Iphone User Alert: ಆಪಲ್‌ನ 'Hide My Email' ಫೀಚರ್ ನಲ್ಲಿ ಬಳಕೆದಾರರ ನಿಜವಾದ ಇಮೇಲ್ ಅಡ್ರೆಸ್ ಎಕ್ಸ್ ಪೋಸ್ ಮಾಡುವಂತಹ ಅತ್ಯಂತ ಅಪಾಯಕಾರಿ ಬಗ್ ಪತ್ತೆಯಾಗಿದೆ. ಇದರಿಂದ ಆಪಲ್ ಫೋನ್ ಬಳಕೆದಾರರ ಇಮೇಲ್ ಲೀಕ್ ಆಗುವ ಸಾಧ್ಯತೆ ಇದೆ. ಹಾಗಾಗಿ ಎಚ್ಚರದಿಂದಿರಿ.
Appleನ ಈ ಸುರಕ್ಷಿತ ಫೀಚರ್ ಲೀಕ್
ಐ ಫೋನ್ ಬಳಕೆದಾರರು ಇನ್ನು ಮುಂದೆ ಅಲರ್ಟ್ ಆಗಿರಬೇಕು. ಯಾಕಂದ್ರೆ ಸ್ಪ್ಯಾಮ್ ಮೆಸೇಜ್ ಗಳನ್ನು ಅವಾಯ್ಡ್ ಮಾಡಲು ನಿಮ್ಮ ಐಫೋನ್ ಅಥವಾ ಮ್ಯಾಕ್‌ಬುಕ್‌ನಲ್ಲಿ ನೀವು ಆಪಲ್‌ನ 'Hide My Email' ಫೀಚರ್ ಬಳಸುತ್ತಿದ್ದರೆ, ನಿಮಗಿದು ಬ್ಯಾಡ್ ನ್ಯೂಸ್. ಹೊಸ ವರದಿಯ ಪ್ರಕಾರ, ಈ ಫೀಚರ್ ‘ನಲ್ಲಿ ಅಪಾಯಕಾರಿ ಬಗ್ ಪತ್ತೆಯಾಗಿದ್ದು, ಅದು ನೀವು ಪ್ರಪಂಚದಿಂದ ಮರೆಮಾಡಲು ಉದ್ದೇಶಿಸಿರುವ ನಿಮ್ಮ ನಿಜವಾದ ಇಮೇಲ್ ಅಡ್ರೆಸನ್ನು ಎಕ್ಸ್’ಪೋಸ್ ಮಾಡುತ್ತಿದೆ. ಆಪಲ್ ಜಾಗತಿಕವಾಗಿ ಒಂದು ಬಿಲಿಯನ್‌ಗಿಂತಲೂ ಹೆಚ್ಚು ಪೇಯ್ಡ್ ಸಬ್’ಸ್ಕ್ರಿಪ್ಶನ್ ಹೊಂದಿದೆ ಮತ್ತು ಲಕ್ಷಾಂತರ ಜನರು ಐಕ್ಲೌಡ್ + ಅನ್ನು ಬಳಸುತ್ತಾರೆ. ಇದರ ಪರಿಣಾಮವಾಗಿ, ಈ ಬಗ್ ನಿಂದಾಗಿ ಇದೀಗ ಲಕ್ಷಾಂತರ ಆಪಲ್ ಬಳಕೆದಾರರ ಪ್ರೈವೆಸಿ ಮೇಲೆ ಹೊಡೆತ ಬೀಳಲಿದೆ.
ಟೈಲರ್ ಮರ್ಫಿ ಎನ್ನುವ ಭದ್ರತಾ ಸಂಶೋಧಕ ಈ ಬಗ್ ಕಂಡುಹಿಡಿದರು. ಅವರು ಜೂನ್ 2025 ರಲ್ಲಿ ಆಪಲ್‌ಗೆ ಇದರ ಬಗ್ಗೆ ಮಾಹಿತಿ ತಿಳಿಸಿದ್ದರು. ಹೊಸ 'Hide My Email' ಅಡ್ರೆಸ್ ರಚಿಸಿ ಮರ್ಫಿಗೆ ಒದಗಿಸಿದಾಗ, ಅವರು ಕೇವಲ ಐದು ನಿಮಿಷಗಳಲ್ಲಿ ಅದರ ಹಿಂದೆ ಅಡಗಿರುವ ನಿಜವಾದ ಆಪಲ್ ಐಡಿ ಇಮೇಲ್ ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಅಂದರೆ ಹ್ಯಾಕರ್ ಸರಿಯಾದ ವಿಧಾನವನ್ನು ತಿಳಿದಿದ್ದರೆ, ಅವರು ನಿಮ್ಮ ಯಾವುದೇ ನಕಲಿ ಇಮೇಲ್ ವಿಳಾಸಗಳಿಂದ ನಿಮ್ಮ ನಿಜವಾದ ಐಡೆಂಟಿಟಿ ಎಕ್ಸ್ ಪೋಸ್ ಮಾಡಬಹುದು.
ನಿಜವಾದ ಇಮೇಲ್ ಅಡ್ರೆಸ್ ಲೀಕ್ ಆಗುವ ಅಪಾಯ
ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳು, ವಿವಿಧ ಅಪ್ಲಿಕೇಶನ್‌ಗಳು ಅಥವಾ ವಿವಾದಾತ್ಮಕ ವೆಬ್‌ಸೈಟ್‌ಗಳಿಗೆ ಲಾಗಿನ್ ಆಗಲು ಈ Hide My Email ಫೀಚರ್ ಬಳಕೆ ಮಾಡುತ್ತಿರುವವರಿಗೆ ಇದು ದೊಡ್ಡ ಸಮಸ್ಯೆಯನ್ನು ಉಂಟು ಮಾಡಬಹುದು. ಒಂದು ವೇಳೆ ಯಾವುದೇ ಹ್ಯಾಕರ್ ಅಥವಾ ಕಂಪನಿಗೆ ನಿಮ್ಮ ನಿಜವಾದ ಇಮೇಲ್ ವಿಳಾಸ ಸಿಕ್ಕಿದರೆ, ಪಡೆದ ನಂತರ, ಅವರು ಪೀಪಲ್-ಸರ್ಚ್ ವೆಬ್‌ಸೈಟ್‌ಗಳನ್ನು ಬಳಸಿಕೊಂಡು ನಿಮ್ಮ ಹೆಸರು, ಫೋನ್ ನಂಬರ್ ಮತ್ತು ಮನೆಯ ವಿಳಾಸವನ್ನು ಸುಲಭವಾಗಿ ಪಡೆಯುವರು. ಇದರಿಂದ ನಿಮ್ಮ ಫೋನ್ ಗೆ ಸ್ಪ್ಯಾಮ್ ಕಾಲ್ ಮತ್ತು ಫಿಶಿಂಗ್ ಅಟ್ಯಾಕ್ ಮಾಡುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ.
ಆಪಲ್ ಬಳಕೆದಾರರು ಈಗ ಏನು ಮಾಡಬೇಕು?
ಆಪಲ್ ಇನ್ನೂ ಇದಕ್ಕಾಗಿ ಪ್ಯಾಚ್ ಅಥವಾ ಅಪ್ ಡೇಟ್ ಬಿಡುಗಡೆ ಮಾಡದ ಕಾರಣ, ನೀವು ಎಚ್ಚರಿಕೆಯಿಂದಿರಬೇಕು. ಆಪಲ್ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸುವವರೆಗೆ, ಸೂಕ್ಷ್ಮ ಖಾತೆಗಳಿಗಾಗಿ ನೀವು ಪ್ರೋಟಾನ್‌ನ ‘SimpleLogin' ಅಥವಾ 'DuckDuckGo Email Protection ನಂತಹ ಪರ್ಯಾಯಗಳನ್ನು ಬಳಸಬಹುದು. ಇದಲ್ಲದೇ, ನಿಮ್ಮ ಇನ್‌ಬಾಕ್ಸ್ ಅನ್ನು ಸೂಕ್ಷ್ಮವಾಗಿ ಗಮನಿಸಿ ಮತ್ತು ಯಾವುದೇ ಅಪರಿಚಿತ ಅಥವಾ ಅನುಮಾನಾಸ್ಪದ ಇಮೇಲ್‌ಗಳ ಮೇಲೆ ಕ್ಲಿಕ್ ಮಾಡುವುದನ್ನು ತಪ್ಪಿಸಿ.


