- Home
- Entertainment
- Movie Reviews
- ಮುಂಗಾರುಮಳೆ ನಂತ್ರ ಪ್ರೇಕ್ಷಕರನ್ನು ಭಾವುಕರನ್ನಾಗಿಸಿ ಕೋಟಿ ಕೋಟಿ ಲಾಭ ಗಳಿಸಿದ ಸಿನಿಮಾ
ಮುಂಗಾರುಮಳೆ ನಂತ್ರ ಪ್ರೇಕ್ಷಕರನ್ನು ಭಾವುಕರನ್ನಾಗಿಸಿ ಕೋಟಿ ಕೋಟಿ ಲಾಭ ಗಳಿಸಿದ ಸಿನಿಮಾ
2008ರಲ್ಲಿ ಬಿಡುಗಡೆಯಾಗಿ ಕೋಟಿ ಕೋಟಿ ಲಾಭ ಗಳಿಸಿದ ಸಿನಿಮಾ ಪ್ರೇಕ್ಷಕರನ್ನು ಭಾವುಕರನ್ನಾಗಿಸುವ ಕ್ಲೈಮ್ಯಾಕ್ಸ್ ಹೊಂದಿದೆ. ಹಳ್ಳಿಯಿಂದ ಬಂದ ಹುಡುಗನೊಬ್ಬ ಅಪರಿಚಿತ ಸೂಟ್ಕೇಸ್ ಮೂಲಕ ನಾಯಕಿಯೊಂದಿಗೆ ಫೋನ್ನಲ್ಲಿ ಪ್ರೀತಿಯಲ್ಲಿ ಬೀಳುವ ಕಥೆ ಇದರಲ್ಲಿದೆ.

2008ರಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾ
ಒಂದು ಸಿನಿಮಾ ಗೆದ್ರೆ, ಗೆಲುವಿಗೆ ಹಲವು ಕಾರಣಗಳಿರುತ್ತವೆ. ಕಥೆ, ಸಂಗೀತ, ನಟನೆ ಹೀಗೆ ಅನೇಕ ಅಂಶಗಳು ಸಿನಿಮಾ ಸಕ್ಸಸ್ಗೆ ಕಾರಣವಾಗುತ್ತವೆ. ಇದೆಲ್ಲದರ ಜೊತೆಗೆ ಕ್ಲೈಮ್ಯಾಕ್ಸ್ ಸಹ ಪ್ರಮುಖವಾಗುತ್ತದೆ. 2008ರಲ್ಲಿ ಬಿಡುಗಡೆಯಾದ ಸಿನಿಮಾದ ಕ್ಲೈಮ್ಯಾಕ್ಸ್ ವೀಕ್ಷಕರ ಹೃದಯಕ್ಕೆ ಶೋಕವನ್ನುಂಟು ಮಾಡಿ ಭಾವುಕರನ್ನಾಗಿಸಿತ್ತು. ಬಾಕ್ಸ್ಆಫಿಸ್ನಲ್ಲಿ ಗೆದ್ದ ಸಿನಿಮಾಗೆ ವಿಮರ್ಶಕರಿಂದಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.
ನಿರ್ಮಾಪಕರ ಜೇಬು ತುಂಬಿಸಿದ ಸಿನಿಮಾ
100 ದಿನಗಳ ಪ್ರದರ್ಶನ ಕಂಡಿದ್ದ ಸಿನಿಮಾಗೆ ನಿರ್ಮಾಪಕರಿಗೆ 10 ಕೋಟಿಗೂ ಹೆಚ್ಚಿನ ಲಾಭವನ್ನು ನೀಡಿತ್ತು. ಚಿತ್ರದ ಭಾವನಾತ್ಮಕ ಕತೆಗೆ ಹಾಡುಗಳು ಮತ್ತು ಸಂಗೀತ ಪ್ಲಸ್ ಪಾಯಿಂಟ್ ಆಗಿತ್ತು. ಆರ್ ಚಂದ್ರು ನಿರ್ದೇಶನದ ಈ ಸಿನಿಮಾ 25ನೇ ಜುಲೈ 2008ರಂದು ಬಿಡುಗಡೆಯಾಗಿತ್ತು. ಹಳ್ಳಿಯಿಂದ ಓದಲು ನಗರಕ್ಕೆ ಬರೋ ಹುಡುಗ ಪ್ರೀತಿಯಲ್ಲಿ ಸಿಲುಕಿ ಹೇಗೆ ಬದಲಾಗುತ್ತಾನೆ ಅನ್ನೋದು ಸಿನಿಮಾದ ಒನ್ಲೈನ್ ಕತೆ.
ಯಾವುದು ಈ ಸಿನಿಮಾ?
ಅಜಯ್ ರಾವ್ ಮತ್ತು ಪೂಜಾ ಗಾಂಧಿ ನಟನೆಯ 'ತಾಜ್ ಮಹಲ್'ಚಂದನವನದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿದೆ. ಅಜಯ್ಗೆ ಅಪರಿಚಿತ ಸೂಟ್ಕೇಸ್ ಸಿಗುತ್ತದೆ. ಸೂಟ್ಕೇಸ್ ಪೊಲೀಸರಿಗೆ ಹಸ್ತಾಂತರಿಸಿದ ಬಳಿಕ ತನ್ನ ಹೆಸರು ಕುಮಾರ್ ಎಂದು ಸುಳ್ಳು ಹೇಳಿ ಮೊಬೈಲ್ ನಂಬರ್ ನೀಡಿ ಹೋಗುತ್ತಾನೆ. ಸೂಟ್ಕೇಸ್ ಸಿಕ್ಕ ಖುಷಿಯಲ್ಲಿ ನಾಯಕಿ ಶೃತಿ, ಪೊಲೀಸರಿಂದ ನಂಬರ್ ಪಡೆದು, ಕುಮಾರ್ಗೆ ಥ್ಯಾಂಕ್ ಯು ಹೇಳುತ್ತಾಳೆ.
ಸಿನಿಮಾದ ಕಥೆ ಏನು?
ತನ್ನೊಂದಿಗೆ ಓದುತ್ತಿರುವಮ ಅಜಯ್ನೇ ಕುಮಾರ್ ಎಂಬ ವಿಷಯ ತಿಳಿಯದೇ ಶೃತಿ ಫೋನ್ನಲ್ಲಿ ಮಾತನಾಡುತ್ತಿರುತ್ತಾಳೆ. ಈ ಮಾತು ಮುಂದೆ ಪ್ರೀತಿಯಾಗಿ ಬದಲಾಗುತ್ತದೆ. ಶೃತಿಗಾಗಿ ಪರೀಕ್ಷೆ ಬರೆಯೋದನ್ನು ಸಹ ಕುಮಾರ್ ಮಿಸ್ ಮಾಡಿಕೊಳ್ಳುತ್ತಾನೆ. ಮುಂದೆ ಅಜಯ್ ಏನು ಮಾಡ್ತಾನೆ? ಕುಮಾರ್ ಯಾರು ಅನ್ನೋ ವಿಷಯ ಶೃತಿಗೆ ಹೇಗೆ ಗೊತ್ತಾಗುತ್ತೆ ಅನ್ನೋದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಿ.
ಇದನ್ನೂ ಓದಿ: 2009ರಲ್ಲೇ 70 ಕೋಟಿ ದೋಚಿದ ಕನ್ನಡತಿಯ ಫ್ಯಾಂಟಸಿ ಹಾರರ್, ಥ್ರಿಲ್ಲರ್ ನಿಗೂಢ ಸಿನಿಮಾ
ಯಾವ OTT ಪ್ಲಾಟ್ಫಾರಂ?
'ತಾಜ್ ಮಹಲ್' ಸಿನಿಮಾವನ್ನು Sun NXT, JioTV ಮತ್ತು Airtel Xstream Play ಓಟಿಟಿ ಪ್ಲಾಟ್ಫಾರಂನಲ್ಲಿ ನೋಡಬಹುದು. ಯುಟ್ಯೂಬ್ನಲ್ಲಿಯೂ ತಾಜ್ ಮಹಲ್ ಸಿನಿಮಾವನ್ನು ಉಚಿತವಾಗಿ ನೋಡಿ.
ಈ ಮೊದಲು 2006ರಲ್ಲಿ ಬಿಡುಗಡೆಯಾದ ಮುಂಗಾರುಮಳೆ ಸಿನಿಮಾ ಸಹ ಇಂತಹವುದೇ ಕ್ಲೈಮ್ಯಾಕ್ಸ್ ಹೊಂದಿತ್ತು. ಕ್ಲೈಮ್ಯಾಕ್ಸ್ ನೋಡುಗರನ್ನು ಭಾವುಕರನ್ನಾಗಿ ಮಾಡುತ್ತದೆ.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ನಟನೆಯ ಈ ಸಿನಿಮಾವನ್ನು ಒಂಟಿಯಾಗಿ ಕುಳಿತು ನೋಡಿ, ಕಥೆಯಲ್ಲಿ ಕಳೆದುಹೋಗ್ತೀರಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

