MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Technology
  • Mobiles
  • ಐಫೋನ್‌ಗೆ ನಡುಕ, 200MP ಕ್ಯಾಮೆರಾ, 7000mAh ಬ್ಯಾಟರಿ ಸಾಮರ್ಥ್ಯದ ವಿವೋX ಫೋಲ್ಡ್6 ಫೋನ್ ಬಿಡುಗಡೆ

ಐಫೋನ್‌ಗೆ ನಡುಕ, 200MP ಕ್ಯಾಮೆರಾ, 7000mAh ಬ್ಯಾಟರಿ ಸಾಮರ್ಥ್ಯದ ವಿವೋX ಫೋಲ್ಡ್6 ಫೋನ್ ಬಿಡುಗಡೆ

ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 7, ಒಪ್ಪೋ ಫೈಂಡ್ N6 ಫೋನ್‌ಗೆ ಪ್ರತಿಸ್ಪರ್ಧಿಯಾಗಿ ಇದೀಗ ಅದಕ್ಕೂ ಮಿಗಿಲಾದ ಕ್ಯಾಮೆರಾ, ಫೀಚರ್ ಇರುವ ವಿವೋ ವಿವೋ X ಫೋಲ್ಡ್ 6 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಇದರ ಬೆಲೆ ಎಷ್ಟು?

2 Min read
Author : Chethan Kumar
Published : Jun 27 2026, 10:40 AM IST
Share this Photo Gallery
  • FB
  • TW
  • Linkdin
  • Whatsapp
15
ಹೊಸ ಲೋಕ ಸೃಷ್ಟಿಸಲಿದೆ ವಿವೋ X ಫೋಲ್ಡ್ 6
Image Credit : tech home x

ಹೊಸ ಲೋಕ ಸೃಷ್ಟಿಸಲಿದೆ ವಿವೋ X ಫೋಲ್ಡ್ 6

ಚೀನಾ ಮೂಲದ ವಿವೋ ಸ್ಮಾರ್ಟ್‌ಫೋನ್ ಇದೀಗ ಅದ್ಭುತ ಫೀಚರ್, ಬರೋಬ್ಬರಿ 200 ಮೆಗಾಪಿಕ್ಸಲ್ ಕ್ವಾಲಿಟಿ ಕ್ಯಾಮೆರಾ, 7000mAh ಬ್ಯಾಟರಿ ಸಾಮರ್ಥ್ಯದ ಫೋನ್ ಬಿಡುಗಡೆ ಮಾಡಿದೆ. ವಿವೋ X ಫೋಲ್ಡ್ 6 ಬಿಡುಗಡೆಯಾಗಿದ್ದು ಹಲವು ಬ್ರ್ಯಾಂಡ್‌ಗಳಿಗೆ ನಡುಕು ಶುರುವಾಗಿದೆ. ಕಂಟೆಂಟ್ ಕ್ರಿಯೇಟರ್ಸ್ ಸೇರಿದಂತೆ ಕ್ಯಾಮೆರಾ ಮೇಲೆ ಹೆಚ್ಚು ಗಮನ ಇಟ್ಟಿರುವ ಗ್ರಾಹಕರಿಗೆ ಈ ಫೋನ್ ಹೊಸ ಲೋಕವನ್ನೇ ಸೃಷ್ಟಿಸಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
200MP ಕ್ಯಾಮೆರಾಗೆ ಸರಿಸಾಟಿ ಯಾವುದು?
Image Credit : Vivo

200MP ಕ್ಯಾಮೆರಾಗೆ ಸರಿಸಾಟಿ ಯಾವುದು?

ವೋ X ಫೋಲ್ಡ್ 6 ಫೋನ್ ಡಿಎಸ್ಎಲ್ಆರ್ ಕ್ಯಾಮೆರಾಗಳಿಗೆ ಪೈಪೋಟಿ ನೀಡುತ್ತಿದೆ.ಕಾರಣ ಈ ಫೋನ್ ಬರೋಬ್ಬರಿ 200MP ಕ್ಯಾಮೆರಾ ಹೊಂದಿದೆ. ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ನೀಡಲಾಗಿದ್ದು, ಅದರಲ್ಲಿ ಅತ್ಯಂತ ಪ್ರಮುಖವಾಗಿ 200 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಅಳವಡಿಸಲಾಗಿದೆ. ಇದು 3x ಆಪ್ಟಿಕಲ್ ಜೂಮ್ ಮತ್ತು ಜೈಸ್ (ZEISS) ಆಪ್ಟಿಕ್ಸ್ ತಂತ್ರಜ್ಞಾನವನ್ನು ಹೊಂದಿದೆ. ಇದರ ಜೊತೆಗೆ 50 ಮೆಗಾಪಿಕ್ಸೆಲ್‌ನ ಪ್ರಮುಖ ಕ್ಯಾಮೆರಾ (VCS ಬಯೋನಿಕ್ ಪ್ರೈಮರಿ ಸೆನ್ಸರ್) ಮತ್ತು 50 ಮೆಗಾಪಿಕ್ಸೆಲ್‌ನ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ನೀಡಲಾಗಿದೆ. ಸೆಲ್ಫಿಗಾಗಿ ಹೊರಗಿನ ಮತ್ತು ಒಳಗಿನ ಸ್ಕ್ರೀನ್‌ಗಳೆರಡರಲ್ಲೂ 32 ಮೆಗಾಪಿಕ್ಸೆಲ್‌ನ ಕ್ಯಾಮೆರಾಗಳನ್ನು ನೀಡಲಾಗಿದೆ.

Related Articles

Related image1
Mobile Charging Tips: ಮೊಬೈಲ್ ಫುಲ್ ಸ್ಪೀಡ್‌ನಲ್ಲಿ ಚಾರ್ಜ್ ಆಗಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ!
Related image2
ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ
35
7000mAh ಬ್ಯಾಟರಿ ಸಾಮರ್ಥ್ಯ
Image Credit : VIVO

7000mAh ಬ್ಯಾಟರಿ ಸಾಮರ್ಥ್ಯ

ಫೋಲ್ಡೇಬಲ್ ಫೋನ್ ಸ್ಲಿಮ್ ಆಗಿರುತ್ತದೆ. ಇದರಲ್ಲಿ ಅತೀ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. Vivo X Fold 6 ಫೋನ್‌ನಲ್ಲಿ 7,000mAh ಸಾಮರ್ಥ್ಯದ ದೈತ್ಯ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದಕ್ಕೆ ಪೂರಕವಾಗಿ 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವಾಯರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ನೀಡಲಾಗಿದೆ. ಇದರೊಂದಿಗೆ ಕಂಪನಿಯು 'ವಿವೋ ಎಕ್ಸ್ ಫೋಲ್ಡ್ 6 ಪ್ರೊ' (Vivo X Fold 6 Pro) ಆವೃತ್ತಿಯನ್ನೂ ಪರಿಚಯಿಸಿದ್ದು, ಅದರಲ್ಲಿ 120W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇದೆ.

45
ಬೆಲೆ ಎಷ್ಟು? ಭಾರತಕ್ಕೆ ಯಾವಾಗ?
Image Credit : Google

ಬೆಲೆ ಎಷ್ಟು? ಭಾರತಕ್ಕೆ ಯಾವಾಗ?

ಚೀನಾದಲ್ಲಿ ಬಿಡುಗಡೆಯಾಗಿರುವ Vivo X Fold 6 ಫೋನ್ ಆರಂಭಿಕ ಬೆಲೆ 9,999 ಯುವಾನ್ (ಭಾರತೀಯ ರೂಪಾಯಿಗಳಲ್ಲಿ ಸುಮಾರು 1,15,000 ರೂಪಾಯಿ). ಹಾಗೆಯೇ ಇದರ ಪ್ರೊ ಆವೃತ್ತಿಯ ಬೆಲೆ 11,999 ಯುವಾನ್ (ಭಾರತೀಯ ರೂಪಾಯಿಗಳಲ್ಲಿ 1,38,000). ಭಾರತದಲ್ಲಿ ಇದರ ಹಿಂದಿನ ಆವೃತ್ತಿಯಾದ Vivo X Fold 3 Pro ಈಗಾಗಲೇ ಲಭ್ಯವಿದ್ದು, ಭಾರಿ ಯಶಸ್ಸು ಕಂಡಿದೆ. ಹೀಗಾಗಿ ಹೊಸ Vivo X Fold 6 ಕೂಡ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆಯಿದೆ. ಆದರೆ ಕಂಪನಿಯು ಭಾರತದ ಬಿಡುಗಡೆಯ ದಿನಾಂಕ ಹಾಗೂ ನಿಖರ ಬೆಲೆಯನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.

55
ಅದ್ಭುತ ಡಿಸ್ಪ್ಲೇ ಮತ್ತು ಪ್ರೊಸೆಸರ್ ಪವರ್
Image Credit : Google

ಅದ್ಭುತ ಡಿಸ್ಪ್ಲೇ ಮತ್ತು ಪ್ರೊಸೆಸರ್ ಪವರ್

ಈ ಪ್ರೀಮಿಯಂ ಫೋನ್‌ನ ಒಳಗಡೆ 8.03 ಇಂಚಿನ ಬೃಹತ್ 2K+ ಫೋಲ್ಡೇಬಲ್ ಅಮೋಲೆಡ್ (AMOLED) ಡಿಸ್ಪ್ಲೇ ಹೊಂದಿದೆ ಹೊರಗಡೆ 6.53 ಇಂಚಿನ ಕವರ್ ಡಿಸ್ಪ್ಲೇ ನೀಡಲಾಗಿದೆ. ಇವೆರಡೂ ಕೂಡ 120Hz ರಿಫ್ರೆಶ್ ರೇಟ್ ಹಾಗೂ 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿವೆ. ವೇಗದ ಕಾರ್ಯಕ್ಷಮತೆಗಾಗಿ ಈ ಫೋನ್‌ನಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 4 (Snapdragon 8 Gen 4) ಪ್ರೊಸೆಸರ್ ನೀಡಲಾಗಿದೆ. ಇದು ಆಂಡ್ರಾಯ್ಡ್ 15 ಆಧಾರಿತ ಒರಿಜಿನ್ ಓಎಸ್ 5 (OriginOS 5)ನಲ್ಲಿ ಇರಲಿದೆ

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಮೊಬೈಲ್
ಸ್ಮಾರ್ಟ್‌ಫೋನ್
ತಂತ್ರಜ್ಞಾನ

Latest Videos
Recommended Stories
Recommended image1
Numerology: ನಿಮ್ಮನ್ನು ಕೋಟ್ಯಾಧಿಪತಿಯನ್ನಾಗಿಸುವ ಮೊಬೈಲ್ ನಂಬರ್
Recommended image2
ನಿಮ್ಮ ಫೋನ್‌ನಲ್ಲೇ ಇದೆ ಜೀವರಕ್ಷಕ ಸೀಕ್ರೆಟ್ ಫೀಚರ್; Lock Screen ಮೇಲೆ Emergency Info ಸೇರಿಸೋದು ಹೇಗೆ? ಇಲ್ಲಿದೆ ಸಿಂಪಲ್ ಹಂತಗಳು!
Recommended image3
Mobile Charger: ಮೊಬೈಲ್ ಚಾರ್ಜ್‌ಗೆ ಹಾಕಿದಾಗಲೇ ಯಾಕೆ ಬ್ಲಾಸ್ಟ್ ಆಗುತ್ತೆ? ನೀವು ಈ ತಪ್ಪು ಎಂದಿಗೂ ಮಾಡಬೇಡಿ!
Related Stories
Recommended image1
Mobile Charging Tips: ಮೊಬೈಲ್ ಫುಲ್ ಸ್ಪೀಡ್‌ನಲ್ಲಿ ಚಾರ್ಜ್ ಆಗಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ!
Recommended image2
ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved