ಬ್ರಿಗೇಡ್ ರಸ್ತೆಯಲ್ಲಿರುವ 'ಫೋರಂ ರೆಕ್ಸ್- ಪಿವಿಆರ್ ಡೈರೆಕ್ಟರ್ಸ್ ಕಟ್'ನಲ್ಲಿ ನಡೆದ ಈ ಚಿತ್ರದ 'ರೆಡ್ ಕಾರ್ಪೆಟ್' ಶೋ ದಲ್ಲಿ ಹಲವಾರು ಖ್ಯಾತನಾಮರು ಭಾಗಿಯಾಗಿದ್ದರು. ಅನಿಲ್ ಶೆಟ್ಟಿ, ಕುನಾಲ್ ಕಪೂರ್, ಸಾಚಿ ಬಿಂದ್ರಾ, ಮೇಘನಾ ಗಾಂವ್ಕರ್ ಸೇರಿದಂತೆ ಹಲವು ಗಣ್ಯರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಮಂದಹಾಸ ಬೀರಿ ಈ ಚಿತ್ರದ ಯಶಸ್ಸಿಗೆ ಶುಭ ಹಾರೈಸಿದ್ದಾರೆ.

ಬ್ರಿಗೇಡ್ ರಸ್ತೆಯಲ್ಲಿರುವ 'ಫೋರಂ ರೆಕ್ಸ್- ಪಿವಿಆರ್ ಡೈರೆಕ್ಟರ್ಸ್ ಕಟ್'ನಲ್ಲಿ ರೆಡ್ ಕಾರ್ಪೆಟ್ ಮಿಂಚು!

Lambodhara 2.0 Kannada Movie: 'ಸಿಂಪಲ್ ಸುನಿ' ನಿರ್ದೇಶನದ 'ಲಂಬೋದರ 2.0' ಸಿನಿಮಾ ನವೆಂಬರ್ 13, 2026 ರಂದು ಚಿತ್ರಮಂದಿರಗಳಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಿರುವ ಸಿನಿಮಾ, ಸೈನ್ಸ್ ಫಿಕ್ಷನ್ ಮತ್ತು ಸೋಶಿಯಲ್ ಥ್ರಿಲ್ಲರ್ ಚಿತ್ರವಾಗಿದೆ.

ಅನಿಲ್ ಶೆಟ್ಟಿ, ಕುನಾಲ್ ಕಪೂರ್, ಸಾಚಿ ಬಿಂದ್ರಾ, ಮೇಘನಾ ಗಾಂವ್ಕರ್, ಮಾಳವಿಕಾ ಅವಿನಾಶ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದಲ್ಲಿ 'ಜಿಯಾ' (JIA) ಎನ್ನುವ ನೈಜ ಹ್ಯೂಮನಾಯ್ಡ್ ರೋಬೋಟ್ ಕೂಡ ಅಭಿನಯಿಸಿದೆ. ರೋಬೋಟ್ ನಟನೆಯನ್ನೂ ಮಾಡಿರುವ ಕಾರಣಕ್ಕೆ ಈ ಚಿತ್ರವನ್ನು ದೊಡ್ಡವರ ಜೊತೆಗೆ ಮಕ್ಕಳು ನೋಡುವಂತಿದೆ. 'ಲಂಬೋದರ 2.0' ಚಿತ್ರದ ಮೂಲಕ ಕುನಾಲ್ ಕಪೂರ್ ಮೊಟ್ಟಮೊದಲ ಬಾರಿಗೆ ಕನ್ನಡಚಿತ್ರರಂಗಕ್ಕೆ ಬಂದಿದ್ದಾರೆ.

ಬ್ರಿಗೇಡ್ ರಸ್ತೆಯಲ್ಲಿರುವ 'ಫೋರಂ ರೆಕ್ಸ್- ಪಿವಿಆರ್ ಡೈರೆಕ್ಟರ್ಸ್ ಕಟ್'ನಲ್ಲಿ ಇಂದು ನಡೆದ ಈ ಚಿತ್ರದ 'ರೆಡ್ ಕಾರ್ಪೆಟ್' ಶೋ ದಲ್ಲಿ ಹಲವಾರು ಖ್ಯಾತನಾಮರು ಭಾಗಿಯಾಗಿದ್ದರು. ಅನಿಲ್ ಶೆಟ್ಟಿ, ಕುನಾಲ್ ಕಪೂರ್, ಸಾಚಿ ಬಿಂದ್ರಾ, ಮೇಘನಾ ಗಾಂವ್ಕರ್ ಸೇರಿದಂತೆ ಚಿತ್ರದ ಮುಖ್ಯ ತಾರಾಗಣದ ನಟನಟಿಯರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಮಂದಹಾಸ ಬೀರಿ ಈ ಚಿತ್ರದ ಯಶಸ್ಸಿಗೆ ಶುಭ ಹಾರೈಸಿದ್ದಾರೆ.

ಯಾವೆಲ್ಲಾ ಗಣ್ಯರು, ಸಿನಿತಾರೆಯರು ಕೆಂಪು ಹಾಸಿನ ಮೇಲೆ (ರೆಡ್ ಕಾರ್ಪೆಟ್) ನಲ್ಲಿ ಮಿಂಚಿದ್ದಾರೆ?

ಕನ್ನಡ ಮೂಲದ ಬಾಲಿವುಡ್ ನಟ ಸುನಿಲ್ ಶೆಟ್ಟಿ, ಚಿತ್ರದ ನಿರ್ದೇಶಕರಾದ ಸಿಂಪಲ್ ಸುನಿ, ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ, ವಿಪ್ರೋ ಅಧ್ಯಕ್ಷ ರಿಷದ್ ಪ್ರೇಮ್‌ಜಿ, ಇನ್ಫೋಸಿಸ್‌ನ ಮಾಜಿ ನಿರ್ದೇಶಕ ಮೋಹನ್‌ದಾಸ್ ಪೈ, ಇಸ್ರೇಲ್ ಕಾನ್ಸುಲೇಟ್ ಜನರಲ್ ಓರ್ಲಿ, ವೈಟ್ಜ್‌ಮನ್, ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್, ಟೆನಿಸ್ ವಿಶ್ವ ಚಾಂಪಿಯನ್ ರೋಹನ್ ಬೋಪಣ್ಣ, ಶ್ರೀಮತಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ನಟ ಶ್ರೀಮುರಳಿ, ನಟಿ ಶಾನ್ವಿ ಶ್ರೀವಾಸ್ತವ, ಪ್ರಗತಿ ಶೆಟ್ಟಿ,

ಜೊತೆಗೆ ವಿವಿಧ ಚಿತ್ರರಂಗಗಳ ನಟ-ನಟಿಯರು, ಸ್ಟಾರ್ಟ್‌ಅಪ್ ಸಂಸ್ಥಾಪಕರು, ಮಿಸ್ ಇಂಡಿಯಾ ವಿಜೇತರು, ಫ್ಯಾಷನ್ ಸ್ಟೈಲಿಸ್ಟ್ ಪ್ರಸಾದ್ ಬಿದ್ದಪ್ಪ, ರಾಜಕಾರಣಿಗಳಾದ ಡಾ. ಸಿ. ಎನ್. ಅಶ್ವಥ್ ನಾರಾಯಣ್, ಶಾಸಕ ಎನ್. ಎ. ಹ್ಯಾರಿಸ್, ಮೊಹಮ್ಮದ್ ಹ್ಯಾರಿಸ್ ನಲಪಾಡ್, ಮಾಡೆಲ್‌ಗಳು, ಕಾರ್ಪೊರೇಟ್ ಕ್ಷೇತ್ರದ ಪ್ರಮುಖ ನಾಯಕರು ಸೇರಿದಂತೆ ಹಲವು ಗಣ್ಯರು ಈ ಪಟ್ಟಿಯಲ್ಲಿ ಸೇರಿದ್ದಾರೆ.

'ಜಿಯಾ' (JIA) ಎನ್ನುವ ನೈಜ ಹ್ಯೂಮನಾಯ್ಡ್ ರೋಬೋಟ್ ಕಮಾಲ್!

ಅಂದಹಾಗೆ, 'ಲಂಬೋದರ 2.0' ಚಿತ್ರದಲ್ಲಿ 'ಜಿಯಾ' (JIA) ಎನ್ನುವ ನೈಜ ಹ್ಯೂಮನಾಯ್ಡ್ ರೋಬೋಟ್ ಕೂಡ ಅಭಿನಯಿಸಿದೆ. ಈ ಕಾರಣಕ್ಕೆ ಈ ಚಿತ್ರವನ್ನು ದೊಡ್ಡವರ ಜೊತೆಗೆ ಮಕ್ಕಳು ನೋಡುವಂತಿದೆ. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಸಿನಿಮಾ ಕನ್ನಡ ಹಾಗೂ ಹಿಂದಿ ಚಿತ್ರರಂಗಕ್ಕೆ ಟಾನಿಕ್ ಆದರೂ ಆಶ್ಚರ್ಯವೇನಿಲ್ಲ.