ಅಮಿತಾಭ್ ಬಚ್ಚನ್ 'ಲಾವಾರಿಸ್' ಚಿತ್ರದ 8 ಸೂಪರ್ ಹಿಟ್ ಡೈಲಾಗ್‌ಗಳು ಗೊತ್ತಾ?
ಅಮಿತಾಬ್ ಬಚ್ಚನ್ ಮತ್ತು ಜೀನತ್ ಅಮಾನ್ ಅಭಿನಯದ ಲಾವಾರಿಸ್ ಚಿತ್ರ ಬಿಡುಗಡೆಯಾಗಿ 44 ವರ್ಷಗಳು ಪೂರ್ಣಗೊಂಡಿವೆ. ಈ ಸಂದರ್ಭದಲ್ಲಿ, ಚಿತ್ರದ ಕೆಲವು ಅದ್ಭುತ ಸಂಭಾಷಣೆಗಳನ್ನು ನಾವು ನಿಮಗೆ ಹೇಳಲಿದ್ದೇವೆ.

1. ನಾನು ಯಾರ ಮನೆ ಬಾಗಿಲಿಗೆ ಕಾಲಿಡ್ತೀನೋ ಅವರ ಇಡೀ ಡಿಪಾರ್ಟ್‌ಮೆಂಟ್ ಬಾಗಿಲು ಮುಚ್ಚುತ್ತೆ. ಇದು ಆ ಚಿತ್ರದ ಒಂದು ಪವರ್ಫುಲ್ ಡೈಲಾಗ್.
2. ನಾನು ಈ ಜಗತ್ತಿಗೆ ಕೇವಲ ಶರೀರ ತಂದವನು, ನನ್ನ ಭವಿಷ್ಯ ಯಾರೂ ಬರೆಯಲ್ಲ, ಆಕಾಶದಲ್ಲಿ ನನ್ನ ನಕ್ಷತ್ರಗಳಿಲ್ಲ. ಅವೆಲ್ಲಾ ಸುಳ್ಳು ಎಂಬರ್ಥದ ಡೈಲಾಗ್..
3. ನಾನು ನಾಯಿ ಬಾಲದ ಹಾಗೆ, ಹನ್ನೆರಡು ವರ್ಷ ಚರಂಡಿಯಲ್ಲಿಟ್ಟರೂ ನಾನು ನೇರವಾಗಲ್ಲ, ಚರಂಡಿ ಬಾಗುತ್ತೆ. ಈ ಡೈಲಾಗ್ ಅಂದು ಸಕತ್ ಮನೆಮಾತಾಗಿತ್ತು.
4. ಕೆಲವೊಮ್ಮೆ ಮನುಷ್ಯ ತನ್ನ ಪಾಪದ ಸಣ್ಣ ಗಿಡವನ್ನು ಬಿಟ್ಟು ಓಡಿಹೋಗುತ್ತಾನೆ, ಆದರೆ ಅದೇ ಗಿಡವನ್ನು ದೊಡ್ಡ ಮರವಾಗಿಸಿ ವಿಧಿ ಅವನ ಮುಂದೆ ನಿಲ್ಲಿಸುತ್ತದೆ.
5. ಶರೀರದ ಮೇಲೆ ಕುಷ್ಠ ಬಂದರೂ ಆತ್ಮಕ್ಕೆ ಏನೂ ಆಗಲ್ಲ. ಈ ಡೈಲಾಗ್ ಅಂದು ಬಹಳಷ್ಟು ಮೆಚ್ಚುಗೆ ಗಳಿಸಿತ್ತು. ಕರ್ಮ ಸಿದ್ಧಾಂಥದ ಅಲೆ ಇದ್ದ ಕಾಲದಲ್ಲಿ ಈ ಡೈಲಾಗ್ ತುಂಬಾ ಪವರ್‌ಫುಲ್ ಎನ್ನಿಸಿತ್ತು.
6. ತನ್ನ ತಪ್ಪಿಗೆ ಶಿಕ್ಷೆ ಎಲ್ಲರಿಗೂ ಸಿಗುತ್ತದೆ, ಆದರೆ ತಪ್ಪು ಒಪ್ಪಿಕೊಂಡರೆ ಶಿಕ್ಷೆ ಸಹಿಸುವುದು ಸುಲಭ. ಈ ಡೈಲಾಗ್ ಕೂಡ ಅಪಾರ ಮೆಚ್ಚುಗೆ ಗಳಿಸಿತ್ತು.
7. ಮಕ್ಕಳಿಲ್ಲದಿದ್ದರೆ ದುಃಖ, ಮಕ್ಕಳಿದ್ದು ಸತ್ತರೆ ಬಹಳ ದುಃಖ, ಆದರೆ ಮಕ್ಕಳಿದ್ದು ನಾಲಾಯಕ್ ಆಗಿದ್ದರೆ ಸಹಿಸಲು ಆಗಲ್ಲ.
8. ಇಂದು ನ್ಯಾಯ ಸಿಗುತ್ತದೆ ಇಲ್ಲಾಂದ್ರೆ ವಿಷಯ ಮುಗಿಯುತ್ತದೆ. ಈ ಡೈಲಾಗ್ ಆ ಸಿನಿಮಾಗಷ್ಟೇ ಸೀಮಿತ ಎಂಬ ಅಭಿಪ್ರಾಯ ಅಂದು ವ್ಯಕ್ತವಾಗಿತ್ತು. ಇಂದೂ ಕೂಡ ಅದೇ ಅನಿಸಿಕೆ ಮನೆಮಾಡಿದೆ ಎನ್ನಬಹುದು.