- Home
- Entertainment
- News
- ಸಪ್ತ ಸಾಗರದಾಚೆ ನಂತರ ಹೇಮಂತ್ ರಾವ್ ಹೊಸ ಸಿನಿಮಾ, ಕನ್ನಡಕ್ಕೆ ಮತ್ತೆ ಬಂದ ಆಳ್ವಾಸ್ ಕಾಲೇಜಿನ ಹೀರೋಯಿನ್!
ಸಪ್ತ ಸಾಗರದಾಚೆ ನಂತರ ಹೇಮಂತ್ ರಾವ್ ಹೊಸ ಸಿನಿಮಾ, ಕನ್ನಡಕ್ಕೆ ಮತ್ತೆ ಬಂದ ಆಳ್ವಾಸ್ ಕಾಲೇಜಿನ ಹೀರೋಯಿನ್!
'ಸಪ್ತ ಸಾಗರದಾಚೆ ಎಲ್ಲೋ' ಖ್ಯಾತಿಯ ನಿರ್ದೇಶಕ ಹೇಮಂತ್ ಎಂ. ರಾವ್ ತಮ್ಮ ಹೊಸ ಸಿನಿಮಾ '666 ಆಪರೇಷನ್ ಡ್ರೀಮ್ ಥಿಯೇಟರ್' ಘೋಷಿಸಿದ್ದಾರೆ. ಶಿವರಾಜ್‌ಕುಮಾರ್ ಮತ್ತು ಧನಂಜಯ ನಟಿಸಲಿರುವ ಈ ಚಿತ್ರದ ಮೂಲಕ ನಟಿ ಪ್ರಿಯಾಂಕಾ ಮೋಹನ್ ಕನ್ನಡಕ್ಕೆ ಮರಳುತ್ತಿದ್ದಾರೆ.

2023ರಲ್ಲಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಬಳಿಕ ಎಲ್ಲೂ ಕಾಣಿಸಿಕೊಳ್ಳದ ಕನ್ನಡದ ಹೆಸರಾಂತ ನಿರ್ದೇಶಕ ಹೇಮಂತ್ ಎಂ ರಾವ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.
ಶಿವರಾಜ್‌ಕುಮಾರ್, ಡಾಲಿ ಧನಂಜಯ ಅವರೊಂದಿಗೆ '666 ಆಪರೇಷನ್ ಡ್ರೀಮ್ ಥಿಯೇಟರ್..' ಅನ್ನೋ ಸಿನಿಮಾ ಘೋಷಣೆ ಮಾಡಿದ್ದು, ಅದರ ಹೀರೋಯಿನ್ ಅನ್ನು ಅನಾವರಣ ಮಾಡಿದ್ದಾರೆ.
ತಮಿಳು, ತೆಲುಗಿನಲ್ಲಿ ಸ್ಟಾರ್ ಹೀರೋಯಿನ್ ಆಗಿರುವ ಪವನ್ ಕಲ್ಯಾಣ್ ಅವರ ಓಜಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಮೈಸೂರಿನ ನಟಿ ಪ್ರಿಯಾಂಕಾ ಮೋಹನ್ ಈ ಸಿನಿಮಾದ ಮೂಲಕ ಕನ್ನಡಕ್ಕೆ ವಾಪಸ್ ಆಗುತ್ತಿದ್ದಾರೆ.
2019ರಲ್ಲಿ ತೆರೆಕಂಡ ಒಂದ್ ಕಥೆ ಹೇಳ್ಲಾ ಕನ್ನಡ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದ ಪ್ರಿಯಾಂಕಾ ಮೋಹನ್, ಅದೇ ವರ್ಷ ತೆಲುಗುವಿನ ಗ್ಯಾಂಗ್ ಲೀಡರ್ ಸಿನಿಮಾದ ಮೂಲಕ ಟಾಲಿವುಡ್‌ಗೆ ಪರಿಚಯವಾದರು.
ಅಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡ ಪ್ರಿಯಾಂಕಾ ಮೋಹನ್, ಶ್ರೀಕಾರಂ, ಡಾಕ್ಟರ್, ಎಥರ್ಕುಂ ತುನಿಂಧವನ್, ಡಾನ್, ಟಿಕ್‌ಟಾಕ್, ಕ್ಯಾಪ್ಟನ್ ಮಿಲ್ಲರ್, ಸರಿಪೋಧಾ ಸನಿವಾರಂ, ಬ್ರದರ್, ನೀಲವುಕು ಎನ್ ಮೆಲ್ ಎನ್ನಡಿ ಕೊಬಮ್ ಹಾಗೂ ದೇ ಕಾಲ್ ಹಿಮ್ ಓಜಿ ಅನ್ನೋ ಸಿನಿಮಾಗಳಲ್ಲಿ ನಟಿಸಿದ್ದರು.
30 ವರ್ಷದ ಪ್ರಿಯಾಂಕಾ ಮೋಹನ್ ಮೈಸೂರಿನವರು. ತಮ್ಮ ಪಿಯು ವಿದ್ಯಾಭ್ಯಾಸವನ್ನು ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ, ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ಬಯೋಲಾಜಿಕಲ್ ಇಂಜಿನಿಯರಿಂಗ್ ಪದವಿ ಮಾಡಿದ್ದರು.
ಇನ್ನು 666 ಆಪರೇಷನ್ ಡ್ರೀಮ್ ಥಿಯೇಟರ್.. ಸಿನಿಮಾಕ್ಕೆ ಚಿತ್ರಕಥೆ ಹಾಗೂ ನಿರ್ದೇಶನ ಎರಡನ್ನೂ ಹೇಮಂತ್ ರಾವ್ ಮಾಡುತ್ತಿದ್ದಾರೆ. ಏಕಕಾಲದಲ್ಲಿ ಕನ್ನಡ ಹಾಗೂ ತೆಲುಗುವಿನಲ್ಲಿ ಸಿನಿಮಾ ರಿಲೀಸ್ ಆಗಲಿದೆ.
ಎಂದಿನಂತೆ ಚರಣ್ ರಾಜ್ ಮ್ಯೂಸಿಕ್ ಈ ಸಿನಿಮಾಗೆ ಇದ್ದು, ವೈಶಾಕ್ ಜೆ ಗೌಡ ಸಿನಿಮಾದ ನಿರ್ಮಾಪಕರಾಗಿದ್ದಾರೆ. ಇದರ ಹಿನ್ನಲೆಯಲ್ಲಿ ಈಗಾಗಲೇ ಘೋಷಣೆಯಾಗಿದ್ದ ಶಿವರಾಜ್‌ಕುಮಾರ್ ಹಾಗೂ ಹೇಮಂತ್ ಎಂ ರಾವ್ ಅವರ ಜೊತೆಗಿನ ಭೈರವನ ಕೊನೇ ಪಾಠ ಸಿನಿಮಾ ಪೋಸ್ಟ್ ಪೋನ್ ಆಗಿದೆ.
ಭೈರವನ ಕೊನೇ ಪಾಠ ಸಿನಿಮಾವನ್ನು ಹೇಮಂತ್ ಎಂ ರಾವ್ ಕೈಬಿಟ್ಟಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಇದನ್ನು ಹೇಮಂತ್ ನಿರಾಕರಿಸಿದ್ದರು.
ಈಗ ಭೈರವನ ಕೊನೇ ಪಾಠ ಸಿನಿಮಾ ಬರೋದಕ್ಕೆ ಮುಂಚೆಯೇ ಶಿವರಾಜ್‌ಕುಮಾರ್ ಅವರೊಂದಿಗೆ 666 ಆಪರೇಷನ್ ಡ್ರೀಮ್ ಥಿಯೇಟರ್.. ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ. ಕ್ರೈಂ ಥ್ರಿಲ್ಲರ್ ಕಥೆ ಇದಾಗಿರಬಹುದು ಎಂದು ಅಂದಾಜಿಸಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

