- Home
- Entertainment
- Movie Reviews
- ಬೆಂಗಳೂರಿನ ಕಪಾಲಿ ಥಿಯೇಟರ್ನಲ್ಲಿ 4 ಕೋಟಿ ಗಳಿಸಿದ ಕನ್ನಡ ಸಿನಿಮಾ; 25 ವಾರ ಪ್ರದರ್ಶನ
ಬೆಂಗಳೂರಿನ ಕಪಾಲಿ ಥಿಯೇಟರ್ನಲ್ಲಿ 4 ಕೋಟಿ ಗಳಿಸಿದ ಕನ್ನಡ ಸಿನಿಮಾ; 25 ವಾರ ಪ್ರದರ್ಶನ
2005ರಲ್ಲಿ ಬಿಡುಗಡೆಯಾದ ಕನ್ನಡದ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 30 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಬಾಂಧವ್ಯದ ಕಥೆ ಹೊಂದಿರುವ ಈ ಚಿತ್ರ ಕಪಾಲಿ ಚಿತ್ರಮಂದಿರವೊಂದರಲ್ಲೇ 4 ಕೋಟಿ ಗಳಿಸಿ, 25 ವಾರಗಳ ಕಾಲ ಪ್ರದರ್ಶನಗೊಂಡು ಇತಿಹಾಸ ಸೃಷ್ಟಿಸಿತ್ತು.

ಒಂದೇ ಥಿಯೇಟರ್ನಲ್ಲಿ 3 ರಿಂದ 4 ಕೋಟಿ ಕಲೆಕ್ಷನ್ ಮಾಡಿದ ಸಿನಿಮಾ
ಇಂದು ಪ್ರೇಮದ ಊರಲಿ ಸಿನಿಮಾ 100 ಕೋಟಿ ಕ್ಲಬ್ಗೆ ಸೇರ್ಪಡೆಯಾಗಿದೆ. 2005ರಲ್ಲಿ ಬಿಡುಗಡೆಯಾದ ಸಿನಿಮಾವೊಂದು ಒಂದೇ ಥಿಯೇಟರ್ನಲ್ಲಿ ಬರೋಬ್ಬರಿ 3 ರಿಂದ 4 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಬೆಂಗಳೂರಿನ ಕಪಾಲಿ ಚಿತ್ರಮಂದಿರಲ್ಲಿ 25 ವಾರ ಈ ಸಿನಿಮಾ ಪ್ರದರ್ಶನಗೊಂಡಿತ್ತು. ಇಂದಿಗೂ ಈ ಸಿನಿಮಾದ ಹಾಡೊಂದು ಹುಡುಗರ ಕಣ್ಣಲ್ಲಿ ನೀರು ತರಿಸುವ ತಾಕತ್ತು ಹೊಂದಿದೆ. ಅಮ್ಮ-ಮಗನ ಬಾಂಧವ್ಯದ ಕತೆಯುಳ್ಳ ಈ ಸಿನಿಮಾ ಹಲವು ದಾಖಲೆಗಳನ್ನು ತನ್ನ ಜೋಳಿಗೆಗೆ ಸೇರಿಸಿಕೊಂಡಿದೆ.
ಬಿಡುಗಡೆಗೆ ಮೊದಲೇ ಬಿಗ್ ಕ್ರೇಜ್
2005ರ ಮ್ಯೂಸಿಕಲ್ ಹಿಟ್ ಸಿನಿಮಾ ನೋಡಲು ಜನರು ಥಿಯೇಟರ್ ಮುಂದೆ ಸರತಿ ಸಾಲಿನಲ್ಲಿ ಕಾಯುತ್ತಿದ್ದರು. ಬೆಂಗಳೂರಿನ 18 ಸೇರಿದಂತೆ ರಾಜ್ಯಾದ್ಯಂತ 80ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೊಂಡಿತ್ತು. ಅಂದು ಕನ್ನಡ ಚಿತ್ರರಂಗ 72 ನೇ ವರ್ಷದಾಚರಣೆಯ ಕಾಲಕ್ಕೆ ಈ ಚಿತ್ರವನ್ನು 72 ಕೇಂದ್ರಗಳಲ್ಲಿ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದ್ರೆ ಚಿತ್ರಕ್ಕೆ ಹೆಚ್ವಿನ ಬೇಡಿಕೆ ಬಂದಿದ್ದರಿಂದ 80ಕ್ಕೂ ಅಧಿಕ ಕೇಂದ್ರಗಳಲ್ಲಿ ಸಿನಿಮಾ ಬಿಡುಗಡೆಯಾಯ್ತು. ಯಾವುದು ಈ ಸಿನಿಮಾ ಎಂದು ನೋಡೋಣ ಬನ್ನಿ.
ಪ್ರೇಮ್-ಶಿವರಾಜ್ಕುಮಾರ್ ಕಾಂಬಿನೇಷನ್ನ ಮೊದಲ ಸಿನಿಮಾ
ಪ್ರೇಮ್ ನಿರ್ದೇಶನದ ಶಿವರಾಜ್ ಕುಮಾರ್, ಅರುಂಧತಿ ನಾಗ್, ಜೆನ್ನಿಫರ್ ಕೊತ್ವಾಲ್ ಮುಖ್ಯಭೂಮಿಕೆಯಲ್ಲಿ ನಟಿಸಿದ 'ಜೋಗಿ' ಸಿನಿಮಾ 2005ರಲ್ಲಿ ಬಿಡುಗಡೆಯಾಗಿತ್ತು. ಅದಾಗಲೇ ಕರಿಯ ಮತ್ತು ಎಕ್ಸ್ಕ್ಯೂಸ್ಮಿ ಸೂಪರ್ ಹಿಟ್ ಸಿನಿಮಾ ನೀಡಿದ ಪ್ರೇಮ್ಗೆ ಜೋಗಿ ಸಕ್ಸಸ್ನಿಂದ ಹ್ಯಾಟ್ರಿಕ್ ಡೈರೆಕ್ಟರ್ ಎಂಬ ಖ್ಯಾತಿಗೆ ಪಾತ್ರರಾದರು. ಮೊದಲ ಸಿನಿಮಾವೇ ಜೆನ್ನಿಫರ್ ಕೊತ್ವಾಲ್ ಅವರಿಗೆ ಬಿಗ್ ಹಿಟ್ ನೀಡಿತು.
ಚಿತ್ರದ ಕಥೆ ಏನು?
ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿನ ಪುಟ್ಟಹಳ್ಳಿಯ ಮಾದೇಶ (ಶಿವರಾಜ್ಕುಮಾರ್), ಕೆಲಸವನ್ನರಿಸಿ ಬೆಂಗಳೂರಿಗೆ ಬರುತ್ತಾನೆ. ಮಗನ ಯಾವ ವಿಷಯ ತಿಳಯದಿದ್ದಾಗ ತಾಯಿ ಭಾಗ್ಯಕ್ಕ ಸಹ ಬೆಂಗಳೂರಿಗೆ ಬರುತ್ತಾಳೆ. ಈ ನಡುವೆ ಬೆಂಗಳೂರಿಗೆ ಬಂದ ಮಾದೇಶನ ಜೀವನವೇ ಸಂಪೂರ್ಣ ಬದಲಾಗಿರುತ್ತದೆ. ಬೆಂಗಳೂರಿನ ಭೂಗತಲೋಕದೊಳಗೆ ಸೇರುವ ಮಾದೇಶ, ತಾಯಿಯನ್ನು ಭೇಟಿಯಾಗ್ತಾನಾ ಅಥವಾ ಇಲ್ಲವಾ ಅನ್ನೋದೇ ಸಿನಿಮಾದ ಒನ್ಲೈನ್ ಕಥೆ.
ಮ್ಯೂಸಿಕಲ್ ಹಿಟ್ ಸಿನಿಮಾ
ಜೋಗಿ ಸಿನಿಮಾದ ಯಶಸ್ಸಿನ ಕಾರಣಗಳಲ್ಲಿ ಗುರುಕಿರಣ್ ಅವರ ಸಂಗೀತ ಸಹ ಒಂದಾಗಿದೆ. ಏಳುಮಲೆ, ಬಿನ್ ಲಾಡೆನ್, ಬೇಡುವನೆ ವರವನು, ಚುಕುಬುಕು ರೈಲು, ಹೊಡಿ ಮಗಾ ಮತ್ತು ಯೆಲ್ಲೋ ಜೋಗಪ್ಪಾ ಹಾಡುಗಳು ಇಂದಿಗೂ ಹಿಟ್ ಲಿಸ್ಟ್ನಲ್ಲಿವೆ. ವರದಿಗಳ ಪ್ರಕಾರ, ಜೋಗಿ ಸಿನಿಮಾ 30 ಕೋಟಿವರೆಗೂ ಬಾಕ್ಸ್ಆಫಿಸ್ನಲ್ಲಿ ಕಲೆಕ್ಷನ್ ಮಾಡಿದೆ. ಈ ಚಿತ್ರದ ಮುಂದುವರಿದ ಭಾಗ 'ಜೋಗಯ್ಯ' 2011ರಲ್ಲಿ ರಿಲೀಸ್ ಆಗಿ, ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.





