- Home
- Entertainment
- News
- ದಳಪತಿ ವಿಜಯ್, ಸಲ್ಮಾನ್ ಖಾನ್ ಸೇರಿದಂತೆ ಎಲ್ಲರನ್ನೂ ಸೈಡ್ ಮಾಡಿ 'ನ್ಯೂ ರೆಕಾರ್ಡ್' ಸೃಷ್ಟಿಸಿದ ಶ್ರೀಲೀಲಾ!
ದಳಪತಿ ವಿಜಯ್, ಸಲ್ಮಾನ್ ಖಾನ್ ಸೇರಿದಂತೆ ಎಲ್ಲರನ್ನೂ ಸೈಡ್ ಮಾಡಿ 'ನ್ಯೂ ರೆಕಾರ್ಡ್' ಸೃಷ್ಟಿಸಿದ ಶ್ರೀಲೀಲಾ!
ಬಾಲಿವುಡ್, ಟಾಲಿವುಡ್‌ನಲ್ಲಿ ಸಾಲುಸಾಲು ಸಿನಿಮಾಗಳ ಮೂಲಕ ಸದ್ದು ಮಾಡುತ್ತಿರುವ ನಟಿ ಶ್ರೀಲೀಲಾ, ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನೂ ಹಿಂದಿಕ್ಕಿ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಅದು ಅತಿಂಥ ದಾಖಲೆಯಲ್ಲ, ಅದ್ಯಾವುದು ಅಂತ ನೋಡಿ..

Sreeleela social media new record: ಶ್ರೀಲೀಲಾ ಹೆಸರು ಈಗ ಸ್ಯಾಂಡಲ್‌ವುಡ್‌ಗೆ ಮಾತ್ರ ಸೀಮಿತವಾಗಿಲ್ಲ. ಟಾಲಿವುಡ್‌ನಲ್ಲಿ ಈಗಾಗಲೇ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ಅವರು, ಬಾಲಿವುಡ್‌ನಲ್ಲೂ ಸಾಲು ಸಾಲು ಸಿನಿಮಾಗಳ ಮೂಲಕ ಸದ್ದು ಮಾಡಲು ಸಜ್ಜಾಗಿದ್ದಾರೆ. ಸಿನಿಮಾ ಕೆಲಸಗಳ ನಡುವೆ ಸಾಮಾಜಿಕ ಜಾಲತಾಣದಲ್ಲೂ ತಮ್ಮದೇ ಆದ ಕ್ರೇಜ್ ಸೃಷ್ಟಿಸಿರುವ ಶ್ರೀಲೀಲಾ ಇದೀಗ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಬಂದಿರುವ ಲೈಕ್ಸ್ ಮತ್ತು ವೀವ್ಸ್ ಸಂಖ್ಯೆಯನ್ನು ನೋಡಿದರೆ ಈ ನಟಿಯ ಡಿಜಿಟಲ್ ಪವರ್ ಎಷ್ಟಿದೆ ಎಂಬುದು ಗೊತ್ತಾಗುತ್ತದೆ.
ಇತ್ತೀಚೆಗೆ ಶ್ರೀಲೀಲಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೀಡಿಯೋವೊಂದು ಭಾರೀ ವೈರಲ್ ಆಗಿದೆ. ಈ ವೀಡಿಯೋಗೆ ಬರೋಬ್ಬರಿ 1.11 ಕೋಟಿ ಅಂದರೆ 11.1 ಮಿಲಿಯನ್‌ಗೂ ಅಧಿಕ ಲೈಕ್ಸ್ ಬಂದಿವೆ. ಅಷ್ಟೇ ಅಲ್ಲ, ವೀಡಿಯೋವನ್ನು 25.8 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಎನ್ನಲಾಗಿದೆ. ಸಾಮಾನ್ಯವಾಗಿ ಸ್ಟಾರ್ ನಟರ ಪೋಸ್ಟ್‌ಗಳಿಗೆ ಲಕ್ಷಾಂತರ ಲೈಕ್ಸ್ ಸಿಗುವುದು ಸಹಜ. ಆದರೆ ಶ್ರೀಲೀಲಾ ಅವರ ಈ ಪೋಸ್ಟ್ ಕೋಟಿಗೂ ಮೀರಿದ ಲೈಕ್ಸ್ ಪಡೆದುಕೊಂಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ.
ಇದರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ಭಾರತೀಯ ನಟ-ನಟಿಯರ ಸಾಲಿನಲ್ಲಿ ಶ್ರೀಲೀಲಾ ಹೆಸರು ಮತ್ತಷ್ಟು ಎತ್ತರಕ್ಕೇರಿದೆ. ಈ ಪೋಸ್ಟ್ ಮೂಲಕ ತಮಿಳಿನ ದಳಪತಿ ವಿಜಯ್ ಅವರ 97 ಲಕ್ಷ ಲೈಕ್ಸ್ ದಾಖಲೆಯನ್ನು ಶ್ರೀಲೀಲಾ ಹಿಂದಿಕ್ಕಿದ್ದಾರೆ ಎನ್ನಲಾಗಿದೆ. ಇದೇ ವೇಳೆ ತೆಲುಗು ನಟ ರಾಮ್ ಪೋತಿನೇನಿ ಹಾಗೂ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಕೆಲವು ಪೋಸ್ಟ್‌ಗಳ ಲೈಕ್ಸ್ ಸಂಖ್ಯೆಯನ್ನೂ ಮೀರಿಸಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.
ಶ್ರೀಲೀಲಾ ಅವರ ಸೋಶಿಯಲ್ ಮೀಡಿಯಾ ಕ್ರೇಜ್‌ಗೆ ಅವರ ನೃತ್ಯ ಕೌಶಲ್ಯವೂ ಪ್ರಮುಖ ಕಾರಣ. ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಹಂಚಿಕೊಳ್ಳುವ ಡ್ಯಾನ್ಸ್ ವೀಡಿಯೋಗಳು, ಫೋಟೋಶೂಟ್‌ಗಳು ಮತ್ತು ವೈಯಕ್ತಿಕ ಕ್ಷಣಗಳ ಪೋಸ್ಟ್‌ಗಳಿಗೆ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ಸಿಗುತ್ತದೆ. ಬಾಲ್ಯದಲ್ಲಿನ ಭರತನಾಟ್ಯ ವೀಡಿಯೋಗಳಿಂದ ಹಿಡಿದು ಇತ್ತೀಚಿನ ಗ್ಲಾಮರಸ್ ಫೋಟೋಶೂಟ್‌ಗಳವರೆಗೆ ಅವರ ಖಾತೆಯಲ್ಲಿ ವಿಭಿನ್ನ ರೀತಿಯ ಕಂಟೆಂಟ್ ಕಾಣಸಿಗುತ್ತದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಶ್ರೀಲೀಲಾ ಅವರಿಗೆ 1.65 ಕೋಟಿಗೂ ಹೆಚ್ಚು ಫಾಲೋವರ್ಸ್ ಇದ್ದಾರೆ ಎನ್ನಲಾಗಿದ್ದು, ಇದು ಅವರ ಆನ್‌ಲೈನ್ ಜನಪ್ರಿಯತೆಯನ್ನು ಮತ್ತಷ್ಟು ತೋರಿಸುತ್ತದೆ. ವಿಶೇಷವಾಗಿ ಅವರ ಡ್ಯಾನ್ಸ್ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ಹರಡುವುದು ಹೊಸದೇನಲ್ಲ. ಸಿನಿಮಾಗಳಲ್ಲಿ ಅವರ ಡ್ಯಾನ್ಸ್ ಸ್ಟೆಪ್‌ಗಳು ವೈರಲ್ ಆಗುವಂತೆ, ಸೋಶಿಯಲ್ ಮೀಡಿಯಾ ಪೋಸ್ಟ್‌ಗಳೂ ಅಭಿಮಾನಿಗಳ ನಡುವೆ ಸಖತ್ ಟ್ರೆಂಡ್ ಆಗುತ್ತವೆ.
ಸಿನಿಮಾ ಕ್ಷೇತ್ರದಲ್ಲೂ ಶ್ರೀಲೀಲಾ ತಮ್ಮ ಡ್ಯಾನ್ಸ್ ಹಾಗೂ ಅಭಿನಯದ ಮೂಲಕ ಯುವ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಸದ್ಯ ಟಾಲಿವುಡ್ ಮತ್ತು ಬಾಲಿವುಡ್‌ನ ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿರುವ ಅವರು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ಇನ್‌ಸ್ಟಾಗ್ರಾಮ್‌ನಲ್ಲಿ ಸೃಷ್ಟಿಸಿರುವ ಈ ಹೊಸ ದಾಖಲೆ ಅವರ ಸ್ಟಾರ್‌ಡಮ್‌ಗೆ ಮತ್ತೊಂದು ಆಯಾಮ ನೀಡಿದೆ.
ಒಟ್ಟಿನಲ್ಲಿ ಬೆಳ್ಳಿತೆರೆಯ ಮೇಲೆ ಮಾತ್ರವಲ್ಲ, ಡಿಜಿಟಲ್ ವೇದಿಕೆಯಲ್ಲೂ ಶ್ರೀಲೀಲಾ ಅವರ ಹವಾ ಜೋರಾಗಿದೆ. ಒಂದು ವೀಡಿಯೋಗೆ ಕೋಟಿಗೂ ಮೀರಿದ ಲೈಕ್ಸ್ ಹಾಗೂ ಕೋಟ್ಯಂತರ ವೀವ್ಸ್ ಸಿಗುವ ಮೂಲಕ ತಮ್ಮ ಸೋಶಿಯಲ್ ಮೀಡಿಯಾ ಪ್ರಭಾವವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮುಂದೆ ಅವರ ಸಿನಿಮಾಗಳ ಬಿಡುಗಡೆ ಸಂದರ್ಭದಲ್ಲಿ ಈ ಡಿಜಿಟಲ್ ಕ್ರೇಜ್ ಯಾವ ರೀತಿಯ ಸದ್ದು ಮಾಡಲಿದೆ ಎಂಬುದು ಕುತೂಹಲ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

