ಎಮಿಲಿ ವಿಲ್ಲೀಸ್‌ಗೆ ಆಗಿದ್ದೇನು? ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ Adult Film Star!
ಪ್ರಖ್ಯಾತ ಅಡಲ್ಟ್ ಫಿಲ್ಮ್ ತಾರೆ ಎಮಿಲಿ ವಿಲ್ಲೀಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 25 ವರ್ಷದ ನಟಿಯ ಸ್ಥಿತಿ ಗಂಭೀರವಾಗಿದೆ ಎನ್ನುವ ಮಾಹಿತಿಗಳು ಬಂದಿವೆ.
ವಯಸ್ಕ ಸಿನಿಮಾಗಳ ತಾರೆ ಮತ್ತು ಟಿಕ್‌ಟಾಕರ್ ಆಗಿ ಪ್ರಖ್ಯಾತಿ ಪಡೆದಿದ್ದ 25 ವರ್ಷದ ಎಮಿಲಿ ವಿಲ್ಲೀಸ್ ದಿಢೀರನೇ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೂಲಗಳ ಪ್ರಕಾರ ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಡ್ರಗ್ ಓವರ್‌ಡೋಸ್ ಆಗಿರುವ ಕಾರಣಕ್ಕೆ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತಕ್ಷಣವೇ ಅವರನ್ನು ಕ್ಯಾಲಿಫೋರ್ನಿಯಾದ ಥೌಸಂಡ್ ಓಕ್ಸ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಆಪ್ತರು ತಿಳಿಸಿದ್ದಾರೆ.
ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ ಬಳಿಕ ಅವರನ್ನು ಬಿಗಿ ವೈದ್ಯಕೀಯ ವ್ಯವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಟಿಎಂಝಡ್ ಪತ್ರಿಕೆ ವರದಿ ಮಾಡಿದೆ.
ಆಕೆಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದ್ದರೂ, ಅವರ ಪರಿಸ್ಥಿತಿ ಹೇಗಿದೆ ಎನ್ನುವುದರ ಬಗ್ಗೆ ಈವರೆಗೂ ಯಾವುದೇ ವಿವರ ಬಹಿರಂಗವಾಗಿಲ್ಲ.
ತಮ್ಮ ಡ್ರಗ್ಸ್ ಚಟಕ್ಕಾಗಿ ಅವರು ಮಾಲಿಬುನಲ್ಲಿರುವ ಪ್ರಸಿದ್ಧ ಸೆಲೆಬ್ರಿಟಿ ಪ್ರದೇಶದಿಂದ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ವರದಿಯಾಗಿದೆ.
2017ರಿಂದಲೂ ಪಾರ್ನ್ ಫಿಲ್ಮ್ ಇಂಡಸ್ಟ್ರಿಯಲ್ಲಿರುವ ಎಮಿಲಿ ವಿಲ್ಲೀಸ್, ಕೆಲವೊಂದು ಹಾಲಿವುಡ್ ಚಿತ್ರಗಳಲ್ಲೂ ಪ್ರಮುಖವಾಗಿ ನಟಿಸಿದ್ದಾರೆ.
ಎಮಿಲಿ ಇತ್ತೀಚೆಗಷ್ಟೇ 2023 ರ ಸೈನ್ಸ್ ಫಿಕ್ಷನ್ ಹಾರರ್ ಸಿನಿಮಾ 'ಡಿವಿನಿಟಿ' ಅಲ್ಲಿ ಬೆಲ್ಲಾ ಥಾರ್ನ್ ಜೊತೆಗೆ ಕಾಣಿಸಿಕೊಂಡರು ಮತ್ತು ಸ್ಲಿಪ್‌ನಾಟ್ ಸಂಗೀತ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದರು.
ಸೋಶಿಯಲ್ ಮೀಡಿಯಾದಲ್ಲೂ ಎಮಿಲಿ ವಿಲ್ಲೀಸ್‌ಗೆ ದೊಡ್ಡ ಪ್ರಮಾಣದ ಫಾಲೋವರ್ಸ್‌ಗಳಿದ್ದಾರೆ. ಇನ್ಸ್‌ಟಾಗ್ರಾಮ್‌ನಲ್ಲಿ 2.2 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದು ಟಿಕ್‌ಟಾಕ್‌ನಲ್ಲಿ 943,000 ಫಾಲೋವರ್ಸ್ ಹೊಂದಿದ್ದಾರೆ.
ಅವರು ಸೈಡ್‌ಮೆನ್, ಡೇವಿಡ್ ಡೊಬ್ರಿಕ್ ಮತ್ತು ಮೈಕ್ ಮಜ್ಲಾಕ್ ಸೇರಿದಂತೆ ವಿವಿಧ ಜನಪ್ರಿಯ ಯೂಟ್ಯೂಬರ್‌ಗಳೊಂದಿಗೆ ಮ್ಯೂಸಿಕ್ ವಿಡಿಯೋಗಳಲ್ಲಿ ಭಾಗಿಯಾಗಿದ್ದಾರೆ.
ಇನ್ನು ಎಮಿಲಿ ವಿಲ್ಲೀಸ್ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲಿಯೇ ಅವರ ಅಭಿಮಾನಿಗಳು ಇನ್ಸ್‌ಟಾಗ್ರಾಮ್‌ನಲ್ಲಿ ಅವರ ಚೇತರಿಕೆಗಾಗಿ ಹಾರೈಸಿದ್ದಾರೆ.
2021ರಲ್ಲಿ ಅವರು ಇತರ ಪೋರ್ನ್ ಸ್ಟಾರ್‌ಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಮೂಲಕ ವಿವಾದಕ್ಕೆ ಸಿಲುಕಿಕೊಂಡಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ಇವರು ತಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.