿದೆ. ಲೈಫ್ನಲ್ಲಿ ಹೊಸ ತಿರುವು ಬಂದಿದೆ ಎನ್ನುತ್ತಲೇ ಭಾಗ್ಯ ನನಗೆ ಕ್ಷಮಿಸಿದ್ರೆ ಸಾಕು, ಅವಳಿಂದ ದೂರ ಬೇಕಾದ್ರೂ ಹೋಗ್ತೀನಿ. ಅವಳಿಂದ ನನಗೆ ಬೇಕಿರೋದು ಕ್ಷಮೆ ಮಾತ್ರ ಎಂದಿದ್ದಾರೆ.
ಕ್ಷಮೆ ಕೊಟ್ಟರೆ ಸಾಕು
ಹಳೆಯದ್ದು ನಡೆದದ್ದೆಲ್ಲಾ ಚೇಂಜ್ ಮಾಡಲು ಆಗಲ್ಲ. ಮುಂದಿನದ್ದು ಚೇಂಜ್ ಮಾಡಲು ಪ್ರಯತ್ನಿಸುತ್ತೇನೆ. ನಾನೂ ಒಬ್ಬ ಮನುಷ್ಯ. ಆದರೆ ನೀವು ತಾಂಡವ್ ರೀತಿ ಆಗಬೇಡಿ. ತುಂಬಾ ತಪ್ಪು ಮಾಡಿದ್ದೇನೆ. ಯಾರಿಗೂ ಈಗಲೂ ನನ್ನ ಮೇಲೆ ನಂಬಿಕೆ ಬರುತ್ತಿಲ್ಲ. ಭಾಗ್ಯಂಗೆ ತುಂಬಾ ನೋವು ಕೊಟ್ಟಿದ್ದೇನೆ., ಶಬ್ದಗಳಲ್ಲಿ ಎಕ್ಸ್ಪ್ಲೇನ್ ಮಾಡಲು ಆಗಲ್ಲ. ಆದರೆ ಈಗ ಅವಳ ಕ್ಷಮೆ ನನಗೆ ಬೇಕು ಎಂದಿದ್ದಾರೆ.
ಅಂತ್ಯದ ಬಗ್ಗೆ ರಿವೀಲ್ ಮಾಡಿದ್ರಾ?
ಅವಳು ನನ್ನನ್ನು ಒಪ್ಪಿಕೊಳ್ತಾಳೋ, ಬಿಡ್ತಾಳೋ ಗೊತ್ತಿಲ್ಲ. ನನಗೆ ಕ್ಷಮೆ ಕೋರುವ ಯೋಗ್ಯತೆಯೂ ಇಲ್ಲ. ಆದರೂ ನನಗೆ ಅವಳು ಕ್ಷಮಿಸಿದ್ರೆ ಅಷ್ಟೇ ಸಾಕು. ಅವಳ ಸಂತೋಷಕ್ಕೆ ಅಡ್ಡಿ ಬರುವುದಿಲ್ಲ. ವಜ್ರದಂಥ ಹೆಂಡ್ತಿ ಬಿಟ್ಟು ಹಿತ್ತಾಳೆ ಹತ್ರ ಹೋಗಿದ್ದೇ ನನ್ನ ತಪ್ಪು. ಭಾಗ್ಯ ಹ್ಯಾಪ್ಪಿ ಆಗಿದ್ರೆ ನಾನು ಹ್ಯಾಪ್ಪಿ ಎಂದು ತಾಂಡವ್ ಆಗಿ ಸುದರ್ಶನ್ ಅವರು ಮಾತನಾಡಿರೋದನ್ನು ನೋಡಿ ಹಲವರು ಫುಲ್ ಖುಷ್ ಆಗಿದ್ದಾರೆ. ಆದಿಯ ಜೊತೆ ಭಾಗ್ಯ ಮದ್ವೆ ಫಿಕ್ಸ್ ಎನ್ನುತ್ತಿದ್ದಾರೆ. ಭಾಗ್ಯ ಮತ್ತು ಆದಿ ಒಂದಾಗುವ ಸೂಚನೆ ಕೊಟ್ಟಿದ್ದಾರೆ ನಟ ಎನ್ನುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

