40 ವರ್ಷ ವಯಸ್ಸು ದಾಟಿದರೂ ಮದುವೆಯಾಗದ ದಕ್ಷಿಣ ಭಾರತದ ನಟಿಯರು!
ಸಿನಿಮಾ ಇಂಡಸ್ಟ್ರಿಯಲ್ಲಿ ಹಲವು ಹೀರೋಯಿನ್ಸ್ ಮದುವೆ ಆಗದೆ ಬ್ಯಾಚುಲರ್ ಆಗಿ ಉಳಿದಿದ್ದಾರೆ. ಅದರಲ್ಲೂ ಸೌತ್ ಸಿನಿಮಾಗಳಲ್ಲಿ ಸ್ಟಾರ್ ಹೀರೋಯಿನ್ಸ್ ಆಗಿ ಮಿಂಚಿದ ನಟಿಯರು ವಿವಿಧ ಕಾರಣಗಳಿಂದ ಒಂಟಿಯಾಗಿದ್ದಾರೆ. 40 ವರ್ಷ ದಾಟಿದ್ರೂ ಮದುವೆ ಆಗದ ಹೀರೋಯಿನ್ಸ್ ಯಾರು ಗೊತ್ತಾ?

40 ದಾಟಿದರೂ ಮದುವೆ ಆಗದ ನಟಿಯರ ಪಟ್ಟೊಯಲ್ಲಿ ಮೊದಲಿಗೆ ತ್ರಿಷ ಹೆಸರು ಕೇಳಿಬರುತ್ತಿದೆ. ಈಗಲೂ ಬೇಡಿಕೆಯಲ್ಲಿರುವ ಅಪರೂಪದ ನಟಿ. 20 ವರ್ಷಗಳಿಂದ ಹೀರೋಯಿನ್ ಆಗಿ ಮುಂದುವರೆದಿದ್ದಾರೆ. ಸ್ಟಾರ್ ಹೀರೋಗಳ ಜೊತೆ ನಟಿಸಿದ ತ್ರಿಷ, ಈಗಲೂ ಸೀನಿಯರ್ ಹೀರೋಗಳ ಜೊತೆ ನಟಿಸುತ್ತಿದ್ದಾರೆ.
ನಿರ್ಮಾಪಕ ವರುಣ್ಮಣಿಯನ್ ಜೊತೆ ನಿಶ್ಚಿತಾರ್ಥ ಆಗಿತ್ತು. ಆದರೆ ಕಾರಣಾಂತರಗಳಿಂದ ಮದುವೆಯಾಗದೇ ಇಬ್ಬರ ನಡುವೆ ಬ್ರೇಕಪ್ ಆಯ್ತು. ರಾಣಾ ಜೊತೆ ಡೇಟಿಂಗ್, ವಿಜಯ್ ಜೊತೆ ರಿಲೇಷನ್‌ಷಿಪ್ ಇದೆ ಅಂತ ಗಾಸಿಪ್ ಇದೆ. ಆದರೆ ತ್ರಿಷ ತಮ್ಮ ಮದುವೆ ಬಗ್ಗೆ ಏನೂ ಹೇಳಿಲ್ಲ.
ಕನ್ನಡತಿಯಾಗಿರುವ ಬೆಂಗಳೂರು ಮೂಲದ ಬೆಡಗಿ ಸ್ಟಾರ್ ಹೀರೋಯಿನ್ ಅನುಷ್ಕಾ ಶೆಟ್ಟಿ ಕೂಡ ಮದುವೆ ಆಗಿಲ್ಲ. ಇವರಿಗೆ 43 ವರ್ಷವಾದರೂ ಮದುವೆ ಬಗ್ಗೆ ಸ್ಪಷ್ಟನೆ ಕೊಟ್ಟಿಲ್ಲ. ಅರುಂಧತಿ, ಬಾಹುಬಲಿ, ಭಾಗಮತಿ ಸಿನಿಮಾಗಳಲ್ಲಿ ನಟಿಸಿದ ಅನುಷ್ಕಾ, ತಮಿಳಿನಲ್ಲೂ ಸ್ಟಾರ್ ನಟಿ.
ಪ್ರಭಾಸ್ ಜೊತೆ ಲವ್ ಇದೆ ಅಂತ ಗಾಸಿಪ್ ಇದೆ. ಫ್ಯಾನ್ಸ್ AI ಟೆಕ್ನಾಲಜಿ ಬಳಸಿ ಮದುವೆ ಫೋಟೋ ವೈರಲ್ ಮಾಡಿದ್ದರು. ಆದರೆ ಇಬ್ಬರೂ ನಾವು ಫ್ರೆಂಡ್ಸ್ ಅಂತ ಹೇಳ್ತಾರೆ. ಅನುಷ್ಕಾ ಬ್ಯಾಚುಲರ್ ಆಗಿ ಉಳಿಯೋಕೆ ಕಾರಣ ಏನು ಅಂತ ಯಾರಿಗೂ ಗೊತ್ತಿಲ್ಲ.
ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ ಟಬುಗೆ 53 ವರ್ಷ. ಆದರೂ ಮದುವೆ ಆಗಿಲ್ಲ. ಒಂಟಿ ಜೀವನ ಎಂಜಾಯ್ ಮಾಡ್ತಿದ್ದಾರೆ. ಅಜಯ್ ದೇವಗನ್ ಜೊತೆ ಲವ್ ಅಫೇರ್ ಇತ್ತು ಅಂತ ಹೇಳಲಾಗುತ್ತದೆ. ನಾಗಾರ್ಜುನ ಜೊತೆಗೂ ಲವ್ ಇತ್ತು ಅಂತ ಗಾಸಿಪ್ ಇದೆ. ಆದರೆ ಟಬು ಮದುವೆ ಆಗಲ್ಲ ಅಂತ ಹೇಳಿದ್ದಾರೆ.
ಮದುವೆ ಆಗದ ಇನ್ನೊಬ್ಬ ನಟಿ ನಗ್ಮಾ. ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಸೇರಿದಂತೆ ದಕ್ಷಿಣ ಭಾರತದ ಹಲವು ಸ್ಟಾರ್ ನಟರ ಜೊತೆ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಿನಿಮಾದಲ್ಲಿ ಹೀರೋಯಿನ್ ಅವಕಾಶಗಳು ಕಡಿಮೆಯಾದ ಮೇಲೆ ರಾಜಕೀಯಕ್ಕೆ ಹೋದರು. ಕ್ರಿಕೆಟರ್ ಗಂಗೂಲಿ ಜೊತೆ ಲವ್ ಇತ್ತು ಅಂತ ಹೇೆಳಲಾಗುತ್ತದೆ. 50 ದಾಟಿದ ನಗ್ಮಾ ಬ್ಯಾಚುಲರ್ ಲೈಫ್ ನಡೆಸ್ತಿದ್ದಾರೆ.
ಕೇರಳದ ನಟಿ ಸಿತಾರ. ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಹೀರೋಯಿನ್ ಆಗಿ ಸೈ ಎನಿಸಿಕೊಂಡಿರುವ ಸಿತಾರ ಅವರು ಇದೀಗ ಧಾರಾವಾಹಿ ಮೂಲಕ ನಟನೆ ಮುಂದುವರೆಸಿದ್ದಾರೆ. ಇದೀಗ ತಾಯಿ ಪಾತ್ರಗಳನ್ನು ಮಾಡುತ್ತಿದ್ದಾರೆ.
52 ವರ್ಷದ ಸಿತಾರ ಇನ್ನೂ ಮದುವೆ ಆಗಿಲ್ಲ. ನಾನು ಮದುವೆಯಾದರೆ ತಂದೆ-ತಾಯಿಯಿಂದ ದೂರ ಆಗಬೇಕಾಗುತ್ತದೆ ಎಂಬ ಒಂದೇ ಕಾರಣಕ್ಕೆ ಮದುವೆ ಆಗಿಲ್ಲ ಅಂತ ಹೇಳಿದ್ದಾರೆ. ನಿರ್ಮಾಪಕ ಮುರಳಿ ಜೊತೆ ಲವ್ ಇತ್ತು. ಆದರೆ ಅವರು 2010 ರಲ್ಲಿ ತೀರಿಕೊಂಡರು. ಅದಕ್ಕೆ ಸಿತಾರ ಮದುವೆ ಆಗಿಲ್ಲ ಅಂತಲೂ ಹೇಳಲಾಗುತ್ತದೆ.
ತೆಲುಗು, ತಮಿಳು ಸಿನಿಮಾಗಳಲ್ಲಿ ಫೇಮಸ್ ಆದ ನಟಿ ಕೌಸಲ್ಯ ಕೂಡ ಮದುವೆಯಾಗಿಲ್ಲ. ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ಈಗ ಕ್ಯಾರೆಕ್ಟರ್ ಪಾತ್ರಗಳನ್ನು ಮಾಡುತ್ತಿದ್ದಾರೆ. 44 ವರ್ಷದ ಕೌಸಲ್ಯ ಇನ್ನೂ ಮದುವೆ ಆಗಿಲ್ಲ. ಲವ್ ಫೇಲ್ಯೂರ್ ಕಾರಣ ಅಂತ ಹೇಳ್ತಾರೆ.