- Home
- Entertainment
- Movie Reviews
- ಮನುಷ್ಯನನ್ನೇ ಹಾವಾಗಿಸಿದ 1980ರ ಕನ್ನಡದ ನಿಗೂಢ ಸಿನಿಮಾ; ಹುಣ್ಣಿಮೆಗೆ ಕಾಮೋದ್ರೇಕದಿಂದ ಮಹಿಳೆಯರ ಸಾವು
ಮನುಷ್ಯನನ್ನೇ ಹಾವಾಗಿಸಿದ 1980ರ ಕನ್ನಡದ ನಿಗೂಢ ಸಿನಿಮಾ; ಹುಣ್ಣಿಮೆಗೆ ಕಾಮೋದ್ರೇಕದಿಂದ ಮಹಿಳೆಯರ ಸಾವು
1980ರಲ್ಲಿ ಬಿಡುಗಡೆಯಾದ' ಸಿನಿಮಾದಲ್ಲಿ ತಂದೆಯಿಂದಲೇ ವಿಷಪ್ರಾಶನವಾಗಿ ಬೆಳೆದ ನಾಗಪ್ಪನ ಕಥೆಯಿದೆ. ಆತನ ದೇಹದಲ್ಲಿನ ವಿಷದಿಂದಾಗಿ ಆತನನ್ನು ಸೇರಿದ ಮಹಿಳೆಯರೆಲ್ಲರೂ ಪ್ರಾಣ ಕಳೆದುಕೊಳ್ಳುತ್ತಾರೆ. ಹುಣ್ಣಿಮೆಯಂದು ಕಾಮೋದ್ರೇಕಕ್ಕೊಳಗಾಗುವ ಆತನ ನಿಗೂಢ ಅಂತ್ಯವೇ ಈ ಚಿತ್ರದ ರೋಚಕ ಕಥಾವಸ್ತು.

1980ರ ಸೂಪರ್ ಹಿಟ್ ಸಿನಿಮಾ
1980ರ ಕನ್ನಡದ ಸಿನಿಮಾವೊಂದು ಹೊಸ ಕಥೆಯೊಂದಿಗೆ ಬಿಡುಗಡೆಯಾಗಿತ್ತು. ಇಲ್ಲಿ ಮಗನನ್ನು ಹಾವಿನಿಂದ ರಕ್ಷಣೆ ಮಾಡಲು ಆತನಿಗೆ ಬಾಲ್ಯದಿಂದಲೇ ವಿಷಪ್ರಾಷಾಣ ಮಾಡಿಸುತ್ತಾನೆ. ಇದರಿಂದ ಆತನ ಜೀವನವೇ ವಿಷಸರ್ಪದಂತಾಗುತ್ತದೆ. ಈ ಚಿತ್ರವನ್ನು ನೀವು ಯುಟ್ಯೂಬ್‌ನಲ್ಲಿ ಉಚಿತವಾಗಿಯೇ ನೋಡಬಹುದಾಗಿದೆ. ಸಿನಿಮಾದ ಆರಂಭದಿಂದಲೂ ಇಲ್ಲಿ ನಿಮಗೆ ನಾಗಪ್ಪ, ಕೆಟ್ಟವನಾ ಅಥವಾ ಒಳ್ಳೆಯವನಾ ಎಂಬ ಗೊಂದಲವಿರುತ್ತದೆ. ಕ್ಲೈಮ್ಯಾಕ್ಸ್ ನೋಡಿದ ಬಳಿಕವಷ್ಟೇ ಇದಕ್ಕೆ ಉತ್ತರ ಸಿಗಲಿದೆ.
ಲೋಕೇಶ್, ಅಶೋಕ್ ಅಭಿನಯದ ಸಿನಿಮಾ
1980ರಲ್ಲಿ ಬಿಡುಗಡೆಯಾದ ಈ ಸಿನಿಮಾಗೆ ಖ್ಯಾತ ನಿರ್ದೇಶಕ ರಾಜಶೇಖರ್ ಅವರು ಚಿತ್ರಕಥೆ ಬರೆದು, ಆಕ್ಷನ್ ಕಟ್ ಹೇಳಿದ್ದಾರೆ. ಲೋಕೇಶ್, ಅಶೋಕ್, ರೂಪಾ ಚಕ್ರವರ್ತಿ, ಎಂಎಸ್ ವಸಂತಾ, ಮುಸುರಿ ಕೃಷ್ಣಮೂರ್ತಿ ಸೇರಿದಂತೆ ದೊಡ್ಡತಾರಾ ಬಳಗವನ್ನು ಈ ಸಿನಿಮಾ ಹೊಂದಿತ್ತು. ಹಾಗಾದ್ರೆ ಯಾವುದು ಈ ಚಿತ್ರ? ಚಿತ್ರದ ಕಥೆ ಏನು ಎಂದು ನೋಡೋಣ ಬನ್ನಿ.
ಸಿನಿಮಾ ಹೆಸರು
'ಹುಣ್ಣಿಮೆ ರಾತ್ರಿಯುಲ್ಲಿ' (Hunnimeya Rathriyalli) ಇದು 1980ರ ಸಿನಿಮಾ ಆಗಿದ್ದು, ಹಾವಿನ ದ್ವೇಷದ ಸುತ್ತವೇ ಚಿತ್ರ ಸುತ್ತ ಸಾಗುತ್ತದೆ. ನಾಗಪ್ಪ (ಲೋಕೇಶ್) ಹಾವು ಹಿಡಿದು ಆಟವಾಡಿಸುವ ಹಾವಾಡಿಗ ಕುಟುಂಬದಲ್ಲಿ ಜನಿಸಿರುತ್ತಾನೆ. ನಾಯಕ ಅಶೋಕ್, ಹಾವನ್ನು ಪೂಜಿಸುವ ಕುಟುಂಬದಿಂದ ಬಂದಿರುತ್ತಾನೆ. ನಾಗಪ್ಪನ ಕುಟುಂಬಸ್ಥರೆಲ್ಲರೂ ಹಾವು ಕಡಿತದಿಂದಲೇ ಸಾಯುತ್ತಿರುತ್ತಾರೆ. ಹಾಗಾಗಿ ಮಗನ ಸಾವು ಹಾವಿನಿಂದ ಆಗಬಾರದು ಎಂದು ಬಾಲ್ಯದಿಂದಲೇ ಆತನ ಆಹಾರದಲ್ಲಿ ಸ್ವಲ್ಪ ಸ್ವಲ್ಪವೇ ವಿಷದಂಶ ಸೇರಿಸಿಕೊಂಡು ಬರುತ್ತಿರುತ್ತಾನೆ.
ಹುಣ್ಣಿಮೆಯಂದು ತಾಳೆ ಹೂವಿನ ವಾಸನೆಗೆ ನಾಗಪ್ಪನಿಗೆ ಕಾಮದ್ವೇಗ
ಇದ್ಯಾವುದೇ ವಿಷಯ ತಿಳಿಯದ ನಾಗಪ್ಪ ದೊಡ್ಡವನಾಗುತ್ತಾನೆ. ತಂದೆಯಂತೆಯೇ ಹಾವು ಹಿಡಿಯುವ ಕೆಲಸದಲ್ಲಿ ತೊಡಗಿಕೊಳ್ಳುತ್ತಾನೆ. ನಾಗಪ್ಪನಿಗೆ ತನ್ನ ದೇಹದಲ್ಲಿ ಹಾವಿನ ವಿಷದಂಶ ತಿಳಿಯುವಷ್ಟರಲ್ಲಿ ಪ್ರೇಯಸಿಯನ್ನು ಕಳೆದುಕೊಳ್ಳುತ್ತಾನೆ. ನಾಗಪ್ಪ ಯಾರನ್ನೇ ಕಚ್ಚಿದ್ರೂ ಅವರು ವಿಷದಿಂದ ಸಾಯುತ್ತಾರೆ. ಹಾಗೆಯೇ ಆತ ಯಾವುದೇ ಹೆಣ್ಣಿನೊಂದಿಗೆ ಸೇರಿದರೂ ಆಕೆಯ ದೇಹವೆಲ್ಲಾ ನೀಲಿ ಬಣ್ಣಕ್ಕೆ ಬದಲಾಗಿ ಸಾಯುತ್ತಾಳೆ. ಹಾಗೆಯೇ ಹುಣ್ಣಿಮೆಯಂದು ತಾಳೆ ಹೂವಿನ ವಾಸನೆಗೆ ನಾಗಪ್ಪನಿಗೆ ಕಾಮದ್ವೇಗಕ್ಕೊಳಗಾಗಿ ಹಾವಿನಂತೆ ಸಂಗಾತಿಯನ್ನು ಹುಡುಕಲು ಆರಂಭಿಸುತ್ತಾನೆ.
ಇದನ್ನೂ ಓದಿ: ಆಪ್ತಮಿತ್ರ ನಂತರ ಭಯ ಹುಟ್ಟಿಸಿದ ಕನ್ನಡದ ಸಿನಿಮಾ: ಬೆಸ್ಟ್ ಹಾರರ್ ಥ್ರಿಲ್ಲರ್ ಕಥೆ!
ಹುಣ್ಣಿಮೆಯಂದು ಮಹಿಳೆಯರ ಸಾವಿಗೆ ಕಾರಣನಾಗುವ ನಾಗಪ್ಪನ ಅಂತ್ಯ
ಈ ರೀತಿಯಾಗಿ ಹಾವಾಗಿ ಬದಲಾಗುವ ನಾಗಪ್ಪ, ಹುಣ್ಣಿಮೆ ರಾತ್ರಿಯಲಿ ಮಹಿಳೆಯರ ಸಾವಿಗೆ ಕಾರಣನಾಗುತ್ತಾನೆ. ಇತ್ತ ಸಾಯಲೂ ಆಗದೇ, ಬದುಕಲು ಸಹ ಆಗದೇ ದ್ವಂದ್ವದಲ್ಲಿ ಸಿಲುಕಿಕೊಳ್ಳುತ್ತಾನೆ. ನಂತರ ಈ ವಿಷಯ ನಾಯಕನಿಗೂ ತಿಳಿಯುತ್ತದೆ. ಮುಂದೆ ನಾಗಪ್ಪನ ಅಂತ್ಯ ಹೇಗೆ ಆಗುತ್ತೆ ಅನ್ನೋದೇ ಸಿನಿಮಾದ ಸಸ್ಪೆನ್ಸ್. ನಾಗಪ್ಪ ಒಳ್ಳೆಯವನಾ? ಕೆಟ್ಟವನಾ? ಎಂದು ನಿರ್ಧರಿಸೋದನ್ನು ವೀಕ್ಷಕರಿಗೆಯೇ ಬಿಟ್ಟುಕೊಡಲಾಗಿದೆ.
ಇದನ್ನೂ ಓದಿ: ಮಗಳ ದೇಹ ಸೇರುವ ತಾಯಿ ಆತ್ಮ; ಇದುವೇ ನೋಡಿ ಕನ್ನಡದ ಹಾರರ್ ಸಿನಿಮಾ! ಸೇಡಿನ ರೋಚಕ ಕತೆ
ಇದನ್ನೂ ಓದಿ: ಸಂಗಾತಿಗಾಗಿ 3 ಜನ್ಮ ಕಾಯೋ ಹೆಣ್ಣು ಹಾವು; 1991ರ ಸಸ್ಪೆನ್ಸ್ ಥ್ರಿಲ್ಲರ್ ಕನ್ನಡ ಸಿನಿಮಾ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

