MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • News
  • ಎವಿಆರ್ ರೆಡ್ಡಿ ಸ್ಯಾಂಡಲ್‌ವುಡ್‌ ನಟಿಯ ಗಲಾಟೆಯಲ್ಲಿ ಬಿಗ್ ಟ್ವಿಸ್ಟ್, ಬೆದರಿಕೆ ಪತ್ರ ಬರೆದ ಗೆಳೆಯ ಅರೆಸ್ಟ್!

ಎವಿಆರ್ ರೆಡ್ಡಿ ಸ್ಯಾಂಡಲ್‌ವುಡ್‌ ನಟಿಯ ಗಲಾಟೆಯಲ್ಲಿ ಬಿಗ್ ಟ್ವಿಸ್ಟ್, ಬೆದರಿಕೆ ಪತ್ರ ಬರೆದ ಗೆಳೆಯ ಅರೆಸ್ಟ್!

ನಿರ್ಮಾಪಕ ಅರವಿಂದ ರೆಡ್ಡಿಗೆ ಕೋಟಿ ಹಣಕ್ಕೆ ಬೇಡಿಕೆಯಿಟ್ಟ ಬೆದರಿಕೆ ಪತ್ರ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪೊಲೀಸರು ಈ ಸಂಬಂಧ ಸ್ಯಾಂಡಲ್‌ವುಡ್ ನಟಿಯ ಗೆಳೆಯ ವೈಶಾಕ್‌ನನ್ನು ಆಕೆಯ ಮನೆಯಿಂದಲೇ ಬಂಧಿಸಿದ್ದಾರೆ. ಈ ಬಂಧನವು ಪ್ರಕರಣದಲ್ಲಿ ನಟಿಯ ಪಾತ್ರದ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

2 Min read
Author : Gowthami K
Published : Feb 06 2026, 03:43 PM IST
Share this Photo Gallery
  • FB
  • TW
  • Linkdin
  • Whatsapp
16
AVR reddy
Image Credit : Asianet News

AVR reddy

ಬೆಂಗಳೂರು: ಖ್ಯಾತ ನಿರ್ಮಾಪಕ, ಉದ್ಯಮಿ ಹಾಗೂ ವಕೀಲರಾದ ಅರವಿಂದ ರೆಡ್ಡಿಗೆ ಬೆದರಿಕೆ ಪತ್ರ ಕಳುಹಿಸಿ ಕೋಟಿ ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಯಾಂಡಲ್‌ವುಡ್‌ ನಟಿಯ ಗೆಳೆಯ ವೈಶಾಕ್ ಎಂಬಾತನನ್ನು ಆಕೆಯ ಮನೆಯಿಂದಲೇ ಬಂಧಿಸಿದ್ದು, ಪ್ರಕರಣಕ್ಕೆ ಬಿಗ್ ಟ್ವಸ್ಟ್ ಸಿಕ್ಕಿದೆ. ಎವಿಆರ್ ಗ್ರೂಪ್ ಮಾಲೀಕ ಅರವಿಂದ ರೆಡ್ಡಿ ಮತ್ತು ಸ್ಯಾಂಡಲ್‌ವುಡ್‌ ನಟಿಗೆ ಸಂಬಂಧ ಇದ್ದ ಬಗ್ಗೆ ಈ ಹಿಂದೆ ಸುದ್ದಿಯಾಗಿತ್ತು. ಅವರಿಬ್ಬರ ಗಲಾಟೆಗಳು ಕೂಡ ಬಹಿರಂಗವಾಗಿ ಆರೋಪ ಪತ್ಯಾರೋಪಗಳು ಹೊರಬಂತು. ಇದಾಗಿ ಸ್ವಲ್ಪ ದಿನಗಳ ಬಳಿಕ ನಟಿ ಮತ್ತು ಅರವಿಂದ್ ರೆಡ್ಡಿ ತೀರಾ ಖಾಸಗಿಯಾಗಿದ್ದ ಫೋಟೋಗಳು ವೈರಲ್ ಆದವು. ಇದೀಗ ಪ್ರಕರಣದಲ್ಲಿ ಮತ್ತೊಂದು ಬಿಗ್‌ ಟ್ವಿಸ್ಟ್ ಸಿಕ್ಕಿದೆ.

26
 ಬೆದರಿಕೆ ಪತ್ರ ಕಳಿಸಿದ್ದು ಹುನ್ನಾರವೇ?
Image Credit : Asianet News

ಬೆದರಿಕೆ ಪತ್ರ ಕಳಿಸಿದ್ದು ಹುನ್ನಾರವೇ?

ಎವಿಆರ್ ಗ್ರೂಪ್ ಮಾಲೀಕರಾಗಿರುವ ಅರವಿಂದ ರೆಡ್ಡಿಗೆ ಜನವರಿ ತಿಂಗಳಲ್ಲಿ ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ ಪತ್ರ ಬಂದಿತ್ತು. ಬ್ಲೂ ಡಾರ್ಟ್ ಕೊರಿಯರ್ ಮುಖಾಂತರ ಕಳುಹಿಸಲಾಗಿದ್ದ ಈ ಪತ್ರದಲ್ಲಿ, “ಪ್ರಸ್ತುತ ನಿನ್ನ ಮತ್ತು ಮಹಿಳೆಯೊಂದಿಗಿರುವ (ನಟಿ) ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಬೇಕು. ಇಲ್ಲವಾದಲ್ಲಿ ನನ್ನ ಗ್ಯಾರೇಜ್‌ಗೆ 6 ರಿಂದ 7 ಕೋಟಿ ರೂಪಾಯಿ ಹಣ ಕಳುಹಿಸಬೇಕು. ಬೇಡಿಕೆ ಈಡೇರಿಸದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಬೆದರಿಕೆ ಹಾಕಲಾಗಿತ್ತು.

Related Articles

Related image1
'ನನಗೆ ಮಾತ್ರವಲ್ಲ ಇನ್ನೂ ಮೂವರಿಗೆ ಇದೇ ರೀತಿ ಮೋಸ ಮಾಡಿದ್ದಾಳೆ..' ಸ್ಯಾಂಡಲ್‌ವುಡ್‌ ನಟಿ ವಿರುದ್ಧ ಅರವಿಂದ್‌ ರೆಡ್ಡಿ ಹೊಸ ಬಾಂಬ್‌!
Related image2
ಅರವಿಂದ್ ವೆಂಕಟೇಶ್ ರೆಡ್ಡಿಗೆ ಜಾಮೀನು ಸಿಕ್ಕ ಬೆನ್ನಲ್ಲೇ ನಟಿಯ ಹೊಸ ಇನ್‌ಸ್ಟಾ ಸ್ಟೋರಿ ಪೋಸ್ಟ್‌ ವೈರಲ್‌
36
ಪೊಲೀಸ್ ಮೊರೆ ಹೋದ ಅರವಿಂದ ರೆಡ್ಡಿ
Image Credit : Asianet News

ಪೊಲೀಸ್ ಮೊರೆ ಹೋದ ಅರವಿಂದ ರೆಡ್ಡಿ

ಈ ಬೆದರಿಕೆ ಪತ್ರವನ್ನು ಪಡೆದ ಅರವಿಂದ ರೆಡ್ಡಿ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದರು. ಬೆಂಗಳೂರು ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಇಳಿದು, ಬೆದರಿಕೆ ಪತ್ರದ ಮೂಲವನ್ನು ಪತ್ತೆಹಚ್ಚಲು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದರು. ತನಿಖೆಯ ವೇಳೆ ಪತ್ರವನ್ನು ಬನಶಂಕರಿ ಬಳಿಯ ಬ್ಲೂ ಡಾರ್ಟ್ ಕೊರಿಯರ್ ಮೂಲಕ ಕಳುಹಿಸಿದ್ದು ಗೊತ್ತಾಯಿತು. ಆದರೆ ಪೊಲೀಸರ ದಿಕ್ಕು ತಪ್ಪಿಸುವ ಉದ್ದೇಶದಿಂದ ಬೇರೆ ಸ್ಥಳದಿಂದ ಕೊರಿಯರ್ ಮಾಡಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಖಾಕಿ ಪಡೆ ಮೊದಲು ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು. ವಿಚಾರಣೆ ವೇಳೆ, “ನನ್ನ ಬಾಸ್ ಹೇಳಿದಂತೆ ನಾನು ಪತ್ರವನ್ನು ಕೊರಿಯರ್ ಮಾಡಿದ್ದೇನೆ” ಎಂದು ಆತ ಹೇಳಿಕೆ ನೀಡಿದ್ದಾನೆ.

46
ಗೆಳೆಯನ್ನನ್ನು ಬಚ್ಚಿಟ್ಟು ನಾಟಕ ಆಡಿದ್ಲಾ ನಟಿ?
Image Credit : Asianet News

ಗೆಳೆಯನ್ನನ್ನು ಬಚ್ಚಿಟ್ಟು ನಾಟಕ ಆಡಿದ್ಲಾ ನಟಿ?

ಈ ಮಾಹಿತಿಯ ಆಧಾರದಲ್ಲಿ ಪೊಲೀಸರು ಗ್ಯಾರೇಜ್ ಮಾಲೀಕನ ಪತ್ತೆಗೆ ಮುಂದಾದಾಗ, ವೈಶಾಕ್ ಎಂಬಾತನೇ ಈ ಬೆದರಿಕೆ ಪತ್ರ ಕಳುಹಿಸಿರುವ ಪ್ರಮುಖ ಆರೋಪಿ ಎಂಬುದು ತಿಳಿದುಬಂತು. ಆತನ ಬಂಧನಕ್ಕೆ ಬಲೆ ಬೀಸಿದ ಪೊಲೀಸರು ವೈಶಾಕ್ ನನ್ನು ಅದೇ ಸ್ಯಾಂಡಲ್‌ವುಡ್‌ ನಟಿಯ ಮನೆಯಿಂದಲೇ ಪೊಲೀಸರು ಬಂಧಿಸಿದ್ದು, ಈಗ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಪೊಲೀಸರ ತನಿಖೆಯಲ್ಲಿ, ನಟಿಯು ಇತ್ತೀಚೆಗೆ ಅರವಿಂದ ರೆಡ್ಡಿ ವಿರುದ್ಧ ದೂರು ನೀಡಿದ್ದ ಪ್ರಕರಣಕ್ಕೂ ಈ ಬೆದರಿಕೆ ಪತ್ರಕ್ಕೂ ಸಂಬಂಧವಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಇದೇ ಹಿನ್ನೆಲೆಯಲ್ಲಿ, ನಟಿಯ ಗೆಳೆಯನಾದ ವೈಶಾಕ್ ಮೂಲಕ ಬ್ಲಾಕ್ ಮೇಲ್ ತಂತ್ರ ರೂಪಿಸಿ ಬಳಸಲಾಗಿತ್ತೇ ಎಂಬ ಅನುಮಾನ ಪೊಲೀಸರನ್ನು ಕಾಡುತ್ತಿದೆ.

56
ಆರೋಪಿ ಬಳಸಿದ್ದ ಮೊಬೈಲ್ ಫೋನ್ ನಟಿ ಮನೆಯಿಂದ ನಾಪತ್ತೆ!
Image Credit : Asianet News

ಆರೋಪಿ ಬಳಸಿದ್ದ ಮೊಬೈಲ್ ಫೋನ್ ನಟಿ ಮನೆಯಿಂದ ನಾಪತ್ತೆ!

ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ, ವೈಶಾಕ್ ಬೆದರಿಕೆ ಪತ್ರ ಕಳುಹಿಸಿದ ಬಳಿಕ ನಟಿಯ ಮನೆಯಲ್ಲಿಯೇ ತಲೆಮರೆಸಿಕೊಂಡಿದ್ದ. ಅಲ್ಲದೆ, ಆರೋಪಿ ಬಳಸಿದ್ದ ಮೊಬೈಲ್ ಫೋನ್ ಅನ್ನು ನಟಿಯ ಮನೆಯಲ್ಲಿ ಬಚ್ಚಿಟ್ಟಿದ್ದಾನೆ ಎಂಬ ಅನುಮಾನವೂ ಗಾಢವಾಗಿದೆ. ಆರೋಪಿಯನ್ನು ಬಂಧಿಸಿದ ಬಳಿಕ ಮೊಬೈಲ್ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದಾಗ, ಆ ಮೊಬೈಲ್ ಮನೆಯಿಂದ ಕಾಣೆಯಾಗಿರುವುದು ಅನುಮಾನಗಳನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಮೊಬೈಲ್ ಅನ್ನು ಬೇರೆ ಸ್ಥಳಕ್ಕೆ ಸಾಗಿಸಲಾಗಿದೆಯೇ ಎಂಬ ಕುರಿತು ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಟಿಗೆ ಪೊಲೀಸರು ಅಧಿಕೃತವಾಗಿ ನೋಟಿಸ್ ಜಾರಿ ಮಾಡಿ ತನಿಖೆ ಬರುವಂತೆ ಆಗ್ರಹಿಸಿದ್ದಾರೆ.

66
ತನಿಖೆ ಚುರುಕು
Image Credit : Asianet News

ತನಿಖೆ ಚುರುಕು

ಒಟ್ಟಾರೆ, ನಟಿಯು ನೀಡಿದ್ದ ದೂರು ಹಿನ್ನೆಲೆ ಅರವಿಂದ ರೆಡ್ಡಿಗೆ ಬೆದರಿಕೆ ಪತ್ರ ಬರೆಯಲು ಕಾರಣವೇನು, ಇದು ಪೂರ್ವನಿಯೋಜಿತ ಬ್ಲಾಕ್ ಮೇಲ್ ತಂತ್ರವೇ, ಅಥವಾ ವೈಯಕ್ತಿಕ ದ್ವೇಷದ ಕಾರಣವೇ ಎಂಬುದರ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿ ವೈಶಾಕ್‌ನನ್ನು ವಿಚಾರಣೆ ಮಾಡುತ್ತಿರುವ ಪೊಲೀಸರು, ಪ್ರಕರಣದ ಎಲ್ಲಾ ಆಯಾಮಗಳನ್ನು ಪರಿಶೀಲಿಸಿ ಸತ್ಯಾಂಶವನ್ನು ಹೊರತೆಗೆಯುವ ಪ್ರಯತ್ನದಲ್ಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ
ಸುದ್ದಿ
ಕ್ರೈಮ್ ನ್ಯೂಸ್

Latest Videos
Recommended Stories
Recommended image1
ಉಪೇಂದ್ರ-ಪ್ರಿಯಾಂಕಾ ದಂಪತಿ ಹಣ ಲಪಟಾಯಿಸಿದ್ದ ಬಿಹಾರ್ ಮೂಲದ ಸೈಬರ್ ಕಿಲಾಡಿ ವಂಚಕ ಅರೆಸ್ಟ್!
Recommended image2
ಮಗು ಮಾಡ್ಕೊಳ್ತಿಲ್ಲ, ಸುದ್ದಿಗೋಷ್ಠಿಯಲ್ಲೇ ಎಳೆದು ತೂರಾಡಿ ಡ್ಯಾನ್ಸ್ ಮಾಡ್ತೀರಾ?; Bigg Boss ಸ್ಪರ್ಧಿಯ ಪತ್ನಿಗೆ ತರಾಟೆ
Recommended image3
ಮಹೇಶ್ ಬಾಬುಗೆ 'ನಿಲ್ಲೋದು' ಹೇಗೆಂದು ಕಲಿಸೋದಕ್ಕೆ ಕೇರಳಕ್ಕೆ ಕಳಿಸಿದ ಜಕ್ಕಣ್ಣ ಎಸ್‌ಎಸ್‌ ರಾಜಮೌಳಿ!
Related Stories
Recommended image1
'ನನಗೆ ಮಾತ್ರವಲ್ಲ ಇನ್ನೂ ಮೂವರಿಗೆ ಇದೇ ರೀತಿ ಮೋಸ ಮಾಡಿದ್ದಾಳೆ..' ಸ್ಯಾಂಡಲ್‌ವುಡ್‌ ನಟಿ ವಿರುದ್ಧ ಅರವಿಂದ್‌ ರೆಡ್ಡಿ ಹೊಸ ಬಾಂಬ್‌!
Recommended image2
ಅರವಿಂದ್ ವೆಂಕಟೇಶ್ ರೆಡ್ಡಿಗೆ ಜಾಮೀನು ಸಿಕ್ಕ ಬೆನ್ನಲ್ಲೇ ನಟಿಯ ಹೊಸ ಇನ್‌ಸ್ಟಾ ಸ್ಟೋರಿ ಪೋಸ್ಟ್‌ ವೈರಲ್‌
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved